₹40 ಕೋಟಿ ಕೊಟ್ರಷ್ಟೇ ಆಡ್ತೀವಿ – IPL ಫ್ರಾಂಚೈಸಿಗಳಿಗೆ ಸ್ಟಾರ್ಸ್ ಬೆದರಿಕೆ
ಒಬ್ರೇ ಪಂದ್ಯಗಳನ್ನ ಗೆಲ್ಲಿಸೋಕಾಗುತ್ತಾ?

2027ರ ಐಪಿಎಲ್ಗಾಗಿ ಸ್ವ್ಯಾಪ್ ಡೀಲ್, ಮಿನಿ ಆಕ್ಷನ್, ರಿಲೀಸ್, ರೀಟೆನ್ಷನ್ ಲಿಸ್ಟ್ ಅಂತಾ ಭರ್ಜರಿಯಾಗಿ ಸಿದ್ಧತೆ ಮಾಡಿಕೊಳ್ತಿರೋ ಫ್ರಾಂಚೈಸಿಗಳಿಗೆ ತಮ್ಮ ತಂಡಗಳ ಸ್ಟಾರ್ ಪ್ಲೇಯರ್ಗಳೇ ವಿಲನ್ ಆಗ್ತಿದ್ದಾರೆ. ನಿಮ್ಮ ಟೀಮ್ನಲ್ಲಿ ನಾವು ಇರ್ಬೇಕು ಅಂತಿದ್ರೆ ಇಂತಿಷ್ಟೇ ಅಮೌಂಟ್ ಕೊಡಿ ಇಲ್ದಿದ್ರೆ ಹರಾಜಿಗೆ ಹೋಗ್ತೀವಿ ಅಂತಾ ಬ್ಲ್ಯಾಕ್ಮೇಲ್ ಮಾಡ್ತಿದ್ದಾರೆ. ಅಷ್ಟಕ್ಕೂ ಅವ್ರು ಡಿಮ್ಯಾಂಡ್ ಮಾಡ್ತಿರೋ ಅಮೌಂಟ್ ಅಷ್ಟಿಷ್ಟಲ್ಲ.
ಇದನ್ನೂ ಓದಿ : RO-KO To KL.. ಬ್ಯಾಟಿಂಗ್ ಬೆಂಕಿ – ODIನಲ್ಲೂ ಸಪ್ಪೆಯಾಗುತ್ತಾ ಬೌಲಿಂಗ್?
20ನೇ ಸೀಸನ್ಗೆ ಸಿದ್ಧವಾಗ್ತಿರೋ ಐಪಿಎಲ್ ಫ್ರಾಂಚೈಸಿಗಳಿಗೆ ನವೆಂಬರ್ 17ರವರೆಗೆ ರಿಲೀಸ್ & ರಿಟೆನ್ಷನ್ ಲಿಸ್ಟ್ ಅನೌನ್ಸ್ ಮಾಡಲು ಡೆಡ್ ಲೈನ್ ನೀಡಿದೆ. ಬಟ್ 2028ರ ಐಪಿಎಲ್ಗೂ ಮುನ್ನ ಮೆಗಾ ಆಕ್ಷನ್ ನಡೆಯೋದ್ರಿಂದ ಪ್ರತೀ ತಂಡಗಳಲ್ಲೂ ಮೇಜರ್ ಸರ್ಜರಿಗಳೇ ಆಗಲಿವೆ. ಆದ್ರೆ ಈ ಮೆಗಾ ಆಕ್ಷನ್ನೇ ಟಾರ್ಗೆಟ್ ಮಾಡಿರೋ ಕೆಲ ಬಿಗ್ ಸ್ಟಾರ್ಸ್ ಇಲ್ಲೂ ದುಡ್ಡು ಮಾಡೋ ತಂತ್ರ ಹೂಡಿದ್ದಾರೆ. ಌಂಡ್ ಬಿಗ್ ಡಿಮ್ಯಾಂಡ್ಗಳನ್ನೇ ಇಟ್ಟಿದ್ದಾರೆ.
