ವಿಶ್ವಶ್ರೇಷ್ಠ ವಿರಾಟ್ @ 38 – KING ಆಗಿದ್ದೇಗೆ ಕೊಹ್ಲಿ?

ವಿಶ್ವಶ್ರೇಷ್ಠ ವಿರಾಟ್ @ 38 – KING ಆಗಿದ್ದೇಗೆ ಕೊಹ್ಲಿ?

ಬ್ಯಾಟಿಂಗ್​ಗೆ ನಿಂತ್ರೆ ಬೆಂಕಿಚೆಂಡು.. ಚೇಸಿಂಗ್​ನಲ್ಲಿ ಸಿಡಿಲಮರಿ.. ಫೀಲ್ಡಿಂಗ್​ನಲ್ಲಿ ಫ್ಲೈಯಿಂಗ್ ಬರ್ಡ್.. ಫಿಟ್​​ನೆಸ್ ​ನಲ್ಲಂತೂ ಬಿಗ್ಗೆಸ್ಟ್ ಇನ್ಸ್​ಪಿರೇಷನ್. ಒಬ್ಬ ಕಂಪ್ಲೀಟ್ ಅಥ್ಲೀಟ್ ಹೇಗಿರಬೇಕು ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಕಿಂಗ್ ವಿರಾಟ್ ಕೊಹ್ಲಿ. ವಿಶ್ವಶ್ರೇಷ್ಠ ಕೊಹ್ಲಿಗೆ ಇಂದು ಬರ್ತಡೇ ಸಂಭ್ರಮ. ಜಸ್ಟ್ 38 ವರ್ಷ.

ಇದನ್ನೂ ಓದಿ : ODIಗೆ ಪಾಟಿದಾರ್ .. ರಿಂಕು ಫಿನಿಶರ್ – PAKಗೆ ಅಭಿ-ವೈಭವ್ ಚಾಲೆಂಜ್

ಕ್ರಿಕೆಟ್ ನಲ್ಲಿ ದಾಖಲೆಗಳನ್ನ ಯಾರ್ ಬೇಕಾದ್ರೂ ಮಾಡ್ಬೋದು. ಬಟ್ ಅದನ್ನ ಇತಿಹಾಸವಾಗಿ ಕನ್ವರ್ಟ್ ಮಾಡೋದು ಕೆಲವ್ರು ಮಾತ್ರ. ಈ ವಿಚಾರದಲ್ಲಿ ಕಿಂಗ್ ಕೊಹ್ಲಿ ಯಾವತ್ತಿಗೂ ಮುಂದಿದ್ದಾರೆ. 2008ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ದೆಹಲಿಯ ಹುಡುಗ ಇಂದು ವಿಶ್ವ ಕ್ರಿಕೆಟ್‌ನ ಅಪ್ರತಿಮ ಬ್ಯಾಟರ್‌ಗಳಲ್ಲಿ  ಒಬ್ಬನಾಗಿ ಬೆಳೆದಿದ್ದು ಚರಿತ್ರೆ.

ಅಪ್ಪ ವಕೀಲ.. ಕ್ರಿಕೆಟ್ ನಲ್ಲಿ ಆಸಕ್ತಿ.. ಸಾವಿನ ದಿನವೂ ಬ್ಯಾಟಿಂಗ್!

