ಕಿಶನ್ ಓಪನರ್.. ನಂ.5ಗಾಗಿ ಫೈಟ್ – ಸಿರಾಜ್ ಗೆ ಕೊನೆಗೂ ಸಿಗುತ್ತಾ ಚಾನ್ಸ್?
ಸರಣಿ ಗೆಲ್ಲಲು ಹೀಗಿದೆ ಪ್ಲೇಯಿಂಗ್ 11

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 4ನೇ ಏಕದಿನ ಪಂದ್ಯ ನಾಳೆ ನಡೆಯಲಿದೆ. ಈ ಪಂದ್ಯ ಗೆದ್ರೆ ಭಾರತ ಸರಣಿಯನ್ನೂ ಗೆದ್ದಂತಾಗುತ್ತೆ. ಆದ್ರೆ ಈ ಮ್ಯಾಚ್ಗೆ ಭಾರತದ ಪ್ಲೇಯಿಂಗ್ 11 ಬಗ್ಗೆಯೇ ಕ್ಯೂರಿಯಾಸಿಟಿ ಜಾಸ್ತಿ ಇದೆ. ಯಾಕಂದ್ರೆ ನವೆಂಬರ್ 19ರಿಂದ ಆರಂಭವಾಗಲಿರೋ ಟೆಸ್ಟ್ ಸರಣಿಗಾಗಿ ಮೂವರು ಪ್ಲೇಯರ್ಸ್ ಕೊನೆಯ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿಯೋದ್ರಿಂದ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಅನಿವಾರ್ಯವೂ ಇದೆ.
ಇದನ್ನೂ ಓದಿ : T20I ಕೈ ಬಿಟ್ಟಿದ್ದಕ್ಕೆ ಸೂರ್ಯ ಕಣ್ಣೀರು – ಶತಕವೀರ ಸೆಹ್ವಾಗ್ ಪುತ್ರ ಕೊಹ್ಲಿ ಫ್ಯಾನ್
ಭಾರತಕ್ಕೆ ಸರಣಿ ಗೆಲ್ಲೋ ಗುರಿ.. ನ್ಯೂಜಿಲೆಂಡ್ಗೆ ಅಟ್ಲೀಸ್ಟ್ ಸಮಬಲ ಮಾಡಿಕೊಳ್ಳೋ ಟಾಸ್ಕ್. ಹೀಗಾಗಿ ನಾಲ್ಕನೇ ಪಂದ್ಯ ಎರಡೂ ತಂಡಗಳಿಗೆ ಮೋಸ್ಟ್ ಇಂಪಾರ್ಟೆಂಟ್. ಅದೂ ಅಲ್ದೇ ಭಾರತ ತಂಡದಿಂದ ನಾಯಕ ಶುಭ್ಮನ್ ಗಿಲ್, ಉಪನಾಯಕ ಕೆಎಲ್ ರಾಹುಲ್ ಹಾಗೇ ಬೌಲರ್ ಅನ್ಶುಲ್ ಕಾಂಬೋಜ್ ಟೆಸ್ಟ್ ಸರಣಿ ಹಿನ್ನೆಲೆ ಕೊನೆಯ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಸೋ ಭಾರತದ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಮಾಡ್ಲೇಬೇಕಿದೆ.
2-0 ಅಂತರದ ಲೀಡ್.. ಇನ್ನೊಂದು ಪಂದ್ಯ ಗೆದ್ರೆ ಭಾರತಕ್ಕೆ ಸರಣಿ!
ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಭಾರತ ಗೆದ್ದುಕೊಂಡಿದ್ದು, ಹ್ಯಾಮಿಲ್ಟನ್ನಲ್ಲಿ ನಡೆಯಬೇಕಿದ್ದ 3ನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಸದ್ಯ ಉಳಿದ ಎರಡು ಪಂದ್ಯಗಳಲ್ಲಿ ಭಾರತ ಒಂದು ಪಂದ್ಯ ಗೆದ್ದರೂ ಸರಣಿ ಕೈವಶವಾಗಲಿದೆ. ಶುಭಮನ್ ಗಿಲ್ ಆಬ್ಸೆನ್ಸ್ನಲ್ಲಿ ಶ್ರೇಯಸ್ ಅಯ್ಯರ್ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡವನ್ನು ಲೀಡ್ ಮಾಡಲಾಗಿದ್ದಾರೆ. ಌಂಡ್ ಇದು ಶ್ರೇಯಸ್ಗೆ ಮೊದಲ ಏಕದಿನ ತಂಡದ ಕ್ಯಾಪ್ಟನ್ಸಿ. ಗಿಲ್, ರಾಹುಲ್ ಮತ್ತು ಕಾಂಬೋಜ್ ಬದಲಿಯಾಗಿ ತಿಲಕ್ ವರ್ಮಾ, ಕುಮಾರ್ ಕುಶಾಗ್ರ ಮತ್ತು ಯಶ್ ಠಾಕೂರ್ ಜಾಯ್ನ್ ಆಗಿದ್ದಾರೆ. ಆದ್ರೆ ಪ್ಲೇಯಿಂಗ್ 11 ಫೈನಲ್ ಮಾಡೋದೇ ದೊಡ್ಡ ಟಾಸ್ಕ್ ಆಗಿದೆ.
ಕಿಶನ್ ಓಪನರ್.. ನಂಬರ್ 5ನಲ್ಲಿ ಇಬ್ಬರ ರೇಸ್!
ಶುಬ್ಮನ್ ಗಿಲ್ ಆಬ್ಸೆನ್ಸ್ನಲ್ಲಿ ರೋಹಿತ್ ಶರ್ಮಾ ಜೊತೆ ಓಪನರ್ ಯಾರು ಅನ್ನೋ ಪ್ರಶ್ನೆಗೆ ಸದ್ಯ ಕೇಳಿ ಬರ್ತಿರೋ ಹೆಸರು ಇಶಾನ್ ಕಿಶನ್. ಭಾರತ ಏಕದಿನ ತಂಡಕ್ಕೆ ಸೆಲೆಕ್ಟ್ ಆಗಿದ್ರೂ ಕೂಡ ಮೊದಲ ಮೂರು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಕಿಶನ್ ನಾಲ್ಕನೇ ಏಕದಿನ ಪಂದ್ಯದಲ್ಲಿ ಆಡುವುದು ಖಚಿತ. ಅದೂ ಅಲ್ದೇ ಟಿ-20ಐ ಮಾದರಿಯಲ್ಲಿ ಚೆನ್ನಾಗಿ ಪರ್ಫಾಮ್ ಮಾಡ್ತಿದ್ದಾರೆ. ಌಂಡ್ 2026ರಲ್ಲಿ ಟಿ20 ಐಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಜಾರ್ಖಂಡ್ನ ಎಡಗೈ ಬ್ಯಾಟ್ಸ್ಮನ್ ಕಿಶನ್ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಅನ್ನು ಪ್ರಾರಂಭಿಸಲಿದ್ದಾರೆ. ಇಶಾನ್ ಈ ಹಿಂದೆ ಭಾರತ ಪರ ಹಲವು ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಈ ಮಾದರಿಯಲ್ಲಿ ಆರಂಭಿಕನಾಗಿ ದ್ವಿಶತಕ ಕೂಡ ಗಳಿಸಿದ್ದಾರೆ. ರಾಹುಲ್ ಆಬ್ಸೆನ್ಸ್ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಕೂಡ ಕಿಶನ್ ನಿರ್ವಹಿಸಬೇಕಾಗುತ್ತೆ. ಸೋ ಇಲ್ಲಿ ಓಪನಿಂಗ್ ಸ್ಲಾಟ್ ಕ್ಲಿಯರ್ ಆದ್ರೂ ಕೆಎಲ್ ರಾಹುಲ್ ಬದಲಿಗೆ ನಂಬರ್ 5ನಲ್ಲಿ ಯಾರು ಆಡ್ತಾರೆ ಅನ್ನೋ ಬಗ್ಗೆ ರೇಸ್ ಇದೆ. ತಿಲಕ್ ವರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ನಡುವೆ ಪೈಪೋಟಿ ನಡೀತಿದೆ. ತಿಲಕ್ ಪ್ರಸ್ತುತ ಭಾರತದ T20I ತಂಡದ ಉಪನಾಯಕರಾಗಿದ್ದು, ಇಗಾಗ್ಲೇ ಕಿವೀಸ್ ವಿರುದ್ಧ ಐದು T20 ಪಂದ್ಯಗಳನ್ನು ಆಡಿದ್ದಾರೆ. ಌಂಡ್ ನ್ಯೂಜಿಲೆಂಡ್ A ವಿರುದ್ಧ ಭಾರತ A ಪರ ಮೂರನೇ ಅನಧಿಕೃತ ಟೆಸ್ಟ್ನಲ್ಲಿ ಅರ್ಧಶತಕ ಗಳಿಸಿದ್ದಾರೆ. ಇನ್ನು ರುತುರಾಜ್ ಗಾಯಕ್ವಾಡ್ ಈ ಹಿಂದೆ ಭಾರತ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ಇಬ್ರಿಬ್ಬರ ನಡುವೆ ಯಾರನ್ನ ಆಡಿಸ್ತಾರೆ ಅನ್ನೋ ಕನ್ಫ್ಯೂಷನ್ಸ್ ಇದೆ.
ಕಾಂಬೋಜ್ ಅನುಪಸ್ಥಿತಿಯಲ್ಲಿ ಸಿರಾಜ್ & ಕುಲ್ದೀಪ್ ಫೈಟ್!
ಇನ್ನು ನಾಲ್ಕನೇ ಪಂದ್ಯಕ್ಕೆ ಬೌಲಿಂಗ್ ಸ್ಕ್ಯಾಡ್ನಲ್ಲೂ ಬದಲಾವಣೆ ಅನಿವಾರ್ಯವಾಗಿದೆ. ಯಾಕಂದ್ರೆ ಅನ್ಶುಲ್ ಕಾಂಬೋಜ್ ಕೂಡ ಟೆಸ್ಟ್ ಸರಣಿ ಸಿದ್ಧತೆಗಳಿಗಾಗಿ ತಂಡದಿಂದ ಹೊರಬಂದಿರೋದ್ರಿಂದ ಅವ್ರ ಸ್ಥಾನಕ್ಕೆ ಬೇರೆ ಬೌಲರ್್ ಪಿಕ್ ಮಾಡ್ಬೇಕು. ಈಗಾಗ್ಲೇ ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಭಾರತೀಯ ತಂಡದಲ್ಲಿ ಇಬ್ಬರು ಹಿರಿಯ ಬೌಲರ್ಗಳಾಗಿದ್ದರೂ, ಮೊದಲ ಮೂರು ಪಂದ್ಯಗಳಲ್ಲಿ ಸೆಲೆಕ್ಟ್ ಮಾಡಿರಲಿಲ್ಲ. ಮೀನ್ಸ್ ಬೆಂಚ್ ಕಾದಿದ್ರು. ಸೋ ಕಾಂಬೋಜ್ ಅನುಪಸ್ಥಿತಿಯಲ್ಲಿ ಇವ್ರಿಬ್ಬರಲ್ಲಿ ಒಬ್ಬರು ಆಡುವ XIರಲ್ಲಿ ಕಾಣಿಸಿಕೊಳ್ತಾರೆ. ಅಕಸ್ಮಾತ್ ಮ್ಯಾನೇಜ್ಮೆಂಟ್ ನಾಲ್ಕನೇ ಏಕದಿನ ಪಂದ್ಯಕ್ಕೆ ಔಕಿಬ್ ನಬಿ, ಗುರ್ನೂರ್ ಬ್ರಾರ್ ಮತ್ತು ಅರ್ಶ್ದೀಪ್ ಸಿಂಗ್ ಈ ಮೂವರಲ್ಲಿ ಒಬ್ಬರಿಗೆ ರೆಸ್ಟ್ ನೀಡಿದ್ರೆ ಸಿರಾಜ್ ಮತ್ತು ಕುಲ್ದೀಪ್ ಇಬ್ರೂ ಆಡಬಹುದು. ಇನ್ನು ಕುಮಾರ್ ಕುಶಾಗ್ರ ಮತ್ತು ಯಶ್ ಠಾಕೂರ್ ಅವರನ್ನು ಫಾರ್ ದಿ ಫಸ್ಟ್ ಟೈಂ ಭಾರತದ ಏಕದಿನ ತಂಡಕ್ಕೆ ಆಯ್ಕೆ ಮಾಡಿದ್ರೂ ಕೂಡ ಆಡುವ ಅವಕಾಶ ಸಿಗುವ ಸಾಧ್ಯತೆಗಳು ತೀರಾ ಕಮ್ಮಿ.
