RO-KO ವಿದಾಯ ಸರಣಿ – ಗಾಯಕ್ವಾಡ್ ಬದಲು ತಿಲಕ್ ಬೇಕಾ?
ಸರಣಿ ಗೆಲುವೋ.. ಸಮಬಲವೋ?

RO-KO ವಿದಾಯ ಸರಣಿ – ಗಾಯಕ್ವಾಡ್ ಬದಲು ತಿಲಕ್ ಬೇಕಾ?ಸರಣಿ ಗೆಲುವೋ.. ಸಮಬಲವೋ?

5 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನ ಗೆದ್ದಿದ್ದ ಭಾರತ ನಾಲ್ಕನೇ ಪಂದ್ಯದಲ್ಲಿ 244 ರನ್​ಗಳ ಬಿಗ್ ಮಾರ್ಜಿನ್​ನಿಂದ ಸೋತು ಮುಖಭಂಗ ಅನುಭವಿಸಿದೆ. ಸೋ ಈಗ ಸರಣಿ ಗೆಲ್ಬೇಕು ಅಂದ್ರೆ  ಭಾನುವಾರ ಮೌಂಟ್ ಮೌಂಗನುಯಿಯ ಬೇ ಓವಲ್‌ನಲ್ಲಿ ನಡೆಯಲಿರುವ ಐದನೇ ಪಂದ್ಯ ಗೆಲ್ಲಲೇಬೇಕು. ಮತ್ತೊಂದೆಡೆ ಸರಣಿ ಸಮಬಲದ ಟಾರ್ಗೆಟ್​ನಲ್ಲಿರೋ ನ್ಯೂಜಿಲೆಂಡ್ ಕೂಡ ಫೈಟ್ ಬ್ಯಾಕ್ ಕೊಡೋಕೆ ರೆಡಿಯಾಗಿದೆ. ಌಂಡ್ ಈ ಪಂದ್ಯಕ್ಕೂ ಭಾರತದ ಪ್ಲೇಯಿಂಗ್ 11ನಲ್ಲಿ ಮತ್ತೆ ಬದಲಾವಣೆ ಮಾಡಲೇಬೇಕಿದೆ.

ಇದನ್ನೂ ಓದಿ : T20I ಕೈ ಬಿಟ್ಟಿದ್ದಕ್ಕೆ ಸೂರ್ಯ ಕಣ್ಣೀರು – ಶತಕವೀರ ಸೆಹ್ವಾಗ್ ಪುತ್ರ ಕೊಹ್ಲಿ ಫ್ಯಾನ್

2027ರ ಏಕದಿನ ವಿಶ್ವಕಪ್​ ಹಿನ್ನೆಲೆಯಲ್ಲಿ ಭಾರತಕ್ಕೆ ಕಿವೀಸ್ ನಾಡಿನ ಸರಣಿ ಮೋಸ್ಟ್ ಇಂಪಾರ್ಟೆಂಟ್. ಅಟ್ ದಿ ಸೇಮ್ ಟೈಂ ವಿಶ್ವಟೆಸ್ಟ್ ಚಾಂಪಿಯನ್ ಶಿಪ್​ ರೇಸ್​ನಲ್ಲಿ ಉಳಿಯೋಕೆ ಟೆಸ್ಟ್ ಸರಣಿಯನ್ನೂ ಗೆಲ್ಲಲೇಬೇಕಿದೆ. ಆದ್ರೆ ಎರಡನ್ನೂ ಒಟ್ಟಿಗೆ ಸಂಭಾಳಿಸೋ ಭರದಲ್ಲಿ ಏಕದಿನ ಮಾದರಿಯಲ್ಲಿ ಬ್ಯಾಕ್ ಫೈಯರ್ ಆಗಿದೆ. ಗಿಲ್, ರಾಹುಲ್, ಕಾಂಬೋಜ್ ಇಲ್ಲದೆ ನಾಲ್ಕನೇ ಪಂದ್ಯದಲ್ಲಿ ಜಸ್ಟ್ 89 ರನ್​ಗಳಿಗೆ ಆಲೌಟ್ ಆಗಿದ್ದ ಭಾರತ 5ನೇ ಪಂದ್ಯದಲ್ಲಿ ಹೇಗೆ ಕಂ ಬ್ಯಾಕ್ ಮಾಡ್ತಾರೆ ಅನ್ನೋದೇ ಇಲ್ಲಿರೋ ಪ್ರಶ್ನೆ. ಹಾಗೇ ರೋಹಿತ್ ಮತ್ತು ಕೊಹ್ಲಿಗೆ ಇದು ವಿದಾಯ ಸರಣಿಯೂ ಆಗಲಿದೆ.

ನ್ಯೂಜಿಲೆಂಡ್ ನಲ್ಲಿ ಕೊನೇ ಪಂದ್ಯಕ್ಕೆ ರೆಡಿಯಾದ ರೋ-ಕೊ!