1988ರ ನವೆಂಬರ್ 5ರಂದು ದೆಹಲಿಯಲ್ಲಿ ಪ್ರೇಮ್ ನಾಥ್ ಕೊಹ್ಲಿ ಮತ್ತು ತಾಯಿ ಸರೋಜ್ ಕೊಹ್ಲಿ ಅವ್ರ ಕಿರಿಯ ಮಗನಾಗಿ ವಿರಾಟ್ ಕೊಹ್ಲಿ ಹುಟ್ಟಿದ್ದು. ಸಣ್ಣದ್ದರಲ್ಲೇ ಕ್ರಿಕೆಟ್ ಅಂದ್ರೆ ಕೊಹ್ಲಿಗೆ ತುಂಬಾ ಆಸಕ್ತಿ.  ಬಾಲ್ಯದಲ್ಲೇ ಅಪ್ಪನ ಜೊತೆ ಕ್ರಿಕೆಟ್ ಆಡ್ತಿದ್ದ ವಿರಾಟ್ 1998ರಲ್ಲಿ ವೆಸ್ಟ್ ದೆಹಲಿ ಕ್ರಿಕೆಟ್ ಅಕಾಡೆಮಿಗೆ ಸೇರಿದರು. ಕೋಚ್ ರಾಜ್‌ಕುಮಾರ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ಒಂದೊಳ್ಳೆ ಅಡಿಪಾಯ ಸಿಕ್ಕಿತ್ತು. 2006ರಲ್ಲಿ ದೆಹಲಿ ಪರ ರಣಜಿ ಪಂದ್ಯ ಆಡುತ್ತಿದ್ದಾಗ ವಿರಾಟ್ ಅವರ ತಂದೆ ನಿಧನರಾದ ಸುದ್ಧಿ ಬಂದ್ರೂ ತಂಡಕ್ಕಾಗಿ ಆಟವನ್ನ ಕಂಟಿನ್ಯೂ ಮಾಡಿದ್ರು. ತಂದೆಯ ನಿಧನದ ಮರುದಿನವೇ ಮೈದಾನಕ್ಕಿಳಿದು 90 ರನ್ ಗಳಿಸಿದರು. ಅಲ್ಲಿಂದ ಶುರುವಾದ ರನ್ ಹಸಿವು ಸ್ಟಿಲ್ ಈಗ್ಲೂ ನಿಂತಿಲ್ಲ. 2008ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಅಂಡರ್-19 ತಂಡ ವಿಶ್ವಕಪ್ ಗೆದ್ದಿತು. ಈ ಗೆಲುವಿನ ಬಳಿಕ ಕೊಹ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಟಿ-20ಐ, ಏಕದಿನ ಮತ್ತು ಟೆಸ್ಟ್ ಹೀಗೆ ಎಲ್ಲಾ ಮಾದರಿಯಲ್ಲೂ ಅವ್ರು ನಡೆದಿದ್ದೇ ದಾರಿ. ಅಷ್ಟಕ್ಕೂ ಕೊಹ್ಲಿ ಯಾಕೆ ಎಲ್ರಿಗಿಂತ ವಿಭಿನ್ನ ಆಗಿ ನಿಲ್ತಾರೆ ಅನ್ನೋದಕ್ಕೆ ಒಂದಷ್ಟು ರೀಸನ್ಸ್ ಇದೆ.

ಕೊಹ್ಲಿ ಅಂದ್ರೆನೇ ಸ್ಪೆಷಲ್!

