ಮಂಡ್ಯ ಉಸ್ತುವಾರಿ ಸ್ಥಾನದಿಂದ ಆರ್.ಅಶೋಕ್ ಔಟ್ – ಬಿಜೆಪಿಯೊಳಗಿನ ಬೆಂಕಿಯೇ ಕಾರಣನಾ..!?

ಮಂಡ್ಯ ಉಸ್ತುವಾರಿ ಸ್ಥಾನದಿಂದ ಆರ್.ಅಶೋಕ್ ಔಟ್ – ಬಿಜೆಪಿಯೊಳಗಿನ ಬೆಂಕಿಯೇ ಕಾರಣನಾ..!?

ವಿಧಾನಸಭಾ ಚುನಾವಣಾ ಹೊಸ್ತಿಲಲ್ಲೇ ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ಉಸ್ತುವಾರಿ ಸಚಿವರ ನೇಮಕ ವಿಚಾರ ಭಾರೀ ಹಲ್​ಚಲ್ ಸೃಷ್ಟಿಸಿತ್ತು. ಸಚಿವ ಆರ್.ಅಶೋಕ್​ರನ್ನ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಆದ್ರೆ ನೇಮಕ ಮಾಡಿ 15 ದಿನಗಳಲ್ಲೇ ಟ್ವಿಸ್ಟ್ ಸಿಕ್ಕಿದೆ.

ಇದನ್ನೂ ಓದಿ : ಸಚಿವರ ಮೇಲೆ ತುರಿಕೆ ಪುಡಿ – ಸಭೆಯಲ್ಲೇ ಬಟ್ಟೆ ಬಿಚ್ಚಿ ತೊಳೆದುಕೊಂಡ ವಿಡಿಯೋ ವೈರಲ್..!

ಹೌದು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ್ದು, ಆ ಸ್ಥಾನದಿಂದ ಆರ್​. ಅಶೋಕ್ ಔಟ್ ಆಗಿದ್ದಾರೆ. ಜನವರಿ 24 ರಂದು ಸರ್ಕಾರ ಆರ್. ಅಶೋಕ್​ರನ್ನ ಉಸ್ತುವಾರಿಯನ್ನಾಗಿ ನೇಮಿಸಿ ಆದೇಶ ಮಾಡಿತ್ತು. ಆದ್ರೆ ಕೆ.ಗೋಪಾಲಯ್ಯ ಅವರ ಬದಲಿಗೆ ಆರ್.ಅಶೋಕ್​ರನ್ನ ಉಸ್ತುವಾರಿಯಾಗಿ ನೇಮಕ ಮಾಡಿದ್ದು ಬಿಜೆಪಿ ಪಾಳಯದಲ್ಲೇ ಬಿರುಗಾಳಿ ಎಬ್ಬಿಸಿತ್ತು.

ಅಶೋಕ್ ನೇಮಕ ವಿರೋಧಿಸಿ ