1000 ಕೋಟಿ ಸರದಾರ ಯಶ್ – ಉತ್ತರ ಭಾರತಕ್ಕೆ ಉರಿ ಯಾಕೆ?

1000 ಕೋಟಿ ಸರದಾರ ಯಶ್ – ಉತ್ತರ ಭಾರತಕ್ಕೆ ಉರಿ ಯಾಕೆ?

ಬಾಕ್ಸ್ ಆಫೀಸ್‌ನಲ್ಲಿ ರಾಮಾಯಣ ಸಿನಿಮಾ ಸೃಷ್ಟಿಸುತ್ತಿರುವ ಸುನಾಮಿ ಅಷ್ಟಿಷ್ಟಲ್ಲ. ಅದರಲ್ಲೂ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ವರ್ಲ್ಡ್ ಸಿನಿಮಾ ಇಂಡಸ್ಟ್ರಿಯನ್ನೇ ಕನ್ನಡಿಗನ ಸಿನಿಮಾ ಶೇಕ್ ಮಾಡುತ್ತಿದೆ. ಕನ್ನಡಿಗರ ಪಾಲಿನ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಮಾಯಣ ಸಿನಿಮಾ ಈಗ ವಿಶ್ವಾದ್ಯಂತ ಸದ್ದು ಮಾಡುತ್ತಿದೆ. ನೋಡ ನೋಡುತ್ತಲೇ ರಾಕಿಭಾಯ್ ಸಿನಿಮಾ ಬರೋಬ್ಬರಿ 1000 ಕೋಟಿ ರೂಪಾಯಿ ಗಡಿ ದಾಟಿ ಮುನ್ನುಗ್ಗುತ್ತಿದೆ.

ರಾಮಾಯಣ ಸಿನಿಮಾ ಶೂಟಿಂಗ್ ಶುರುವಾದಾಗಿನಿಂದ ಹಿಡಿದು ರಿಲೀಸ್ ಆಗುವ ತನಕವೂ ದೊಡ್ಡ ಮಟ್ಟಿಗೆ ಸೌಂಡ್ ಮಾಡಿತ್ತು. ಅದರಲ್ಲೂ ನವೆಂಬರ್ 5ಕ್ಕೆ ಜಗತ್ತಿನಾದ್ಯಂತ ಸುಮಾರು ಅರ್ಧ ಲಕ್ಷಕ್ಕೂ ಹೆಚ್ಚು ಅಂದ್ರೆ 59 ಸಾವಿರ ಸ್ಕ್ರೀನ್‌ನಲ್ಲಿ ರಿಲೀಸ್ ಆಗಿದ್ದ ರಾಮಾಯಣ ಸಿನಿಮಾ ಎಲ್ಲಾ ದಾಖಲೆಗಳನ್ನು ಪೀಸ್ ಪೀಸ್ ಮಾಡುತ್ತಿದೆ.

ನವೆಂಬರ್ 5ರಂದು ಮೊದಲ ದಿನ 64.85 ಕೋಟಿ ರೂಪಾಯಿ, ಎರಡನೇ ದಿನ 48.05 ಕೋಟಿ, ಮೂರನೇ ದಿನ 69.80 ಕೋಟಿ, ನಾಲ್ಕನೇ ದಿನ 56.15 ಕೋಟಿ ಕಲೆಕ್ಷನ್ ಮಾಡಿದ್ದ ರಾಮಾಯಣ 5ನೇ ದಿನದಿಂದ ಟಾಪ್‌ ಗೇರ್‌ನಲ್ಲಿ ಓಡುತ್ತಿದೆ.. ದಿನ ನಿತ್ಯ ನೂರು ಕೋಟಿ ಕಲೆಕ್ಷನ್ ಮಾಡ್ತಿದೆ.. ಹೀಗೆ 9 ದಿನಗಳಲ್ಲಿ ಭಾರತದ ನೆಟ್ ಕಲೆಕ್ಷನ್ 564.60 ಕೋಟಿ ರೂಪಾಯಿ ದಾಟಿದೆ. ಇನ್ನು ವಿಶ್ವಾದ್ಯಂತ ಒಟ್ಟು ಗ್ರಾಸ್ ಕಲೆಕ್ಷನ್ 1033.55 ಕೋಟಿ ರೂಪಾಯಿ ತಲುಪಿದೆ.

ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್‌ಗಳ ಅಂಕಿಅಂಶಗಳ ಪ್ರಕಾರ, 2026ರಲ್ಲಿ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ‘ರಾಮಾಯಣ’ ಎರಡನೇ ಸ್ಥಾನಕ್ಕೇರಿದೆ. ಈ ಪಟ್ಟಿಯಲ್ಲಿ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ₹1,852 ಕೋಟಿ ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರದ ₹830 ಕೋಟಿ ಗಳಿಕೆಯ ದಾಖಲೆಯನ್ನು ‘ರಾಮಾಯಣ’ ಹಿಂದಿಕ್ಕಿದೆ.

ಇನ್ನು ಉತ್ತರ ಭಾರತದಲ್ಲಿ ಯಶ್ ಅವರದ್ದೇ ದೊಡ್ಡ ಚರ್ಚೆ.. ದಕ್ಷಿಣ ಭಾರತ ನಟನ ಬಗ್ಗೆ ಉರ್ಕೋಂಡ್ ಇರೋ ಉತ್ತರ ಭಾರತದವರು.. ರಾಮಾಯಣದಲ್ಲಿ ರಾವಣನನ್ನೇ ಹೈಲೆಟ್ ಮಾಡಿದ್ದಾರೆ. ರಾಮನನ್ನ ಡಮ್ಮಿ ಮಾಡಿದ್ದಾರೆ ಅಂತ ಹೇಳ್ತಾ ಕಾಮೆಂಟ್ ಮಾಡ್ತಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡ್ತಿದ್ದಾರೆ.. ರಾಮಾಯಣದಲ್ಲಿ ಯಶ್ ರಾವಣನ ಪಾತ್ರದಲ್ಲಿ ಮಿಂಚಿದ್ದಾರೆ.. ಅವರ ಸ್ಕ್ರೀನ್ ಪ್ರೆಸೆನ್ಸ್, ಆ್ಯಕ್ಷನ್ ದೃಶ್ಯಗಳು ಮತ್ತು ಜಟಾಯು ಜೊತೆಗಿನ ಫೈಟ್‌ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದ್ರೆ ಉತ್ತರ ಭಾರತದವರು ರಾವಣನಿಗೆ ಇಷ್ಟು ಬಿಲ್ಡಪ್ ಬೇಕಿತ್ತಾ ಅವನು ವಿಲನ್ ಅಲ್ವಾ ಕಾಮೆಂಟ್ ಹಾಕುತ್ತಿದ್ದಾರೆ.. ಆದ್ರೆ ಸಿನಿಮಾ ತಂಡ ಇಲ್ಲಿ ಯಾರಿಗೆ ಎಷ್ಟು ಸ್ಕ್ರೀನ್ ಕೊಡಬೇಕು? ಅನ್ನೋದ್ದನ್ನ ಅಚ್ಚುಕಟ್ಟಾಗಿ ಮಾಡಿದ್ದಾರೆ..