4ನೇ ಪಂದ್ಯಕ್ಕೆ ಪ್ಲೇಯಿಂಗ್ 11
ರೋಹಿತ್ ಶರ್ಮಾ
ಇಶಾನ್ ಕಿಶನ್
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ತಿಲಕ್ ವರ್ಮಾ
ನಮನ್ ಧೀರ್
ಅಕ್ಷರ್ ಪಟೇಲ್
ಔಕಿಬ್ ನಬಿ
ಗುರ್ನೂರ್ ಬ್ರಾರ್
ಅರ್ಷದೀಪ್ ಸಿಂಗ್
ಮೊಹಮ್ಮದ್ ಸಿರಾಜ್
ಸೋ ಭಾರತ ತಂಡದಲ್ಲಿ ಮೂರು ಬದಲಾವಣೆಯಂತೂ ಪಕ್ಕಾ ಇದೆ. ಆದ್ರಿಲ್ಲಿ ಚಾಲೆಂಜ್ ಇರೋದು ಶ್ರೇಯಸ್ ಅಯ್ಯರ್ಗೆ. ಈಗಾಗ್ಲೇ ಟಿ-20ಐ ಕ್ಯಾಪ್ಟನ್ ಆಗಿ ಸಾಕಷ್ಟು ಸ್ಟ್ರಗಲ್ ಕಂಡಿರೋ ಶ್ರೇಯಸ್ ಅಯ್ಯರ್ ಫಾರ್ ದಿ ಫಸ್ಟ್ ಟೈಂ ಏಕದಿನ ತಂಡದ ನಾಯಕನಾಗಿ ಲೀಡ್ ಮಾಡೋ ಸವಾಲಿದೆ. ಹಾಗೇ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ತಂಡದಲ್ಲಿ ಇರೋದ್ರಿಂದ ಶ್ರೇಯಸ್ಗೆ ಅವ್ರ ಅನುಭವವನ್ನ ಬಳಸಿಕೊಳ್ಳೋ ಗೋಲ್ಡನ್ ಆಪರ್ಚುನಿಟಿ ಕೂಡ ಸಿಗಲಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ತಂಡ ಈಗಾಗಲೇ ತವರಿನಲ್ಲಿ ಟಿ-20ಐ ಸರಣಿ ಸೋತು ಈಗ ಏಕದಿನ ಸರಣಿಯ ಮೊದಲ ಎರಡೂ ಪಂದ್ಯಗಳನ್ನ ಸೋತಿರೋದ್ರಿಂದ ಈ ಸರಣಿ ಸೋಲಿನಿಂದ ಪಾರಾಗೋಕೆ ಕೊನೆಯ ಎರಡು ಪಂದ್ಯಗಳನ್ನೂ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. ಅಲ್ಲಿಯೂ ಕೂಡ ಪ್ಲೇಯಿಂಗ್ 11ನಲ್ಲಿ ಕೆಲ ಬದಲಾವಣೆಗಳು ಆಗೋದ್ರಿಂದ ಈ ಮ್ಯಾಚ್ ರಣರೋಚಕವಾಗೋದ್ರಲ್ಲಿ ಡೌಟೇ ಇಲ್ಲ.

ನೋಡಿರಿ

