DCಗೆ ರಾಹುಲ್.. MIಗೆ ರೋಹಿತ್ – 6 ತಂಡಗಳಿಗೆ ಹೊಸ ಕ್ಯಾಪ್ಟನ್ಸ್?
RCB, GT, CSK.. ಯಾರೆಲ್ಲಾ ಸೇಫ್?

2027ರ ಐಪಿಎಲ್ ಫೀವರ್ ಜೋರಾಗ್ತಿದೆ. ಮಿನಿ ಆಕ್ಷನ್ಗೂ ಮೊದ್ಲೇ ಒಂದಷ್ಟು ಬಿಗ್ ಸ್ಟಾರ್ಸ್ ಸ್ವ್ಯಾಪ್ ಡೀಲ್ ಆಗಿರೋದ್ರಿಂದ ಕ್ರೇಜ್ ಇನ್ನೂ ಜಾಸ್ತಿಯಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಮುಂದಿನ ಆವೃತ್ತಿಗೆ ಪ್ಲೇಯರ್ಸ್ ಅಷ್ಟೇ ಚೇಂಜ್ ಆಗಲ್ಲ. ಹಲವು ತಂಡಗಳ ಕ್ಯಾಪ್ಟನ್ಸ್ ಕೂಡ ಬದಲಾಗ್ತಾರೆ.
ಇದನ್ನೂ ಓದಿ : ಶ್ರೇಯಸ್ ಗೆ ಶುರು ಅಸಲಿ TASK – ಗಿಲ್, ಕೆಎಲ್ ಇಲ್ಲದೆ ಗೆಲ್ಲಿಸಿಕೊಡ್ತಾರಾ?
ಟ್ರೇಲ್ ಡೀಲ್, ಸ್ವ್ಯಾಪ್ ಡೀಲ್ಗಳ ಲೆಕ್ಕಾಚಾರಗಳ ನಡುವೆ ಒಂದಷ್ಟು ಫ್ರಾಂಚೈಸಿಗಳು ತಮ್ಮ ಕ್ಯಾಪ್ಟನ್ಗಳೇ ತಂಡದಿಂದ ಕೈಬಿಟ್ಟಿದ್ದಾರೆ. ಇದೇ ಕಾರಣಕ್ಕೆ ಮುಂದಿನ ಆವೃತ್ತಿಯಲ್ಲಿ ಅನಿವಾರ್ಯವಾಗಿ ನಾಯಕತ್ವವನ್ನೂ ಬದಲಾವಣೆ ಮಾಡಬೇಕಾಗುತ್ತೆ. ಅದ್ರಲ್ಲೂ 20ನೇ ಆವೃತ್ತಿಯ ಐಪಿಎಲ್ಗೆ 6 ತಂಡಗಳಿಗೆ ಹೊಸ ನಾಯಕರನ್ನು ನೇಮಕ ಮಾಡಲಾಗುತ್ತೆ ಅಂತಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.
20ನೇ ಆವೃತ್ತಿಗೆ 4 ಕ್ಯಾಪ್ಟನ್ಸ್ ಸೇಫ್.. 6 ನಾಯಕರ ಬದಲಾವಣೆ!
20ನೇ ಆವೃತ್ತಿ ಐಪಿಎಲ್ಗಾಗಿ ಇದೇ ತಿಂಗಳ 17ನೇ ತಾರೀಕು ತಂಡಗಳ ರಿಟೇನ್ ಮತ್ತು ರಿಲೀಸ್ ಲಿಸ್ಟ್ ಅನೌನ್ಸ್ ಮಾಡಲು ಲಾಸ್ಟ್ ಡೇಟ್ ಇದೆ. ಌಂಡ್ ಡಿಸೆಂಬರ್ 16ಕ್ಕೆ ಮಿನಿ ಆಕ್ಷನ್ ಗೋವಾದಲ್ಲಿ ನಡೆಯಲಿದೆ. ಮುಂದಿನ ವರ್ಷ ಮಾರ್ಚ್ನಲ್ಲಿ ಹೊಸ ಆವೃತ್ತಿ ಆರಂಭವಾಗಲಿದ್ದು ಇದಕ್ಕೂ ಮುನ್ನ 6 ತಂಡಗಳಲ್ಲಿ ನಾಯಕತ್ವ ಬದಲಾವಣೆ ಆಗುತ್ತೆ ಅಂತಾ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಸಾರಥ್ಯ ಬದಲಾವಣೆಯನ್ನ ಬಿಚ್ಚಿಟ್ಟಿದ್ದಾರೆ.
