ಕೈಕೊಟ್ಟ ಶ್ರೇಯಸ್ (0) ಕ್ಯಾಪ್ಟನ್ಸಿ – RO-KO ಸೊನ್ನೆ.. ಹೆನ್ರಿ ಏಟು
ಬೇಕಿತ್ತಾ ಈ ಪ್ರಯೋಗ?

ಮಳೆ ಕಾಟ ಇರ್ಲಿಲ್ಲ. ಫಸ್ಟ್ ಇನ್ನಿಂಗ್ಸ್ ನಲ್ಲಿ 50 ಓವರ್ಗಳ ಬ್ಯಾಟಿಂಗ್ ಕಂಪ್ಲೀಟ್ ಆಗಿತ್ತು. ಸ್ಕೋರ್ ಬೋರ್ಡ್ನಲ್ಲಿ 334 ರನ್ಗಳ ಟಾರ್ಗೆಟ್ ಕೂಡ ಸೆಟ್ ಆಗಿತ್ತು. ಸೋ ಚೇಸಿಂಗ್ ತುಂಬಾ ಇಂಟ್ರೆಸ್ಟಿಂಗ್ ಆಗಿರುತ್ತೆ ಅಂತಾ ಭಾರತದ ಬ್ಯಾಟಿಂಗ್ ನೋಡೋಕೆ ಫ್ಯಾನ್ಸ್ ರೆಡಿಯಾಗಿದ್ರು. ಮ್ಯಾಚ್ ಕೂಡ ಶುರುವಾಯ್ತು. ಆದ್ರೆ ಕಣ್ಮುಚ್ಚಿ ಬಿಡುವಷ್ಟ್ರಲ್ಲೇ 3 ವಿಕೆಟ್ಸ್ ಢಮಾರ್. ಅದೂ ಕೂಡ ಫಸ್ಟ್ ಓವರ್ನಲ್ಲೇ. ಖಾತೆಯನ್ನೂ ತೆರೆಯದೆ ಭಾರತ ತಂಡದ ಹಾಲಿ, ಮಾಜಿ ನಾಯಕರು ಪೆವಿಲಿಯನ್ ಪರೇಡ್ ನಡೆಸಿದ್ರು.
ಇದನ್ನೂ ಓದಿ : IPLಗೆ ಮತ್ತೆ ಬಾಂಗ್ಲಾ ಪ್ಲೇಯರ್ಸ್ – ಮಿನಿ ಆಕ್ಷನ್ ಗೆ ರೆಹಮಾನ್ ರೀ ಎಂಟ್ರಿ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 4ನೇ ಏಕದಿನ ಪಂದ್ಯದಲ್ಲಿ ಭಾರತ ಸೋಲನ್ನ ಕಂಡಿದೆ. ಮೊದಲ ಎರಡು ಪಂದ್ಯಗಳನ್ನ ಗೆದ್ದಿದ್ದ ಇಂಡಿಯಾ ಈ ಮ್ಯಾಚ್ ಗೆದ್ದು ಸರಣಿ ಕೈವಶ ಮಾಡಿಕೊಳ್ಳೋ ಟಾರ್ಗೆಟ್ನಲ್ಲಿತ್ತು. ಆದ್ರೆ ಕಿವೀಸ್ ಪಡೆ ನೀಡಿದ ತಿರುಗೇಟಿಗೆ ಅಕ್ಷರಶಃ ಥಂಡಾ ಹೊಡೆದಿದ್ದಾರೆ.. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲದ್ರಲ್ಲೂ ಫ್ಲ್ಯಾಪ್ ಶೋ. ಭಾರತದ ಪರ್ಫಾಮೆನ್ಸ್ ಕಂಪ್ಲೀಟ್ ಸರೆಂಡರ್ ನಂತೆಯೇ ಇತ್ತು. 334 ರನ್ಸ್ ಟಾರ್ಗೆಟ್ ಇಟ್ಕೊಂಡು 89 ರನ್ಗಳಿಗೆ ಆಲೌಟ್ ಆಗೋ ಮೂಲಕ ಬೇಡದೇ ಇರೋ ದಾಖಲೆಗಳನ್ನೂ ಬರೆದಿದೆ.
334 ರನ್ಸ್ ಟಾರ್ಗೆಟ್.. ಮೊದಲ ಓವರ್ ನಲ್ಲೇ 3 ವಿಕೆಟ್!
ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ ಕಿವೀಸ್ ಪರ ವಿಲ್ ಯಂಗ್ 125 ರನ್ಸ್ ಕಲೆ ಹಾಕಿದ್ರೆ ಟಿಮ್ ಸೈಫರ್ಟ್ 58 ರನ್ಸ್ ಸಿಡಿಸಿದ್ರು. ಫಿನ್ ಅಲೆನ್ 41 ರನ್ ಕಲೆ ಹಾಕಿದ್ದು ಕಿವೀಸ್ ಪಡೆ 50 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳ್ಕೊಂಡು 333 ರನ್ಸ್ ಕಲೆ ಹಾಕಿದ್ರು. ಭಾರತಕ್ಕೆ 334 ರನ್ಗಳ ಟಾರ್ಗೆಟ್ ಫಿಕ್ಸ್ ಆಗಿತ್ತು. ಟೀಂ ಇಂಡಿಯಾ ಪ್ಲೇಯರ್ಸ್ ಫಾರ್ಮ್, ಪರ್ಫಾಮೆನ್ಸ್ ನೋಡಿದ್ರೆ ಈ ಟಾರ್ಗೆಟ್ ಚೇಸ್ ಮಾಡಿ ಸರಣಿ ಕೈವಶ ಮಾಡಿಕೊಳ್ತಾರೆ ಅನ್ನೋದೇ ಎಲ್ಲರ ಲೆಕ್ಕಾಚಾರ ಆಗಿತ್ತು. ಆದ್ರೆ ಭಾರತದ ಬ್ಯಾಟಿಂಗ್ ಶುರು ಆದ್ಮೇಲೆ ರನ್ಸ್ ಅಲ್ಲ ವಿಕೆಟ್ಸ್ ಕೌಂಟ್ ಮಾಡೋ ಥರ ಆಗಿತ್ತು. ಭಾರತ ರನ್ಸ್ ಖಾತೆ ತೆರೆಯೋ ಮೊದ್ಲೇ 3 ವಿಕೆಟ್ಸ್ ಕಳ್ಕೊಂಡಾಗಿತ್ತು. ಅದೂ ಕೂಡ ಮೊದಲ ಓವರ್ನಲ್ಲೇ. ಕಿವೀಸ್ ಪರ ಮ್ಯಾಟ್ ಹೆನ್ರಿ ಫಸ್ಟ್ ಓವರ್ ಬೌಲಿಂಗ್ ಮಾಡಿದ್ದು ತಮ್ಮ ಮೊದಲ ಎಸೆತದಲ್ಲೇ ಹಿಟ್ಮ್ಯಾನ್ ರೋಹಿತ್ ಶರ್ಮಾರನ್ನ ಗೋಲ್ಡನ್ ಡಕ್ ಔಟ್ ಮಾಡ್ತಾರೆ. ಇದೇ ಓವರ್ನ 5ನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಕೂಡ ಖಾತೆ ತೆರೆಯದೇ ಬೌಲ್ಡ್ ಆಗ್ತಾರೆ. ಌಂಡ್ 6ನೇ ಎಸೆತದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಎಲ್ಬಿಡಬ್ಲ್ಯೂ ಬಲೆಗೆ ಬೀಳ್ತಾರೆ. ಸೋ ಅಲ್ಲಿಗೆ ಮ್ಯಾಟ್ ಹೆನ್ರಿ ಮೊದಲ ಓವರ್ನಲ್ಲೇ ಯಾವುದೇ ರನ್ಸ್ ನೀಡದೇ ಮೂರು ಬಿಗ್ ವಿಕೆಟ್ಗಳನ್ನ ಬೇಟೆಯಾಡಿದ್ರು. ಸೋ ಇಲ್ಲಿಂದ ಈಚೆಗೆ ಭಾರತ ಚೇತರಿಸಿಕೊಳ್ಳೋಕೆ ಚಾನ್ಸೇ ಸಿಗ್ಲಿಲ್ಲ. ಮತ್ತೆ ಬ್ಯಾಕ್ ಟು ಬ್ಯಾಕ್ ವಿಕೆಟ್ಸ್ ಬೀಳ್ತಾ ಹೋಯ್ತು. ಕೊನೆಗೆ ಸೋಲೋದನ್ನ ಬಿಟ್ಟು ಬೇರೆ ದಾರಿಯೂ ಇರಲಿಲ್ಲ.
ಭಾರತದ ಸೋಲಿಗೆ ಕಾರಣಗಳು!
