ಕೋಟಿ ಕೊಟ್ರೂ ಕೈಕೊಟ್ಟ ಸ್ಟಾರ್ಸ್ – ದುಬಾರಿ ಪ್ಲೇಯರ್ ಗಳಿಗೆ ಗೇಟ್ ಪಾಸ್
ಜಿತೇಶ್, ಗ್ರೀನ್, ಪೂರನ್.. ಯಾರೆಲ್ಲಾ?

ಕೋಟಿ ಕೊಟ್ರೂ ಕೈಕೊಟ್ಟ ಸ್ಟಾರ್ಸ್ – ದುಬಾರಿ ಪ್ಲೇಯರ್ ಗಳಿಗೆ ಗೇಟ್ ಪಾಸ್ಜಿತೇಶ್, ಗ್ರೀನ್, ಪೂರನ್.. ಯಾರೆಲ್ಲಾ?

2027ರ ಐಪಿಎಲ್​ಗೂ ಮುನ್ನ ಆಲ್ರೆಡಿ ದೊಡ್ಡ ಮಟ್ಟದಲ್ಲೇ ಟ್ರೇಡ್ ಡೀಲ್​ಗಳಾಗಿವೆ. ಬಿಗ್ ಪ್ಲೇಯರ್​ಗಳೇ ಸ್ವ್ಯಾಪ್​ ಡೀಲ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಮಿನಿ ಆಕ್ಷನ್​ನಲ್ಲೂ ದೊಡ್ಡ ದೊಡ್ಡ ತಿಮಿಂಗಿಲಗಳೇ ಹರಾಜಿಗೆ ಬರ್ತಾರೆ. ಕೊಟ್ಟ ಕಾಸಿಗೂ ಅವ್ರು ಆಡಿದ್ದ ಆಟಕ್ಕೂ ಸರಿ ಹೋಗದ ಕಾರಣ ಮಾಲೀಕರೇ ಗೇಟ್​ಪಾಸ್ ಕೊಡೋಕೆ ಸಿದ್ಧರಾಗಿದ್ದಾರೆ.

ಇದನ್ನೂ ಓದಿ : RCB ಫ್ಯಾನ್ಸ್ ಗೆ ಸಿಕ್ತು ಜೋಶ್ – ಹ್ಯಾಟ್ರಿಕ್ ಕಪ್ ಗೆ ಹೇಜಲ್ ವುಡ್ ರೆಡಿ

ನವೆಂಬರ್ 17.. ಅಂದ್ರೆ ಬುಧವಾರ. 2027ರ ಐಪಿಎಲ್​ಗೆ ಫ್ರಾಂಚೈಸಿಗಳು ತಾವು ತಂಡದಲ್ಲಿ ಉಳಿಸಿಕೊಳ್ಳುವ ಹಾಗೇ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನ ರಿಲೀಸ್ ಮಾಡೋಕೆ ಲಾಸ್ಟ್ ಡೇಟ್. ಌಂಡ್ ಡಿಸೆಂಬರ್ 16ಕ್ಕೆ ಗೋವಾದಲ್ಲಿ ಮಿನಿ ಆಕ್ಷನ್ ನಡೆಯಲಿದೆ. ಅಂದ್ರೆ ಅದಕ್ಕೂ ಕೂಡ ಇನ್ನೊಂದು ತಿಂಗಳು ಅಷ್ಟೇ ಬಾಕಿ ಇದೆ. ಈಗಾಗ್ಲೇ ಕೆಲ ತಂಡಗಳಲ್ಲಿ ಆಟಗಾರರ ಟ್ರೇಡ್​ ಡೀಲ್​ಗಳಾಗಿವೆ. ಇನ್ನೂ ಕೆಲವ್ರು ನ್ಯೂಟ್ರಲ್ ಆಗಿದ್ದಾರೆ.  ಈಗ ಎಲ್ಲಾ ಫ್ರಾಂಚೈಸಿಗಳಿಗೆ ಬಲಿಷ್ಠ ತಂಡವನ್ನ ಕಟ್ಟಿಕೊಳ್ಳೋಕೆ ಮಿನಿ ಆಕ್ಷನ್ ಕೊನೇ ಅವಕಾಶವಾಗಲಿದೆ. ಆ ಹರಾಜಿನಲ್ಲಿ ಪರ್ಸ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳೋಕೆ ಫ್ರಾಂಚೈಸಿಗಳ ಟಾರ್ಗೆಟ್ ಇರೋದೇ ಕಾಸ್ಟ್ಲಿ ಪ್ಲೇಯರ್ಸ್. ಯಾರೆಲ್ಲಾ ಬಿಗ್ ಅಮೌಂಟ್ ತಗೊಂಡೂ ಕೂಡ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಆಡಿದ್ರೂ ಅವ್ರನ್ನೆಲ್ಲಾ ಹರಾಜಿಗೆ ಬಿಟ್ಟು ಬೇಕಿದ್ರೆ ಕಡಿಮೆ ಮೊತ್ತಕ್ಕೆ ಅವ್ರನ್ನೇ ಖರೀದಿ ಮಾಡೋದು ಅಥವಾ ಆ ದುಡ್ಡಲ್ಲಿ ಬೇರೆ ಸ್ಟ್ರಾಂಗ್ ಪ್ಳೇಯರ್​ಗಳನ್ನ ಖರೀದಿ ಮಾಡೋ ಲೆಕ್ಕಾಚಾರದಲ್ಲಿ ಇದ್ದಾರೆ.