ಭಾರತದ ಲೆಜೆಂಡರಿ ಬ್ಯಾಟರ್​ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್​ವರೆಗೆ ಮಾತ್ರ ಭಾರತ ಏಕದಿನ ತಂಡದಲ್ಲಿ ಇರ್ತಾರೆ. ಹೀಗಾಗಿ ರೋಕೋಗೆ ಇದೇ ನ್ಯೂಜಿಲೆಂಡ್​ನಲ್ಲಿ ಕೊನೆಯ ಸರಣಿ ಆಗಲಿದೆ. ಅಂದ್ರೆ ಇದು ದಿಗ್ಗಜರ ಪಾಲಿಗೆ ವಿದಾಯ ಸರಣಿಯ ಕೊನೇ ಪಂದ್ಯ. ಇನ್ನು ಕಿವೀಸ್ ನಾಡಿನಲ್ಲಿ ಕೊಹ್ಲಿ ಅದ್ಭುತವಾದ ರೆಕಾರ್ಡ್ಸ್ ಹೊಂದಿದ್ದಾರೆ. 16 ಏಕದಿನ ಪಂದ್ಯಗಳನ್ನ ಆಡಿದ್ದು 48+ ಆವರೇಜ್​ನಲ್ಲಿ 650+ ರನ್ಸ್ ಕಲೆ ಹಾಕಿದ್ದಾರೆ. ಌಂಡ್ ಇದ್ರಲ್ಲಿ 1 ಶತಕ ಹಾಗೇ 5 ಅರ್ಧಶತಕಗಳಿವೆ. ಇನ್ನು ರೋಹಿತ್ ಶರ್ಮಾ 17 ಪಂದ್ಯಗಳನ್ನ ಆಡಿದ್ದು 460 ರನ್ಸ್ ಸ್ಕೋರ್ ಮಾಡಿದ್ದಾರೆ. ಆದ್ರೆ ಈ ಸರಣಿ ರೋಹಿತ್​ಗೆ ಅಷ್ಟೇನು ಚೆನ್ನಾಗಿ ಆಗಿಲ್ಲ. ಫಸ್ಟ್ ಮ್ಯಾಚಲ್ಲಿ ಸೊನ್ನೆ.. ನಾಲ್ಕನೇ ಮ್ಯಾಚಲ್ಲಿ ಸೊನ್ನೆ. ಅಂದ್ರೆ ಕಳೆದ ಮೂರು ಪಂದ್ಯಗಳಲ್ಲಿ 2 ಸಲ ಸೊನ್ನೆ ಸುತ್ತಿದ್ದಾರೆ. ಹೀಗಾಗಿ ಐದನೇ ಮ್ಯಾಚ್​​ನಲ್ಲಿ ಬಿಗ್ ಇನ್ನಿಂಗ್ಸ್ ಮೂಲಕ ರೋಹಿತ್ ಮತ್ತು ಕೊಹ್ಲಿ ನ್ಯೂಜಿಲೆಂಡ್​ಗೆ ಗುಡ್ ಬೈ ಹೇಳೋ ಪ್ಲ್ಯಾನ್​ನಲ್ಲಿದ್ದಾರೆ. ಇನ್ನು ಕೊನೆಯ ಪಂದ್ಯಕ್ಕೆ ಭಾರತಕ್ಕೆ ಬೌಲಿಂಗ್ ಟೆನ್ಷನ್ ಸ್ಟಾರ್ಟ್ ಆಗಿದೆ.

ಟೆಸ್ಟ್ ಸರಣಿಗಾಗಿ ಕೊನೆ ಪಂದ್ಯದಿಂದ ಹೊರಬಿದ್ದ ಗುರ್ನೂರ್ ಬ್ರಾರ್!

ಇನ್ನು ನ್ಯೂಜಿಲೆಂಡ್‌ ವಿರುದ್ಧದ ಕೊನೇ ಏಕದಿನ ಪಂದ್ಯಕ್ಕೂ ಮುನ್ನ ಗುರ್ನೂರ್​ ಬ್ರಾರ್​ಗೆ ಬಿಸಿಸಿಐ ಗೇಟ್​ಪಾಸ್ ನೀಡಿದೆ. ನವೆಂಬರ್ 19 ರಿಂದ ವೆಲ್ಲಿಂಗ್ಟನ್‌ನಲ್ಲಿ ಪ್ರಾರಂಭವಾಗುವ ಎರಡು ಟೆಸ್ಟ್ ಸರಣಿಗೆ ಬ್ರಾರ್ ಅವರನ್ನು ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿದೆ, ಆದರೆ ಅನುಭವಿ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಟೆಸ್ಟ್ ತಂಡದಿಂದ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಗುರ್ನೂರ್ ಕೊನೇ ಪಂದ್ಯದಲ್ಲಿ ಆಡಲ್ಲ. ಹೀಗಾಗಿ ಪ್ಲೇಯಿಂಗ್ 11ನಲ್ಲಿ ಕೊನೇ ಪಂದ್ಯಕ್ಕೂ ಚೇಂಜಸ್ ಮಾಡ್ಬೇಕಿದೆ.

