ODIಗೂ ಅಭಿ & ವೈಭವ್ ಎಂಟ್ರಿ? – ಯುವಿ ಶಿಷ್ಯನಿಗೆ T-20I ಕ್ಯಾಪ್ಟನ್ಸಿ?
RO-KO ನಿವೃತ್ತಿ ಬಳಿಕ ಯಾರಿಗೆ ಚಾನ್ಸ್?

ODIಗೂ ಅಭಿ & ವೈಭವ್ ಎಂಟ್ರಿ? – ಯುವಿ ಶಿಷ್ಯನಿಗೆ T-20I ಕ್ಯಾಪ್ಟನ್ಸಿ?RO-KO ನಿವೃತ್ತಿ ಬಳಿಕ ಯಾರಿಗೆ ಚಾನ್ಸ್?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿ ಇಂಟ್ರೆಸ್ಟಿಂಗ್ ಆಗಿದೆ. 3ನೇ ಪಂದ್ಯಕ್ಕೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಒಂದ್ಕಡೆ ಸಿರೀಸ್ ರೋಚಕವಾಗ್ತಿದ್ರೆ ಮತ್ತೊಂದೆಡೆ ಯುವರಾಜ್ ಸಿಂಗ್ ನೀಡಿದ್ದ ಸ್ಟೇಟ್​ಮೆಂಟ್ ಹಲ್​ಚಲ್ ಎಬ್ಬಿಸಿದೆ. ಟಿ-20ಐ ತಂಡದ ಸ್ಫೋಟಕ ಹಿಟ್ಟರ್​ಗಳಿಗೆ ಏಕದಿನದಲ್ಲೂ ಅವಕಾಶ ಕೊಡ್ಬೇಕು.. ಇಲ್ದಿದ್ರೆ ಮೋಸ ಮಾಡಿದಂತಾಗುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ : ₹40 ಕೋಟಿ ಕೊಟ್ರಷ್ಟೇ ಆಡ್ತೀವಿ – IPL ಫ್ರಾಂಚೈಸಿಗಳಿಗೆ ಸ್ಟಾರ್ಸ್ ಬೆದರಿಕೆ

