ಅಂಡರ್ 19 ಏಷ್ಯಾಕಪ್ ಫೈನಲ್ ನಲ್ಲಿ ಎಡವಿದ ಭಾರತ – ಟ್ರೋಫಿ ಉಳಿಸಿಕೊಂಡ ಪಾಕಿಸ್ತಾನ

ಏಷ್ಯಾಕಪ್ನಲ್ಲಿ ಭಾರತವೇ ಬಾಸ್.. ಸೀನಿಯರ್ಸ್ ಕ್ರಿಕೆಟ್ನಲ್ಲಿ ಹಾಲಿ ಚಾಂಪಿಯನ್ಸ್.. ವುಮೆನ್ಸ್ ಫಾರ್ಮೆಟ್ನಲ್ಲೂ ಟ್ರೋಫಿ ವಿನ್ನರ್ಸ್.. ಈಗ ಅಂಡರ್ 19 ಟ್ರೋಫಿಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ವು. ಒಮಾನ್ನ ಅಲ್ ಅಮೆರಾತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಮ್ಯಾಚಲ್ಲಿ ಎರಡೂ ಕಡೆ ಅದ್ಭುತ ಪ್ರದರ್ಶನ ನೀಡಿದ್ರು. ಬಟ್ ಎಂಡ್ ಆಫ್ ದಿ ಡೇ ಭಾರತ ಮತ್ತೊಮ್ಮೆ ಸೋಲಬೇಕಾಯ್ತು.
ಇದನ್ನೂ ಓದಿ : ಶ್ರೇಯಸ್ ಮೈಕ್ಯಾಪ್ಟನ್ ಎಂದ ಪಾಂಡ್ಯ – ಗಿಲ್ನ ಸೈಡಿಗೆ ತಳ್ಳಿದ ರಿಷಭ್ ಪಂತ್
ಅಂಡರ್-19 ಏಷ್ಯಾಕಪ್ ಏಕದಿನ ಟೂರ್ನಿಯ ಫೈನಲ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಫೈನಲ್ ಫೈಟ್ ನಡೀತು. ಆಲ್ರೆಡಿ ಗ್ರೂಪ್ ಸ್ಟೇಜಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದ ಭಾರತ ಸೇಡು ತೀರಿಸಿಕೊಳ್ಳೋದ್ರ ಜೊತೆಗೆ ಟ್ರೋಫಿ ಗೆಲ್ಲೋ ಟಾರ್ಗೆಟ್ನಲ್ಲೇ ಕಣಕ್ಕಿಳಿದಿದ್ರು. ಒಂದ್ಕಡೆ ಆಲ್ರೆಡಿ 8 ಟ್ರೋಫಿಗಳನ್ನ ಗೆದ್ದಿದ್ದ ಭಾರತಕ್ಕೆ 9ನೇ ಟ್ರೋಫಿ ಗೆಲುವಿನ ಗುರಿ ಇದ್ರೆ ಟೂರ್ನಿಯಲ್ಲಿ 2 ಸಲ ಚಾಂಪಿಯನ್ ಆಗಿದ್ದ ಪಾಕಿಸ್ತಾನ 3ನೇ ಕಪ್ ಗೆಲುವಿಗಾಗಿ ಕಣಕ್ಕಿಳಿದಿದ್ರು. ಅದ್ರಂತೆ ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಪಾಕಿಸ್ತಾನ ಫಸ್ಟ್ ಇನ್ನಿಂಗ್ಸ್ನಲ್ಲೇ ಶಾಕ್ ಕೊಟ್ಟಿತ್ತು.
ಉಸ್ಮಾನ್ ಖಾನ್ ಶತಕ.. 338 ರನ್ಸ್ ಟಾರ್ಗೆಟ್ ನೀಡಿದ ಪಾಕ್!
