T20I ಕೈ ಬಿಟ್ಟಿದ್ದಕ್ಕೆ ಸೂರ್ಯ ಕಣ್ಣೀರು – ಶತಕವೀರ ಸೆಹ್ವಾಗ್ ಪುತ್ರ ಕೊಹ್ಲಿ ಫ್ಯಾನ್
ಟೆಸ್ಟ್ ತಂಡಕ್ಕೂ ಸ್ಮೃತಿ ಕ್ಯಾಪ್ಟನ್

T20I ಕೈ ಬಿಟ್ಟಿದ್ದಕ್ಕೆ ಸೂರ್ಯ ಕಣ್ಣೀರು – ಶತಕವೀರ ಸೆಹ್ವಾಗ್ ಪುತ್ರ ಕೊಹ್ಲಿ ಫ್ಯಾನ್ಟೆಸ್ಟ್ ತಂಡಕ್ಕೂ ಸ್ಮೃತಿ ಕ್ಯಾಪ್ಟನ್

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ಶುಭಮನ್ ಗಿಲ್ ತಂಡವನ್ನು ಮುನ್ನಡೆಸಿದ್ದರು. ಇದೀಗ ಗಿಲ್ ಟೆಸ್ಟ್ ಸರಣಿಯ ಸಿದ್ಧತೆಗಾಗಿ ಹೊರಗುಳಿಯಲಿದ್ದಾರೆ. ಇಶಾನ್ ಕಿಶನ್ ಉಪನಾಯಕನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಶ್ರೇಯಸ್‌ಗೆ ಇದು ಏಕದಿನ ತಂಡದ ನಾಯಕನಾಗಿ ಮೊದಲ ಅವಕಾಶವಾಗಿದೆ.

ಐಪಿಎಲ್ 2027ಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ಟ್ರೇಡ್ ಆಗಿದ್ದಾರೆ. 18 ಕೋಟಿ ರೂಪಾಯಿ ಒಪ್ಪಂದದೊಂದಿಗೆ ಹಾರ್ದಿಕ್ ಹೊಸ ತಂಡ ಸೇರಿಕೊಳ್ಳಲಿದ್ದಾರೆ. ಈಗಾಗಲೇ ಮುಂಬೈ ಪರ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಹಾರ್ದಿಕ್, ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡದಲ್ಲಿ ಆಡಲಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರನ್ನು ಪಂಜಾಬ್ ಕಿಂಗ್ಸ್‌ಗೆ ಬಿಟ್ಟುಕೊಟ್ಟಿರುವ ಮುಂಬೈ ಇಂಡಿಯನ್ಸ್, ಪ್ರತಿಯಾಗಿ ಭಾರತದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. 18 ಕೋಟಿ ರೂಪಾಯಿ ಒಪ್ಪಂದದೊಂದಿಗೆ ಅರ್ಷದೀಪ್ ಮುಂಬೈ ತಂಡದ ಭಾಗವಾಗಲಿದ್ದಾರೆ. ಪಂಜಾಬ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಅರ್ಷದೀಪ್, ಮುಂಬೈ ತಂಡದ ಬೌಲಿಂಗ್ ವಿಭಾಗಕ್ಕೆ ಹೊಸ ಬಲ ತುಂಬುವ ನಿರೀಕ್ಷೆಯಿದೆ.

ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಸಮಯದ ಅನುಭವ ಹಂಚಿಕೊಂಡಿದ್ದಾರೆ. ತಂಡದಿಂದ ಕೈಬಿಟ್ಟ ಆರಂಭದ ಎರಡು ತಿಂಗಳು ತಮಗೆ ಅತ್ಯಂತ ಕಷ್ಟಕರವಾಗಿತ್ತು, ಕಣ್ಣೀರು ಬರುವಂತೆ ಆಗುತಿತ್ತು ಎಂದು ಹೇಳಿದ್ದಾರೆ. ಈ ಅವಧಿಯಲ್ಲಿ ಮತ್ತೆ ಫಾರ್ಮ್ ಕಂಡುಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದಾಗಿ ತಿಳಿಸಿದ್ದಾರೆ. ಇದೀಗ ಮತ್ತೆ ತಮ್ಮ ಆಟವನ್ನು ಆನಂದಿಸುತ್ತಿರುವುದಾಗಿ ಸೂರ್ಯ ಹೇಳಿದ್ದಾರೆ.

ಐಪಿಎಲ್‌ ಯಾವಾಗ ನಡೆಯಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಬಿಸಿಸಿಐಗೆ ಇರಬೇಕು. ಇದಕ್ಕಾಗಿ ಐಸಿಸಿ ಪ್ರತ್ಯೇಕ ವಿಂಡೋ ನೀಡುವ ಅಗತ್ಯವಿಲ್ಲ ಎಂದು ಲಲೀತ್ ಮೋದಿ ಹೇಳಿದ್ದಾರೆ. ಇಂಗ್ಲಿಷ್ ಪ್ರೀಮಿಯರ್ ಲೀಗ್‌ ಫುಟ್‌ಬಾಲ್‌ನಲ್ಲಿ ಜಾಗತಿಕ ಪ್ರಭಾವ ಹೊಂದಿರುವಂತೆ, ಐಪಿಎಲ್ ಕೂಡ ಕ್ರಿಕೆಟ್‌ನ ಪ್ರಮುಖ ಶಕ್ತಿಯಾಗಿದೆ. ಹೀಗಾಗಿ ವಿಶ್ವ ಕ್ರಿಕೆಟ್ಟೇ ಐಪಿಎಲ್‌ಗೆ ಹೊಂದಿಕೊಳ್ಳಬೇಕು ಹೊರತು, ಐಪಿಎಲ್ ಇತರ ಟೂರ್ನಿಗಳಿಗೆ ಹೊಂದಿಕೊಳ್ಳಬೇಕಿಲ್ಲ ಎಂದು ಐಸಿಸಿಗೆ ಟಾಂಗ್ ಕೊಟ್ಟಿದ್ದಾರೆ.

