RCB ರಿಲೀಸ್ ಲಿಸ್ಟ್ ಫೈನಲ್ – ಜೋಶ್ ಆಡಲ್ಲ.. ಜಿತೇಶ್, ಶೆಫರ್ಡ್ ಬೇಕಾ?
HAT-TRICK ಟ್ರೋಫಿಗೆ ಹೇಗಿದೆ ಟೀಂ?

2027ರ ಐಪಿಎಲ್ & ಡಬ್ಲ್ಯೂಪಿಎಲ್ ಫೀವರ್ ಜಾಸ್ತಿಯಾಗ್ತಿದೆ. ಆಲ್ರೆಡಿ ವುಮೆನ್ಸ್ ಪ್ರೀಮಿಯರ್ ಲೀಗ್ನ ಮಿನಿ ಆಕ್ಷನ್ ಕೂಡ ಕಂಪ್ಲೀಟ್ ಆಗಿದ್ದು ಪ್ಲೇಯರ್ಗಳೆಲ್ಲಾ ಫೈನಲ್ ಆಗಿದ್ದಾರೆ. ಈಗ ಐಪಿಎಲ್ನ ಮಿನಿ ಆಕ್ಷನ್ನಲ್ಲಿ ಯಾವ್ಯಾವ ತಂಡಗಳಲ್ಲಿ ಮೇಜರ್ ಸರ್ಜರಿ ಆಗಬಹುದು ಅನ್ನೋ ಕ್ಯೂರಿಯಾಸಿಟಿ ಇದೆ. ಡಿಸೆಂಬರ್ ಮಿಡಲ್ ವೀಕ್ನಲ್ಲಿ ಗೋವಾದಲ್ಲಿ ಮಿನಿ ಹರಾಜು ನಡೆಯಲಿದ್ದು ಬಿಗ್ ಪ್ಲೇಯರ್ಸ್ ಕೂಡ ಆಕ್ಷನ್ಗೆ ಬರ್ತಾರೆ. ಆದ್ರೆ ಈ ವಿಚಾರದಲ್ಲಿ ಆರ್‌ಸಿಬಿ ಅಂತೂ ಕ್ಲಿಯರ್ ಆಗಿದೆ. ಯಾರನ್ನ ರಿಟೇನ್ ಮಾಡಿಕೊಳ್ಬೇಕು ಯಾರನ್ನ ರಿಲೀಸ್ ಮಾಡ್ಬೇಕು ಅನ್ನೋ ವಿಚಾರದಲ್ಲಿ ಕ್ಲಾರಿಟಿ ಇದೆ.
ಇದನ್ನೂ ಓದಿ : ಮೊದಲು ಆಟ.. ಆಮೇಲೆ ಪಟ್ಟ – ವೈಭವ್ ವಿರುದ್ಧ ಸಚಿನ್ ಸಿಡಿಮಿಡಿ
ಸತತ 17 ವರ್ಷಗಳ ಟ್ರೋಫಿಗಾಗಿ ತಪಸ್ಸು ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್.. ಌಂಡ್ ಹ್ಯಾಟ್ರಿಕ್ ಟ್ರೋಫಿ ಗೆಲುವಿನ ಕ್ಯೂನಲ್ಲಿದ್ದಾರೆ. ರಜತ್ ಪಾಟಿದಾರ್ ಕ್ಯಾಪ್ಟನ್ಸಿಯಲ್ಲಿ 20ನೇ ಆವೃತ್ತಿಯಲ್ಲೂ ಬೆಂಗಳೂರು ತಂಡವೇ ಕಪ್ ಗೆಲ್ಲುವಂಥ ಫೇವರೆಟ್ ಟೀಂ ಕೂಡ. ಯಾಕಂದ್ರೆ ಮುಂದಿನ ಆವೃತ್ತಿಗೂ ತಂಡದಲ್ಲಿ ಅಂಥಾ ದೊಡ್ಡ ಬದಲಾವಣೆ ಏನೂ ಆಗಲ್ಲ. ಮುಂದಿನ ತಿಂಗಳು ನಡೆಯಲಿರುವ ಮೆಗಾ ಹರಾಜಿಗೆ ಕೆಲವೇ ಕೆಲ ಆಟಗಾರರನ್ನ ಮಾತ್ರ ರಿಲೀಸ್ ಮಾಡಲು ಫ್ರಾಂಚೈಸಿ ಮುಂದಾಗಿದೆ. ನವೆಂಬರ್ 17ರ ಒಳಗೆ ಎಲ್ಲಾ ತಂಡಗಳು ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಅಧಿಕೃತ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಆರ್‌ಸಿಬಿ ಈಗಾಗಲೇ ಲಿಸ್ಟ್ ರೆಡಿ ಮಾಡಿದೆ.
