RO-KO To KL.. ಬ್ಯಾಟಿಂಗ್ ಬೆಂಕಿ – ODIನಲ್ಲೂ ಸಪ್ಪೆಯಾಗುತ್ತಾ ಬೌಲಿಂಗ್?
NZ ಬೇಟೆಗೆ ಹೊಸ ಪ್ಲೇಯಿಂಗ್ 11

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ನಾಳೆಯಿಂದ ಸ್ಟಾರ್ಟ್ ಆಗಲಿದೆ. ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ಮೊದಲ ಪಂದ್ಯ ನಡೆಯಲಿದ್ದು ಸರಣಿಯ ಮೊದಲ ಮೂರು ಪಂದ್ಯಗಳಿಗೆ ಶುಭಮನ್ ಗಿಲ್ ಕ್ಯಾಪ್ಟನ್ ಆದ್ರೆ ಶ್ರೇಯಸ್ ಅಯ್ಯರ್ ಕೊನೆಯ ಎರಡು ಪಂದ್ಯಗಳನ್ನ ಲೀಡ್ ಮಾಡ್ತಾರೆ. 2027ರ ಏಕದಿನ ವಿಶ್ವಕಪ್ ಹಿನ್ನೆಲೆ ಈ ಸರಣಿಯನ್ನ ಭಾರತ ಗೆಲ್ಲಲೇಬೇಕಿದೆ.
ಇದನ್ನೂ ಓದಿ : ಗಿಲ್.. KL ಔಟ್.. ತಿಲಕ್ ಇನ್ – 5 ಏಕದಿನ ಪಂದ್ಯಗಳಿಗೆ 2 ಟೀಂ
2018/19ರ ಆಸ್ಟ್ರೇಲಿಯಾ ಭಾರತ ಪ್ರವಾಸದ ನಂತರ ಭಾರತ ಆಡುತ್ತಿರುವ ಮೊದಲ ಐದು ಪಂದ್ಯಗಳ ಏಕದಿನ ಸರಣಿ ಇದು. ಏಕದಿನ ಮಾದರಿಯಲ್ಲಿ ಪ್ರಸ್ತುತ ಎರಡೂ ತಂಡಗಳು ಟಾಪ್ನಲ್ಲೇ ಇದ್ದಾರೆ. ಐಸಿಸಿ ಏಕದಿನ ರ್ಯಾಂಕಿಂಗ್ ತಂಡಗಳ ಪೈಕಿ ಭಾರತ ನಂಬರ್ 1ನಲ್ಲಿದ್ರೆ ಕಿವೀಸ್ ಪಡೆ ಎರಡನೇ ಸ್ಥಾನದಲ್ಲಿದೆ. ಹಾಗೇ ಬ್ಯಾಟಿಂಗ್ ಆರ್ಡರ್ ನಲ್ಲಿ ಟಾಪ್ 4 ಪೈಕಿ ಮೂವರು ಭಾರತೀಯರೇ ಇದ್ದಾರೆ. ಟಾಪ್ 2ನಲ್ಲಿ ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಇದ್ದಾರೆ. ಅದ್ರಲ್ಲೂ ಭಾರತದ ನಾಯಕ ಶುಭಮನ್ ಗಿಲ್ ಕಳೆದ ಐದು ಪಂದ್ಯಗಳಲ್ಲಿ 442 ರನ್ ಗಳಿಸಿ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ. 1 ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ವೈಸ್ ಕ್ಯಾಪ್ಟನ್ ಡ್ಯಾರಿಲ್ ಮಿಚೆಲ್ ಕಳೆದ ಐದು ಪಂದ್ಯಗಳಲ್ಲಿ 389 ರನ್ ಗಳಿಸಿ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 2 ನೇ ಸ್ಥಾನದಲ್ಲಿದ್ದಾರೆ. ಇದೇ ಕಾರಣಕ್ಕೆ ಈ ಏಕದಿನ ಸರಣಿಯಲ್ಲಿ ಟಫ್ ಫೈಟ್ ಅಂತೂ ಇರಲಿದೆ. ಅದೂ ಅಲ್ದೇ ಈ ಆಕ್ಲೆಂಡ್ ಪಿಚ್ನಲ್ಲಿ ಭಾರತ 11 ಏಕದಿನ ಪಂದ್ಯಗಳನ್ನ ಆಡಿದ್ದು ಗೆದ್ದಿದ್ದೇ 4 ಮ್ಯಾಚಸ್.. 6ರಲ್ಲಿ ಸೋತ್ರೆ 1 ಪಂದ್ಯ ಟೈ ಆಗಿದೆ.. 2022ರಲ್ಲಿ ಕೊನೇ ಬಾರಿ ಇಲ್ಲಿ ಪಂದ್ಯ ಆಡಿದ್ದ ಭಾರತ ಸೋಲು ಕಂಡಿತ್ತು.
