RCB ಫ್ಯಾನ್ಸ್ ಗೆ ಸಿಕ್ತು ಜೋಶ್ – ಹ್ಯಾಟ್ರಿಕ್ ಕಪ್ ಗೆ ಹೇಜಲ್ ವುಡ್ ರೆಡಿ
ಪ್ಯಾಟ್ ಕಮ್ಮಿನ್ಸ್ ಯು-ಟರ್ನ್

2027ರ ಐಪಿಎಲ್ಗೂ ಮುನ್ನ ಮಿನಿ ಆಕ್ಷನ್ಗೇ ಕೆಲ ದಿನಗಳಷ್ಟೇ ಬಾಕಿ. ಹೀಗಾಗಿ ಫ್ರಾಂಚೈಸಿಗಳ ರಿಲೀಸ್ & ರಿಟೇನ್ ಲೆಕ್ಕಾಚಾರ ಜೋರಾಗಿದೆ. ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು? ಯಾರಿಗೆ ಗೇಟ್ಪಾಸ್ ನೀಡಬೇಕು? ಹರಾಜಿನಲ್ಲಿ ಯಾವ ಸ್ಲಾಟ್ ಪ್ಲೇಯರ್ಗಳನ್ನ ಪಿಕ್ ಮಾಡ್ಬೇಕು? ಹೀಗೆ ಬೇರೆ ಬೇರೆ ಌಂಗಲ್ಗಳಲ್ಲಿ ತಂತ್ರಗಳನ್ನ ರೆಡಿ ಮಾಡಿದ್ದಾರೆ. ಇದ್ರ ನಡುವೆ ಆರ್ಸಿಬಿ ಫ್ಯಾನ್ಸ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಆಸೀಸ್ ಪ್ಲೇಯರ್ಸ್ ಬಿಗ್ ರಿಲೀಫ್ ನೀಡಿದ್ದಾರೆ.
ಇದನ್ನೂ ಓದಿ : ಶ್ರೇಯಸ್ ಮೈಕ್ಯಾಪ್ಟನ್ ಎಂದ ಪಾಂಡ್ಯ – ಗಿಲ್ನ ಸೈಡಿಗೆ ತಳ್ಳಿದ ರಿಷಭ್ ಪಂತ್
20ನೇ ಆವೃತ್ತಿಯ ಐಪಿಎಲ್ನಲ್ಲಿ ಆಸ್ಟ್ರೇಲಿಯಾ ಪ್ಲೇಯರ್ಸ್ ಆಡಲ್ಲ.. ಏಕದಿನ ವಿಶ್ವಕಪ್ ಸಿದ್ಧತೆಗಾಗಿ ಐಪಿಎಲ್ ಕ್ವಿಟ್ ಮಾಡ್ತಾರೆ ಅನ್ನೋ ಸುದ್ದಿ ಹಲ್ಚಲ್ ಎಬ್ಬಿಸಿತ್ತು. ಪ್ಯಾಟ್ ಕಮ್ಮಿನ್ಸ್ ಕೂಡ ನೇಷನ್ ಈಸ್ ಫಸ್ಟ್ ಪ್ರಿಯಾರಿಟಿ ಅಂದಿದ್ರು. ಹೀಗಾಗಿ ಆರ್ಸಿಬಿ ಫ್ಯಾನ್ಸ್ ಕೂಡ ಸ್ವಲ್ಪ ಟೆನ್ಷನ್ ಆಗಿದ್ರು. ಯಾಕಂದ್ರೆ ತಂಡದ ಮೇನ್ ಬೌಲರ್ ಜೋಶ್ ಹೇಜಲ್ವುಡ್ ಕೂಡ ಆಡಲ್ವೇನೋ ಅನ್ನೋ ಆತಂಕ ಇತ್ತು. ಬಟ್ ಈ ಕನ್ಫ್ಯುಷನ್ಸ್ ಎಲ್ಲಾ ಕ್ಲಿಯರ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ಬಿಗ್ ರಿಲೀಫ್ ನೀಡಿದ್ದಾರೆ. CODE ಸ್ಪೋರ್ಟ್ಸ್ನ ಆಸ್ಟ್ರೇಲಿಯಾ ಕ್ರಿಕೆಟ್ ಪತ್ರಕರ್ತ ಡೇನಿಯಲ್ ಚೆರ್ನಿ ಅವರ ವರದಿಯ ಪ್ರಕಾರ ಈ ಇಬ್ಬರೂ ಐಪಿಎಲ್ ಆಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿಗೆ ಆನೆ ಬಲ.. 2027ಕ್ಕೂ ಜೋಶ್ ರಿಟೇನ್!
