4 ದಿನಕ್ಕೆ 500 ಕೋಟಿ ಕಲೆಕ್ಷನ್? ರಾಮಾಯಣ ಗೆಲ್ತಾ? ಸೋಲ್ತಾ?

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಸಿನಿಮಾ ಸೃಷ್ಟಿಸಲು ಹೊರಟ ರಾಮಾಯಣ ಈಗ ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಿಸುತ್ತಿದೆ. ಸಾವಿರಾರು ಕೋಟಿ ರೂಪಾಯಿ ಬಂಡವಾಳ, ಬಾಲಿವುಡ್ನ ಸ್ಟಾರ್ ನಟರು, ಯಶ್ ಎಂಟ್ರಿ.. ಇವೆಲ್ಲವೂ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಸಿನಿನಾ ನೋಡಿದ ಪ್ರೇಕ್ಷಕರು ವಾಹ್ಹ್ ಎನ್ನುತ್ತಿದ್ದಾರೆ. ಹಾಗಿದ್ರೆ ಬರೋಬ್ಬರಿ ₹4,000 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣದ ಈ ಸಿನಿಮಾ ಹಾಕಿದ ಹಣವನ್ನು ವಾಪಸ್ ತರುತ್ತಾ? ಅನ್ನೋದ್ದನ್ನ ನೋಡೋಣ.
ಮೊದಲಿಗೆ ಕಲೆಕ್ಷನ್ ವಿಚಾರಕ್ಕೆ ಬರೋಣ. ನವೆಂಬರ್ 5ರಂದು ಬಿಡುಗಡೆಯಾದ ರಾಮಾಯಣ ಸಿನಿಮಾ ಮೊದಲ ದಿನ ಭಾರತದಲ್ಲಿ ಬರೋಬ್ಬರಿ 64.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಎರಡನೇ ದಿನ ಅಂದರೆ ಶುಕ್ರವಾರ 48.05 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಎರಡು ದಿನಗಳಲ್ಲಿ ಭಾರತದ ನೆಟ್ ಕಲೆಕ್ಷನ್ 112.90 ಕೋಟಿ ರೂಪಾಯಿಗೆ ತಲುಪಿದೆ. ಭಾರತದಲ್ಲಿ ಶನಿವಾರ ವೀಕೆಂಡ್ ದೀಪಾವಳಿ ರಜೆ ಇರೋದ್ರಿಂದ 70ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ರೆ. ಭಾನುವಾರದ ಕಲೆಕ್ಷನ್ ಟಿಕೆಟ್ ಬುಕ್ಕಿಂಗ್ ಸೇರಿ ಏನಿಲ್ಲಾ ಆದ್ರೂ 80 ಕೋಟಿ ಮೇಲೆ ಕಲೆಕ್ಷನ್.. ಇನ್ನೂ ವಿಶ್ವಾದ್ಯಂತ ಕಲೆಕ್ಷನ್ ನೋಡಿದರೆ ಮೊದಲ ಎರಡು ದಿನಗಳಲ್ಲಿ ಬರೋಬ್ಬರಿ 221.05 ಕೋಟಿ ರೂಪಾಯಿ ಗಳಿಸಿದ ಸಿನಿಮಾ ಶನಿವಾರ ಭಾನುವಾರ ಸೇರಿ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅಂದ್ರೆ ಜಸ್ಟ್ 4 ದಿನದಲ್ಲಿ ವಿಶ್ವದಾದ್ಯಂತ 500 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಆದರೆ ಇದು ಅಂದಾಜು ಮಾತ್ರ, ಅಂತಿಮ ಕಲೆಕ್ಷನ್ ಅಲ್ಲ.
