ಮಗುವಿಗೆ ಜನ್ಮ ನೀಡಿ ಜೀವ ಬಿಟ್ಟ ನಿತ್ಯಾ – ನಟಿ ನಮ್ರತಾ ಗೌಡ ಅಸಮಾಧಾನಕ್ಕೆ ಪಾತ್ರವೇ ಎಂಡ್!

ಕರ್ಣ ಸೀರಿಯಲ್‌ನಲ್ಲಿ ವೀಕ್ಷಕರು ಅಂದುಕೊಂಡಂತೆ ಆಗಿದೆ. ಕೊನೆಗೂ ನಿತ್ಯಾ ಪಾತ್ರ ಅಂತ್ಯವಾಗಿದೆ. ಆದರೆ, ನಿತ್ಯಾ ಸಾವಿನ ಅಪವಾದ ಕರ್ಣನ ಮೇಲೆ ಬರುತ್ತಾ?, ಕರ್ಣನಿಗೆ ಅಮ್ಮನ ವಿಚಾರದಲ್ಲಿ ಸತ್ಯ ಗೊತ್ತಾಗುತ್ತಾ ಎಂಬ ಕುತೂಹಲ ಗರಿಗೆದರಿದೆ.
ಇದನ್ನೂ ಓದಿ:ನಾಲ್ಕನೇ ಮದುವೆಯಾಗುತ್ತಾರಾ ಪವನ್ ಕಲ್ಯಾಣ್? – 13 ವರ್ಷಗಳ ದಾಂಪತ್ಯ ಮುರಿದು ಬಿದ್ದಿದ್ದು ಯಾಕೆ?
ಕರ್ಣ ಧಾರಾವಾಹಿಯಲ್ಲಿ ಮಹಾ ತಿರುವು ಎದುರಾಗಿದೆ. ಧಾರಾವಾಹಿಯಲ್ಲಿ ನಿತ್ಯಾ ಪಾತ್ರ ಅಂತ್ಯವಾಗಿದೆ. ತಾರಾಳ ಮೋಸವನ್ನು ತಿಳಿದಿದ್ದ ನಿತ್ಯಾ, ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಜೀವ ಬಿಟ್ಟಿದ್ದಾಳೆ. ಗರ್ಭಿಣಿಯಾಗಿರೋ ನಿತ್ಯಾಳನ್ನು ಮಾರಿಗುಡಿಯ ಮುನಿಯಪ್ಪ ಭೇಟಿಯಾಗಿದ್ದನು. ಈ ವೇಳೆ ನಿಮ್ಮ ತಂದೆ-ತಾಯಿ ಸಾವಿಗೆ ತಾರಾ ಕಾರಣ ಎಂಬ ಸತ್ಯ ಹೇಳಿದ್ದನು. ಇದೇ ವೇಳೆ ನಿತ್ಯಾಗೆ ಭುವನೇಶ್ವರಿಯೇ ಕರ್ಣನ ತಾಯಿ ಸೀತಾ ಎಂಬ ಸತ್ಯ ಗೊತ್ತಾಗಿತ್ತು. ಇದೆಲ್ಲವನ್ನು ತಿಳಿದ ನಿತ್ಯಾ, ಸ್ವಲ್ಪವೂ ಯೋಚಿಸದೇ ತಾರಾಗೆ ಕಾಲ್ ಮಾಡಿದ್ದಳು. ಮುನಿಯಪ್ಪ ಮತ್ತು ನಿತ್ಯಾಳ ಪ್ರಾಣ ತೆಗೆಯಲು ತಾರಾ ರೌಡಿಗಳನ್ನು ಕಳುಹಿಸಿದ್ದಳು. ಮುನಿಯಪ್ಪ ರಸ್ತೆಯಲ್ಲಿಯೇ ಸತ್ತರೆ, ನಿತ್ಯಾಳನ್ನು ಕಾಪಾಡಿದ್ದ ಕರ್ಣ ಆಸ್ಪತ್ರೆಗೆ ಕರೆದುಕೊಂಡು ಬಂದು ಸುಸೂತ್ರವಾಗಿ ಹೆರಿಗೆಯನ್ನು ಮಾಡಿಸಿದ್ದನು. ಹೆಣ್ಣು ಮಗುವಿಗೆ ಜನ್ಮ ನೀಡಿ ವಿಶ್ರಾಂತಿಯಲ್ಲಿದ್ದ ನಿತ್ಯಾಳಿಗೆ ಪಾಯಿಸನ್ ಇಂಜೆಕ್ಷನ್ ಚುಚ್ಚಿ ತಾರಾ ಕೊಂದಿದ್ದಾಳೆ. ನಿತ್ಯಾಳ ಪ್ರಾಣ ಉಳಿಸಲಾಗದೇ ಕರ್ಣ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ಆಸ್ಪತ್ರೆಗೆ ನಿತ್ಯಾಳನ್ನು ನೋಡಲು