KL ಬ್ಯಾಟರ್ ಅಲ್ಲ ಆಪತ್ಬಾಂಧವ – ವಿಶ್ವಕಪ್ ಗಾದ್ರೂ SLOT ಫಿಕ್ಸ್ ಇದ್ಯಾ?
NZನಲ್ಲಿ ಗೊತ್ತಾಯ್ತು ಕನ್ನಡಿಗನ ಗತ್ತು!

KL ಬ್ಯಾಟರ್ ಅಲ್ಲ ಆಪತ್ಬಾಂಧವ – ವಿಶ್ವಕಪ್ ಗಾದ್ರೂ SLOT ಫಿಕ್ಸ್ ಇದ್ಯಾ?NZನಲ್ಲಿ ಗೊತ್ತಾಯ್ತು ಕನ್ನಡಿಗನ ಗತ್ತು!

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಮುಗಿದಿದೆ. ಗುರುವಾರದಿಂದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸಿದ್ಧವಾಗ್ತಿದೆ. ಆದ್ರೆ ಏಕದಿನ ಸಿರೀಸ್ ಆದ್ಮೇಲೆ ಅತೀಹೆಚ್ಚು ಸದ್ದು ಮಾಡ್ತಿರೋ ಹೆಸರು ಕೆಎಲ್ ರಾಹುಲ್.. ಟ್ರೋಲ್ ಮಾಡಿದವ್ರಿಗೆ, ಟೀಕೆ ಮಾಡಿದವ್ರಿಗೆ, ಸ್ಲಾಟ್ ವಿಚಾರದಲ್ಲೂ ಬೇಕಾಬಿಟ್ಟಿ ಆಡಿಸಿದವರಿಗೂ ಬ್ಯಾಟ್​​ನಲ್ಲೇ ಉತ್ತರ ಕೊಟ್ಟಿದ್ದಾರೆ. ಮಿಡಲ್ ಆರ್ಡರ್​ನಲ್ಲಿ ಯಾಕೆ ತಂಡದ ಆಪತ್ಬಾಂಧವನಾಗಿದ್ದಾರೆ ಅನ್ನೋದಕ್ಕೆ ಈಗ ಉತ್ತರ ಸಿಕ್ಕಿದೆ.

ಇದನ್ನೂ ಓದಿ : ಅಂಡರ್ 19 ಏಷ್ಯಾಕಪ್ ಫೈನಲ್ ನಲ್ಲಿ ಗೆದ್ದ ಭಾರತ – ಲಾಸ್ಟ್ ಬಾಲ್ ನಲ್ಲಿ ಸೋತ ಪಾಕಿಸ್ತಾನ

ಏಕದಿನ ಸಿರೀಸ್ ಆದ್ಮೇಲೆ ಕೆಎಲ್ ರಾಹುಲ್ ಹೆಸರು ಬಾರೀ ಚರ್ಚೆಯಲ್ಲಿದೆ. ಕ್ರೂಶಿಯಲ್ ಟೈಮಲ್ಲಿ, ಟಾಪ್ ಆರ್ಡರ್ ಬೇಗ ಕೊಲ್ಯಾಪ್ಸ್ ಆದಾಗ ಕ್ರೀಸ್ ಕಚ್ಚಿ ನಿಲ್ಲೋ ಕನ್ನಡಿಗನ ತಾಕತ್ತಿನ ಬಗ್ಗೆ ಚರ್ಚೆಯಾಗ್ತಿದೆ. ಭಾರತ ಏಕದಿನ ತಂಡದ Crisis man ಆಗಿರೋ ರಾಹುಲ್​ಗೆ ಈಗಲೂ ಸ್ಲಾಟ್​ನಲ್ಲಿ ಕ್ಲಾರಿಟಿ ಇಲ್ಲ ಅನ್ನೋದೇ ದುರಂತ.

5ನೇ ಸ್ಟಾಟ್ ಬೆಸ್ಟ್ ಇದ್ರೂ 6ನೇ ಕ್ರಮಾಂಕದಲ್ಲಿ ಅವಕಾಶ!

