ಸರ್ಕಾರದಿಂದ ಬಸ್ ಪ್ರಯಾಣಿಕರಿಗೆ ದೀಪಾವಳಿ ಗಿಫ್ಟ್ – KSRTC, BMTC ಬಸ್ ಟಿಕೆಟ್ ದರ ಏರಿಕೆ

ಸರ್ಕಾರದಿಂದ ಬಸ್ ಪ್ರಯಾಣಿಕರಿಗೆ ದೀಪಾವಳಿ ಗಿಫ್ಟ್ – KSRTC, BMTC ಬಸ್ ಟಿಕೆಟ್ ದರ ಏರಿಕೆ

ರಾಜ್ಯ ಸರ್ಕಾರ ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್ ಕೊಟ್ಟಿದೆ. ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಏರಿಕೆ ಮಾಡಿದೆ. ಪರಿಷ್ಕೃತ ದರ ಬುಧವಾರ (ನವೆಂಬರ್, 04)ರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಘೋಷಿಸಿದ್ದಾರೆ.

ಇದನ್ನೂ ಓದಿ:ಕುಮಾರಸ್ವಾಮಿ ಬುಡ ಗಡಗಡ ! ಕಾಂಗ್ರೆಸ್ ತಂತ್ರನಾ? JDS ಕೈವಾಡನಾ?

ಬುಧವಾರ ಮಧ್ಯರಾತ್ರಿಯಿಂದಲೇ ಕೆಎಸ್​​ಆರ್​​ಟಿಸಿ ಬಸ್ ಟಿಕೆಟ್ ಬೆಲೆ 9 ರೂ. ಏರಿಕೆಯಾಗಿದೆ. KSRTC, BMTC ಸೇರಿದಂತೆ ನಾಲ್ಕು ನಿಗಮಗಳ ಟಿಕೆಟ್ ಬೆಲೆ ಇಂದಿನಿಂದ ಏರಿಕೆಯಾಗಲಿದೆ. ಟಿಕೆಟ್ ದರ ಏರಿಕೆ ಸಾಮಾನ್ಯ ಸಾರಿಗೆಗೆ ಮಾತ್ರ ಅನ್ವಯವಾಗಲಿದ್ದು, ಎಸಿ, ಸ್ಲೀಪರ್, ಐರಾವತ ಯಾವುದಕ್ಕೂ ಅನ್ವಯ ಆಗಲ್ಲ ಎಂದು ಸಚಿವರು ತಿಳಿಸಿದ್ದಾರೆ. ಇದರಿಂದಾಗಿ ಐಷಾರಾಮಿ ಬಸ್‌ಗಳಲ್ಲಿ ಓಡಾಡುವ ಜನರಿಗೆ ಸಣ್ಣ ರಿಲೀಫ್ ಸಿಕ್ಕಂತಾಗಿದೆ. ಬಿಎಂಟಿಸಿ ಬಸ್ ನಲ್ಲಿ ಈ ಹಿಂದೆ ಕನಿಷ್ಠ ದರ ಸ್ಟೇಜ್‌ಗೆ 6 ರೂ.ಇತ್ತು ಇದೀಗ 6 ರೂಪಾಯಿಂದ ರೂ.10 ಗೆ ಏರಿಕೆ ಮಾಡಿದ್ದೇವೆ. ಗರಿಷ್ಠ ದರ 35 ಇಂದ 45 ರೂಪಾಯಿಗೆ ಏರಿಕೆ ಮಾಡಿದ್ದೇವೆ ಎಂದು ಸಾರಿಗೆ ಸಚಿವ  ಭೈರತಿ ಸುರೇಶ್ ತಿಳಿಸಿದ್ದಾರೆ.

ಈ ಹಿಂದೆ ಮೆಜೆಸ್ಟಿಕ್‌ನಿಂದ ನೆಲಮಂಗಲಕ್ಕೆ ₹35 ಇದ್ದ ಬಸ್ ಪ್ರಯಾಣ ದರವು ಇದೀಗ ಬರೋಬ್ಬರಿ ₹44 ಕ್ಕೆ ಏರಿಕೆಯಾಗಿದೆ (ನೇರ ₹9 ಹೆಚ್ಚಳ). ಇದೇ ರೀತಿ ಮೆಜೆಸ್ಟಿಕ್‌ನಿಂದ ಹೊಸಕೋಟೆಗೆ ಪ್ರಯಾಣಿಸುವ ದರವೂ ಕೂಡ ₹35 ರಿಂದ ₹44 ಕ್ಕೆ ಹೆಚ್ಚಳಗೊಂಡಿದೆ. ಬಸ್ ಸಂಚರಿಸುವ ಕಿಲೋಮೀಟರ್ ಹಾಗೂ ನಿಗದಿತ ಹಂತಗಳ  ಲೆಕ್ಕಾಚಾರದಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ.

Sulekha

Leave a Reply

Your email address will not be published. Required fields are marked *