ಕ್ಯಾಚ್ ಬಿಟ್ಟು 120 ರನ್ಸ್ ದಂಡ – ಬೌಲಿಂಗ್ & ಫೀಲ್ಡಿಂಗ್ ನಲ್ಲೂ ಫೇಲ್
ಕಿವೀಸ್ ಅಸಲಿ ಆಟಕ್ಕೆ ಭಾರತ ಸುಸ್ತು

ಸರಣಿಯಲ್ಲಿ ಸತತ ನಾಲ್ಕನೇ ಪಂದ್ಯದಲ್ಲೂ ಟಾಸ್ ಗೆದ್ದ ಭಾರತ ಈ ಪಂದ್ಯದಲ್ಲೂ ಕೂಡ ಫಸ್ಟ್ ಬೌಲಿಂಗ್ನೇ ಚೂಸ್ ಮಾಡಿಕೊಂಡ್ರು. ಇನ್ನು ಟೆಸ್ಟ್ ಸರಣಿ ಹಿನ್ನೆಲೆ ಕೆಲವ್ರು ಸರಣಿಯಿಂದ ಹೊರ ಬಂದಿದ್ರಿಂದ ಭಾರತದ ಪ್ಲೇಯಿಂಗ್ 11ನಲ್ಲಿ ಮೂರು ಬದಲಾವಣೆಗಳನ್ನ ಮಾಡಲಾಗಿತ್ತು. ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ ಮತ್ತು ಕುಲ್ದೀಪ್ ಯಾದವ್ ಈ ಸರಣಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ. ಇನ್ನು ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಹಾಗೇ ಎರಡನೇ ಪಂದ್ಯಗಳಲ್ಲಿ ಮಳೆ ಕಾಟದಿಂದ ಬ್ಯಾಟಿಂಗ್ ಸಿಕ್ಕಾಪಟ್ಟೆ ಮಂಕಾಗಿತ್ತು. ಌಂಡ್ ಭಾರತ ಡಿಎಲ್ಎಸ್ ಮೆಥೆಡ್ ಪ್ರಕಾರ ವಿನ್ ಆಗಿತ್ತು. ಇನ್ನು ಮೂರನೇ ಪಂದ್ಯ ಅಂತೂ ಮಳೆಗೆ ಒಂದೂ ಬಾಲ್ ಕಾಣದೆ ರದ್ದಾಗಿತ್ತು. ಆದ್ರೆ ನಾಲ್ಕನೇ ಪಂದ್ಯದಲ್ಲಿ ಕಿವೀಸ್ ಬ್ಯಾಟರ್ಗಳು ಅಬ್ಬರಿಸಿದ್ದಾರೆ. ಸರಣಿ ಸಮಬಲಕ್ಕೆ ಪಣ ತೊಟ್ಟು ಭಾರತಕ್ಕೆ ಬಿಗ್ ಟಾರ್ಗೆಟ್ನೇ ಸೆಟ್ ಮಾಡಿದ್ರು.
ಇದನ್ನೂ ಓದಿ : IPLಗೆ ಮತ್ತೆ ಬಾಂಗ್ಲಾ ಪ್ಲೇಯರ್ಸ್ – ಮಿನಿ ಆಕ್ಷನ್ ಗೆ ರೆಹಮಾನ್ ರೀ ಎಂಟ್ರಿ
ವಿಲ್ ಯಂಗ್ ಅದ್ಭುತ ಶತಕ.. 334 ರನ್ಸ್ ಟಾರ್ಗೆಟ್!
ಟಾಸ್ ಸೋತು ಬ್ಯಾಟಿಂಗ್ಗೆ ಬಂದ ಕಿವೀಸ್ ಪರ ವಿಲ್ ಯಂಗ್ ಮತ್ತು ಟಿಮ್ ಸೈಫರ್ಟ್ ಇನ್ನಿಂಗ್ಸ್ ಆರಂಭಿಸಿದ್ರು. ಌಂಡ್ ಮೊದಲ ವಿಕೆಟ್ಗೆ 85 ರನ್ಗಳ ಜೊತೆಯಾಟವೂ ಬಂತು. ಅದ್ರಲ್ಲೂ ವಿಲ್ ಯಂಗ್ 108 ಬಾಲಲ್ಲಿ 14 ಬೌಂಡರಿ ಹಾಗೇ 4 ಸಿಕ್ಸರ್ ಸಹಿತ 125 ರನ್ಸ್ ಕಲೆ ಹಾಕಿದ್ರೆ ಸೈಫರ್ಟ್ 58 ರನ್ಸ್ ಸಿಡಿಸಿದ್ರು. ಉಳಿದಂತೆ ಫಿನ್ ಅಲೆನ್ 41 ರನ್ ಕಲೆ ಹಾಕಿದ್ರೆ ಉಳಿದ ಬ್ಯಾಟರ್ಸ್ ಕಡೆಯಿಂದ್ಲೂ ಸಪೋರ್ಟ್ ಸಿಕ್ಕಿತು. ಅಂತಿಮವಾಗಿ 50 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಸ್ ಕಳ್ಕೊಂಡು ನ್ಯೂಜಿಲೆಂಡ್ 333 ರನ್ಗಳನ್ನ ಕಲೆ ಹಾಕಿತು. ಸೋ ಅಲ್ಲಿಗೆ ಭಾರತಕ್ಕೆ 334 ರನ್ಗಳ ಟಾರ್ಗೆಟ್ ಸೆಟ್ ಮಾಡಿದ್ರು. ಇನ್ನು ಭಾರತದ ಪರ ಅಕ್ಷರ್, ಆಕೀಬ್ ನಬಿ, ಗುರ್ನೂರ್ ಬ್ರಾರ್ ತಲಾ 2 ವಿಕೆಟ್ಸ್ ಪಡೆದ್ರೆ ನಮನ್ ಧೀರ್ ಮತ್ತು ಅರ್ಶದೀಪ್ ಒಂದೊಂದು ವಿಕೆಟ್ಸ್ ಬೇಟೆಯಾಡಿದ್ರು. ಅಷ್ಟಕ್ಕೂ ಇಲ್ಲಿ ಕಿವೀಸ್ 300+ ರನ್ಸ್ ಗಡಿ ದಾಟೋಕೆ ಭಾರತದ ಕಳಪೆ ಫೀಲ್ಡಿಂಗ್ ಕಾರಣ ಆಗಿತ್ತು. ಌಂಡ್ ಬೌಲರ್ಸ್ ಕೂಡ ಎಕ್ಸ್ಪೆನ್ಸಿವ್ ಆಗಿದ್ದು.
ಫೀಲ್ಡಿಂಗ್ ನಲ್ಲಿ ಎಡವಿದ ಭಾರತ!
ಬ್ಯಾಟಿಂಗ್ ಆರಂಭಿಸಿದ 2ನೇ ಓವರ್ ನಲ್ಲೇ ವಿಲ್ ಯಂಗ್ ಗೆ 2 ಜೀವದಾನ
2ನೇ ಓವರ್ ನ 5ನೇ ಬಾಲಲ್ಲಿ ರೋಹಿತ್ ಶರ್ಮಾ ಸ್ಲಿಪ್ ನಲ್ಲಿ ಕ್ಯಾಚ್ ಮಿಸ್
ಕೊನೆಯ ಎಸೆತದಲ್ಲಿ ವಿಕೆಟ್ ಕೀಪಿಂಗ್ ಮಾಡ್ತಿದ್ದ ಕಿಶನ್ ಕೂಡ ಕ್ಯಾಚ್ ಮಿಸ್
ಕೇವಲ 5 ರನ್ ಗಳಿಸಿದ್ದಾಗ ಔಟ್ ಆಗಬೇಕಿದ್ದ ವಿಲ್ ಯಂಗ್ ಶತಕದ ಅಬ್ಬರ
125(108) ರನ್ಸ್ ಕಲೆ ಹಾಕಿ ಬಿಗ್ ಟಾರ್ಗೆಟ್ ಸೆಟ್ ಮಾಡೋಕೆ ಕಾರಣ
ಭಾರತದ ವಿರುದ್ಧ ಮೊದಲ ಶತಕ, 24 ಇನ್ನಿಂಗ್ಸ್ ಗಳ ಬಳಿಕ ಬಂದ ಸೆಂಚುರಿ
ಪವರ್ ಪ್ಲೇನಲ್ಲಿ ಭಾರತೀಯ ಬೌಲರ್‌ಗಳು ಯಾವುದೇ ವಿಕೆಟ್ ಪಡೆಯದೆ 72 ರನ್ಸ್
ಟಿಮ್ ಸೈಫರ್ಟ್ ಮೊದಲ ವಿಕೆಟ್ ತೆಗೆದಾಗ ಗುರ್ನೂರ್ ಅತಿರೇಕದ ಸಂಭ್ರಮ
ಸೈಫರ್ಟ್ ಗೆ ಅಗ್ರೆಸ್ಸಿವ್ ಆಗಿ ಬೀಳ್ಕೊಡುಗೆ, ಮಧ್ಯಪ್ರವೇಶಿಸಿ ತಡೆದ ವಿರಾಟ್ ಕೊಹ್ಲಿ
ಮೈದಾನದಲ್ಲಿ ಅಂಪೈರ್ ಕೂಡ ಗುರ್ನೂರ್ ಬ್ರಾರ್ ಗೆ ಸೈಲೆಂಟ್ ಆಗಿರುವಂತೆ ಸೂಚನೆ
ಭಾರತದ ಪರ ಬೌಲಿಂಗ್ ನಲ್ಲಿ ದುಬಾರಿಯಾದ ಕುಲ್ದೀಪ್ ಯಾದವ್ 73(8)
ಆಕಿಬ್ ನಬಿ ಹಾಗೂ ಗುರ್ನೂರ್ ಬ್ರಾರ್ ಕೂಡ 7+ ಎಕಾನಮಿಯಲ್ಲಿ ರನ್ಸ್

ನೋಡಿರಿ

