ಸೋಲಿನಿಂದ ಕಾಪಾಡಿದ KL – DLSನಲ್ಲಿ ಗೆದ್ದ ಭಾರತ
ಕಡಿಮೆ ಸ್ಕೋರ್ ಗೂ ತಿಣುಕಾಡಿದ್ದೇಕೆ?

ಸೋಲಿನಿಂದ ಕಾಪಾಡಿದ KL – DLSನಲ್ಲಿ ಗೆದ್ದ ಭಾರತಕಡಿಮೆ ಸ್ಕೋರ್ ಗೂ ತಿಣುಕಾಡಿದ್ದೇಕೆ?

ಸ್ಕೋರ್​ಬೋರ್ಡ್​ನಲ್ಲಿ ಇದ್ದದ್ದು 135 ರನ್​ಗಳ ಟಾರ್ಗೆಟ್​.. ಅದೂ ಕೂಡ 47 ಓವರ್ಸ್.. ಸೋ ಭಾರತ ಈ ಪಂದ್ಯವನ್ನೂ ಈಸಿಯಾಗಿ ಗೆದ್ಬಿಡುತ್ತೆ.. ಬಹುಶಃ 10 ರಿಂದ 15 ಓವರ್​ಗಳಲ್ಲೇ ಮ್ಯಾಚ್ ಫಿನಿಶ್ ಮಾಡ್ಬೋದು ಅನ್ನೋದು ಎಲ್ಲರ ಲೆಕ್ಕಾಚಾರ ಆಗಿತ್ತು. ಆದ್ರೆ ಭಾರತ ಚೇಸಿಂಗ್ ಶುರು ಮಾಡಿದ್ಮೇಲೇ ಗೊತ್ತಾಗಿದ್ದು ಅಸಲಿ ಆಟ.. ಏಕದಿನ ಪಂದ್ಯ ನಡೀತಿದ್ಯಾ ಅಥವಾ ಟೆಸ್ಟ್ ಮ್ಯಾಚ್ ಡಿಫೆನ್ಸ್ ನಡೀತಿದ್ಯಾ ಅನ್ನೋ ಕನ್ಫ್ಯೂಷನ್ ಸ್ಟಾರ್ಟ್ ಆಗಿತ್ತು. ಇನ್ನೇನು ಪಾರ್ಟ್ನರ್​ಶಿಪ್ ಸ್ಟ್ರಾಂಗ್ ಆಗ್ತಿದೆ ಅನ್ಕೊಂಡ್ರೆ ನೆಕ್ಸ್​ಟ್ ಮೂಮೆಂಟ್​ನಲ್ಲೇ ವಿಕೆಟ್ಸ್ ಬೀಳ್ತಿತ್ತು. ಅದ್ರ ನಡುವೆ ಮಳೆ ಬೇರೆ.

ಇದನ್ನೂ ಓದಿ : ODIನಲ್ಲೂ ಶ್ರೇಯಸ್, ಅಕ್ಷರ್ ತಲೆಬಿಸಿ – ಸಿರಾಜ್ ಬೆಂಚ್ ಗಷ್ಟೇ ಸೀಮಿತನಾ?

ವೆಲ್ಲಿಂಗ್ಟನ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್​ಗಳಲ್ಲೂ ಬೌಲರ್​ಗಳೇ ಸೂಪರ್ ಸ್ಟಾರ್ಸ್.. ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ಸೋತು ಫಸ್ಟ್ ಬ್ಯಾಟಿಂಗ್​ಗೆ ಬಂದ ಕಿವೀಸ್ ಪರ ಡೇರಿಲ್ ಮಿಚೆಲ್ ಅರ್ಧಶತಕ, ಮಿಚೆಲ್ ಸ್ಯಾಂಟ್ನರ್ 31 ರನ್ಸ್ ಗಳಿಸಿದ್ದು ಬಿಟ್ರೆ ಉಳಿದ ಯಾವ ಬ್ಯಾಟರ್ ಕಡೆಯಿಂದ್ಲೂ ಬಿಗ್ ಇನ್ನಿಂಗ್ಸ್ ಬರಲೇಇಲ್ಲ. ಆ ಮಟ್ಟಿಗೆ ಭಾರತದ ಬೌಲರ್ಟ್ ಅಟ್ಯಾಕ್ ಮಾಡಿದ್ರು. ಹೀಗಾಗಿ 41 ಓವರ್​ಗಳಲ್ಲಿ ಕಿವೀಸ್ ಪಡೆ 134 ರನ್ ಗಳಿಸಿ ಆಲೌಟ್ ಆದ್ರು. ಸೋ ಅಲ್ಲಿಗೆ ಭಾರತಕ್ಕೆ 135 ರನ್​ಗಳ ಟಾರ್ಗೆಟ್ ಸೆಟ್ ಆಗಿತ್ತು. ಆದ್ರೆ ಚೇಸಿಂಗ್​ಗೆ ಇಳಿದ ಭಾರತಕ್ಕೆ ಕಿವೀಸ್ ಬೌಲರ್ಸ್ ಕೂಡ ಬೆವರಿಳಿಸಿದ್ರು.