ಮೊದ್ಲೆಲ್ಲಾ ಟೀಂ ಇಂಡಿಯಾ ಅಂದ್ರೆ ಆಲ್​ಫಾರ್ಮೆಟ್ ಕ್ಯಾಪ್ಟನ್ಸ್ ಇರ್ತಿದ್ರು. ಆದ್ರೆ ಕಳೆದ 2 ವರ್ಷಗಳಿಂದ ಟಿ-20ಐ ತಂಡಕ್ಕೆ ಸಪರೇಟ್ ನಾಯಕ, ಏಕದಿನ ಮತ್ತು ಟೆಸ್ಟ್​ಗೆ ಪ್ರತ್ಯೇಕ ಕ್ಯಾಪ್ಟನ್ ಇದ್ದಾರೆ. ಪ್ರಸ್ತುತ ಶ್ರೇಯಸ್ ಅಯ್ಯರ್ ಟಿ-20ಐ ತಂಡ ಲೀಡ್ ಮಾಡ್ತಿದ್ರೆ ಶುಭ್​ಮನ್ ಗಿಲ್ ಏಕದಿನ ಮತ್ತು ಟೆಸ್ಟ್ ತಂಡಗಳ ಸಾರಥ್ಯ ಹೊತ್ತಿದ್ದಾರೆ. ಌಂಡ್ ಒನ್ ಮೋರ್ ಥಿಂಗ್ ಮೂರೂ ಮಾದರಿಯಲ್ಲಿ ಆಡ್ತಾ ಇರುವಂಥ ಆಟಗಾರರೂ ಕೂಡ ತೀರಾ ಕಡಿಮೆ. ಕೆಲವ್ರು ಟಿ-20ಐಗೆ ಮಾತ್ರ ಸೆಲೆಕ್ಟ್ ಆಗ್ತಿದ್ರೆ ಇನ್ನೂ ಕೆಲವ್ರು ಏಕದಿನಕ್ಕೆ ಮತ್ತೆ ಕೆಲವ್ರು ಟೆಸ್ಟ್​ಗೆ ಮಾತ್ರ ಸೀಮಿತವಾಗಿದ್ದಾರೆ. ಇದೇ ವಿಚಾರವಾಗಿ ಯುವರಾಜ್ ಸಿಂಗ್ ಧ್ವನಿ ಎತ್ತಿದ್ದಾರೆ. ಅದ್ರಲ್ಲೂ ಕೂಡ ಟಿ-20ಐ ತಂಡದ ಮೋಸ್ಟ್ ಡೇಂಜರಸ್ ಪ್ಲೇಯರ್​ಗಳಾಗಿರೋ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಹಾಗೇ ಇಶಾನ್ ಕಿಶನ್​ಗೆ ಏಕದಿನ ಮಾದರಿಯಲ್ಲೂ ಅವಕಾಶ ಕೊಡ್ಬೇಕು ಅಂತಿದ್ದಾರೆ. ಌಕ್ಚುಲಿ ಇಶಾನ್ ಕಿಶನ್ ಸೆಲೆಕ್ಟ್ ಆಗ್ತಿದ್ರೂ ಕೂಡ ಕೆಎಲ್ ರಾಹುಲ್ ಫಸ್ಟ್ ಪ್ರಿಯಾರಿಟಿ ವಿಕೆಟ್ ಕೀಪರ್ ಆಗಿರೋದ್ರಿಂದ ಬೆಂಚ್ ಕಾಯ್ಬೇಕಿದೆ. ಬಟ್ ಕಿಶನ್​ಗೂ ಪ್ಲೇಯಿಂಗ್ 11ನಲ್ಲಿ ಅವಕಾಶ ಕೊಡಿ ಅಂತಾ ಯುವಿ ಬ್ಯಾಟ್ ಬೀಸಿದ್ದಾರೆ. 2007 ರ ಟಿ20 ವಿಶ್ವಕಪ್‌ನಲ್ಲಿ, ಇಂಗ್ಲೆಂಡ್ ವಿರುದ್ಧ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನ ಬಾರಿಸಿದ್ದ ಯುವಿ ಇದೇ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧಶತಕದ ದಾಖಲೆ ಬರೆದಿದ್ರು. ಇದು ಟಿ-20ಐ ಇಂದಿಗೂ ಸಾರ್ವಕಾಲಿಕ ದಾಖಲೆಯಾಗಿದೆ. ಈಗ ತಮ್ಮ ಶಿಷ್ಯ ಅಭಿಷೇಕ್ ಶರ್ಮಾ ಹಾಗೇ ವೈಭವ್ ವಿಚಾರವಾಗಿಯೂ ಸಪೋರ್ಟ್​ಗೆ ನಿಂತಿದ್ದಾರೆ.

ಅಭಿ, ವೈಭವ್ ಏಕದಿನ ತಂಡಕ್ಕೆ ಆಯ್ಕೆಯಾಗದಿದ್ದರೆ ಮೋಸ!

ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಆಟಗಾರರಿಗೆ ಏಕದಿನ ತಂಡದಲ್ಲಿ ಅವಕಾಶ ಸಿಕ್ಕಿಲ್ಲ ಅಂದ್ರೆ ಅವ್ರಲ್ಲಿರೋ ಅದ್ಭುತ ಪ್ರತಿಭೆಗೆ ನ್ಯಾಯ ಸಿಗೋದಿಲ್ಲ ಅಂತಾ ಯುವರಾಜ್ ಸಿಂಗ್ ಹೇಳಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಏಕದಿನ ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಅವ್ರನ್ನ ನೋಡಲು ನಾನು ಇಷ್ಟಪಡುತ್ತೇನೆ. ಮತ್ತು 50 ಓವರ್‌ಗಳ ಕ್ರಿಕೆಟ್‌ನಲ್ಲಿ ಇಶಾನ್ ಕಿಶನ್, ಅಭಿಷೇಕ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಆಟಗಾರರನ್ನ ಆಯ್ಕೆ ಮಾಡದಿದ್ದರೆ, ನಾವು ಅವರ ಪ್ರತಿಭೆಗೆ ನ್ಯಾಯ ಒದಗಿಸುತ್ತಿಲ್ಲ ಎನ್ನುವಂತಾಗುತ್ತದೆ. ಹಾಗೇ ನಮ್ಮಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ ಅನ್ನೋದು ನನಗೆ ಗೊತ್ತಿದೆ. ಹಾಗೇ ಹೊಸಬರಿಗೆ ಅವಕಾಶ ಕೊಡುವುದು ಕಷ್ಟವೇ ಎಂದಿದ್ದಾರೆ. ಬಟ್ ಅವ್ರ ಉದ್ದೇಶ ಏನಂದ್ರೆ ಪ್ರತಿಭೆ ಇದ್ದಾಗ ಅವಕಾಶಗಳು ಸಿಗ್ಬೇಕು.. ಹಾಗೇ ಎಲ್ಲಾ ಮಾದರಿಯಲ್ಲೂ ಆಡಿದಾಗಷ್ಟೇ ಒಬ್ಬ ಕಂಪ್ಲೀಟ್ ಕ್ರಿಕೆಟರ್ ಕೂಡ ಆಗೋಕೆ ಸಾಧ್ಯ ಅನ್ನೋದು ಅವ್ರ ವಾದ. ಹಾಗೇ ಅಭಿಷೇಕ್ ಶರ್ಮಾಗೆ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಆಗೋ ಎಲ್ಲಾ ಕ್ವಾಲಿಟಿಸ್ ಇದೆ ಅನ್ನೋ ಮೂಲಕ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಆದ್ರೆ ಏಕದಿನ ತಂಡಕ್ಕೆ ಅಭಿ ಮತ್ತು ವೈಭವ್ ಸೆಲೆಕ್ಟ್ ಆಗೋದು ಅಷ್ಟು ಈಸಿ ಇಲ್ಲ.