ಒಮಾನ್ನ ಅಲ್ ಅಮೆರಾತ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಕ್ಯಾಪ್ಟನ್ ಫರ್ಹಾನ್ ಯೂಸುಫ್ ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಂಡ್ರು. ಅದ್ರಂತೆ ಅವ್ರ ಬ್ಯಾಟಿಂಗ್ ಕೂಡ ಚೆನ್ನಾಗಿತ್ತು. ಓಪನರ್ ಉಸ್ಮಾನ್ ಖಾನ್ 107 ರನ್ ಕಲೆ ಹಾಕಿದ್ರೆ ಅಬ್ದುಲ್ ಖಾದಿರ್ 80 ರನ್ ಬಾರಿಸಿದ್ರು. ಅದೂ 54 ಬಾಲ್ಗಳಲ್ಲೇ. ಹಾಗೇ ನಾಯಕ ಫರ್ಹಾನ್ ಯೂಸುಫ್ 63 ರನ್ಸ್ ಬಾರಿಸಿದ್ದು ಅಂತಿಮವಾಗಿ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತು. ಭಾರತಕ್ಕೆ 338 ರನ್ಗಳ ಬಿಗ್ ಟಾರ್ಗೆಟ್ ಸೆಟ್ ಮಾಡಿದ್ರು. ಈ ಗುರಿ ಬೆನ್ನಟ್ಟಿದ ಭಾರತ ಬಿಗ್ ಚಾಲೆಂಜ್ನೇ ಫೇಸ್ ಮಾಡ್ಬೇಕಾಯ್ತು.
ಬ್ಯಾಟಿಂಗ್ ನಲ್ಲಿ ಒದ್ದಾಡಿದ ಭಾರತ!
ಭಾರತದ ಪರ ನಾಯಕ ಲಕ್ಷ್ಯ & ಅರ್ಯವಿರ್ ಇನ್ನಿಂಗ್ಸ್ ಓಪನ್
95 ರನ್ಸ್ ಜೊತೆಯಾಟ.. 58(61) ರನ್ ಗಳಿಗೆ ಆರ್ಯವೀರ್ ಔಟ್
ವಿನೀತ್ 24(21) ಹಾಗೂ ಅರ್ಜುನ್ ರಾಜ್ ಪೂತ್ 16(18) ಔಟ್
ಭಾರತದ ಪರ ಲಕ್ಷ್ಯ ರಾಯಚಂದಾನಿ ನಿಧಾನಗತಿ ಬ್ಯಾಟಿಂಗ್ ಹೊಡೆತ
21 ಓವರ್ ಗಳಲ್ಲಿ ಪಾಕಿಸ್ತಾನ 145-1 ರನ್ಸ್ ಇದ್ರೆ ಭಾರತ 116-1
28 ಓವರ್ ಗಳಲ್ಲಿ ಪಾಕಿಸ್ತಾನ 199-2 ಇದ್ರೆ ಭಾರತ 149-2
6+ ನಿಂದ ಶುರುವಾದ ರಿಕ್ವೈರ್ಡ್ ರನ್ ರೇಟ್ 8+ ಆಗಿದ್ದು ಪ್ರೆಶರ್
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ಯಶ್ 9(5)
ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲದ್ರಲ್ಲೂ ಮಿಂಚಿದ ಪಾಕ್
ಇನ್ನು ಕಳೆದ ಏಷ್ಯಾಕಪ್ ಫೈನಲ್ನಲ್ಲೂ ಭಾರತ-ಪಾಕ್ ನಡುವೆಯೇ ಇಂಥದ್ದೇ ಹೈವೋಲ್ಟೇಜ್ ಮ್ಯಾಚ್ ಆಗಿತ್ತು. 2025ರ ಅಂಡರ್ 19 ಏಷ್ಯಾಕಪ್ ಫೈನಲ್ನಲ್ಲೂ ಭಾರತ-ಪಾಕ್ ತಂಡಗಳೇ ಎದುರುಬದುರಾಗಿದ್ದು ಫಸ್ಟ್ ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ 8 ವಿಕೆಟ್ ನಷ್ಟಕ್ಕೆ 347 ರನ್ಗಳನ್ನ ಕಲೆ ಹಾಕಿತ್ತು. ಆದ್ರೆ ಟಾರ್ಗೆಟ್ ಬೆನ್ನಟ್ಟಿದ ಭಾರತ 156 ರನ್ಗಳಿಗೆ ಆಲೌಟ್ ಆಗಿದ್ದು ಪಾಕ್ ಪಡೆ 191 ರನ್ಗಳ ಬಿಗ್ ಮಾರ್ಜಿನ್ನಲ್ಲಿ ಗೆದ್ದಿತ್ತು.

ನೋಡಿರಿ

