ಪತ್ರಕ್ಕಾಗಿ ರಿಸ್ಕ್ ತಗೊಂಡ್ರಾ ಸೌಂದರ್ಯ ಮತ್ತು ಧನುಷ್? – ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಗೆ!?

ಬಿಗ್‌ಬಾಸ್ ಮನೆಯಲ್ಲಿ ಈಗ ಲೆಟರ್ ಟಾಸ್ಕ್ ನಡೆಯುತ್ತಿದೆ. ಮನೆಯಿಂದ ಬಂದ ಪತ್ರ ಓದಲು ಸ್ಪರ್ಧಿಗಳು ಟಾಸ್ಕ್ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಸೌಂದರ್ಯ ಮತ್ತು ಧನುಷ್ ಮನೆಯವರಿಂದ ಬಂದ ಪತ್ರ ಓದಲು ಹೋಗಿ ಮನೆಯಿಂದಲೇ ಹೊರಗೆ ಹೋಗಿದ್ದಾರೆ. ಆದರೆ, ಮರಳಿ ಬರುವಷ್ಟರಲ್ಲಿ ಮನೆಯ ಮುಖ್ಯಧ್ವಾರ ಮುಚ್ಚಿ ಹೋಯಿತಾ ಅನ್ನೋ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ:ಶಿಶಿರ್- ಐಶ್ವರ್ಯಾ ಪ್ರೀತಿಗೆ ನಿಶ್ಚಿತಾರ್ಥದ ಸಂಭ್ರಮ – ಶೀಘ್ರದಲ್ಲೇ ಮದುವೆ ಎಂದ ಪ್ರೇಮ ಪಕ್ಷಿಗಳು
ಬಿಗ್‌ಬಾಸ್ ಸ್ಪರ್ಧಿಗಳಾದ ಸೌಂದರ್ಯಾ ಹಾಗೂ ಧನುಷ್ ಅವರಿಗೆ ಮನೆಯಿಂದ ಪತ್ರಗಳು ಬಂದಿದೆ. ಪತ್ರಗಳನ್ನು ಪಡೆಯಲು ಬಿಗ್‌ಬಾಸ್ ಇಬ್ಬರಿಗೂ ಕಠಿಣ ಟಾಸ್ಕ್ ನೀಡಿದ್ದಾರೆ. ಬಿಗ್ ಬಾಸ್ ಸೂಚನೆಯಂತೆ, ಸ್ಪರ್ಧಿಗಳು ತಮ್ಮ ಪತ್ರಗಳನ್ನು ಪಡೆದುಕೊಳ್ಳಲು ಮನೆಯ ಮುಖ್ಯ ದ್ವಾರದ ಮೂಲಕ ಹೊರಹೋಗಬೇಕು. ಅಲ್ಲಿ ಇರಿಸಲಾಗಿರುವ ಹಲವಾರು ಪತ್ರಗಳ ರಾಶಿಯ ಮಧ್ಯೆ ತಮ್ಮ ಮನೆಯವರ ಪತ್ರವನ್ನು ಹುಡುಕಿಕೊಂಡು ಕೇವಲ ಒಂದು ನಿಮಿಷದ ಅವಧಿಯೊಳಗೆ ವಾಪಸ್ ಬಂದು ಮನೆಯೊಳಗೆ ಪ್ರವೇಶಿಸಬೇಕು. ಒಂದು ವೇಳೆ ನಿಗದಿತ ಸಮಯದಲ್ಲಿ ಮನೆ ಒಳಗೆ ಹಿಂತಿರುಗದಿದ್ದರೆ ಮುಖ್ಯ ದ್ವಾರ ಮುಚ್ಚಲ್ಪಡುತ್ತದೆ ಎಂದು ಬಿಗ್ ಬಾಸ್ ಎಚ್ಚರಿಕೆ ನೀಡಿದ್ದಾರೆ. ಇದೇ ಟಾಸ್ಕ್ ವಿಚಾರವಾಗಿ ಪ್ರೋಮೋ ರಿಲೀಸ್ ಆಗಿದ್ದು ಇವತ್ತಿನ ಎಪಿಸೋಡ್ ತುಂಬಾ ಕುತೂಹಲ ಕೆರಳಿಸಿದೆ.
ಇನ್ನು ದೊಡ್ಮನೆಯಲ್ಲಿ ಧನುಷ್ ಮತ್ತು ಸೋನಿಕಾ ಕೆಮೆಸ್ಟ್ರಿ ಸಖತ್ ವರ್ಕೌಟ್ ಆಗುತ್ತಿದೆ. ಈ ಇಬ್ಬರು ಜೊತೆಯಲ್ಲಿ ಇದ್ದರೆ ಸಾಕು ಉಳಿದವರು ಕಾಲೆಳೆಯುತ್ತಿದ್ದಾರೆ. ಸೋನಿಕಾ ಚೆನ್ನಾಗಿ ಡ್ರೆಸ್ ಮಾಡಿಕೊಂಡಿದ್ದು, ಇವರ ಜೊತೆಯಲ್ಲೇ ಧನುಷ್ ನಿಂತಿರುತ್ತಾರೆ. ಆಗ ತಾಂಡವ್ ಸೇರಿದಂತೆ ಉಳಿದವರು ಹಾಡು ಹೇಳಿ ರೇಗಿಸುತ್ತಾರೆ. ಅದರಲ್ಲೂ ತಾಂಡವ್ ಇಬ್ಬರಿಗೂ ಉಡುಗೊರೆ ನೀಡುತ್ತಾರೆ. ಆಗ ಧನುಷ್ ನಮ್ಮಿಬ್ಬರ ರಿಸೆಪ್ಷನ್ ಗೆ ಇದು ಗಿಫ್ಟ್ ಎಂದು ಹೇಳುತ್ತಾರೆ. ಇದನ್ನು ನೋಡಿದ ವೀಕ್ಷಕರು ಧನುಷ್ ಸೋನಿಕಾ ವಿಚಾರದಲ್ಲಿ ಸೀರಿಯಸ್ ಆಗಿದ್ದಾರಾ ಎಂದು ಪ್ರಶ್ನೆ ಕೇಳುತ್ತಿದ್ದಾರೆ.

ನೋಡಿರಿ