ಮಳೆಯೇ ಗೇಮ್ ಚೇಂಜರ್!

ಮಳೆಯ ಕಾರಣದಿಂದ ಬೆಳಗ್ಗೆ 7.30ರ ಬದಲು 8.30ಕ್ಕೆ ಪಂದ್ಯ ಆರಂಭ

ಪಂದ್ಯ ತಡವಾಗಿದ್ರಿಂದ 50 ಓವರ್ ಗಳ ಬದಲು 47 ಓವರ್ ಗಳಿಗೆ ಸೀಮಿತ

ಟಾಸ್ ಸೋತ ನ್ಯೂಜಿಲೆಂಡ್ ಫಸ್ಟ್ ಬ್ಯಾಟಿಂಗ್ ಮಾಡಿ 135 ರನ್ಸ್ ಟಾರ್ಗೆಟ್

ಚೇಸಿಂಗ್ ಆರಂಭಿಸಿದ ಭಾರತದ ಪರ ಫಸ್ಟ್ ಬಾಲ್ ನಲ್ಲೇ ನಾಯಕ ಗಿಲ್ ಔಟ್

ವಿರಾಟ್ ಕೊಹ್ಲಿ 7(7), ರೋಹಿತ್ ಶರ್ಮಾ 23(28) ರನ್ಸ್ ಗಳಿಸಿ ಔಟ್

ಪವರ್ ಪ್ಲೇನಲ್ಲಿ 40 ರನ್ ಗಳಿಸಿ 3 ವಿಕೆಟ್ ಕಳ್ಕೊಂಡಿದ್ದ ಟೀಂ ಇಂಡಿಯಾ

5ನೇ ಕ್ರಮಾಂಕದಲ್ಲಿ ಎರಡನೇ ಪಂದ್ಯದಲ್ಲೂ ಅಕ್ಷರ್ ಪಟೇಲ್ ಬ್ಯಾಟಿಂಗ್

7(17) ಅಕ್ಷರ್ ಔಟ್.. 30(46) ರನ್ ಗಳಿಸಿ ಶ್ರೇಯಸ್ ಅಯ್ಯರ್ ಔಟ್

ನಮನ್ ಧೀರ್ 12(16), ಅನ್ಶುಲ್ ಕಾಂಬೋಜ್ 1(3) ಗಳಿಗೆ ವಿಕೆಟ್

ಕೆಎಲ್ ರಾಹುಲ್ & ಔಕಿಬ್ ನಬಿ ಬ್ಯಾಟಿಂಗ್ ವೇಳೆ ಮಳೆ ಬಂದು ಸ್ಟಾಪ್

113ಕ್ಕೆ 7 ವಿಕೆಟ್ ಕಳ್ಕೊಂಡಿದ್ದಾಗ ಮಳೆ ಬಂದು ಮ್ಯಾಚ್ ಸ್ಟಾಪ್

ಪಂದ್ಯ ಗೆಲ್ಲಲು ಭಾರತಕ್ಕೆ ಇನ್ನು 22 ರನ್ಸ್ ಅಗತ್ಯ ಇದ್ದಾಗ ಮಳೆ ಕಾಟ

26 ಓವರ್ ಗಳಲ್ಲಿ 113 ರನ್ಸ್.. ಮಳೆಗೆ ಪಂದ್ಯ ರದ್ದಾದ್ರೂ ಭಾರತಕ್ಕೆ ಗೆಲುವು

ಡಿಎಲ್ ಎಸ್ ನಿಯಮದ ಪ್ರಕಾರ ಭಾರತ ಈ ಹಂತದಲ್ಲಿ 109 ರನ್ಸ್ ಕಲೆ

113 ರನ್ಸ್ ಕಲೆ ಹಾಕೋ ಮೂಲಕ 4 ರನ್ ಗಳ ಲೀಡ್ ನಲ್ಲಿದ್ದ ಭಾರತ

