ದುಡ್ಡಿಗಾಗಿ ಅಡ್ಡದಾರಿಗಿಳಿದ PAK – ₹23.73 ಲಕ್ಷಕ್ಕೆ PCB ಡಿಮ್ಯಾಂಡ್
ನಖ್ವಿ ವಿರುದ್ಧ ತಿರುಗಿಬಿದ್ದ ಪ್ಲೇಯರ್ಸ್

ದುಡ್ಡಿಗಾಗಿ ಅಡ್ಡದಾರಿಗಿಳಿದ PAK – ₹23.73 ಲಕ್ಷಕ್ಕೆ PCB ಡಿಮ್ಯಾಂಡ್ನಖ್ವಿ ವಿರುದ್ಧ ತಿರುಗಿಬಿದ್ದ ಪ್ಲೇಯರ್ಸ್

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ದಿವಾಳಿಯಾಗ್ತಿದೆ ಅನ್ನೋದು ಜಗತ್ತಿಗೇ ಗೊತ್ತಿರೋ ವಿಚಾರ. ತಂಡದ ಕಳಪೆ ಪ್ರದರ್ಶನ, Sponsors ಹಾಗೇ ಬ್ರಾಡ್​​ಕಾಸ್ಟರ್​ಗಳ ನಿರಾಸಕ್ತಿ ಜೊತೆಗೆ ಮಂಡಳಿಯಲ್ಲೇ ಸಾಕಷ್ಟು ಇಶ್ಯೂಗಳಿವೆ. ಆಟಗಾರರ ಸ್ಯಾಲರಿ ಕಟ್ ಮಾಡೋ ಹಂತಕ್ಕೆ ಇಳಿದಿರೋ ಪಿಸಿಬಿ ಈಗ ವಿದೇಶಿ ಲೀಗ್​ಗಳಲ್ಲಿ ತಮ್ಮ ಪ್ಲೇಯರ್ಸ್ ಆಡೋಕೂ ಲಂಚ ಕೇಳಿದೆ. ಅಂದ್ರೆ ಎನ್​ಓಸಿ ನೀಡಲು ಹಣಕ್ಕೆ ಡಿಮ್ಯಾಂಡ್ ಮಾಡಿದ್ದು ಪಾಕ್ ಆಟಗಾರರು ಲೀಗ್​ನಿಂದಲೇ ಹೊರ ಬಿದ್ದಿದ್ದಾರೆ.

ಇದನ್ನೂ ಓದಿ : ಗಿಲ್.. KL ಔಟ್.. ತಿಲಕ್ ಇನ್ – 5 ಏಕದಿನ ಪಂದ್ಯಗಳಿಗೆ 2 ಟೀಂ

ನೇಪಾಳ ಪ್ರೀಮಿಯರ್ ಲೀಗ್ ಆರಂಭ ಆದ್ರೂ ಪಾಕ್ ಆಟಗಾರರಿಗೆ ಎನ್​ಒಸಿ ಸಿಗದ ಕಾರಣಕ್ಕೆ ಲೀಗ್​ನಿಂದಲೇ ಹೊರ ಬಿದ್ದಿದ್ದಾರೆ. ಎನ್​ಪಿಎಲ್​ನ ಮೂರನೇ ಆವೃತ್ತಿಯಲ್ಲಿ ಪಾಕಿಸ್ತಾನದ ಏಳು ಆಟಗಾರರು ಆಡಬೇಕಿತ್ತು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ NOC ಷರತ್ತುಗಳಿಂದ ಆಟಗಾರರು ಟೂರ್ನಿಯಿಂದ ಹೊರಬಂದಿದ್ದಾರೆ. ಸಾಹಿಬ್ಜಾದಾ ಫರ್ಹಾನ್, ಇಫ್ತಿಖಾರ್ ಅಹ್ಮದ್, ಹುನೇನ್ ಶಾ, ಉಸಾಮಾ ಮಿರ್, ಹಸನ್ ಅಲಿ ಹಾಗೇ ಹೈದರ್ ಅಲಿಗೆ ಗೇಟ್ ಪಾಸ್ ಸಿಕ್ಕಿದೆ. ನೇಪಾಳ ಲೀಗ್​ನಲ್ಲಿ ಆಡಿ ಅಷ್ಟೋ ಇಷ್ಟೋ ದುಡ್ಡು ಮಾಡಿಕೊಳ್ಳೋಣ ಅಂತಿದ್ದೋರಿಗೆ ಪಿಸಿಬಿಯೇ ಶಾಕ್ ಕೊಟ್ಟಿದೆ. ಎನ್​ಪಿಎಲ್ ಮೂಲಗಳು ಮತ್ತು ಫ್ರಾಂಚೈಸಿಗಳ ಪ್ರಕಾರ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನೇತೃತ್ವದ ಮಂಡಳಿಯು ಹಣವನ್ನು ಪಾವತಿಸುವಂತೆ ಫ್ರಾಂಚೈಸಿ ಸಂಘಟಕರಿಗೆ ಒತ್ತಾಯಿಸಿದೆ.

ಎನ್ ಓಸಿ ಬೇಕಂದ್ರೆ 23 ಲಕ್ಷ ರೂ ಕೊಡಿ ಎಂದ ಪಿಸಿಬಿ!