ಪರ್ಸ್ ಬ್ಯಾಲೆನ್ಸ್.. ವಿದೇಶಿ ಕಾಂಬಿನೇಷನ್.. ಹೇಗಿದೆ ಲೆಕ್ಕಾಚಾರ?
ಆರ್‌ಸಿಬಿ ಹಾಲಿ ಚಾಂಪಿಯನ್ ಆಗಿದ್ದು ಕಳೆದ ಎರಡೂ ಆವೃತ್ತಿಗಳಲ್ಲಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ಆಟಗಾರರಿಗೆ ಫಸ್ಟ್ ಪ್ರಿಯಾರಿಟಿ ಅಂತೂ ಇದ್ದೇ ಇರುತ್ತೆ. ಆದ್ರೆ ವಿದೇಶಿ ಆಟಗಾರರ ಕಾಂಬಿನೇಷನ್, ತಂಡದಲ್ಲಿನ ಡೆಪ್ತ್ ಮತ್ತು ಪರ್ಸ್ ಆಪ್ಟಿಮೈಸೇಶನ್‌ನಂತಹ ವಿಚಾರಗಳಿಂದ ಆಡಳಿತ ಮಂಡಳಿ ಕೆಲವು ಡೇರಿಂಗ್ ಡಿಸಿಷನ್ಸ್ ತಗೋಬೇಕಾಗುತ್ತೆ. ಹೀಗಾಗಿ ನವೆಂಬರ್ 17ರ ಒಳಗೆ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೆನ್ಷನ್ ಪಟ್ಟಿಯನ್ನು ಸಲ್ಲಿಸಬೇಕಾಗಿದ್ದು, ಆರ್‌ಸಿಬಿ ತನ್ನ ಹಾಲಿ 25 ಆಟಗಾರರ ಬಲಿಷ್ಠ ಪಡೆಯಲ್ಲಿ ಶೇಕಡಾ 90 ರಷ್ಟು ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ಮೂರರಿಂದ ನಾಲ್ವರು ಪ್ಲೇಯರ್ಸ್ನ ಮಾತ್ರ ರಿಲೀಸ್ ಮಾಡಬಹುದು. 2025-27ರ ನಡುವಿನ ಮೂರು ವರ್ಷಗಳ ಸ್ಕ್ವಾಡ್ ಸೈಕಲ್‌ನ ಕೊನೆಯ ವರ್ಷ ಇದಾಗಿರೋದ್ರಿಂದ ಆರ್‌ಸಿಬಿ ದೊಡ್ಡ ಮಟ್ಟದ ಬದಲಾವಣೆಗಳನ್ನ ಮಾಡಲ್ಲ. ಕ್ಯಾಪ್ಟನ್ ರಜತ್ ಪಾಟೀದಾರ್, ರನ್ ಮಷಿನ್ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಮತ್ತು ಬೌಲಿಂಗ್ ಬೆನ್ನೆಲುಬಾದ ಜೋಶ್ ಹೇಝಲ್ವುಡ್ ಹಾಗೂ ಭುವನೇಶ್ವರ್ ಕುಮಾರ್ ಸೇರಿದಂತೆ ಮೇನ್ ಕೋರ್ ಟೀಂ ಮುಂದಿನ ಆವೃತ್ತಿಗೂ ಕಂಟಿನ್ಯೂ ಆಗಲಿದೆ. ಆದ್ರೆ ಮಿನಿ ಹರಾಜಿಗಾಗಿ ತಮ್ಮ ಪರ್ಸ್ ಮೊತ್ತವನ್ನು ಹೆಚ್ಚಿಸಿಕೊಳ್ಳಲು ಕೆಲವರನ್ನ ಬಿಡುಗಡೆ ಮಾಡಲೇಬೇಕಾಗುತ್ತೆ.
ಯಾರೆಲ್ಲಾ ರಿಲೀಸ್?
