ರಾಹುಲ್ ಗೆ ಮತ್ತೆ SLOT ಗ್ರಹಣ – ನಂ.5 ಫಿಕ್ಸ್ ಇಲ್ಲ ಎಂದಿದ್ದೇಕೆ ಗಿಲ್?
ಅದಲು-ಬದಲು ಕಾಟಕ್ಕೆ KL ಹೈರಾಣ

ರಾಹುಲ್ ಗೆ ಮತ್ತೆ SLOT ಗ್ರಹಣ – ನಂ.5 ಫಿಕ್ಸ್ ಇಲ್ಲ ಎಂದಿದ್ದೇಕೆ ಗಿಲ್?ಅದಲು-ಬದಲು ಕಾಟಕ್ಕೆ KL ಹೈರಾಣ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದಿರೋ ಭಾರತ ಎರಡನೇ ಪಂದ್ಯಕ್ಕೆ ಸಿದ್ಧವಾಗ್ತಿದೆ. ಶನಿವಾರ ಎರಡನೇ ಪಂದ್ಯ ನಡೆಯಲಿದೆ. ಆದ್ರೆ ಈ ಸರಣಿಯಲ್ಲೂ ಕೆಎಲ್ ರಾಹುಲ್ ವಿಚಾರದಲ್ಲಿ ಎಕ್ಸ್​ಪೆರಿಮೆಂಟ್ ಮಾತ್ರ ತಪ್ಪಿಲ್ಲ ಅನ್ನೋದೇ ದುರಂತ. ರಾಹುಲ್ ನಂಬರ್ 5ನಲ್ಲಿ ಬ್ಯಾಟಿಂಗ್ ಮಾಡ್ಬೇಕು. ಆದ್ರೆ ಮೊದಲ ಮ್ಯಾಚಲ್ಲೂ ಅಕ್ಷರ್ ಪಟೇಲ್ ಆದ್ಮೇಲೆ ರಾಹುಲ್ ಬಂದಿದ್ದು. ಇದನ್ನ ನಾಯಕ ಶುಭ್​ಮನ್ ಗಿಲ್ ಕೂಡ ಹೇಳಿದ್ದು ಹೊಸ ಚರ್ಚೆ ಹುಟ್ಟು ಹಾಕಿದೆ.

ಇದನ್ನೂ ಓದಿ : ODIಗೆ ಪಾಟಿದಾರ್ .. ರಿಂಕು ಫಿನಿಶರ್ – PAKಗೆ ಅಭಿ-ವೈಭವ್ ಚಾಲೆಂಜ್

ಕೆಎಲ್ ರಾಹುಲ್​ರನ್ನ ಈಗಾಗ್ಲೇ ಟಿ-20ಐ ತಂಡದಿಂದ ಹೊರಗಿಟ್ಟಿದ್ದಾರೆ. ಟೆಸ್ಟ್ ಮತ್ತು ಏಕದಿನ ಮಾದರಿ ಪಂದ್ಯಗಳಲ್ಲಿ ಮಾತ್ರ ಆಡಿಸ್ತಾ ಇರುವಂಥದ್ದು. ಆದ್ರೆ ಅಲ್ಲೂ ರಾಹುಲ್​ರನ್ನೇ ಬಲಿಪಶು ಮಾಡ್ತಿದ್ದಾರೆ. ಟೆಸ್ಟ್​ನಲ್ಲಿ ಸದ್ಯಕ್ಕೆ ಓಪನರ್ ಆಗಿ ಆಡ್ತಿದ್ರೂ ಏಕದಿನದಲ್ಲಿ ಮಾತ್ರ ನಿರ್ದಿಷ್ಟ ಕ್ರಮಾಂಕವಿಲ್ಲ. ಮೊದ್ಲೆಲ್ಲಾ ಆರಂಭಿಕನಾಗಿ, ಆ ನಂತರ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ರಾಹುಲ್​ ಅವರನ್ನು ಈಗ ತಮಗೆ ಬೇಕಾದಂತೆ ಕಣಕ್ಕಿಳಿಸಲಾಗುತ್ತಿದೆ. ನಾಯಕ ಶುಭ್​ಮನ್ ಗಿಲ್ ಅವ್ರೇ ಕ್ಲಿಯರ್ ಮೆಸೇಜ್ ಪಾಸ್ ಮಾಡಿದ್ದಾರೆ.

