ODIಗೆ ಪಾಟಿದಾರ್ .. ರಿಂಕು ಫಿನಿಶರ್ – PAKಗೆ ಅಭಿ-ವೈಭವ್ ಚಾಲೆಂಜ್
ರೈಸಿಂಗ್ ಸ್ಟಾರ್ ಆಗ್ತಾರಾ ತಿಲಕ್?

ODIಗೆ ಪಾಟಿದಾರ್ .. ರಿಂಕು ಫಿನಿಶರ್ – PAKಗೆ ಅಭಿ-ವೈಭವ್ ಚಾಲೆಂಜ್ರೈಸಿಂಗ್ ಸ್ಟಾರ್ ಆಗ್ತಾರಾ ತಿಲಕ್?

ಟೀಂ ಇಂಡಿಯಾ ಫ್ಯಾನ್ಸ್​ಗಂತೂ ಕಂಟಿನ್ಯೂಯಸ್ ಎಂಟರ್​ಟೈನ್​ಮೆಂಟ್. ನ್ಯೂಜಿಲೆಂಡ್ ವಿರುದ್ಧದ ಸಿರೀಸ್ ನಡುವೆ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಗೆ ಭಾರತದ ಟೀಂ ಅನೌನ್ಸ್ ಆಗಿದೆ. ಫ್ಯೂಚರ್ ಸ್ಟಾರ್ಸ್​ಗೆ ಇದು ಮತ್ತೊಂದು ಅಗ್ನಿಪರೀಕ್ಷೆ. ನವೆಂಬರ್ 19ರಿಂದ 29ರವರೆಗೆ ಕತಾರ್‌ನ ದೋಹಾದಲ್ಲಿ ನಡೆಯಲಿರುವ ಏಷ್ಯನ್  ಕ್ರಿಕೆಟ್ ಕೌನ್ಸಿಲ್ ಮೆನ್ಸ್ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಗೆ ಭಾರತ ಎ ತಂಡ ಘೋಷಣೆ ಮಾಡ್ಲಾಗಿದೆ. 15 ಸದಸ್ಯರ ಈ ತಂಡದಲ್ಲಿ ಅಚ್ಚರಿಯ ಹೆಸರೂಗಳೂ ಇವೆ. ಆರ್​ಸಿಬಿ ಕ್ಯಾಪ್ಟನ್​ಗೆ ವೈಸ್ ಕ್ಯಾಪ್ಟನ್ಸಿ ಸಿಕ್ಕಿದೆ. ವಂಡರ್ ಬಾಯ್ ವೈಭವ್​ಗೆ ಹೊಸ ಚಾಲೆಂಜ್ ಎದುರಾಗಲಿದೆ.

ಇದನ್ನೂ ಓದಿ : ದುಡ್ಡಿಗಾಗಿ ಅಡ್ಡದಾರಿಗಿಳಿದ PAK – ₹23.73 ಲಕ್ಷಕ್ಕೆ PCB ಡಿಮ್ಯಾಂಡ್

ಅಭಿಷೇಕ್ ಶರ್ಮಾ ಅವ್ರ ಸ್ಫೋಟಕ ಬ್ಯಾಟಿಂಗ್, ವೈಭವ್ ಸೂರ್ಯವಂಶಿಯ ಪವರ್ ಹಿಟ್ಟಿಂಗ್.. ರಿಂಕು ಸಿಂಗ್ ಫಿನಿಶಿಂಗ್ ಟಚ್.. ಈ ಮೂವರ ಜೊತೆಗೆ ತಿಲಕ್ ವರ್ಮಾ ಕ್ಯಾಪ್ಟನ್ಸಿ ಌಂಡ್ ರಜತ್ ಪಾಟಿದಾರ್ ಅವ್ರ ಪ್ರಸೆನ್ಸ್.. ಹೀಗೆ ಸಾಕಷ್ಟು ವಿಚಾರಗಳಲ್ಲಿ ಭಾರತ ಎ ಪಡೆ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ ಸದ್ದು ಮಾಡೋಕೆ ಸಜ್ಜಾಗಿದೆ. ಌಂಡ್ ಪಾಕಿಸ್ತಾನ ಎ ವಿರುದ್ಧದ ಹೈವೋಲ್ಟೇಜ್ ಪಂದ್ಯ ಕೂಡ ಇದೆ.  ತಿಲಕ್ ವರ್ಮಾ ಕ್ಯಾಪ್ಟನ್!

ಭಾರತ ಎ ತಂಡದ 15 ಆಟಗಾರರು

ಅಭಿಷೇಕ್ ಶರ್ಮಾ

ವೈಭವ್ ಸೂರ್ಯವಂಶಿ

ಪ್ರಭ್‌ ಸಿಮ್ರನ್ ಸಿಂಗ್

ತಿಲಕ್ ವರ್ಮಾ

ರಜತ್ ಪಾಟಿದಾರ್

ರಿಂಕು ಸಿಂಗ್

ಕುಮಾರ್ ಕುಶಾಗ್ರ

ಸೂರ್ಯಾಂಶ್ ಶೆಡ್ಗೆ

ಶಹಬಾಜ್ ಅಹ್ಮದ್

ವಿಪ್ರಾಜ್ ನಿಗಮ್

ಹರ್ಷ್ ದುಬೆ

ತನುಷ್ ಕೋಟಿಯನ್

ಹರ್ಷಿತ್ ರಾಣಾ

ಪ್ರಿನ್ಸ್ ಯಾದವ್

ಅರ್ಷದ್ ಖಾನ್

ಹೀಗೆ ಆಲ್ಮೋಸ್ಟ್ ಈ ತಂಡದಲ್ಲಿ ಹೊಸಬರೇ ಇದ್ದಾರೆ. ಹಾಗೇ ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರವೂ ಇದೆ. ಈ ಬಾರಿಯ ಟೂರ್ನಿಯಲ್ಲಿ ಮೇಜರ್ ಚೇಂಜಸ್ ಆಗಿದೆ. ಕಳೆದ ಆವೃತ್ತಿಯನ್ನು ಟಿ20 ಮಾದರಿಯಲ್ಲಿ ನಡೆಸಲಾಗಿತ್ತು. ಆದ್ರೆ ಈ ಸಲ 50 ಓವರ್‌ಗಳ ಮಾದರಿಯಲ್ಲಿ ನಡೆಯಲಿದೆ. ಒಟ್ಟು ಎಂಟು ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು, ಅವುಗಳನ್ನು ಎರಡು ಗುಂಪುಗಳಾಗಿ ಡಿವೈಡ್ ಮಾಡಿದ್ದಾರೆ. ಗ್ರೂಪ್ ಎನಲ್ಲಿ ಶ್ರೀಲಂಕಾ ಎ, ಬಾಂಗ್ಲಾದೇಶ ಎ, ಅಫ್ಘಾನಿಸ್ತಾನ ಎ ಹಾಗೇ ಹಾಂಗ್ ಕಾಂಗ್ ಟೀಮ್​ಗಳು ಆಡಲಿವೆ. ಗ್ರೂಪ್ ಬಿನಲ್ಲಿ ಭಾರತ ಎ, ಪಾಕಿಸ್ತಾನ ಎ, ನೇಪಾಳ ಹಾಗೇ ಯುಎಇ ತಂಡಗಳು ಫೈಟ್ ನಡೆಸಲಿವೆ. ಲೀಗ್ ಹಂತದಲ್ಲಿ ಪ್ರತಿ ತಂಡವು ತನ್ನ ಗುಂಪಿನ ಉಳಿದ ಮೂರು ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಲಿದೆ. ಟೋಟಲ್  12 ಪಂದ್ಯಗಳು ನಡೆಯಲಿವೆ. ಎರಡೂ ಗುಂಪುಗಳಲ್ಲಿ ಟಾಪ್ ಟುನಲ್ಲಿ ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಌಂಡ್ ಈ ಟೂರ್ನಿಯಲ್ಲೂ ಹೈಲೆಟ್ ಅಂದ್ರೆ ಇಂಡೋ-ಪಾಕ್ ಫೈಟ್.  ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ನಡುವೆ ನವೆಂಬರ್ 22ರಂದು ಮಧ್ಯಾಹ್ನ 3:30ಕ್ಕೆ ಪಂದ್ಯ ನಡೆಯಲಿದೆ. ಇನ್ನು ಭಾರತದ ಪರ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿಗೆ 50 ಓವರ್​ಗಳ ಮಾದರಿಯಲ್ಲಿ ತಮ್ಮ ಟ್ಯಾಲೆಂಟ್ ತೋರಿಸಲು ಇದು ಬೆಸ್ಟ್ ಆಪರ್ಚುನಿಟಿ ಕೂಡ ಆಗಿದೆ.

Shantha Kumari

Leave a Reply

Your email address will not be published. Required fields are marked *