ಇನ್ನು ಸಿನಿಮಾ ಹೇಗಿದೆ ಎಂಬ ಪ್ರಶ್ನೆಗೆ ಬಂದರೆ, ರಾಮಾಯಣದ ಅದ್ಧೂರಿ ದೃಶ್ಯಗಳು, ವಿಎಫ್ಎಕ್ಸ್, ದೊಡ್ಡ ತಾರಾಗಣ ಮತ್ತು ನಿರ್ಮಾಣದ ಪ್ರಮಾಣ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಆದರೆ ಮೊದಲ ದಿನದ ದೊಡ್ಡ ಓಪನಿಂಗ್ ನಂತರ ಎರಡನೇ ದಿನದ ಕಲೆಕ್ಷನ್ನಲ್ಲಿ ಇಳಿಕೆ ಕಂಡಿರುವುದು ಚಿತ್ರತಂಡಕ್ಕೆ ಸ್ವಲ್ಪ ಆತಂಕ ತಂದಿದೆ. ಶನಿವಾರ ಭಾನುವಾರ ಮೊದಲ ಎರಡು ದಿನಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಸೋಮವಾರ ಮತ್ತು ಮಂಗಳವಾರ ಹಬ್ಬದ ಸಾಲು ಸಾಲು ರಜೆಗಳಿರುವುದರಿಂದ ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಸಿನಿಮಾದ ಕಲೆಕ್ಷನ್ ಸುನಾಮಿ ಇನ್ನಷ್ಟು ಜೋರಾಗಲಿದೆ
ಇನ್ನು ಬಜೆಟ್ ವಿಚಾರಕ್ಕೆ ಬಂದರೆ, ಈ ಎರಡು ಭಾಗಗಳ ರಾಮಾಯಣ ಪ್ರಾಜೆಕ್ಟ್ಗೆ ಸುಮಾರು 4,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂಬ ವರದಿಗಳಿವೆ. ಅಂದರೆ ಮೊದಲ ಭಾಗದ ಕಲೆಕ್ಷನ್ ಮಾತ್ರ ನೋಡಿಕೊಂಡು ಲಾಭ ಅಥವಾ ನಷ್ಟದ ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ. ಭಾರತ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆ, ಡಿಜಿಟಲ್ ಹಕ್ಕುಗಳು, ಸ್ಯಾಟಲೈಟ್ ಮತ್ತು ಇತರೆ ವಾಣಿಜ್ಯ ಒಪ್ಪಂದಗಳೂ ಬಹಳ ಮುಖ್ಯ.
ಇನ್ನೂ ರಾಮಾಯಣ ಪಾರ್ಟ್ನಲ್ಲಿ ಯಶ್ ಮಿಂಚಿದ್ದಾರ.. ಯಶ್ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.ಇದು ಆರಂಭ ಅಷ್ಟೇ ಪಾರ್ಟ್ 2 ಎಲ್ಲಾ ದಾಖಲೆ ಉಡೀಸ್ ಮಾಡುವುದು ಪಕ್ಕಾ.. ಯಾಕಂದ್ರೆ ಈಗ ಆರಂಭ ಅಷ್ಟೇ.. ಅಂತ್ಯದಲ್ಲಿ ಘನಘೋರ ಯುದ್ಧ ನಡೆಯುಲಿದೆ.. ರಾಮ ರಾವಣನ ಮುಖಾಮುಖಿ ಇದ್ದನ್ನ ನೋಡೋಕೆ ಫ್ಯಾನ್ಸ್ ಕಾತುರಿಂದ ಕಾಯುತ್ತಿದ್ದಾರೆ.. ಬಟ್ ಎಲ್ಲರೂ ರಾಮಾಯಣವನ್ನ ನೋಡಿ.. ಇಂತಹ ಸಿನಿಮಾವನ್ನ ನಾವು ನೋಡಬೇಕು.. ಇದ್ದನ್ನ ನೋಡಿಲ್ಲ ಅಂದ್ರೆ ನಿಮ್ಗೆ ಲಾಸ್..
ಒಟ್ಟಿನಲ್ಲಿ ರಾಮಾಯಣಕ್ಕೆ ಅದ್ಧೂರಿ ಆರಂಭ ಸಿಕ್ಕಿದೆ. ಆದರೆ ಹಾಕಿರುವ ಸಾವಿರಾರು ಕೋಟಿ ರೂಪಾಯಿ ಬಂಡವಾಳ ವಾಪಸ್ ಪಡೆಯಬೇಕಾದರೆ ಸಿನಿಮಾ ದೀರ್ಘಕಾಲ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಮುಂದಿನ ದಿನಗಳಲ್ಲಿ ಯಶ್ ಅವರ ರಾವಣನ ಪಾತ್ರ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆ ಕಲೆಕ್ಷನ್ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ನೋಡಿರಿ