ಟಾಪ್ 4 ಮಾತ್ರ ಫಿಕ್ಸ್.. ನಂತ್ರದ 3 ಸ್ಲಾಟ್ ಗಳಲ್ಲಿ ಪ್ರಯೋಗ!

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಪ್ರೆಸ್​ಮೀಟ್​ನಲ್ಲಿ ಮಾತನಾಡಿದ್ದ ಗಿಲ್, ಬ್ಯಾಟಿಂಗ್ ಆರ್ಡರ್ ಬಗ್ಗೆ ಮಾತನಾಡಿದ್ದಾರೆ. ಟಾಪ್ 4ನಲ್ಲಿ ಬ್ಯಾಟರ್ಸ್ ಫಿಕ್ಸ್ ಆಗಿದೆ. ಅಂದ್ರೆ ಗಿಲ್ ಮತ್ತು ರೋಹಿತ್ ಶರ್ಮಾ ಓಪನರ್ಸ್.. ಒನ್ ಡೌನ್​ನಲ್ಲಿ ವಿರಾಟ್ ಕೊಹ್ಲಿ ಹಾಗೇ ನಂಬರ್ 4ನಲ್ಲಿ ಶ್ರೇಯಸ್ ಅಯ್ಯರ್. ಸೋ ಈ ನಾಲ್ವರಲ್ಲಿ ಯಾವುದೇ ಚೇಂಜಸ್ ಇರಲ್ಲ. ಆದ್ರೆ ಐದರಲ್ಲಿ ಕೆಎಲ್ ರಾಹುಲ್ ಬರ್ಬೇಕಿತ್ತು. ಬಟ್ ಇಲ್ಲಿಂದಲೇ ಇವ್ರ ಪ್ರಯೋಗ ಸ್ಟಾರ್ಟ್ ಆಗೋದು. ತಂಡದಲ್ಲಿ ಐದನೇ, ಆರನೇ ಹಾಗೂ ಏಳನೇ ಸ್ಲಾಟ್ ಬ್ಯಾಟರ್‌ಗಳಿಗೆ ನಿಗದಿತ ಸ್ಥಾನ ನೀಡಲ್ಲ ಎಂದಿದ್ದಾರೆ ಗಿಲ್. ಅಂದ್ರೆ ಮ್ಯಾಚ್ ಸಿಚುಯೇಷನ್ ನೋಡ್ಕೊಂಡು  ಹಾಗೇ ಎಷ್ಟು ಓವರ್‌ಗಳು ಬಾಕಿ ಇವೆ ಅನ್ನೋದ್ರ ಮೇಲೆ ಉಳಿದ ಬ್ಯಾಟರ್​ಗಳನ್ನ ನಿರ್ಧಾರ ಮಾಡುತ್ತೇವೆ ಅನ್ನೋದು ಗಿಲ್ ವಾದ.  ಅಷ್ಟೇ ಅಲ್ದೇ ಟಾಪ್ 4ನ ನಾಲ್ವರೂ ಕೂಡ ಬಲಗೈ ಬ್ಯಾಟರ್ಸ್.. ಹೀಗಾಗಿ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಐದನೇ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಬೇಕೆನ್ನಿಸಿದ್ರೆ ಅಕ್ಷರ್ ಪಟೇಲ್ ಅವರನ್ನು ಕಳುಹಿಸುತ್ತೇವೆ ಎಂದಿದ್ದಾರೆ.  ನ್ಯೂಜಿಲೆಂಡ್ ವಿರುದ್ಧ ನಿನ್ನೆ ಮೊದಲ ಮ್ಯಾಚಲ್ಲೂ ನಂಬರ್ 5ನಲ್ಲಿ ಅಕ್ಷರ್​ರನ್ನೇ ಕಣಕ್ಕಿಳಿಸಿದ್ರು. ಆದ್ರೆ ಅಕ್ಷರ್ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ರು. ಹಾಗ್ ನೋಡಿದ್ರೆ ಭಾರತದ ಬ್ಯಾಟಿಂಗ್ ವೇಳೆ ಪ್ರೆಶರ್ ಇರ್ಲಿಲ್ಲ. ಭಾರತ ಗೆಲ್ಲೋಕೆ 19 ರನ್ಸ್ ಅಷ್ಟೇ ಬೇಕಿದ್ದಿದ್ದು ಸೋ ರಾಹುಲ್​ರನ್ನೇ ಕಳಿಸ್ಬೋದಿತ್ತು. ಬಟ್ ಮ್ಯಾನೇಜ್​ಮೆಂಟ್​ ರಾಹುಲ್ ವಿಚಾರದಲ್ಲಿ ಚೆಲ್ಲಾಟ ಆಡೋದನ್ನ ಬಿಡಲ್ಲ. ಅದೂ ಅಲ್ದೇ ರಾಹುಲ್​ ನಂಬರ್ 5ನಲ್ಲೇ ಅವ್ರ ಬ್ಯಾಟಿಂಗ್ ರೆಕಾರ್ಡ್ಸ್ ತುಂಬಾ ಚೆನ್ನಾಗಿರೋದು.