ಹೀಗೆ ಮೊದಲ ಮ್ಯಾಚಲ್ಲಿ ವಿರಾಟ್ ಕೊಹ್ಲಿಯವ್ರ ಎಕ್ಸ್​ಟ್ರಾರ್ಡಿನರಿ ಪ್ರದರ್ಶನದ ಮೂಲಕ ಈಸಿಯಾಗಿ ಗೆದ್ದಿದ್ದ ಭಾರತ ಎರಡನೇ ಪಂದ್ಯದಲ್ಲಿ ಸಾಕಷ್ಟು ಸ್ಟ್ರಗಲ್ ಪಡ್ಬೇಕಾಯ್ತು. ಅವ್ರು ಗೆಲ್ತಾರೋ ಇವ್ರು ಗೆಲ್ತಾರೋ ಅನ್ನೋ ಟೆನ್ಷನ್ ಜಾಸ್ತಿಯಾಗ್ತಾನೇ ಇತ್ತು.

ಭಾರತಕ್ಕೆ ಎಚ್ಚರಿಕೆಯ ಅಂಶಗಳು!

ಟೀಂ ಇಂಡಿಯಾ ಬೌಲಿಂಗ್ ಎರಡೂ ಪಂದ್ಯಗಳಲ್ಲೂ ಚೆನ್ನಾಗಿದ್ದು ಕಂಟಿನ್ಯೂ

ಬ್ಯಾಟಿಂಗ್ ನಲ್ಲಿ ಟಾಪ್ ಆರ್ಡರ್ ಮೇಲೆ ಡಿಪೆಂಡ್ ಆಗ್ತಿರೋದು ಕ್ಲಿಯರ್

ರೋಹಿತ್, ಗಿಲ್, ಕೊಹ್ಲಿ ಬೇಗ ಔಟ್ ಆದ್ರೆ ಮಿಡಲ್ ಆರ್ಡರ್ ಒದ್ದಾಟ

ನ್ಯೂಜಿಲೆಂಡ್ ನ ವೇಗದ ಬೌಲರ್ಸ್ ಶಾರ್ಟ್ ಬಾಲ್ ತಂತ್ರ ಫೇಸ್

ಇನ್ನು ಈ ಮ್ಯಾಚ್​ನಲ್ಲಿ ಭಾರತದ ಪಾಲಿಗೆ ಮತ್ತೊಮ್ಮೆ ಆಪತ್ಬಾಂಧವನಾಗಿದ್ದು ಕನ್ನಡಿಗ ಕೆಎಲ್ ರಾಹುಲ್.  ನಂಬರ್ 6ನಲ್ಲಿ ಬ್ಯಾಟಿಂಗ್ ಕೊಟ್ರೂ ಕೂಡ ಜವಾಬ್ದಾರಿಯಿಂದ ತಂಡವನ್ನ ಗೆಲುವಿನ ದಡ ಮುಟ್ಟಿಸಿದ್ರು. ಭಾರತ ಮಳೆ ಬರುವ ವೇಳೆಗೆ ಡಿಎಲ್​ಎಸ್ ನಿಯಮದ ಪ್ರಕಾರ 4 ರನ್​ಗಳ ಮುನ್ನಡೆ ಸಾಧಿಸೋಕೆ ಕೆಎಲ್ ರಾಹುಲ್ ಬ್ಯಾಟಿಂಗ್​ ಕಾರಣ ಆಯ್ತು. ಒಟ್ನಲ್ಲಿ ಸದ್ಯ ಸರಣಿಯಲ್ಲಿ 2-0 ಅಂತರದಲ್ಲಿ ಲೀಡ್ ಸಾಧಿಸಿರೋ ಭಾರತಕ್ಕೆ 10ನೇ ತಾರೀಕು ಅಂದ್ರೆ ಮಂಗಳವಾರ 3ನೇ ಪಂದ್ಯ ಇದ್ದು ಇದನ್ನೂ ಗೆದ್ರೆ ಸರಣಿ ಕೈವಶ ಮಾಡಿಕೊಂಡಂತಾಗುತ್ತೆ.

Shantha Kumari

Leave a Reply

Your email address will not be published. Required fields are marked *