ಭುವಿ, ರಾಣಾ ಔಟ್.. ಬುಮ್ರಾ ಫಿಕ್ಸ್ –  ವಿಶ್ವಕಪ್ ​ಗಾಗಿ 5 ಬೌಲರ್ಸ್ ಫೈನಲ್?
Bowling Puzzle ಬಗೆ ಹರಿಯಿತಾ?

ಭುವಿ, ರಾಣಾ ಔಟ್.. ಬುಮ್ರಾ ಫಿಕ್ಸ್ –  ವಿಶ್ವಕಪ್ ​ಗಾಗಿ 5 ಬೌಲರ್ಸ್ ಫೈನಲ್?Bowling Puzzle ಬಗೆ ಹರಿಯಿತಾ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಸದ್ಯ ಎರಡು ಪಂದ್ಯಗಳು ಮುಗಿದಿವೆ. ಇನ್ನೂ ಮೂರು ಪಂದ್ಯಗಳು ಬಾಕಿ ಇದ್ದು ಉಳಿದ ಪಂದ್ಯಗಳಲ್ಲಿ ಏನ್ ಬೇಕಾದ್ರೂ ಆಗ್ಬೋದು. ಆದ್ರೆ 2027ರ ಏಕದಿನ ವಿಶ್ವಕಪ್​ ಹಿನ್ನೆಲೆಯಲ್ಲಿ ಈ ಸರಣಿಯ ಗೆಲುವು ಭಾರತಕ್ಕೆ ತುಂಬಾನೇ ಮುಖ್ಯವಾಗಲಿದೆ. ಅದ್ರಲ್ಲೂ ಫಾಸ್ಟ್ ಬೌಲಿಂಗ್ ಪ್ರಶ್ನೆಗಳಿಗೆ ಉತ್ತರ ಸಿಗ್ಬೇಕಿದೆ. ಈ ಬಗ್ಗೆ ಅಜಿಂಕ್ಯ ರಹಾನೆ ಅಚ್ಚರಿಯ ಹೆಸರುಗಳನ್ನ ಫೈನಲ್ ಮಾಡಿದ್ದಾರೆ.

ಇದನ್ನೂ ಓದಿ : ರೋಹಿತ್ ZERO.. ಕೊಹ್ಲಿ HERO – ಮಳೆಯಲ್ಲೂ ಬೆವರಿಳಿಸಿ ಗೆದ್ದ ಕಿಂಗ್

2027 ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಅಕ್ಟೋಬರ್ 2 ರಿಂದ ನವೆಂಬರ್ 21 ರವರೆಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದ 12 ಸ್ಥಳಗಳಲ್ಲಿ ನಡೆಯಲಿದೆ. ಈ ಟೂರ್ನಮೆಂಟ್​ಗೆ ಭಾರತ ಆಲ್ರೆಡಿ ಟೀಂ ಫೈನಲ್ ಮಾಡ್ತಿದ್ದು ಬ್ಯಾಟಿಂಗ್​ನಲ್ಲಿ ಯಾವುದೇ ಡೌಟ್ಸ್ ಇಲ್ಲ. ಆದ್ರೆ ಬೌಲಿಂಗ್​ನಲ್ಲಿ ಯಾರ್ಯಾರಿಗೆ ಚಾನ್ಸ್ ಕೊಡ್ಬೇಕು ಅನ್ನೋದ್ರ ಬಗ್ಗೆ ಕನ್ಫ್ಯೂಷನ್ಸ್ ಇದೆ. ಭಾರತಕ್ಕೆ ಈ ಪಝಲ್​ನ ಸಾಲ್ವ್ ಮಾಡೋಕೆ ಈ ಸರಣಿಯಲ್ಲಿ ಒಂದು ಐಡಿಯಾ ಅಂತೂ ಪಕ್ಕಾ ಸಿಗಲಿದೆ. ಹಾಗೇ ಈ ವಿಚಾರವಾಗಿ ಅಜಿಂಕ್ಯ ರಹಾನೆ ತಮ್ಮದೇ ಶೈಲಿಯಲ್ಲಿ ಟೀಂ ಪ್ರೆಡಿಕ್ಟ್ ಮಾಡಿದ್ದಾರೆ.

ಭುವಿ & ರಾಣಾ ಔಟ್.. ಐವರು ಬೌಲರ್ಸ್ ಹೆಸರಿಸಿದ ರಹಾನೆ!