ಪ್ರಸ್ತುತ ಕ್ರಿಕೆಟ್​ನಲ್ಲಿ 5ನೇ ಕ್ರಮಾಂಕದಲ್ಲಿ ಏಕದಿನ ಮಾದರಿಯಲ್ಲಿ ದಿ ಬೆಸ್ಟ್ ಬ್ಯಾಟರ್ ಅಂತಾ ಯಾರಾದ್ರೂ ಇದ್ರೆ ಅದು ಕೆಎಲ್ ರಾಹುಲ್. ಅವ್ರ ರೆಕಾರ್ಡ್ಸ್, ಸ್ಕೊರ್, ಆವರೇಜ್, ಕನ್ಸಿಸ್ಟೆನ್ಸಿ ಎಲ್ಲವೂ ಸಾಲಿಟ್ ಆಗಿದೆ. ಆದ್ರೆ ಕೋಚ್ ಗಂಭೀರ್ ಮತ್ತು ಟೀಂ ನಂಬರ್ 5ನಲ್ಲಿ ಅಕ್ಷರ್ ಪಟೇಲ್​ಗೆ ಚಾನ್ಸ್ ಕೊಡ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ಆಡುವ ರಾಹುಲ್​ಗೆ ಏಕದಿನ ಕ್ರಿಕೆಟ್ ನಲ್ಲಿ 5 ಅಥವಾ 6ನೇ ಕ್ರಮಾಂಕಗಳಲ್ಲಿ ಬ್ಯಾಟಿಂಗ್ ಮಾಡಿಯೂ ಸೈ ಎನಿಸಿಕೊಂಡಿದ್ದಾರೆ. ಹೀಗಿದ್ರೂ ರಾಹುಲ್ ವಿಚಾರದಲ್ಲಿ ಪದೇಪದೆ ಮ್ಯೂಸಿಕಲ್ ಚೇರ್ ರೀತಿಯಲ್ಲಿ ಆಡುವ ಮ್ಯಾನೇಜ್​ಮೆಂಟ್​ಗೆ ಈಗ ರಾಹುಲ್ ಬೆಲೆ ಏನು ಅನ್ನೋದು ಗೊತ್ತಾಗಿದೆ. ಹೀಗಾಗಿ ವಿಶ್ವಕಪ್​ಗೆ ನಂಬರ್ 5 ಫಿಕ್ಸ್ ಮಾಡಿ ಎನ್ನುವ ಒತ್ತಾಯ ಜಾಸ್ತಿಯಾಗ್ತಿದೆ.

ಭಾರತ ತಂಡದಲ್ಲಿ ಸ್ಪೇರ್ ಟೈಯರ್ ನಂತೆ ಬಳಕೆ!