ಪ್ಲೇಯಿಂಗ್ 11ನಲ್ಲಿ ಮಾಡಿದ್ದ 3 ಬದಲಾವಣೆಗಳಿಂದ ಲಾಭ ಆಗಲಿಲ್ಲ
ಶುಭ್ ಮನ್ ಗಿಲ್ ಆಬ್ಸೆನ್ಸ್ ನಲ್ಲಿ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿ
ಟಾಸ್ ಗೆದ್ದು ಬೌಲಿಂಗ್ ಮಾಡಿದ್ರೂ 333 ರನ್ಸ್ ಕೊಟ್ಟಿದ್ದೇ ಪ್ರೆಶರ್
ವಿಲ್ ಯಂಗ್ ಕ್ಯಾಚ್ ಮಿಸ್.. ಬೌಲರ್ ಗಳು ದುಬಾರಿಯಾಗಿ ಹೊಡೆತ
ಟಾರ್ಗೆಟ್ ಬೆನ್ನಟ್ಟಿದ ಭಾರತದ ಪರ ಮೊದಲ ಓವರ್ ನಲ್ಲೇ 3 ವಿಕೆಟ್
ರೋಹಿತ್ 0(1), ಕೊಹ್ಲಿ 0(4), ಶ್ರೇಯಸ್ ಅಯ್ಯರ್ 0(1) ವಿಕೆಟ್
5(13) ರನ್ ಗಳಿಸಿ ಓಪನರ್ ರುತುರಾಜ್ ಗಾಯಕ್ವಾಡ್ ಕೂಡ ಔಟ್
10 ರನ್ಸ್ ಕಲೆ ಹಾಕುವಷ್ಟ್ರರಲ್ಲೇ ಟಾಪ್-4 ವಿಕೆಟ್ಸ್ ಕಳ್ಕೊಂಡಿದ್ದ ಭಾರತ
ಪವರ್ ಪ್ಲೇನಲ್ಲಿ ಕಿವೀಸ್ 72/0 ರನ್ಸ್ ಗಳಿಸಿದ್ರೆ ಭಾರತ 26/4 ವಿಕೆಟ್ಸ್
12 ಓವರ್ಸ್ ವರೆಗೂ ಮ್ಯಾಟ್ ಹೆನ್ರಿ 16(6), ಜೇಮಿಸನ್ 12(6) ಬೌಲಿಂಗ್
ಅಕ್ಷರ್ 21(36) ರನ್ಸ್, ಕಿಶನ್ 27(53) ರನ್ಸ್, ಔಕಿಬ್ ನಬಿ 5(8) ಔಟ್
ಇನ್ನು ಭಾರತದ ಪರ ಕಿವೀಸ್ ಟೂರ್ನಲ್ಲಿ ನಮನ್ ಧೀರ್ ತುಂಬಾ ಎಂಟರ್ಟೈನಿಂಗ್ ಆಗಿ ಬ್ಯಾಟಿಂಗ್ ಮಾಡ್ತಿದ್ದಾರೆ. ಈ ಮ್ಯಾಚಲ್ಲೂ ಕೂಡ ತಂಡದ ಪರ ಅವ್ರೇ ಫಸ್ಟ್ ಸಿಕ್ಸರ್ ಕೂಡ ಸಿಡಿಸಿದ್ದು. ಅದೂ ಕೂಡ 24ನೇ ಓವರ್ನಲ್ಲೇ ಬ್ಯಾಕ್ ಟು ಬ್ಯಾಕ್ ಸಿಕ್ಸರ್ಸ್ ಬಂತು. ಌಂಡ್ ಅದೇ ಓವರ್ನಲ್ಲೇ ವಿಕೆಟ್ ಕೂಡ ಬಿತ್ತು. ಆದ್ರೆ ಅವ್ರೊಬ್ಬರೇ ಪಂದ್ಯ ಗೆಲ್ಲಿಸೋಕಂತೂ ಆಗಲ್ವಲ್ಲ. ಇಶಾನ್ ಕಿಶನ್ 27 ರನ್ಸ್ ಗಳಿಸಿದ್ದೇ ಭಾರತದ ಹೈಯೆಸ್ಟ್ ರನ್ಸ್ ಆಯ್ತು. ಅಂತಿಮವಾಗಿ 26.4 ಓವರ್ಗಳಲ್ಲೇ 89 ರನ್ಸ್ ಗಳಿಸಿ ಭಾರತ ಆಲೌಟ್ ಆಯ್ತು. ಬರೋಬ್ಬರಿ 244 ರನ್ಗಳ ಬಿಗ್ ಮಾರ್ಜಿನ್ನಲ್ಲಿ ಕಿವೀಸ್ ಪಡೆ ಪಂದ್ಯವನ್ನ ಗೆದ್ದು ಬೀಗಿದೆ. ಕಿವೀಸ್ ಪರ ಬೌಲಿಂಗ್ನಲ್ಲಿ ಎಕ್ಸ್ಟ್ರಾರ್ಡಿನರಿ ಪ್ರದರ್ಶನ ನೀಡಿದ ಮ್ಯಾಟ್ ಹೆನ್ರಿ ಫೈಫರ್ ವಿಕೆಟ್ಸ್ ಬೇಟೆಯಾಡಿ ಭಾರತದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದು ಭರ್ಜರಿ ಗೆಲುವಿಗೆ ಕಾರಣರಾದ್ರು. ಹಾಗೇ ಕಿವೀಸ್ ಪರ ಎಲ್ಲಾ ಬೌಲರ್ಸ್ ಪ್ರದರ್ಶನವೂ ಚೆನ್ನಾಗಿತ್ತು. ಌಂಡ್ ಇಲ್ಲಿ ಭಾರತ ಮೊದಲ ಓವರ್ನಲ್ಲೇ ಮೂರು ವಿಕೆಟ್ ಕಳ್ಕೊಂಡಾಗಲೇ ಸೋಲೋದಂತೂ ಕನ್ಫರ್ಮ್ ಆಗಿತ್ತು. 50 ಓವರ್ವರೆಗೂ ಇವ್ರು ಆಡಲ್ಲ ಅನ್ನೋದು ಕನ್ಫರ್ಮ್ ಆಗಿತ್ತು. ಌಂಡ್ ಆಲೌಟ್ ಆಗೋದು ಕೂಡ ಕ್ಲಿಯರ್ ಆಗಿತ್ತು. ಬಟ್ ಎಷ್ಟು ರನ್ಸ್ಗೆ ಆಲೌಟ್ ಆಗ್ತಾರೆ ಅಂತಾ ನೋಡೋದಷ್ಟೇ ಬಾಕಿ ಇದ್ದದ್ದು. ಗೇಮ್ ಅಂದ್ಮೇಲೆ ಸೋಲು ಗೆಲುವು ಇದ್ದದ್ದೇ ಅನ್ಕೊಂಡ್ರೂ ಕೂಡ 5ನೇ ಪಂದ್ಯವನ್ನಾದ್ರೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳೋಕೆ ಅವಕಾಶ ಇದೆ.
ಬದಲಾಗಬೇಕು ಭಾರತ!
ಟಾಸ್ ಗೆದ್ದು ಪ್ರತೀ ಸಲವೂ ಬೌಲಿಂಗ್ ಬದಲು ಬ್ಯಾಟಿಂಗ್ ಆಯ್ಕೆ
ದುಬಾರಿ ಬೌಲಿಂಗ್, ಕಳಪೆ ಫೀಲ್ಡಿಂಗ್ ನಿಂದಾಗಿ ಪದೇಪದೆ ಹೊಡೆತ
ಟಾಪ್ ಆರ್ಡರ್ ಬ್ಯಾಟಿಂಗ್ ಬೇಗ ಔಟ್ ಆದ್ರೆ ಸೋಲು ಕನ್ಫರ್ಮ್
ಟಿ-20ಐನಲ್ಲೂ ಮೊದಲ 3 ಮ್ಯಾಚ್ ಗೆದ್ದು ಬ್ಯಾಕ್ ಟು ಬ್ಯಾಕ್ ಸೋಲು
ಕಿವೀಸ್ ಪಡೆಯಿಂದ ಆಲ್ ರೌಂಡ್ ಪ್ರದರ್ಶನದ ಮೂಲಕ ಕಂ ಬ್ಯಾಕ್
ಒಟ್ನಲ್ಲಿ ಏಕದಿನ ಸರಣಿಯೂ ಈಗ ರೋಚಕ ಘಟ್ಟಕ್ಕೆ ಬಂದಿದೆ. ಭಾರತ ನಾಲ್ಕನೇ ಪಂದ್ಯ ಸೋತ್ರೂ ಸರಣಿ ಗೆಲ್ಲೋ ಅವಕಾಶವಂತೂ ಇದೆ. ಭಾನುವಾರ ಇದೇ ಮೈದಾನದಲ್ಲಿ ನಡೆಯಲಿರೋ ಐದನೇ ಪಂದ್ಯ ಗೆದ್ರೆ 3-1 ಅಂತರದಲ್ಲಿ ಸರಣಿ ಗೆಲ್ಬೋದು. ಕಿವೀಸ್ಗೆ ಸರಣಿ ಗೆಲ್ಲೋಕೆ ಆಗದೇ ಇದ್ರೂ ಕೊನೇ ಪಂದ್ಯವನ್ನೂ ಗೆದ್ರೆ 2-2 ಅಂತರದಲ್ಲಿ ಸರಣಿ ಡ್ರಾ ಮಾಡಿಕೊಳ್ಳೋಕಂತೂ ಅವಕಾಶ ಇದೆ.

ನೋಡಿರಿ