 

2028ರ ಐಪಿಎಲ್ ಆವೃತ್ತಿಯ ವೇಳೆಗೆ ಟೂರ್ನಿಯಲ್ಲಿ ತಂಡಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲು ಬಿಸಿಸಿಐ ಬೃಹತ್ ಯೋಜನೆ ರೂಪಿಸಿದೆ. ಇದರ ಭಾಗವಾಗಿ ಪುಣೆ ಮತ್ತು ವಡೋದರಾ ನಗರಗಳಿಂದ ಎರಡು ಹೊಸ ಫ್ರಾಂಚೈಸಿಗಳನ್ನು ಸೇರ್ಪಡೆಗೊಳಿಸುವ ಚಿಂತನೆ ನಡೆಸಿದೆ. 2022ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಸೇರ್ಪಡೆಯಿಂದ ಬಿಸಿಸಿಐಗೆ ಭಾರೀ ಆದಾಯ ಬಂದಿತ್ತು. ಇದೀಗ ಸೇರ್ಪಡೆಯಾಗಲಿರುವ ಹೊಸ ಎರಡು ತಂಡಗಳ ಮೌಲ್ಯ ಸುಮಾರು 8,400 ಕೋಟಿ ರೂಪಾಯಿ ದಾಟಬಹುದು ಎಂದು ಅಂದಾಜಿಸಲಾಗಿದೆ.

UAE ವಿರುದ್ಧ ಅಂಡರ್-19 ಏಷ್ಯಾಕಪ್ ಟೂರ್ನಿಯ 11ನೇ ಪಂದ್ಯದಲ್ಲಿ ಆರ್ಯವೀರ್ ಸೆಹ್ವಾಗ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಆರಂಭದಲ್ಲಿ ತುಸು ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ ಆರ್ಯವೀರ್ ಆ ಬಳಿಕ ತಂದೆ ಸೆಹ್ವಾಗ್ ಶೈಲಿಯಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 131 ಎಸೆತಗಳಲ್ಲಿ ಶತಕ ಮೂಡಿಬಂತು. ಸೆಂಚುರಿ ಪೂರ್ಣಗೊಂಡ ಬೆನ್ನಲ್ಲೇ ಗೇರ್ ಬದಲಿಸಿದ ಆರ್ಯವೀರ್ ಕೇವಲ 26 ಎಸೆತಗಳಲ್ಲಿ 50 ರನ್ ಚಚ್ಚಿದರು. ಈ ಮೂಲಕ ಕೇವಲ 157 ಎಸೆತಗಳಲ್ಲಿ 150 ರನ್ ಪೂರೈಸಿದರು.

ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್  ನಾನು ಸೆಹ್ವಾಗ್‌ನಂತೆ ಆಡಲು ಬಯಸಲ್ಲ. ವಿರಾಟ್ ಕೊಹ್ಲಿ ಥರ ಆಡಲು ಬಯಸುತ್ತೇನೆ’ ಎಂದಿದ್ದಾರೆ. ಟೀಂ ಇಂಡಿಯಾದಲ್ಲಿ ವೀರೇಂದ್ರ ಸೆಹ್ವಾಗ್ ಅವರು ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ ಆಗಿದ್ದರು ಕೂಡ ಆರ್ಯವೀರ್ ಮಾತ್ರ ನಾನು ಅಪ್ಪನಂತೆ ಅಲ್ಲ ವಿರಾಟ್ ಕೊಹ್ಲಿ ತರ ಆಡುತ್ತೇನೆ ಎಂದಿರುವುದು ಚರ್ಚೆಗೆ ಕಾರಣ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಆಯ್ಕೆಯಾದ ಟೆಸ್ಟ್ ತಂಡಕ್ಕೆ ಸ್ಮೃತಿ ಮಂಧನಾ ಅವರನ್ನು ನಾಯಕಿಯನ್ನಾಗಿ ಬಿಸಿಸಿಐ ನೇಮಿಸಿದೆ. ಇದರೊಂದಿಗೆ ಅವರು ಭಾರತೀಯ ಮಹಿಳಾ ತಂಡದ ಎಲ್ಲಾ ಮಾದರಿಗಳಿಗೂ ಪೂರ್ಣಾವಧಿ ನಾಯಕಿಯಾಗಿದ್ದಾರೆ. ಡಿಸೆಂಬರ್‌ನಲ್ಲಿ ಆರಂಭವಾಗಲಿರುವ ಈ ಸುದೀರ್ಘ ಪ್ರವಾಸದಲ್ಲಿ, ಭಾರತ ತಂಡವು ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಟೆಸ್ಟ್ ಪಂದ್ಯ, ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ.

ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನು ಲಾಹೋರ್‌ನಿಂದ ರಾವಲ್ಪಿಂಡಿಗೆ ಸ್ಥಳಾಂತರಿಸಲಾಗಿದೆ. ಲಾಹೋರ್‌ನಲ್ಲಿ ವಾಯುಮಾಲಿನ್ಯ ಮತ್ತು ದಟ್ಟ ಹೊಗೆಯ ಪ್ರಮಾಣ ಅಪಾಯಕಾರಿಯಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ನವೆಂಬರ್ 17ರಿಂದ 21ರವರೆಗೆ ನಡೆಯಬೇಕಿರುವ ಪಂದ್ಯಕ್ಕೆ ಹೊಸ ತಾಣ ರಾವಲ್ಪಿಂಡಿಯಾಗಿದೆ.

Kishor KV

Leave a Reply

Your email address will not be published. Required fields are marked *