ಇದನ್ನೂ ಓದಿ: ಕೈಕೊಟ್ಟ ಶ್ರೇಯಸ್ (0) ಕ್ಯಾಪ್ಟನ್ಸಿ – RO-KO ಸೊನ್ನೆ.. ಹೆನ್ರಿ ಏಟು

ರಾವಣ ಎಂದಾಕ್ಷಣ ನಮಗೆ ನೆನಪಾಗುವುದು ಲಂಕೆಯ ರಾಜ, ಅಪಾರ ಶಕ್ತಿ ಹೊಂದಿದ್ದ ವ್ಯಕ್ತಿ, ಶಿವನ ಭಕ್ತ ಮತ್ತು ಪ್ರಭು ಶ್ರೀ ರಾಮನ ಎದುರು ನಿಂತ ದೈತ್ಯ ಪ್ರತಿಸ್ಪರ್ಧಿ. ಆದರೆ ರಾವಣನ ಪಾತ್ರವನ್ನು ಕೇವಲ ಒಬ್ಬ ಖಳನಾಯಕನಾಗಿ ನೋಡುವುದಕ್ಕೆ ಸಾಧ್ಯವಿಲ್ಲ. ಯಾಕೆ ಅಂದ್ರೆ ರಾವಣನಿಗೆ ಅಪಾರ ಜ್ಞಾನವಿತ್ತು ಹಾಗೂ ಸಂಗೀತದ ಬಗ್ಗೆಯೂ ಆಸಕ್ತಿ ಇತ್ತು, ಯುದ್ಧದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಸಾಮರ್ಥ್ಯವಿತ್ತು. ಅದಕ್ಕಿಂತಲೂ ಹೆಚ್ಚಾಗಿ ರಾವಣ ಒಬ್ಬ ಅಪ್ರತಿಮ ಬ್ರಾಹ್ಮಣ ಎಂದು ನಮ್ಮ ಪುರಾಣಗಳು ಉಲ್ಲೇಖಿಸುತ್ತವೆ. ಇಷ್ಟೆಲ್ಲಾ ಇದ್ದರೂ ರಾವಣನ ಅಹಂಕಾರ ಮತ್ತು ತಪ್ಪು ನಿರ್ಧಾರಗಳೇ ಅವನ ಪತನಕ್ಕೆ ಕಾರಣವಾದವು. ಇದನ್ನೆಲ್ಲಾ ತೆರೆಯ ಮೇಲೆ ಅತ್ಯಂತ ಅಚ್ಚುಕಟ್ಟಾಗಿ ತೋರಿಸಿದೆ ರಾಮಾಯಣ ಸಿನಿಮಾ ತಂಡ. ಅದರಲ್ಲೂ ರಾಮಾಯಣ ಭಾಗ 1ರಲ್ಲಿ ಯಶ್ ಇರದೇ ಹೋಗಿದ್ರೆ ಕಷ್ಟವಾಗುತ್ತಿತ್ತು, ಇಡೀ ಸಿನಿಮಾದಲ್ಲಿ ಯಶ್ ಪಾತ್ರವೇ ಹೈಲೈಟ್ ಅಂತಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.. ಆದ್ರೆ ದಕ್ಷಿಣ ಭಾರತದವರ ನಟನೆ ನೋಡಿ ಉತ್ತರ ಭಾರತದವರು ಯಾಕೆ ಉರಿದುಕೊಳ್ಳುತ್ತಿದ್ದಾರೆಅನ್ನೋ ಚರ್ಚೆ ನಡೆಯುತ್ತಿದೆ. ರಾಮಾಯಣ ಫಾರ್ಟ್‌ 1ನಲ್ಲಿ ಹೇಗೆ ರಾವಣನ ಆರ್ಭಟ ಇತ್ತೋ, ರಾಮಾಯಣ ಪಾರ್ಟ್‌2ನಲ್ಲಿ ಹನಮಂತನ ಅಬ್ಬರವಿದೆ.. ಆ ಪಾತ್ರ ಕೂಡ ರಾವಣನ ಪಾತ್ರದಂತೆ ಹೈಲೆಟ್ ಆಗಲಿದೆ. ರಾಮಾಯಣ ಪಾರ್ಟ್‌ 2ನಲ್ಲಿ ರಾಮ ರಾವಣನ ಯುದ್ಧ ಹನುಮಂತನ ಎಂಟ್ರಿ ನೋಡೋಕೆ ಇಡೀ ವಿಶ್ವವೇ ಕಾದು ಕುಳಿತಿದೆ.

ರಾಮಾಯಣ  ಪಾರ್ಟ್‌ 1 1000 ಸಾವಿರ  ಕೋಟಿ ಗಡಿ ದಾಟಿ 2000 ಸಾವಿರ ಕೋಟಿಯತ್ತ ಮುನ್ನುಗ್ಗುತ್ತಿದೆ. ಹೆಮ್ಮೆಯ ಕನ್ನಡಿಗ ಯಶ್ ಅಭಿಮಾನಿಗಳ ಅಬ್ಬರಕ್ಕೆ ಎದುರಾಳಿ ಪಡೆ ಸೈಲೆಂಟ್ ಆಗಿದ್ದು ಯಶ್ ಅವರ ನಟನೆಗೆ ಫುಲ್ ಮಾರ್ಕ್ಸ್ ಕೂಡ ಸಿಕ್ಕಿದೆ. ಅಷ್ಟೇ ಅಲ್ಲ ರಾಮಾಯಣದಲ್ಲಿ ಯಶ್ ಕೂಡ ಕೋ ಪ್ರೋಡ್ಯೂಸರ್ ಆಗಿದ್ದು, ಸಿನಿಮಾ ಕಲೆಕ್ಷನ್‌ನಿಂದ ಸಖತ್ ಖುಷಿಯಾಗಿದ್ದಾರೆ.ಇನ್ನೊಂದು ವಿಶೇಷವೆಂದರೆ ರಾಮಾಯಣ ಸಿನಿಮಾ 2027ರ ಆಸ್ಕರ್ ಪ್ರಶಸ್ತಿಗಳ ಪರಿಗಣನೆಗಾಗಿ ಸ್ವತಂತ್ರವಾಗಿ ಸಲ್ಲಿಕೆಯಾಗಿದೆ.

Kishor KV

Leave a Reply

Your email address will not be published. Required fields are marked *