ಬಂದ ನಿಧಿಗೆ ಆಘಾತ ಎದುರಾಗಿದೆ. ಕರ್ಣ ಪ್ರಜ್ಞೆ ತಪ್ಪಿದ್ದಾನೆ. ಅಕ್ಕ ಸಾವನ್ನಪ್ಪಿದ್ದಾಳೆ. ಅಕ್ಕ ಪ್ಲೀಸ್ ಎದ್ದೇಳು… ನನ್ನ ಜೊತೆ ಮಾತಾಡೇ ಅಂತ ರಿಕ್ವೆಸ್ಟ್ ಮಾಡಿದ್ದಾಳೆ. ಆದರೆ, ನಿಧಿ ಸಾವನ್ನಪ್ಪಿರುವುದನ್ನು ನೋಡಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಈ ಅನಿರೀಕ್ಷಿತ ತಿರುವು ವೀಕ್ಷಕರ ಅಸಮಾಧಾನಕ್ಕೆ ಕಾರಣವಾದರೂ ಕೂಡಾ ಇದೆಲ್ಲಾ ಮೊದಲೇ ಊಹಿಸಿದ ಹಾಗೆಯೇ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿತ್ಯಾ ಪಾತ್ರವನ್ನು ಚೆನ್ನಾಗಿ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿತ್ತು. ಆದರೆ, ಇದು ನಿರೀಕ್ಷಿತವೇ ಆಗಿತ್ತು ಅಂತಲೂ ಕರ್ಣ ಸೀರಿಯಲ್‌ನ ವೀಕ್ಷಕರು ಹೇಳಿದ್ದಾರೆ. ಇನ್ನು ಮುಂದೆ ನಿತ್ಯಾ ಸಾವಿಗೆ ಕರ್ಣನೇ ಕಾರಣ, ಕರ್ಣನ ಮೇಲೆ ಅಪವಾದ ಖಂಡಿತಾ ಬರುತ್ತದೆ ಎಂದು ವೀಕ್ಷಕರು ಊಹಿಸಿದ್ದಾರೆ.
ಇನ್ನು ನಟಿ ನಮ್ರತಾ ಗೌಡ ಈ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಿತ್ಯಾ ಪಾತ್ರಧಾರಿಯಾಗಿರುವ ನಮ್ರತಾ ಗೌಡ ಸಂದರ್ಶನವೊಂದರಲ್ಲಿ ತಮ್ಮ ಪಾತ್ರದ ಬಗ್ಗೆ ಅಸಮಾಧಾನ ಹೇಳಿಕೊಂಡಿದ್ದರು. ಕರ್ಣ ಸೀರಿಯಲ್ ಹೆಸರನ್ನು ನೇರವಾಗಿ ಎಲ್ಲಿಯೂ ನಮ್ರತಾ ಗೌಡ ಅವರು ತೆಗೆದುಕೊಂಡಿರಲಿಲ್ಲ. ಆದರೆ ನಿತ್ಯಾ ಪಾತ್ರ ಈ ರೀತಿ ಇರುತ್ತದೆ ಎಂದು ಅಂದುಕೊಂಡಿರಲಿಲ್ಲ. ನನಗೆ ಕಥೆ ಹೇಳಿದಾಗ ಅದು ಬೇರೆಯ ರೀತಿ ಇತ್ತು. ಅದು ಸ್ಟ್ರಾಂಗ್ ಪಾರ್ಟ್ ಆಗಿತ್ತು. ಅದಕ್ಕೇ ನಾನು ಒಪ್ಪಿಕೊಂಡಿದ್ದೆ. ಆದರೆ ಜನರಿಗೆ ಬೇಕಾದ ರೀತಿಯಲ್ಲಿ ಕಥೆ ಬದಲಾಗುತ್ತಾ ಹೋಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ನಟಿ ನಮ್ರತಾ ಗೌಡ ಸೀರಿಯಲ್‌ನಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ನೋಡಿರಿ