ದುಬಾರಿ ವೀರರಿಗೆ ಗೇಟ್ ಪಾಸ್!

ಆಟಗಾರ                          ತಂಡ                          ಸಂಭಾವನೆ

ಕ್ಯಾಮರೂನ್ ಗ್ರೀನ್              ಕೊಲ್ಕತ್ತಾ                        ₹25.20 ಕೋಟಿ

ನಿಕೋಲಸ್ ಪೂರನ್             ಲಕ್ನೋ                           ₹21 ಕೋಟಿ

ಪ್ರಶಾಂತ್ ವೀರ್                  ಚೆನ್ನೈ                            ₹14.20

ರಶೀದ್ ಖಾನ್                   ಗುಜರಾತ್                        ₹18 ಕೋಟಿ

ಜೋಸ್ ಬಟ್ಲರ್                ಗುಜರಾತ್                        ₹15.75 ಕೋಟಿ

ಮತೀಶ ಪತಿರಾಣ               ಕೊಲ್ಕತ್ತಾ                          ₹18 ಕೋಟಿ

ಟ್ರೆಂಟ್ ಬೌಲ್ಟ್                 ಮುಂಬೈ                           ₹12.50 ಕೋಟಿ

ದೀಪಕ್ ಚಹರ್                  ಮುಂಬೈ                         ₹9.25 ಕೋಟಿ

ಮಾರ್ಕಸ್ ಸ್ಟೊಯಿನಿಸ್         ಪಂಜಾಬ್ ಕಿಂಗ್ಸ್                   ₹11 ಕೋಟಿ

ಹರ್ಷಲ್ ಪಟೇಲ್              ಹೈದರಾಬಾದ್                     ₹8 ಕೋಟಿ

ಜಿತೇಶ್ ಶರ್ಮಾ                 ಬೆಂಗಳೂರು                        ₹11 ಕೋಟಿ

ಸದ್ಯಕ್ಕೆ ಇಷ್ಟು ಆಟಗಾರರ ಹೆಸರು ಮಿನಿ ಆಕ್ಷನ್​ಗೂ ಮುನ್ನ ರಿಲೀಸ್​ ಆಗಬಹುದು. ಹಂಗಂತ ಇವ್ರಲ್ಲಿ ಎಲ್ರೂ ಪರ್ಫಾಮ್ ಮಾಡದೇ ತಂಡದಿಂದ ಹೊರ ಬರಬಹುದು ಅಂತಲ್ಲ. ಫ್ರಾಂಚೈಸಿಗಳು ಮಿನಿ ಆಕ್ಷನ್​ಗೂ ಮುನ್ನ ಪರ್ಸ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳೋಕೆ ಕೆಲ ದುಬಾರಿ ಪ್ಲೇಯರ್​ಗಳನ್ನ ರಿಲೀಸ್ ಮಾಡಬಹುದು. ಌಂಡ್ ಹರಾಜಿನಲ್ಲಿ ಬೇಕಿದ್ರೆ ಅದೇ ಆಟಗಾರರನ್ನ ಕಡಿಮೆ ಮೊತ್ತಕ್ಕೆ ಖರೀದಿ ಮಾಡ್ಬೋದು. ಈಗ ವೆಂಕಟೇಶ್ ಅಯ್ಯರ್​ನೇ ತಗೊಳ್ಳಿ 2025ರ ಐಪಿಎಲ್​ಗೂ ಮುನ್ನ ಕೆಕೆಆರ್ 23.75 ಕೋಟಿಗೆ ಖರೀದಿ ಮಾಡಿತ್ತು. ಆರ್​ಸಿಬಿಯೇ 23 ಕೋಟಿವರೆಗೆ ಬಿಡ್ ಮಾಡಿತ್ತು. ಆದ್ರೆ 2026ರ ಐಪಿಎಲ್​ಗೂ ಮುನ್ನ ಅದೇ ವೆಂಕಿಯನ್ನ ಆರ್​ಸಿಬಿ ಮಿನಿ ಹರಾಜಿನಲ್ಲಿ 7 ಕೋಟಿಗೆ ಖರೀದಿ ಮಾಡಿದ್ರು. ಸೋ ಇದನ್ನ ಸ್ಮಾರ್ಟ್​ನೆಸ್ ಅನ್ನೋದು. ಹೀಗಾಗಿ ಈ ಬಾರಿಯ ಮಿನಿ ಆಕ್ಷನ್​ನಲ್ಲೂ ದೊಡ್ಡ ದೊಡ್ಡ ಪ್ಲೇಯರ್ಸ್​ ಅಖಾಡಕ್ಕೆ ಬರ್ತಾರೆ. ಇದ್ರಲ್ಲಿ ಕೆಲವ್ರು ಅನ್​ಸೋಲ್ಡ್ ಆದ್ರೂ ಅಚ್ಚರಿ ಇಲ್ಲ. ಌಂಡ್ ಬೇಸ್​ ಪ್ರೈಸ್​ಗೆ ಸೇಲ್ ಆದ್ರೂ ಆಶ್ಚರ್ಯ ಏನಿಲ್ಲ.

Shantha Kumari

Leave a Reply

Your email address will not be published. Required fields are marked *