5.20 ಕೋಟಿ ರೂ.ಗೆ ಖರೀದಿ ಮಾಡಿದ್ದ ಮಂಗೇಶ್ ಯಾದವ್
5 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ವೇಗಿ ಯಶ್ ದಯಾಳ್
1.60 ಕೋಟಿಗೆ ಖರೀದಿಸಿದ್ದ ಶ್ರೀಲಂಕಾದ ಆಟಗಾರ ನುವಾನ್ ತುಷಾರ
11.5 ಕೋಟಿ ಬೆಲೆಯ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕಳಪೆ ಪ್ರದರ್ಶನ
ಬ್ಯಾಟಿಂಗ್ & ಬೌಲಿಂಗ್ ಎರಡರಲ್ಲೂ ನಿರಾಸೆ ಮೂಡಿಸಿದ ಶೆಫರ್ಡ್
2026ರ ಆವೃತ್ತಿಯಲ್ಲಿ 12 ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದ ಸುಯಾಶ್
2027ರ ವಿಶ್ವಕಪ್ ಹಿನ್ನೆಲೆ ಐಪಿಎಲ್ ನಿಂದ ಹೇಜಲ್ ವುಡ್ ಹಿಂದಕ್ಕೆ?
ಹೀಗೆ ಕೆಲವ್ರನ್ನ ಪರ್ಸ್ ಬ್ಯಾಲೆನ್ಸ್ ಜಾಸ್ತಿ ಮಾಡಿಕೊಳ್ಳೋಕೆ ರಿಲೀಸ್ ಮಾಡಿದ್ರೆ ಕೆಲವ್ರನ್ನ ಕಳಪೆ ಪ್ರದರ್ಶನದ ಕಾರಣಕ್ಕೆ ರಿಲೀಸ್ ಮಾಡೋ ಸಾಧ್ಯತೆಗಳಿದೆ. ಇನ್ನು ಕಳೆದ ಆವೃತ್ತಿಯಲ್ಲಿ ಜಿತೇಶ್ ಶರ್ಮಾ, ರೊಮ್ಯಾರಿಯೋ ಶೆಫರ್ಡ್, ಸುಯಾಶ್ ಶರ್ಮಾ ಕಡೆಯಿಂದ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಬಂದಿಲ್ಲದೇ ಇರೋದ್ರಿಂದ ಈ ಮೂವರು ಬಿಗ್ ನೇಮ್ಗಳ ವಿಚಾರದಲ್ಲಿ ಟಫ್ ಡಿಸಿಷನ್ ತಗೊಂಡ್ರೂ ತಗೊಳ್ಬೋದು. ಯಾಕಂದ್ರೆ 2025ರ ಐಪಿಎಲ್ ಆದ್ಮೇಲೆ ಲಿಯಾಮ್ ಲಿವಿಂಗ್ಸ್ಟೋನ್ ಕೂಡ ಚೆನ್ನಾಗಿ ಆಡಿಲ್ಲ ಅಂತಾ ಕೈಬಿಟ್ಟಿದ್ರು. ಅದೂ ಅಲ್ದೇ ಈ ಸಲ ಬೆಂಗಳೂರು ತಂಡ ಬ್ಯಾಟಿಂಗ್, ಬೌಲಿಂಗ್ನಲ್ಲಿ ಸೂಪರ್ ಸ್ಟ್ರಾಂಗ್ ಆಗಿದ್ರೂ ಕೂಡ ಸ್ಪೆಷಲಿಸ್ಟ್ ಸ್ಪಿನ್ನರ್ ಕೊರತೆ ಕಾಡ್ತಿದೆ. ಅದೊಂದು ಸ್ಲಾಟ್ ಫಿಲ್ ಮಾಡಿದ್ರೆ ಇನ್ನೂ ಸ್ಟ್ರಾಂಗ್ ಆಗಲಿದೆ. ಉಳಿದಂತೆ ಕಳೆದ ಬಾರಿ ಆಡಿದ್ದ ಬಹುತೇಕರು ಸೇಫ್ ಝೋನ್ನಲ್ಲಿದ್ದಾರೆ. ಹೀಗಾಗಿ ತಂಡದಲ್ಲಿ ಅಂತಾ ದೊಡ್ಡ ಬದಲಾವಣೆಗಳಂತೂ ಇರಲ್ಲ.

ನೋಡಿರಿ