ಭಾರತದ ಫೈನಲ್ ಫೈಟ್!

ರೋಹಿತ್ ಶರ್ಮಾ

ರುತುರಾಜ್ ಗಾಯಕ್ವಾಡ್

ವಿರಾಟ್ ಕೊಹ್ಲಿ

ಶ್ರೇಯಸ್ ಅಯ್ಯರ್

ಇಶಾನ್ ಕಿಶನ್

ಅಕ್ಷರ್ ಪಟೇಲ್

ನಮನ್ ಧೀರ್

ಔಕಿಬ್ ನಬಿ

ಕುಲ್ದೀಪ್ ಯಾದವ್

ಮೊಹಮ್ಮದ್ ಸಿರಾಜ್

ಅರ್ಶದೀಪ್ ಸಿಂಗ್

ಸೋ ಬ್ಯಾಟಿಂಗ್ ಅಂತಾ ಬಂದಾಗ ಯಾವುದೇ ಚೇಂಜಸ್ ಇಲ್ಲದೇ ಇದ್ರೂ ಬೌಲಿಂಗ್​ನಲ್ಲಂತೂ ಬದಲಾವಣೆ ಮಾಡಲೇಬೇಕಿದೆ. ಹಾಗೇ ಪರ್ಫಾಮೆನ್ಸ್​ನಲ್ಲೂ ಭಾರತ ಅಲರ್ಟ್ ಆಗ್ಬೇಕಿದೆ.

ಸರಣಿ ಗೆಲುವಿನ ಸವಾಲು!

ಕೊನೆಯ ಪಂದ್ಯದಲ್ಲಿ ರೋಹಿತ್ & ಕೊಹ್ಲಿಗೆ ಕಂ ಬ್ಯಾಕ್ ಅನಿವಾರ್ಯ

ಟಾಪ್ ಆರ್ಡರ್ ಬ್ಯಾಟಿಂಗ್ ನಿಂದ ಜವಾಬ್ದಾರಿಯುತವಾದ ಬ್ಯಾಟಿಂಗ್

ಶ್ರೇಯಸ್ ಗೆ ಬ್ಯಾಟಿಂಗ್ ಜೊತೆ ತಂಡವನ್ನೂ ಗೆಲ್ಲಿಸೋ ಸವಾಲು

ನ್ಯೂಜಿಲೆಂಡ್ ನ ವೇಗದ ಬೌಲರ್ ಗಳ ವಿರುದ್ಧ ರನ್ ಗಳಿಸೋ ಟಾಸ್ಕ್

ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಮಿಡಲ್ ಆರ್ಡರ್ ನಲ್ಲಿ ರನ್ಸ್ ಬೇಕು

ಬೌಲಿಂಗ್ ನಲ್ಲಿ ರನ್ಸ್ ಕಂಟ್ರೋಲ್ ಮಾಡುವುದೇ ಭಾರತಕ್ಕಿರೋ ಚಾಲೆಂಜ್

ಒಟ್ನಲ್ಲಿ ಸರಣಿ ಗೆಲುವಿಗೆ ಹತ್ತಿರದಲ್ಲಿರೋ ಭಾರತಕ್ಕೆ ಈ ಗೆಲುವು ಅಷ್ಟು ಈಸಿ ಕೂಡ ಇಲ್ಲ. ಬ್ಯಾಟಿಂಗ್, ಬೌಲಿಂಗ್, ಹಾಗೇ ಫೀಲ್ಡಿಂಗ್ ಹೀಗೆ ಎಲ್ಲದ್ರಲ್ಲೂ ಆಲ್​ರೌಂಡ್ ಪ್ರದರ್ಶನ ಬೇಕಿದೆ. ಮತ್ತೊಂದೆಡೆ ಟಿ-20ಐ ಸರಣಿಯನ್ನ ಸೋತಿರೋ ಕಿವೀಸ್ ಪಡೆ ತವರಿನಲ್ಲಿ ಏಕದಿನ ಸರಣಿ ಗೆಲ್ಲೋಕೆ ಅವಕಾಶ ಇಲ್ಲದೇ ಇದ್ರೂ ಅಟ್​ಲಿಸ್ಟ್ ಸಮಬಲ ಮಾಡಿಕೊಂಡು ಮರ್ಯಾದೆ ಉಳಿಸಿಕೊಳ್ಳೋಕೆ ನೋಡ್ತಿದ್ದಾರೆ. ಹೀಗಾಗಿ ಕೊನೇ ಪಂದ್ಯದಲ್ಲಿ ಇನ್ನೂ ಸ್ಟ್ರಾಂಗ್ ಪರ್ಫಾಮೆನ್ಸ್​ಗೆ ರೆಡಿಯಾಗಿದ್ದಾರೆ.

Shantha Kumari

Leave a Reply

Your email address will not be published. Required fields are marked *