ಅಮೃತಧಾರೆ ಧಾರಾವಾಹಿಯಲ್ಲಿ ಅಂತಿಮ ಸಂಚಿಕೆಗಳು ಪ್ರಸಾರ – ಗೌರಿಪುತ್ರ ಹೊಸ ಧಾರಾವಾಹಿ ಶ್ರೀಘ್ರದಲ್ಲೇ ಆರಂಭ

ಅಮೃತಧಾರೆ ಧಾರಾವಾಹಿಯಲ್ಲಿ ಅಂತಿಮ ಸಂಚಿಕೆಗಳು ಪ್ರಸಾರ – ಗೌರಿಪುತ್ರ ಹೊಸ ಧಾರಾವಾಹಿ ಶ್ರೀಘ್ರದಲ್ಲೇ ಆರಂಭ

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಅಂತಿಮ ಸಂಚಿಕೆಗಳು ಪ್ರಸಾರವಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದೆ. ಈ ಧಾರಾವಾಹಿ ಪ್ರಸಾರವಾಗುತ್ತಿರುವ ಸಮಯದಲ್ಲೇ ಮತ್ತೊಂದು ಹೊಸ ಧಾರಾವಾಹಿ ಗೌರಿಪುತ್ರ ಆರಂಭಗೊಳ್ಳಲಿದೆ.

ಇದನ್ನೂ ಓದಿ:1000 ಕೋಟಿ ಸರದಾರ ಯಶ್ – ಉತ್ತರ ಭಾರತಕ್ಕೆ ಉರಿ ಯಾಕೆ?

ಜನಪ್ರಿಯ ಧಾರಾವಾಹಿ ಅಮೃತಧಾರೆ ಶೀಘ್ರದಲ್ಲಿ ಅಂತ್ಯವಾಗಲಿದೆ. ನವೆಂಬರ್ 6ರ ಶುಕ್ರವಾರ ಕಡೆ ದಿನದ ಶೂಟಿಂಗ್ ಪೂರ್ಣಗೊಂಡಿದೆ. ಈ  ವಿಚಾರವನ್ನು ಸ್ವತಃ ನಟ ರಾಜೇಶ್ ನಟರಂಗ ದೃಢಪಡಿಸಿದ್ದರು. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ಧಾರಾವಾಹಿಗೆ ವಿದಾಯ ಹೇಳಿದ್ದಾರೆ. ಸೆಟ್‌ನಲ್ಲಿ ಇಡೀ ತಂಡ ಜೊತೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಧಾರಾವಾಹಿಯ ಕೊನೆಯ ಸಂಚಿಕೆಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ.

ಜೀ ಕನ್ನಡ ವಾಹಿನಿಯಲ್ಲಿ ಅಮೃತಧಾರೆ ಪ್ರಸಾರವಾಗುತ್ತಿದ್ದ ಸಂಜೆ 7 ಗಂಟೆಯ ಸಮಯಕ್ಕೆ ಹೊಸ ಧಾರಾವಾಹಿ ಗೌರಿ ಪುತ್ರ ಪ್ರಸಾರವಾಗಲಿದೆ. ಈ ಧಾರಾವಾಹಿ ಮೂಲಕ ಸ್ಯಾಂಡಲ್‌ವುಡ್ ನಟಿ ಅನು ಪ್ರಭಾಕರ್ ಕಿರುತೆರೆಗೆ ಭರ್ಜರಿಯಾಗಿಯೇ ಎಂಟ್ರಿಕೊಡಲಿದ್ದಾರೆ. ರಾಮಾಚಾರಿ ಸೀರಿಯಲ್ ಖ್ಯಾತಿಯ ರಿತಿಕ್ ಕಪಾಕರ್ ನಾಯಕನಾಗಿ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ಸೀರಿಯಲ್ ಪ್ರೋಮೋ ರಿಲೀಸ್ ಆಗಿದೆ.

Sulekha

Leave a Reply

Your email address will not be published. Required fields are marked *