ಮೈದಾನಕ್ಕಿಳಿದ ಮೇಲೆ ಕೊನೆ ಕ್ಷಣದವರೆಗೂ ಗೆಲ್ಲಲೇಬೇಕೆಂಬ ಹಠ

ಟಾರ್ಗೆಟ್ ಸೆಟ್ ಆದ ಮೇಲಂತೂ ಕೊಹ್ಲಿ ಬ್ಯಾಟಿಂಗ್ ವಿರಾಟರೂಪ

ಸೋಲುವ ಹಂತದಲ್ಲೂ ಕೊಹ್ಲಿ ಕ್ರೀಸ್ ನಲ್ಲಿದ್ರೆ ಗೆಲ್ಲುತ್ತೇವೆಂಬ ವಿಶ್ವಾಸ

ಕ್ರೀಡಾಪಟುಗಳಿಗೆ ಫಿಟ್ ನೆಸ್ ಎಷ್ಟು ಮುಖ್ಯ ಅನ್ನೋದಕ್ಕೆ ಎಕ್ಸಾಂಪಲ್

ಮೈದಾನದಲ್ಲಿ ಅಗ್ರೆಸ್ಸಿವ್ ಆಗಿ ತಂಡಕ್ಕೆ ಧೈರ್ಯವಾಗಿ ಎದುರಾಳಿಗಳಿಗೆ ಭಯ

ಸ್ಲೆಡ್ಲಿಂಗ್ ಮಾಡಿದವರಿಗೆ ಮೈದಾನದಲ್ಲೇ ಉತ್ತರ, ಆಟದಲ್ಲೇ ತಿರುಗೇಟು

ಆನ್ ಫೀಲ್ಡ್ ಎಷ್ಟೇ ಅಗ್ರೆಸ್ಸಿವ್ ಆಗಿದ್ರೂ ಆಫ್ ದಿ ಫೀಲ್ಡ್ ಕೂಲ್ ಕೂಲ್

ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿ ರನ್ ಗಳಿಸೋ ಟ್ಯಾಲೆಂಟ್

ಹೀಗೆ ಸಾಕಷ್ಟು ಕಾರಣಗಳಿಂದ ಕಿಂಗ್ ಕೊಹ್ಲಿ ಕ್ರಿಕೆಟ್​ನಲ್ಲಿ ಎಲ್ರಿಗಿಂತ ಡಿಫ್ರೆಂಟ್ ಆಗಿ ನಿಲ್ತಾರೆ. ಹಾಗಂತ ಕ್ರಿಕೆಟ್ ಲೋಕದಲ್ಲಿ ಇಂದು ಕೊಹ್ಲಿ ಕಿಂಗ್ ಆಗಿ ಮೆರೆದಾಡ್ತಿದ್ದಾರೆ ಅಂದ್ರೆ ಇದ್ಯಾವುದೂ ಸುಲಭಕ್ಕೆ ಧಕ್ಕಿದಲ್ಲ. ಅದಕ್ಕಾಗಿ ವರ್ಷಗಟ್ಟಲೆ ತಪಸ್ಸು ಮಾಡಿದ್ದಾರೆ. ಹಲವು ವರ್ಷಗಳ ಪರಿಶ್ರಮ, ತ್ಯಾಗ, ಶಿಸ್ತು ಮತ್ತು ಕ್ರಿಕೆಟ್ ಮೇಲಿನ ಪ್ರೀತಿಯೇ ಇಷ್ಟೆಲ್ಲಾ ಸಾಧನೆಗೆ ಕಾರಣ.

ಕೊಹ್ಲಿಯ ಅತ್ಯುನ್ನತ ರೆಕಾರ್ಡ್ಸ್!

ಏಕದಿನ ಕ್ರಿಕೆಟ್‌ ನಲ್ಲಿ 55 ಶತಕ.. ಚೇಸಿಂಗ್ ನಲ್ಲಿ 8,741 ರನ್ಸ್

ಏಕದಿನದಲ್ಲಿ ನಂಬರ್ 3ನಲ್ಲಿ 13,000+ ರನ್ಸ್ ಕಲೆ ಹಾಕಿದ ಬ್ಯಾಟರ್

2023ರ ಐಸಿಸಿ ಏಕದಿನ ವಿಶ್ವಕಪ್‌ ಒಂದೇ ಆವೃತ್ತಿಯಲ್ಲಿ ಭರ್ಜರಿ 765 ರನ್

ಶ್ರೀಲಂಕಾ ತಂಡದ ವಿರುದ್ಧವೇ ವಿರಾಟ್ ಕೊಹ್ಲಿ ಒಟ್ಟು 10 ಏಕದಿನ ಶತಕ

3 ಮಾದರಿಯಲ್ಲೂ 22 ಬಾರಿ ಸರಣಿ ಶ್ರೇಷ್ಠರಾಗಿ ಮೊದಲ ಸ್ಥಾನದಲ್ಲಿ

55 ಏಕದಿನ, 30 ಟೆಸ್ಟ್, 1 ಟಿ20 ಹೀಗೆ 86 ಶತಕಗಳ ಮೂಲಕ ಟಾಪ್ 2

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಅಷ್ಟೇ ಅಲ್ಲದೆ ಐಪಿಎಲ್​ನಲ್ಲೂ ಕೊಹ್ಲಿಯೇ ರಾಜ. ಅತೀ ಹೆಚ್ಚು ಶತಕ, ಅತೀ ಹೆಚ್ಚು ಅರ್ಧಶತಕ, ಅತೀ ಹೆಚ್ಚು ರನ್ಸ್, ಮೊದಲ ಆವೃತ್ತಿಯಿಂದ ಒಂದೇ ಫ್ರಾಂಚೈಸಿ ಪರ ಆಡಿದ ಏಕೈಕ ಪ್ಲೇಯರ್ ಹೀಗೆ ಹತ್ತು ಹಲವು ದಾಖಲೆಗಳು ಕೊಹ್ಲಿ ಹೆಸ್ರಲ್ಲಿವೆ. ಒಟ್ನಲ್ಲಿ ವಿರಾಟ್ ಕೊಹ್ಲಿ ಅಂದ್ರೆ ಕೇವಲ ಕ್ರಿಕೆಟರ್ ಅಲ್ಲ. ಒಂದು ಜನರೇಷನ್.. ಒಂದು ಇನ್​ಸ್ಪಿರೇಷನ್.. ಕೋಟ್ಯಂತರ ಅಭಿಮಾನಿಗಳ ಎಮೋಷನ್. ಕ್ರಿಕೆಟ್​ ಜಗತ್ತಿನ ಬ್ರ್ಯಾಂಡ್.. ದಾಖಲೆಗಳೇ ಅವರ ಸಾಧನೆಯ ಸಾಕ್ಷಿ.. ಶತಕಗಳೇ ಅವರ ಸಾಮರ್ಥ್ಯದ ಹೆಗ್ಗುರುತು.. ಗೆಲುವಿನ ಹಸಿವೇ ಅವರ ಅಸಲಿ ಶಕ್ತಿ ಅನ್ನೋದನ್ನ ಪದೇಪದೆ ಪ್ರೂವ್ ಮಾಡುತ್ತಲೇ ಬಂದಿದ್ದಾರೆ.

Shantha Kumari

Leave a Reply

Your email address will not be published. Required fields are marked *