6 ತಂಡಗಳಿಗೆ ಹೊಸ ನಾಯಕರು!
ತಂಡ 2026ರ ನಾಯಕ 2027ಕ್ಕೆ ನಾಯಕತ್ವ
ಡೆಲ್ಲಿ ಅಕ್ಷರ್ ಪಟೇಲ್ ಕೆಎಲ್ ರಾಹುಲ್
ರಾಜಸ್ಥಾನ ರಿಯಾನ್ ಪರಾಗ್ ಯಶಸ್ವಿ ಜೈಸ್ವಾಲ್
ಹೈದರಾಬಾದ್ ಪ್ಯಾಟ್ ಕಮಿನ್ಸ್ ಇಶಾನ್ ಕಿಶನ್
ಕೊಲ್ಕತ್ತಾ ಅಜಿಂಕ್ಯ ರಹಾನೆ ರಿಂಕು ಸಿಂಗ್
ಲಕ್ನೋ ರಿಷಭ್ ಪಂತ್ ಮಾರ್ಷ್/ಮಾರ್ಕ್ರಂ/ಪೂರನ್
ಮುಂಬೈ ಹಾರ್ದಿಕ್ ಪಾಂಡ್ಯ ರೋಹಿತ್/ತಿಲಕ್/ಬುಮ್ರಾ
ಆಕಾಶ್ ಚೋಪ್ರಾ ಪ್ರೆಡಿಕ್ಷನ್ ಪ್ರಕಾರ ಈ 6 ತಂಡಗಳ ನಾಯಕರು ಬದಲಾವಣೆ ಆಗಬಹುದು ಎಂದಿದ್ದಾರೆ. ಲಕ್ನೋ ಮತ್ತು ಮುಂಬೈ ತಂಡಗಳು ತಮ್ಮ ಹಾಲಿ ಕ್ಯಾಪ್ಟನ್ಗಳನ್ನೇ ಟ್ರೇಡ್ ಡೀಲ್ ಮೂಲಕ ಬಿಟ್ಟುಕೊಟ್ಟಿರೋದ್ರಿಂದ ನಾಯಕತ್ವ ಬದಲಾವಣೆ ಅನಿವಾರ್ಯತೆಯಂತೂ ಇದೆ. ಇನ್ನುಳಿದ ನಾಲ್ಕು ತಂಡಗಳಲ್ಲಿ ಪರ್ಫಾಮೆನ್ಸ್ ಆಧಾರದ ಮೇಲೆ ಚೇಂಜಸ್ ಮಾಡಬಹುದು. ಉಳಿದಂತೆ ಆರ್ಸಿಬಿಯ ಚಾಂಪಿಯನ್ ಕ್ಯಾಪ್ಟನ್ ರಜತ್ ಪಾಟಿದಾರ್, ಪಂಜಾಬ್ ತಂಡದ ಶ್ರೇಯಸ್ ಅಯ್ಯರ್, ಗುಜರಾತ್ ಟೈಟಾನ್ಸ್ನ ಶುಭ್ಮನ್ ಗಿಲ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ರುತುರಾಜ್ ಗಾಯಕ್ವಾಡ್ ಮುಂದಿನ ಆವೃತ್ತಿಯಲ್ಲೂ ಕ್ಯಾಪ್ಟನ್ ಆಗಿ ಕಂಟಿನ್ಯೂ ಆಗಬಹುದು ಎಂದಿದ್ದಾರೆ.

ನೋಡಿರಿ