ಎಂಎಸ್ ಧೋನಿ ನಾಯಕತ್ವದಲ್ಲಿ 2015 ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಆಡಿದ್ದ ಅಜಿಂಕ್ಯ ರಹಾನೆ 2027ರ ಏಕದಿನ ವವಿಶ್ವಕಪ್​ಗೆ ಐವರು ವೇಗದ ಬೌಲರ್‌ಗಳ ಪಟ್ಟಿಯನ್ನ ಹೇಳಿದ್ದಾರೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣರಂಥ ಬೌಲರ್​ಗಳಿಗೆ ಚಾನ್ಸ್ ನೀಡಿದ್ರೆ ಭುವನೇಶ್ವರ್ ಕುಮಾರ್ ಮತ್ತು ಹರ್ಷಿತ್ ರಾಣಾ ಅವರನ್ನ ಹೊರಗಿಟ್ಟಿದ್ದಾರೆ. 2024ರ ನವೆಂಬರ್ ನಲ್ಲಿ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ  ರಾಣಾ ಮೂರು ಸ್ವರೂಪಗಳಲ್ಲಿ ಆಡಿದ್ದಾರೆ. ಅದ್ರಲ್ಲೂ ಮುಖ್ಯ ಕೋಚ್ ಗೌತಮ್ ಗಂಭೀರ್ ಶಿಷ್ಯ ಅಂತಾನೇ ಗುರುತಿಸಿಕೊಂಡಿದ್ದಾರೆ. ಹೀಗಿದ್ರೂ ರಹಾನೆ ಆಯ್ಕೆಯಲ್ಲಿ ರಾಣಾಗೆ ಚಾನ್ಸ್ ಕೊಟ್ಟಿಲ್ಲ. ಹಾಗೇ ಹಿರಿಯ ವೇಗಿ ಭುವನೇಶ್ವರ್ ಅವರನ್ನು ಸಹ ಕೈಬಿಟ್ಟಿದ್ದಾರೆ. ಅಷ್ಟೇ ಅಲ್ಲ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಮೊಹಮ್ಮದ್ ಶಮಿ ಅವರನ್ನು ರಹಾನೆ ಪಿಕ್ ಮಾಡಿಲ್ಲ. 2023 ರ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಶಮಿ, ಕೊನೆಯ ಬಾರಿಗೆ 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೆನ್ ಇನ್ ಬ್ಲೂ ಪರ ಆಡಿದ್ದರು. ಅಂದಿನಿಂದ ಭಾರತದ ಪರ ಪಂದ್ಯಗಳಿಗೆ ಸೆಲೆಕ್ಟ್ ಆಗಿಲ್ಲ.

ಬುಮ್ರಾ ಸೇರಿ ಐವರ ಹೆಸರನ್ನು ಘೋಷಿಸಿದ ರಹಾನೆ!

2027ರ ಏಕದಿನ ವಿಶ್ವಕಪ್ ತಂಡದಲ್ಲಿ ಭಾರತದ ಪರ ಐವರು ಫಾಸ್ಟ್ ಬೌಲರ್​ಗಳನ್ನ ರಹಾನೆ ಪಿಕ್ ಮಾಡಿದ್ದಾರೆ. ಅದ್ರಲ್ಲಿ ನಂಬರ್ 1 ಜಸ್ಪ್ರೀತ್ ಬುಮ್ರಾ.. ಌಂಡ್ ಎರಡನೇ ವೇಗಿ ಅರ್ಶದೀಪ್ ಸಿಂಗ್, 3ನೇ ಫಾಸ್ಟ್ ಬೌಲರ್ ಮೊಹಮ್ಮದ್ ಸಿರಾಜ್, ನಾಲ್ಕನೇ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಌಂಡ್ ಯಂಗ್ ಬೌಲರ್ ಮಯಾಂಕ್ ಯಾದವ್​ರನ್ನೂ ರಹಾನೆ ಆಯ್ಕೆ ಮಾಡಬಹುದು ಎಂದಿದ್ದಾರೆ. ಬುಮ್ರಾ ಮತ್ತು ಸಿರಾಜ್ ಭಾರತದ ಪರ 2023 ರ ಏಕದಿನ ವಿಶ್ವಕಪ್ ತಂಡದಲ್ಲೂ ಆಡಿದ್ರು. ಆ ನಂತ್ರದಲ್ಲಿ ಹಾರ್ದಿಕ್ ಪಾಂಡ್ಯ ಇಂಜುರಿಯಾದಾಗ ಅವ್ರ ಬದಲಿಗೆ ಪ್ರಸಿದ್ಧ್ ಕೃಷ್ಣ ಅವರನ್ನೂ ತಂಡಕ್ಕೆ ಸೇರಿಸಲಾಯಿತು. ಆದ್ರೆ ರೋಹಿತ್ ಶರ್ಮಾ ನೇತೃತ್ವದ ತಂಡದಲ್ಲಿ ಪ್ರಸಿದ್ಧ್​ಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಈಗ 2027ರ ವಿಶ್ವಕಪ್​ಗೆ ಯಂಗ್ ಬೌಲರ್​ಗಳನ್ನ ಒಳಗೊಂಡ ತಂಡ ಕಟ್ಟಬೇಕಿದೆ. 2027 ರ ಏಕದಿನ ವಿಶ್ವಕಪ್‌ನಲ್ಲಿ, ಭಾರತವು ಅಕ್ಟೋಬರ್ 7 ರಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಅಕ್ಟೋಬರ್ 10 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ತನ್ನ ಎರಡನೇ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ಒಟ್ನಲ್ಲಿ ಭಾರತಕ್ಕೆ 2027ರ ಏಕದಿನ ವಿಶ್ವಕಪ್ ಗೆಲ್ಲೋದು ಪ್ರತಿಷ್ಠೆಯ ಪ್ರಶ್ನೆ. ಕಳೆದ ಬಾರಿ ತವರಿನಲ್ಲಿ ಕೈತಪ್ಪಿರೋ ಟ್ರೋಫಿಯನ್ನ ಈ ಬಾರಿ ಸೌತ್ ಆಫ್ರಿಕಾದಿಂದ ಗೆದ್ದು ತರೋ ಟಾರ್ಗೆಟ್​ನಲ್ಲಿದ್ದಾರೆ. ರೋಹಿತ್ ಮತ್ತು ಕೊಹ್ಲಿಯಂಥ ದಿಗ್ಗಜ ಬ್ಯಾಟರ್​ಗಳಿರುವ ತಂಡಕ್ಕೆ ಬಲಿಷ್ಠ ಬೌಲಿಂಗ್ ಪಡೆಯನ್ನ ಕಟ್ಟಬೇಕಿರೋ ಸವಾಲೂ ಬಿಸಿಸಿಐ ಮುಂದಿದೆ.

Shantha Kumari

Leave a Reply

Your email address will not be published. Required fields are marked *