ಫ್ರಾಂಚೈಸಿಗಳಲ್ಲೇ ಉಳಿಯಬೇಕಿದ್ರೆ ₹40 ಕೋಟಿ ಕೊಡಿ.. ಇಲ್ಲದಿದ್ರೆ ಗುಡ್ ಬೈ!
ಐಪಿಎಲ್ ಮಿನಿ ಆಕ್ಷನ್ಗಿಂತ ಮೆಗಾ ಆಕ್ಷನ್ಗಳಲ್ಲಿ ಆಟಗಾರರ ಮೇಲೆ ಹಣದ ಹೊಳೆಯೇ ಹರಿಯುತ್ತೆ. ಪರ್ಸ್ ತುಂಬಾ ಬೇಜಾನ್ ಕಾಸ್ ಇರೋದ್ರಿಂದ ಬಿಗ್ ಪ್ಲೇಯರ್ಗಳಿಗೆ ಕೈತುಂಬಾ ಕಾಸು. 2025 ರ ಐಪಿಎಲ್ಗೂ ಮುನ್ನ ಮೆಗಾ-ಹರಾಜಿನಲ್ಲಿ ರಿಷಭ್ ಪಂತ್ 27 ಕೋಟಿ ಮತ್ತು ಶ್ರೇಯಸ್ ಅಯ್ಯರ್ 26.75 ಕೋಟಿ ರೂ.ಗಳನ್ನು ಗಳಿಸುವ ಮೂಲಕ ಇತಿಹಾಸದಲ್ಲೇ ಹೈಯೆಸ್ಟ್ ಅರ್ನಿಂಗ್ ಪ್ಲೇಯರ್ಸ್ ಆಗಿದ್ರು. ಬಟ್ 2028ರ ಐಪಿಎಲ್ಗೂ ಮುನ್ನದ ಮೆಗಾ ಆಕ್ಷನ್ನಲ್ಲಿ 30 ಕೋಟಿಯನ್ನೂ ಮೀರಬಹುದು. ಅಷ್ಟೇ ಅಲ್ಲದೆ ಪ್ರತೀ ಫ್ರಾಂಚೈಸಿಗಳ ಪರ್ಸ್ ಬ್ಯಾಲೆನ್ಸ್ 150 ಕೋಟಿ ರೂ.ಗಳಿಗೆ ಹೆಚ್ಚಿಸೋ ನಿರೀಕ್ಷೆಗಳಿವೆ. ಸದ್ಯ 120 ಕೋಟಿಯ ಲಿಮಿಟ್ಸ್ ಇತ್ತು. ಆದ್ರೆ ಇದನ್ನೇ ಎನ್ಕ್ಯಾಶ್ ಮಾಡಿಕೊಳ್ಳೋಕೆ ಕೆಲ ಪ್ಲೇಯರ್ಸ್ ಹೊಸ ದಾರಿ ಹುಡುಕಿದ್ದಾರೆ. 2028ರ ಐಪಿಎಲ್ಗೂ ಮುನ್ನ ನಾವು ನಿಮ್ಮ ತಂಡದಲ್ಲೇ ಉಳಿಯಬೇಕು ಅಂತಿದ್ರೆ ನಮಗೆ 40 ಕೋಟಿ ಕೊಟ್ಟು ರಿಟೆನ್ಷನ್ ಮಾಡಿಕೊಳ್ಳಿ. ಇಲ್ಲದೇ ಇದ್ದರೆ ಮೆಗಾ ಆಕ್ಷನ್ಗೆ ಹೋಗ್ತೇವೆ. ಅಲ್ಲಿ ಬಿಗ್ ಅಮೌಂಟ್ ಸಿಗುತ್ತೆ ಅಂತಾ ಮಾಲೀಕರಿಗೆ ಬ್ಲ್ಯಾಕ್ಮೇಲ್ ಮಾಡ್ತಿದ್ದಾರೆ ಎನ್ನಲಾಗಿದೆ. ಆದ್ರೆ ಐಪಿಎಲ್ ಇತಿಹಾಸದಲ್ಲಿ 40 ಕೋಟಿ ರೂಪಾಯಿ ಸಂಭಾವನೆ ನೀಡಿದ್ರೆ ಫ್ರಾಂಚೈಸಿಗಳಿಗೆ ದೊಡ್ಡ ಹೊತೆಯಾಗುತ್ತೆ. 