ಭಾರತದೊಳಗೆ ನುಗ್ಗಲು ಯತ್ನಿಸಿದ ಡ್ರೋನ್ ಉರುಳಿಸಿದ ಬಿಎಸ್ಎಫ್ – ಎಲ್ಲಿಗೆ ಸಪ್ಲೈ ಆಗ್ತಿತ್ತು ಡ್ರಗ್ಸ್..!?
ಆರ್ಥಿಕತೆ ಪಾತಾಳಕ್ಕೆ ಕುಸಿದು ಬರ್ಬಾದ್ ಆಗಿದ್ರೂ ಪಾಕಿಸ್ತಾನದ ಕಿತಾಪತಿ ಮಾತ್ರ ಕಡಿಮೆ ಆಗ್ತಿಲ್ಲ. ಈಗ ಭಾರತದೊಳಗೆ ಡ್ರೋನ್ ನುಗ್ಗಿಸಲು ಯತ್ನಿಸಿದ್ದು, ಭಾರತೀಯ ಬಿಎಸ್ಎಫ್ ಯೋಧರು ಹೊಡೆದುರುಳಿಸಿದ್ದಾರೆ.
ಇದನ್ನೂ ಓದಿ : ಮಂಡ್ಯ ಉಸ್ತುವಾರಿ ಸ್ಥಾನದಿಂದ ಆರ್.ಅಶೋಕ್ ಔಟ್ – ಬಿಜೆಪಿಯೊಳಗಿನ ಬೆಂಕಿಯೇ ಕಾರಣನಾ..!?
ಪಾಕಿಸ್ತಾನದ ಪ್ರದೇಶದಿಂದ ಭಾರತದ ಗಡಿ ಪ್ರವೇಶಕ್ಕೆ ಮುಂದಾಗಿದ್ದ ಡ್ರೋನ್ ಅನ್ನು ಬಿಎಸ್ಎಫ್ ಯೋಧರು ಹೊಡೆದುರುಳಿಸಿದ್ದಾರೆ. ಪರಿಶೀಲನೆ ವೇಳೆ ಡ್ರೋನ್ನಲ್ಲಿ ಅಮಲಿನ ವಸ್ತುಗಳನ್ನ ಸರಬರಾಜು ಮಾಡಲಾಗ್ತಿತ್ತು ಅನ್ನೋದು ಗೊತ್ತಾಗಿದೆ.
ಡ್ರೋನ್ನಲ್ಲಿದ್ದ 3 ಕೆಜಿ ಹೆರಾಯಿನ್, ಒಂದು ಚೀನಾ ನಿರ್ಮಿತ ಪಿಸ್ತೂಲ್, ಕಾರ್ಟ್ರಿಡ್ಜ್ಗಳು ಮತ್ತು ಮ್ಯಾಗಜೀನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ಪಡೆ ತಿಳಿಸಿದೆ. ಪಂಜಾಬ್ನ ಸೆಕ್ಟರ್ ಫಿರೋಜ್ಪುರದ BOP MW ಉತ್ತರದ AOR ನಲ್ಲಿ ಪಾಕಿಸ್ತಾನದೊಂದಿಗಿನ ಅಂತರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಅನ್ನು ನುಗ್ಗಿಸಲು ಯತ್ನಿಸಲಾಗಿದೆ. ಈ ವೇಳೆ ಬಿಎಸ್ಎಫ್ ಪಡೆ ಗುಂಡು ಹಾರಿಸಿ ಹೊಡೆದುರುಳಿಸಿದೆ.