ಕಳೆದ ಎರಡು ಆವೃತ್ತಿಗಳಲ್ಲಿ ಸತತವಾಗಿ ಪ್ರಶಸ್ತಿ ಗೆದ್ದಿರುವ RCB, 2027ರಲ್ಲೂ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ರೆಡ್ ಆರ್ಮಿಯ ಈ ಸಕ್ಸಸ್ನಲ್ಲಿ ಜೋಶ್ ಹೇಜಲ್ವುಡ್ ಅವರ ಕೊಡುಗೆ ಬಹಳ ಮುಖ್ಯವಾಗಿದೆ. 2025ರ ಮೆಗಾ ಹರಾಜಿನಲ್ಲಿ RCB ಹೇಜಲ್ವುಡ್ ಅವರನ್ನು 12.50 ಕೋಟಿ ರೂಪಾಯಿಗೆ ಖರೀದಿಸಿತ್ತು. ಆರಂಭದಲ್ಲಿ ಅವರ ಲಭ್ಯತೆ ಮತ್ತು ಫಿಟ್ನೆಸ್ ಬಗ್ಗೆ ಸಾಕಷ್ಟು ಚರ್ಚೆಗಳಿದ್ದರೂ, ಮೈದಾನದಲ್ಲಿ ಜೋಶ್ ಬಂದಾಗಲೆಲ್ಲಾ ತಂಡಕ್ಕೆ ಜೋಶ್ ತರ್ತಿದ್ರು. 2025ರ ಐಪಿಎಲ್ನಲ್ಲಿ 22 ವಿಕೆಟ್ ಪಡೆದಿದ್ದ ಹೇಜಲ್ವುಡ್, 2026ರ ಆವೃತ್ತಿಯಲ್ಲಿ 15 ವಿಕೆಟ್ ಕಬಳಿಸಿದ್ದಾರೆ. ಅಂದರೆ ಎರಡು ಆವೃತ್ತಿಗಳಲ್ಲಿ ಒಟ್ಟು 37 ವಿಕೆಟ್. ನ್ಯೂ ಬಾಲ್ನಲ್ಲಿ ವಿಕೆಟ್ ಪಡೆಯುವುದು, ಮಿಡಲ್ ಓವರ್ಗಳಲ್ಲಿ ರನ್ಸ್ ಕಂಟ್ರೋಲ್ ಮಾಡೋದು ಹಾಗೇ ಡೆತ್ ಓವರ್ಗಳಲ್ಲಿ ಗೇಮ್ ಚೇಂಜರ್ ಆಗಿರುವ ಹೇಜಲ್ವುಡ್ ಮುಂದಿನ ಆವೃತ್ತಿಯಲ್ಲೂ ಆಡಲು ಲಭ್ಯ ಇರೋದಾಗಿ ಹೇಳಿದ್ದಾರೆ. ಹೀಗಾಗಿ ಆರ್ಸಿಬಿ ಹೇಜಲ್ವುಡ್ರನ್ನ ರಿಟೇನ್ ಮಾಡೋದು ಕನ್ಫರ್ಮ್ ಆಗಿದೆ.
ಆರೆಂಜ್ ಆರ್ಮಿಯಲ್ಲೇ ಮುಂದುವರಿಯಲಿದ್ದಾರೆ ಕಮ್ಮಿನ್ಸ್!