ತಮ್ಮ 12 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಕೆಎಲ್ ರಾಹುಲ್ ಅವರನ್ನು ಭಾರತೀಯ ಕ್ರಿಕೆಟ್‌ನಲ್ಲಿ ತುಂಬಾ ಸಲ ಗ್ರಾಂಟೆಡ್ ಆಗಿ ತಗೊಂಡಿದ್ದಾರೆ. ಓಪನಿಂಗ್ ಮಾಡಿದ್ದಾರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ, ವಿಕೆಟ್‌  ಕೀಪಿಂಗ್ ಮಾಡಿದ್ದಾರೆ, ಫಿನಿಷರ್ ಆಗಿ ಆಡಿದ್ದಾರೆ ಮತ್ತು ಇಂಜುರಿ ಅಥವಾ ತಂಡದ ಕಾಂಬಿನೇಷನ್  ಹೊಂದಾಣಿಕೆ ಅಗತ್ಯವಿರುವಾಗಲೆಲ್ಲಾ ಸ್ಟಾಪ್-ಗ್ಯಾಪ್ ಸಲ್ಯೂಷನ್ ಆಗಿಯೂ ಆಡಿದ್ದಾರೆ. ಒಂಥರಾ ಸ್ಪೇರ್ ಟೈರ್ ಆಗಿ ಬಳಸಿಕೊಳ್ತಿದ್ದಾರೆ. ಆದ್ರೆ ರಾಹುಲ್ ಮಾತ್ರ ಇದ್ಯಾವುದಕ್ಕೂ ಕೊರಗದೆ ನೀವೆಲ್ಲೇ ಆಡಿಸಿದ್ರೂ ನಾನು ಆಡ್ತೇನೆ ಅಂತಾ ತಿರುಗೇಟು ಕೊಡ್ತಿದ್ದಾರೆ. ಆದ್ರೆ ಏಕದಿನದಲ್ಲಿ ನಂಬರ್ 5ನಲ್ಲಿ ಫಾರ್ಮ್ ಮತ್ತು ಪರ್ಫಾಮೆನ್ಸ್ ಚೆನ್ನಾಗಿರೋದ್ರಿಂದ ಅಲ್ಲಿಯೇ ಪರ್ಮನೆಂಟ್ ಮಾಡಬೇಕಿದೆ. ಯಾಕಂದ್ರೆ ಕೆಎಲ್ ರಾಹುಲ್ ಅವರ ಬ್ಯಾಟಿಂಗ್‌ನಲ್ಲಿ ಒಂದು ಸ್ಪೆಷಾಲಿಟಿ ಇದೆ. ತಂಡಕ್ಕೆ ಯಾವ ರೀತಿಯ ಇನ್ನಿಂಗ್ಸ್ ಅಗತ್ಯವಿದೆಯೋ ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವುದು. 2023ರ ಜನವರಿಯಿಂದ ಏಕದಿನ ಕ್ರಿಕೆಟ್‌ನಲ್ಲಿ 5 ಮತ್ತು 6ನೇ ಕ್ರಮಾಂಕದಲ್ಲಿ ರಾಹುಲ್ 39 ಇನ್ನಿಂಗ್ಸ್‌ಗಳಿಂದ 1461 ರನ್ ಗಳಿಸಿದ್ದಾರೆ. ಸರಾಸರಿ 63.52 ಮತ್ತು ಸ್ಟ್ರೈಕ್ ರೇಟ್ 98.98. ಈ ಅವಧಿಯಲ್ಲಿ 3 ಶತಕ ಹಾಗೂ 6 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಇನ್ನು 2025ರಿಂದ ಅವರ ಪ್ರದರ್ಶನ ಮತ್ತಷ್ಟು ಗಮನಾರ್ಹ. 21 ಇನ್ನಿಂಗ್ಸ್‌ಗಳಲ್ಲಿ 719 ರನ್, 65.36ರ ಸರಾಸರಿ ಹಾಗೂ 115.96ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ವೆಲ್ಲಿಂಗ್ಟನ್ ಏಕದಿನ ಪಂದ್ಯದಲ್ಲಿ ಭಾರತ 47 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಅವರಂತಹ ಪ್ರಮುಖ ಬ್ಯಾಟರ್‌ಗಳು ಔಟಾಗಿದ್ದರು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಕೆಎಲ್ ರಾಹುಲ್ ಯಾವುದೇ ಆತುರ ತೋರದೆ ಜವಾಬ್ದಾರಿಯುತ ಆಟವಾಡಿದರು. 38 ಎಸೆತಗಳಲ್ಲಿ 26 ರನ್ ಗಳಿಸಿ ಅಜೇಯರಾಗುಳಿದರು. ತಂಡಕ್ಕೆ ಅಗತ್ಯವಿದ್ದದ್ದು ದೊಡ್ಡ ಹೊಡೆತಗಳಲ್ಲ, ಕ್ರೀಸ್‌ನಲ್ಲಿ ನಿಂತು ಪಂದ್ಯವನ್ನು ನಿಯಂತ್ರಿಸುವುದಾಗಿತ್ತು. ಇದೇ ರಾಹುಲ್ ಅವರ ವಿಶೇಷತೆ. ಒತ್ತಡದ ಸಂದರ್ಭದಲ್ಲಿ ಪಂದ್ಯವನ್ನು ಅರ್ಥಮಾಡಿಕೊಂಡು ಆಡುವ ಸಾಮರ್ಥ್ಯ.

ಅಗತ್ಯಕ್ಕೆ ತಕ್ಕಂತೆ ಬಳಸೋ ಬದಲು ಸ್ಲಾಟ್ ಫಿಕ್ಸ್ ಮಾಡಿ!

2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಹೀಗಾಗಿ ಭಾರತ ಈಗಿನಿಂದಲೇ ತನ್ನ ಬ್ಯಾಟಿಂಗ್ ಕ್ರಮಾಂಕವನ್ನು ಸಿದ್ಧಪಡಿಸಿಕೊಳ್ಳಬೇಕಿದೆ. ಶುಭಮನ್ ಗಿಲ್ ಕೂಡ ನ್ಯೂಜಿಲೆಂಡ್ ಸರಣಿಗೂ ಮುನ್ನ 5, 6 ಮತ್ತು 7ನೇ ಕ್ರಮಾಂಕಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ಬದಲಾಯಿಸುವುದಾಗಿ ಹೇಳಿದ್ದಾರೆ. ಅಕ್ಷರ್ ಪಟೇಲ್ ಎಡಗೈ ಬ್ಯಾಟರ್ ಆಗಿ ತಂಡಕ್ಕೆ ನೆರವಾಗಬಹುದು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆ ಬೇಕಾದಾಗ ಕೆಎಲ್ ರಾಹುಲ್ ಕಡೆ ನೋಡ್ಬೇಕು. ಸೋ ವಿಶ್ವಕಪ್​ಗೂ ಮೊದ್ಲೇ ಅವರ ಸ್ಲಾಟ್ ಕನ್ಫರ್ಮ್ ಮಾಡ್ಬೇಕಿದೆ.

Shantha Kumari

Leave a Reply

Your email address will not be published. Required fields are marked *