ಅಭಿ & ವೈಭವ್ ಗೆ ಏಕದಿನ ಚಾನ್ಸ್?

ಪ್ರಸ್ತುತ ಭಾರತ ಏಕದಿನ ತಂಡದಲ್ಲಿ ಬ್ಯಾಟಿಂಗ್ ಸ್ಲಾಟ್ ಎಲ್ಲವೂ ಫಿಲ್

ಗಿಲ್, ರೋಹಿತ್, ಕೊಹ್ಲಿ, ಶ್ರೇಯಸ್, ಕೆಎಲ್ ರಾಹುಲ್ ಸ್ಥಾನ ಫಿಕ್ಸ್

ಬ್ಯಾಕಪ್ ವಿಕೆಟ್ ಕೀಪರ್ ಆಗಿ ಬೆಂಚ್ ಕಾಯುತ್ತಿರುವ ಇಶಾನ್ ಕಿಶನ್

ಅಭಿಷೇಕ್ & ವೈಭವ್ ಸೆಲೆಕ್ಟ್ ಮಾಡಿದ್ರೂ ಯಾವುದೇ ಸ್ಥಾನ ಖಾಲಿ ಇಲ್ಲ

ರೋಹಿತ್ & ಕೊಹ್ಲಿ ನಿವೃತ್ತಿ ಬಳಿಕ ಅಭಿಷೇಕ್ ಗೆ ಅವಕಾಶ ನೀಡಬಹುದು

ಜೈಸ್ವಾಲ್, ರುತುರಾಜ್, ಇಶಾನ್ ಕಿಶನ್, ತಿಲಕ್ ವರ್ಮಾ ರೇಸ್

ಟಿ-20ಐನಲ್ಲೇ ಬೆಂಚ್ ಕಾಯುತ್ತಿರೋ ವೈಭವ್ ಗೆ ಏಕದಿನದಲ್ಲಿ ಸ್ಥಾನ ಕಷ್ಟ

ಆದ್ರೆ ಕ್ರಿಕೆಟ್ ನಲ್ಲಿ 3 ಮಾದರಿಯಲ್ಲಿ ಆಡಿದಾಗ ಮಾತ್ರ ಯಶಸ್ವೀ ಪ್ಲೇಯರ್

ಒಂದು ಫಾರ್ಮೆಟ್ ಗೆ ಫಿಕ್ಸ್ ಆದ್ರೆ ಭಾರತ ತಂಡದಲ್ಲಿ ಸುದೀರ್ಘ ಜರ್ನಿ ಕಷ್ಟ

ಸೂರ್ಯಕುಮಾರ್ ಯಾದವ್ ಟಿ-20ಐಗಷ್ಟೇ ಸೀಮಿತವಾಗಿದ್ದಕ್ಕೇ ಡ್ರಾಪ್

ಅಭಿಷೇಕ್ & ವೈಭವ್ ಟಿ-20ಐಗೇ ಸೀಮಿತವಾದ್ರೆ ಹೆಚ್ಚಿನ ವರ್ಷ ಆಡಲ್ಲ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ಸಸ್ ಆಗ್ಬೇಕಂದ್ರೆ ಎಲ್ಲಾ ಮಾದರಿ ಆಡಬೇಕು

