90 ಗಂಟೆಗಳ ಬಳಿಕ 10 ದಿನದ ಮಗು, ತಾಯಿ ರಕ್ಷಣೆ – ಅವಶೇಷಗಳಡಿ ನಡೆದಿದ್ದು ಎಂಥಾ ಪವಾಡ..!?
ಟರ್ಕಿ ಹಾಗೂ ಸಿರಿಯಾದಲ್ಲೀಗ ಎಲ್ಲೆಲ್ಲೂ ನೋವೇ ತುಂಬಿದೆ. ಭೂಕಂಪಕ್ಕೆ ಸಿಲುಕಿ ಸಾವಿರಾರು ಮಂದಿ ಜೀವಂತ ಸಮಾಧಿಯಾಗಿದ್ದಾರೆ. ಕಳೆದ ಸೋಮವಾರ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಹಲವು ನಗರಗಳೇ ನಿರ್ನಾಮವಾಗಿವೆ. ಈಗಲೂ ಕೂಡ ಅವಶೇಷಗಳಡಿ ಸಿಲುಕಿದವರಿಗಾಗಿ ಶೋಧ ಕಾರ್ಯ ನಡೀತಿದ್ದು, ಅಚ್ಚರಿಯಂತೆ ಕೆಲವರನ್ನ ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ : ಭೂಕಂಪದಲ್ಲಿ ಸಾವನ್ನೇ ಗೆದ್ದ ಮಗು ಈಗ ‘ಮಿರಾಕಲ್’ – ಕಂದನಿಗೆ ಹಾಲುಣಿಸುತ್ತಿದ್ದಾರೆ ವೈದ್ಯರ ಪತ್ನಿ!
ಟರ್ಕಿ ಭೂಕಂಪದ ಅವಶೇಷಗಳಡಿ ಸಿಲುಕಿದ್ದ ತಾಯಿ ಹಾಗೂ 10 ದಿನಗಳ ಕಂದನನ್ನ ರಕ್ಷಣೆ ಮಾಡಲಾಗಿದೆ. ಭೂಕಂಪ ಸಂಭವಿಸಿ ಬರೋಬ್ಬರಿ 90 ಗಂಟೆಗಳ ಬಳಿಕ ಇಬ್ಬರನ್ನ ರಕ್ಷಣೆ ಮಾಡಲಾಗಿದೆ. ದಕ್ಷಿಣ ಹಟೇ ಪ್ರಾಂತ್ಯದಲ್ಲಿ 10 ದಿನ ಗಂಡು ಮಗು ಯಾಗಿಜ್ ಹಾಗೂ ತಾಯಿ ಬಚಾವಾಗಿ ಬಂದಿದ್ದಾರೆ.
ದುರಂತ ಸಂಭವಿಸಿ ನಾಲ್ಕು ದಿನ ಕಳೆದಿದ್ದು, ರಕ್ತ ಹೆಪ್ಪುಗಟ್ಟಿಸುವಂಥ ಚಳಿಯಲ್ಲೂ ಶೋಧ ಕಾರ್ಯ ನಡೀತಿದೆ. ಸದ್ಯ 10 ದಿನಗಳ ಮಗುವನ್ನ ಉಳಿಸುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಹಸುಗೂಸನ್ನ ಬೆಡ್ ಶೀಟ್ ಒಳಗೆ ಸುತ್ತಿಕೊಂಡು ಆಂಬುಲೆನ್ಸ್ ಒಳಗೆ ಒಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ. ಹಾಗೇ ತಾಯಿಯನ್ನ ಸ್ಟ್ರೆಚರ್ ಮೇಲೆ ಕರೆದುಕೊಂಡು ಹೋಗುವುದನ್ನ ಚಿತ್ರಿಸಲಾಗಿದೆ.