ಇನ್ನು ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಪ್ಯಾಟ್ ಕಮ್ಮಿನ್ಸ್ ಕೂಡ 2027ರ ಐಪಿಎಲ್ನ ಭಾಗವಾಗಲಿದ್ದಾರೆ. 2024ರ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 20.50 ಕೋಟಿ ರೂಪಾಯಿಗೆ SRH ತಂಡಕ್ಕೆ ಸೇರ್ಪಡೆಯಾಗಿದ್ದ ಕಮಿನ್ಸ್, ತಮ್ಮ ನಾಯಕತ್ವದಲ್ಲಿ ತಂಡವನ್ನು ಫೈನಲ್ಗೆ ಮುನ್ನಡೆಸಿದ್ದರು. ಹಾಗೇ 2025ರಲ್ಲಿ ಅವರನ್ನು 18 ಕೋಟಿ ರೂಪಾಯಿಗೆ ರಿಟೇನ್ ಮಾಡಲಾಗಿತ್ತು. ಅಲ್ದೇ ಕಮಿನ್ಸ್ ಕೇವಲ ಬೌಲರ್ ಮಾತ್ರವಲ್ಲ. ತಂಡದ ನಾಯಕನಾಗಿಯೂ ಅವರ ಪಾತ್ರ ಮಹತ್ವದ್ದಾಗಿದೆ. ಅವರ ಅನುಭವ, ವೇಗದ ಬೌಲಿಂಗ್ ಮತ್ತು ಒತ್ತಡದ ಸಂದರ್ಭಗಳಲ್ಲಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ SRHಗೆ ಬೇಕಾಗಿದೆ. 2026ರ ಆವೃತ್ತಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ಆರಂಭದಲ್ಲಿ ಕಮಿನ್ಸ್ ತಂಡದಿಂದ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ನಾಯಕತ್ವದ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ 2027ರ ಆವೃತ್ತಿಗೆ ಕಮಿನ್ಸ್ ಅವರನ್ನು ಉಳಿಸಿಕೊಳ್ಳಲು SRH ಮುಂದಾಗಿದೆ ಎನ್ನಲಾಗಿದೆ. ಇನ್ನು ಡೆಲ್ಲಿ ಪರ ಆಡ್ತಿರುವ ಮಿಚೆಲ್ ಸ್ಟಾರ್ಕ್ ನಿರ್ಧಾರ ಏನು ಅನ್ನೋದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಆಸ್ಟ್ರೇಲಿಯಾ ತಂಡಕ್ಕೆ 2027ರಲ್ಲಿ ಆ್ಯಶಸ್ ಸರಣಿ, ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಮತ್ತು ಏಕದಿನ ವಿಶ್ವಕಪ್ನಂತಹ ಪ್ರಮುಖ ಟೂರ್ನಿಗಳಿವೆ. ಹೀಗಾಗಿ ಆಟಗಾರರ ಕೆಲಸದ ಒತ್ತಡ, ಫಿಟ್ನೆಸ್ ಮತ್ತು ರಾಷ್ಟ್ರೀಯ ತಂಡದ ಬದ್ಧತೆಗಳು ಐಪಿಎಲ್ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು. ಸದ್ಯದ ವರದಿಗಳ ಪ್ರಕಾರ ಹೇಜಲ್ವುಡ್ ಮತ್ತು ಕಮಿನ್ಸ್ ಇಬ್ಬರೂ 2027ರ ಐಪಿಎಲ್ನಲ್ಲಿ ಆಡಲು ನಿರ್ಧರಿಸಿದ್ದಾರೆ. ಆದರೂ ಕ್ರಿಕೆಟ್ ಆಸ್ಟ್ರೇಲಿಯಾದಿಂದ NOC ಪಡೆಯುವುದು ಮುಖ್ಯವಾಗಲಿದೆ.

ನೋಡಿರಿ

