ಸೌಂದರ್ಯ ಶೆಟ್ಟಿಗೆ ರೆಡ್ ಫ್ಲ್ಯಾಗ್ – ಗಾನವಿ ಸೋಲಿಸಿ ರಾಣಿಯಾಗುತ್ತಾರಾ ಆಸಿಯಾ?

ಸೌಂದರ್ಯ ಶೆಟ್ಟಿಗೆ ರೆಡ್ ಫ್ಲ್ಯಾಗ್ – ಗಾನವಿ ಸೋಲಿಸಿ ರಾಣಿಯಾಗುತ್ತಾರಾ ಆಸಿಯಾ?

ಬಿಗ್‌ಬಾಸ್ ಮನೆಯ ರಾಣಿ ಪಟ್ಟ ಯಾರಿಗೆ ಎಂಬ ಕುತೂಹಲ ಗರಿಗೆದರಿದೆ. ಮಹಾರಾಣಿಯಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಟಾಸ್ಕ್‌ನಲ್ಲಿ ಈ ಬಾರಿ ಅದೃಷ್ಟ ಆಸಿಯಾ ಜೊತೆಗಿದೆ.

ಇದನ್ನೂ ಓದಿ:ಅಮೃತಧಾರೆ ಧಾರಾವಾಹಿಯಲ್ಲಿ ಅಂತಿಮ ಸಂಚಿಕೆಗಳು ಪ್ರಸಾರ – ಗೌರಿಪುತ್ರ ಹೊಸ ಧಾರಾವಾಹಿ ಶ್ರೀಘ್ರದಲ್ಲೇ ಆರಂಭ

ಬಿಗ್ ಬಾಸ್ ಮನೆಯಲ್ಲಿ ಸ್ಪೆಷಲ್ ಟಾಸ್ಕ್ ನಡೆಯುತ್ತಿದೆ. ಈ ಬಾರಿ ಮನೆಮಂದಿ ಸೌಂದರ್ಯ ಶೆಟ್ಟಿ ವಿರುದ್ಧ ನಿಂತಿದ್ದಾರೆ ಅನ್ನೋದು ಆಟದಲ್ಲಿ ಗೊತ್ತಾಗಿದೆ. ಗಾನವಿ ಗೌಡ, ಸೌಂದರ್ಯ ಶೆಟ್ಟಿ ಮತ್ತು ಆಸಿಯಾ ಯುವರಾಣಿಯರಾಗಿರೇಸ್ ಅಲ್ಲಿದ್ದಾರೆ. ಈ ಯುವರಾಣಿಯರಲ್ಲಿ ಒಬ್ಬರು ಮಹಾರಾಣಿ ಆಗಿ ಆಯ್ಕೆಯಾಗಲಿದ್ದಾರೆ. ಇವರಿಗೆ ಉಳಿದ ಸ್ಪರ್ಧಿಗಳು ವೋಟ್ ಹಾಕಬೇಕು. ತಮಗೆ ಇಷ್ಟವಾದ ಯವರಾಣಿಯರಿಗೆ ವೋಟ್ ಹಾಕಬಹುದು. ರೆಡ್ ಫ್ಲ್ಯಾಗ್ ಅಂದರೆ ರಿಜೆಕ್ಟ್ ಅಂತ ಅರ್ಥ ಬರುತ್ತದೆ. ಗ್ರೀನ್ ಫ್ಲ್ಯಾಗ್ ಅಂದರೆ ಸೆಲೆಕ್ಷನ್ ಅಂತಲೇ ಅರ್ಥ ಬರುತ್ತದೆ. ಈ ಲೆಕ್ಕದಲ್ಲಿ ರೆಡ್ ಫ್ಲ್ಯಾಗ್ ಹೆಚ್ಚು ಯಾರಿಗೆ ಬಂದಿವೆ. ಗ್ರೀನ್ ಫ್ಲ್ಯಾಗ್ ಯಾರಿಗೆ ಬಂದಿದೆ ಅನ್ನೋ ಆಧಾರದಲ್ಲಿ ಗೆಲುವು ನಿರ್ಧರಿಸಲಾಗುತ್ತದೆ.

ಸೌಂದರ್ಯ ಶೆಟ್ಟಿಗೆ ಎಲ್ಲಾ ರೆಡ್ ಫ್ಲ್ಯಾಗ್‌ ಬಂದಿವೆ. ಒಂದೇ ಒಂದು ಗ್ರೀನ್ ಫ್ಲ್ಯಾಗ್ ಸಿಕ್ಕಿಲ್ಲ. ಆಸಿಯಾಗೆ ಒಂದೇ ಒಂದು ರೆಡ್ ಬಂದಿದೆ. ಉಳಿದಿರೋದೆಲ್ಲ ಗ್ರೀನ್ ಇದೆ. ಗಾನವಿ ಗೌಡಗೆ ಒಂದು ಗ್ರೀನ್ ಬಂದಿದೆ. ಉಳಿದಿರೋದೆಲ್ಲ ರೆಡ್ ಇದೆ. ಸೌಂದರ್ಯ ಶೆಟ್ಟಿ ತನಗೆ ಎಲ್ಲಾ ರೆಡ್ ಫ್ಲ್ಯಾಗ್ ಸಿಕ್ಕಿರುವುದನ್ನು ಪ್ರಶ್ನೆ ಮಾಡುತ್ತಾರೆ. ಆಗ ಗಗನ್, ನೀನು ಆಟದಲ್ಲಿ ಆ ರೀತಿ ಮಾಡಿದ್ದಕ್ಕೆ ಸಿಕ್ಕಿದ್ದು ಎಂದು ಹೇಳುತ್ತಾರೆ. ನೀನು ತಾಂಡವ್ ರಾಮ್‌ಗೆ ಕುಗ್ಗಿಸಿದ ರೀತಿ ನಾನು ಮಾಡಿದ್ದೇನಾ ಅಂತಾ ಸೌಂದರ್ಯ ಪ್ರಶ್ನೆ ಮಾಡ್ತಾರೆ. ನನಗೆ ಯಾಕೆ ನೀನು ರೆಡ್ ಫ್ಲ್ಯಾಗ್ ಕೊಟ್ಟಿರೋದು ಅಂತ ಜಗದೀಶ್ ಬಳಿಯೂ ಕೇಳುತ್ತಾರೆ. ಆಗ ಜಗ್ಗ ಮಮ್ಮಿ, ನಮ್ಮ ವೈಯುಕ್ತಿಕ ಅಂತಾ ಹೇಳುತ್ತಾರೆ. ಈ ಯುವರಾಣಿ ರೇಸ್ ಅಲ್ಲಿ ಆಸಿಯಾನೆ ಗೆಲ್ಲೋದು ಖಚಿತವಾಗಿದೆ.

Sulekha

Leave a Reply

Your email address will not be published. Required fields are marked *