ಹಾಗಂತ ಅಭಿ ಮತ್ತು ವೈಭವ್ ಟಿ-20ಐಗಷ್ಟೇ ಸೀಮಿತ ಆಗ್ತಾರೆ ಅಂತಾನೂ ಹೇಳೋಕಾಗಲ್ಲ. ಯಾಕಂದ್ರೆ ನವೆಂಬರ್ 19ರಿಂದ 29ರವರೆಗೆ ಕತಾರ್‌ನ ದೋಹಾದಲ್ಲಿ ನಡೆಯಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೆನ್ಸ್ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಗೆ ಭಾರತ ಎ ತಂಡದಲ್ಲಿ ಅಭಿ ಮತ್ತು ವೈಭವ್ ಇಬ್ರೂ ಇದ್ದಾರೆ. ಈ ಟೂರ್ನಿ 50 ಓವರ್​ಗಳ ಮಾದರಿಯಲ್ಲೇ ನಡೆಯಲಿದೆ. ಹೀಗಾಗಿ ಇಲ್ಲಿ ಬೆಸ್ಟ್ ಪರ್ಫಾಮೆನ್ಸ್ ಬಂದ್ರೆ ಮುಂದಿನ ದಿನಗಳಲ್ಲಿ ಅವ್ರೂ ಕೂಡ ಅವಕಾಶದ ರೇಸ್​ನಲ್ಲಿ ಇರ್ತಾರೆ. ಒಂದ್ಕಡೆ ಅವಕಾಶ ಸಿಗ್ಬೇಕು ಅನ್ನೋದಕ್ಕೆ ಒಂದಷ್ಟು ರೀಸನ್ಸ್ ಇದ್ರೆ ಅವಕಾಶ ಸಿಗದೇ ಇರೋದಕ್ಕೂ ಕಾರಣಗಳಿವೆ. ಟಿ-20ಐ, ಏಕದಿನ, ಟೆಸ್ಟ್ ಅಂತಾ ಬಂದಾಗ ಪ್ರತೀ ಮಾದರಿಗೂ ತನ್ನದೇ ಆದ ಮಹತ್ವ ಇದೆ. ಟಿ20ಐನಲ್ಲಿ ಹೊಡಿಬಡಿ ಮೋಡ್, ಏಕದಿನದಲ್ಲಿ ಸಿಚುಯೇಷನ್ ಗೆ ತಕ್ಕಂತೆ, ಟೆಸ್ಟ್ ನಲ್ಲಿ ತಾಳ್ಮೆಯೇ ಅಸ್ತ್ರ ಹೀಗೆ ಒಬ್ಬ ಆಟಗಾರನನ್ನ ಎಲ್ಲಾ ಌಂಗಲ್​ನಲ್ಲೂ ಪರೀಕ್ಷೆ ಮಾಡೋಕೆ ಸಾಧ್ಯ. ಸಚಿನ್, ದ್ರಾವಿಡ್, ರೋಹಿತ್, ಧೋನಿ, ಕೊಹ್ಲಿ, ಬುಮ್ರಾ ಇವ್ರೆಲ್ಲಾ ಎಲ್ಲಾ ಮಾದರಿಗಳಲ್ಲೂ ಆಡಿದ್ದಕ್ಕೇ ಲೆಜೆಂಡರ್ಸ್ ಆಗಿದ್ದು. ಭಾರತ ಅಷ್ಟೇ ವಿದೇಶಿ ತಂಡಗಳ ದಿಗ್ಗಜರನ್ನ ನೋಡಿದ್ರೂ ಅವ್ರೆಲ್ಲಾ ಆಲ್ ಫಾರ್ಮೆಟ್ ಪ್ಲೇಯರ್​ಗಳಾಗಿಯೇ ಇತಿಹಾಸ ಬರೆದಿದ್ದು. ಆದ್ರೆ ಈಗಿನ ದಿನಗಳಲ್ಲಿ ಇಂಥಾ ಚಾನ್ಸ್ ಎಲ್ರಿಗೂ ಸಿಗಲ್ಲ ಅನ್ನೋದನ್ನೂ ಒಪ್ಪಿಕೊಳ್ಳಬೇಕಾಗುತ್ತೆ.

Shantha Kumari

Leave a Reply

Your email address will not be published. Required fields are marked *