ಎಲ್ಲಾ ಸ್ಲಾಟ್ ಗಳಲ್ಲೂ ಸಲ್ಲುವ ರಾಹುಲ್!

ರೋಹಿತ್, ಶಿಖರ್ ಆಬ್ಸೆನ್ಸ್ ನಲ್ಲಿ 23 ಇನ್ನಿಂಗ್ಸ್ ಗಳಲ್ಲಿ ಓಪನರ್

43.57ರ ಸರಾಸರಿ, 915 ರನ್ಸ್, 3 ಶತಕ ಹಾಗೂ 3 ಅರ್ಧಶತಕ

ಡೆಬ್ಯೂ ಪಂದ್ಯದಲ್ಲೇ ಆರಂಭಿಕನಾಗಿ ಜಿಂಬಾಬ್ವೆ ವಿರುದ್ಧ ಶತಕದ ದಾಖಲೆ

4ನೇ ಕ್ರಮಾಂಕದಲ್ಲಿ 13 ಇನ್ನಿಂಗ್ಸ್‌, 55.8ರ ಸರಾಸರಿ.. 558 ರನ್ಸ್

ಕೆಎಲ್ ರಾಹುಲ್ ಗೆ 5ನೇ ಕ್ರಮಾಂಕವೇ ಅತ್ಯಂತ ಯಶಸ್ವಿ ಬ್ಯಾಟಿಂಗ್ ಸ್ಲಾಟ್

1,517 ರನ್, 63.20 ಸರಾಸರಿ ಮತ್ತು 100.59 ಸ್ಟ್ರೈಕ್ ರೇಟ್

2023ರ ಏಕದಿನ ವಿಶ್ವಕಪ್‌ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಂ.5 ಬ್ಯಾಟರ್

ಹೀಗೆ ಭಾರತದ ಪರ ಟಾಪ್ 5ವರೆಗೂ ಮಾತ್ರ ರಾಹುಲ್ ಅವ್ರ ರೆಕಾರ್ಡ್ಸ್ ಸಾಲಿಡ್ ಆಗಿದೆ. ಆದ್ರೆ ಗಂಭೀರ್ ಕೋಚ್ ಆದ್ಮೇಲೆ 6, 7, 8ನೇ ಸ್ಲಾಟ್​ವರೆಗೂ ರಾಹುಲ್​ರನ್ನ ಪ್ರಯೋಗ ಮಾಡಿದ್ದಾರೆ. ಬಟ್ ಇಲ್ಲಿ ಎಲ್ಲಿಯೂ ರಾಹುಲ್ ಕಡೆಯಿಂದ ಬೆಸ್ಟ್ ಇನ್ನಿಂಗ್ಸ್ ಬಂದಿಲ್ಲ. ಸೋ ನಂಬರ್ 5ನಲ್ಲಿ ಆಡೋದೇ ಅವ್ರಿಗೂ ತಂಡಕ್ಕೂ ಪ್ಲಸ್ ಆಗುತ್ತೆ. ಅದನ್ನ ಬಿಟ್ಟು ಮ್ಯೂಸಿಕಲ್ ಚೇರ್ ಆಡೋಕೆ ನಿಂತ್ರೆ ಯಾರಿಗೂ ಒಳ್ಳೇದಲ್ಲ.

Shantha Kumari

Leave a Reply

Your email address will not be published. Required fields are marked *