ಹೇಗಿರುತ್ತೆ ಪ್ಲೇಯಿಂಗ್ 11?
ರೋಹಿತ್ ಶರ್ಮಾ
ಶುಭಮನ್ ಗಿಲ್
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಕೆ.ಎಲ್. ರಾಹುಲ್
ನಿತೀಶ್ ಕುಮಾರ್ ರೆಡ್ಡಿ
ಅಕ್ಷರ್ ಪಟೇಲ್
ಕುಲದೀಪ್ ಯಾದವ್
ಮೊಹಮ್ಮದ್ ಸಿರಾಜ್
ಅರ್ಷದೀಪ್ ಸಿಂಗ್
ಔಕಿಬ್ ನಬಿ
ಉಳಿದಂತೆ ಇಶಾನ್ ಕಿಶನ್, ನಮನ್ ಧೀರ್, ಅನ್ಶುಲ್ ಕಾಂಬೋಜ್ ಹಾಗೇ ರುತುರಾಜ್ ಗಾಯಕ್ವಾಡ್ ಬೆಂಚ್ ಕಾಯಬೇಕಾಗಬಹುದು. ಮತ್ತೊಂದೆಡೆ ಈಡನ್ ಪಾರ್ಕ್ನಲ್ಲಿ ವೇಗದ ಬೌಲರ್ಗಳಿಗೆ ಹೆಚ್ಚಿನ ಸಪೋರ್ಟ್ ಸಿಗೋದ್ರಿಂದ ಮೂವರು ವೇಗದ ಬೌಲರ್ಗಳು, ಇಬ್ಬರು ಸ್ಪಿನ್ನರ್ಗಳು ಮತ್ತು ನಿತೀಶ್ ರೆಡ್ಡಿ ಇರುವ ಕಾಂಬಿನೇಷನ್ ಬೆಸ್ಟ್ ಆಪ್ಶನ್ ಅನ್ಸುತ್ತೆ. ನಮನ್ ಧೀರ್ ಆಡಿಸ್ಬೋದಿತ್ತು. ಬ್ಯಾಟಿಂಗ್ ಚೆನ್ನಾಗಿದೆ. ಬಟ್ ಬೌಲಿಂಗ್ ಕಷ್ಟ ಇರೋದ್ರಿಂದ ನಮನ್ ಆಡೋದು ಡೌಟ್ ಇದೆ. ಬಟ್ ಭಾರತ ತಂಡದಲ್ಲಿ ಬ್ಯಾಟಿಂಗ್ ಆರ್ಡರ್ ಅಂತೂ ಪಕ್ಕಾ ಇದೆ. ಅಲ್ಲೇನು ಜಾಸ್ತಿ ಚೇಂಜಸ್ ಇರಲ್ಲ. ಬಟ್ ಬೌಲಿಂಗ್ ಬಗ್ಗೆ ಸ್ವಲ್ಪ ಟೆನ್ಷನ್ ಇದ್ದೇ ಇರುತ್ತೆ. ಅಟ್ಲೀಸ್ಟ್ ಈ ಸಲನಾದ್ರೂ ಬೌಲರ್ಸ್ ಕ್ಲಿಕ್ ಆಗ್ತಾರಾ ನೋಡ್ಬೇಕು. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಇಲ್ಲದ ತಂಡದಲ್ಲಿ ಇನ್ಯಾವಾಗ ಸ್ಟ್ರಾಂಗ್ ಆಗ್ತಾರೋ ಅನ್ನೋದೇ ಇಲ್ಲಿರೋ ಪ್ರಶ್ನೆ. ಇನ್ನು ಸರಣಿ ಆರಂಭದ ಬಗ್ಗೆ ನೋಡೋದಾದ್ರೆ ನ್ಯೂಜಿಲೆಂಡ್ ಟೈಮಿಂಗ್ಸ್ ಪ್ರಕಾರ ಮಧ್ಯಾಹ್ನ 3:00 ಗಂಟೆಗೆ ಪ್ರಾರಂಭವಾಗುತ್ತದೆ, ಅಂದರೆ ಇಂಡಿಯನ್ಸ್ ಟೈಮಿಂಗ್ಸ್ ಪ್ರಕಾರ ಬೆಳಿಗ್ಗೆ 7:30ರಿಂದ ಶುರುವಾಗಿತ್ತೆ. ಌಂಡ್ ಸರಣಿಯ ಎಲ್ಲಾ ಐದು ಪಂದ್ಯಗಳು ಇದೇ ಟೈಮಲ್ಲೇ ಶುರುವಾಗುತ್ವೆ. ಹೀಗಾಗಿ ಭಾರತೀಯರಿಗೆ ಬೆಳಗ್ಗೆ ಬೆಳಗ್ಗೆಯೇ ಎದ್ದು ಮ್ಯಾಚ್ ನೋಡೋ ಅನಿವಾರ್ಯತೆಯೂ ಇದೆ.

ನೋಡಿರಿ