150 ಕೋಟಿ ಪರ್ಸ್ ಬ್ಯಾಲೆನ್ಸ್ ಹೆಚ್ಚಿಸಿದ್ರೂ ಒಬ್ಬರಿಗೆ 40 ಕೋಟಿ ಕೊಟ್ರೆ ಉಳಿಯೋದೇ 110 ಕೋಟಿ. ಆಗ ಇಡೀ ತಂಡವನ್ನ ರೆಡಿ ಮಾಡ್ಬೇಕು. ಪ್ಲೇಯಿಂಗ್ 11ನಲ್ಲಿ ಆಡುವವರಿಗೆ ಬಿಗ್ ಅಮೌಂಟ್ ಕೊಡ್ಬೇಕು. ಅಷ್ಟೇ ಬ್ಯಾಕಪ್ ಕೂಡ ಬೆಸ್ಟ್ ಪ್ಲೇಯರ್ಸ್ ಪಿಕ್ ಮಾಡ್ಬೇಕು. ಇಷ್ಟೆಲ್ಲಾ ಸವಾಲುಗಳು ತಂಡಗಳಿಗೆ ಶುರುವಾಗಿದೆ. ಅದೆಲ್ಲಕ್ಕಿಂತ ಮೋಸ್ಟ್ ಇಂಪಾರ್ಟೆಂಟ್ ಅಂದ್ರೆ 40 ಕೋಟಿ ಕೊಟ್ರೂ ಅವ್ರೊಬ್ರೇ ಮ್ಯಾಚ್ ಅಂತೂ ಗೆಲ್ಲಿಸೋಕೆ ಆಗಲ್ವಲ್ಲ. ಫಾರ್ ಎಕ್ಸಾಂಪಲ್ ರಿಷಬ್ ಪಂತ್ನೇ ತಗೊಳ್ಳಿ. 2025ರ ಐಪಿಎಲ್ಗೂ ಮುನ್ನ ಲಕ್ನೋ ಸೂಪರ್ ಜೇಂಟ್ಸ್ ಫ್ರಾಂಚೈಸಿ ಬರೋಬ್ಬರಿ 27 ಕೋಟಿ ಕೊಟ್ಟು ಪಂತ್ರನ್ನ ಗ್ರ್ಯಾಂಡ್ ಆಗೇ ವೆಲ್ಕಂ ಮಾಡಿದ್ರು. ಕ್ಯಾಪ್ಟನ್ಸಿಯನ್ನೂ ಕೊಟ್ರು. ಆದ್ರೆ ರಿಸಲ್ಟ್ ಏನಾಯ್ತು. 27 ಕೋಟಿ ಹಣವೇ ಶಾಪವಾಗಿತ್ತು. ಮೈದಾನದಲ್ಲಿ ತಾನೂ ಚೆನ್ನಾಗಿ ಆಡ್ಲಿಲ್ಲ. ತಂಡವನ್ನೂ ಅಟ್ಲೀಸ್ಟ್ ಪ್ಳೇಆಫ್ಸ್ಗೂ ಕ್ವಾಲಿಫೈ ಮಾಡೋಕೆ ಸಾಧ್ಯವಾಗಲಿಲ್ಲ. ಕೊನೆಗೆ 2027 ಐಪಿಎಲ್ಗೂ ಮೊದ್ಲೇ ತಮ್ಮ ಹಿಂದಿನ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ಗೆ ಕುಲ್ದೀಪ್ ಯಾದವ್ ಜೊತೆ 15 ಕೋಟಿಗೆ ಸ್ವ್ಯಾಪ್ ಡೀಲ್ ಆದ್ರು. ಸೋ ಇಲ್ಲಿ ಪ್ಲೇಯರ್ಸ್ ಬೆದರಿಕೆ ಹಾಕ್ತಿದ್ದಾರೆ ಅಂತಾ ಫ್ರಾಂಚೈಸಿಗಳು ಹಣ ಕೊಟ್ರೆ ಅದು ತಂಡಕ್ಕೇ ಹೊರೆಯಾಗಲಿದೆ.

ನೋಡಿರಿ