ವಿದೇಶಿ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡಲು ಮಂಡಳಿಯ ಅನುಮತಿ ಕಡ್ಡಾಯ. ಆದ್ರೆ ಈ ಅನುಮತಿ ನೀಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರತಿ ಆಟಗಾರನಿಗೆ 25,000 ಅಮೆರಿಕನ್ ಡಾಲರ್ ಅಂದ್ರೆ ಸುಮಾರು ₹23.73 ಲಕ್ಷ ರೂಪಾಯಿ ಹಣ ಕಟ್ಟುವಂತೆ ಡಿಮ್ಯಾಂಡ್ ಮಾಡಿದೆ. ಜನಕಪುರ್ ಬೋಲ್ಟ್ಸ್ ತಂಡದ ಸಿಇಒ ನಿರೋಜ್ ಖತಿವಾಡ ಅವರು, ಪಿಸಿಬಿ ನೇರವಾಗಿ ತಮಗೆ ಈ ಬೇಡಿಕೆ ಇಟ್ಟಿಲ್ಲವಾದರೂ, ಆಟಗಾರರ ಏಜೆಂಟ್ ಮೂಲಕ ಹಣದ ಬೇಡಿಕೆಯ ವಿಷಯ ತಮಗೆ ತಿಳಿದುಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಲೀಗ್ ಆರಂಭವಾಗುವ ಹೊತ್ತಲ್ಲಿ ಪಿಸಿಬಿಯ ಈ ಚೆಲ್ಲಾಟದಿಂದ ಪಾಕ್ ಆಟಗಾರರ ಬದಲಿಗೆ ಬಾಂಗ್ಲಾದೇಶ ಮತ್ತು ಇತರ ದೇಶಗಳ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಹಾಗಂತ ಪಿಸಿಬಿಯ ಈ ಆಟ ಇದೇ ಮೊದಲೇನೂ ಅಲ್ಲ. ಇದಕ್ಕೂ ಮೊದಲು, ಅಮೆರಿಕ ಮೂಲದ ಮೇಜರ್ ಲೀಗ್ ಕ್ರಿಕೆಟ್ (MLC) ನ ಫ್ರಾಂಚೈಸಿಗಳ ಮಾಲೀಕರು ಇದೇ ರೀತಿಯ ಆರೋಪಗಳನ್ನ ಮಾಡಿದ್ರು. PCB ಪ್ರತಿ ಆಟಗಾರನಿಗೆ NOC ಗಳನ್ನು ನೀಡಲು $25,000 ಬೇಡಿಕೆ ಇಡುತ್ತಿದೆ ಎಂದು ಆರೋಪಿಸಿದ್ದರು. ಹೀಗೆ ವಿದೇಶಿ ಲೀಗ್​ಗಳಲ್ಲಿ ಆಡಲು ಸಾಧ್ಯವಾಗದೆ ಪಾಕ್ ಪ್ಲೇಯರ್ಸ್ ಪಿಸಿಬಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಎನ್ ಒಸಿ ವಿಚಾರವಾಗಿ ಪಿಸಿಬಿ & ಪ್ಲೇಯರ್ಸ್ ನಡುವೆ ಬಿರುಕು!

ವಿದೇಶಿ ಲೀಗ್‌ಗಳಿಗೆ ಭಾರವಹಿಸಲು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ಪಡೆಯುವ ವಿಚಾರದಲ್ಲಿ ಪಿಸಿಬಿ ಮತ್ತು ಪಾಕಿಸ್ತಾನಿ ಕ್ರಿಕೆಟಿಗರ ನಡುವೆ ಬಿರುಕು ಮೂಡಿದೆ ಎನ್ನಲಾಗಿದೆ. ಯಾಕಂದ್ರೆ ಈಗಾಗ್ಲೇ ಪಾಕ್​ನಿಂದ ಆಯ್ಕೆಯಾಗಿದ್ದ ಪ್ಲೇಯರ್ಸ್ ನೇಪಾಳದಲ್ಲಿದ್ರು. ಪ್ರಾಕ್ಟೀಸ್ ಗಳನ್ನ ಮಾಡಿದ್ರು. ಫ್ರಾಂಚೈಸಿ ಜೊತೆ ಒಪ್ಪಂದಗಳನ್ನೂ ಮಾಡಿಕೊಂಡಿದ್ರು. ಆದ್ರೆ ಅನುಮತಿ ಸಿಗದ ಕಾರಣ ಮೈದಾನಕ್ಕಿಳಿಯದೆ ವಾಪಸ್ ಆಗಿದ್ದಾರೆ. ಇದ್ರಿಂದಾಗಿ ತಮ್ಮ ಟೈಂ ವೇಸ್ಟ್ ಆಗಿದೆ. ಒಪ್ಪಂದವಾಗಿದ್ದ ಹಣವೂ ಸಿಗದಾಗಿದೆ ಎಂದು ಆಟಗಾರರು ಪಿಸಿಬಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಒಟ್ನಲ್ಲಿ ಪಾಕ್ ಕ್ರಿಕೆಟ್ ಮಂಡಳಿ ಬರ್ಬಾಬ್ ಆಗೋದನ್ನ ತಪ್ಪಿಸಿಕೊಳ್ಳೋಕೆ ಅಡ್ಡ ದಾರಿ ಹಿಡಿಯುತ್ತಿದೆ. ಇದು ಪಿಸಿಬಿಯಲ್ಲಿ ದೊಡ್ಡ ಕಿಡಿ ಹಚ್ಚೋ ಸಾದ್ಯತೆಗಳೂ ಇದೆ.

Shantha Kumari

Leave a Reply

Your email address will not be published. Required fields are marked *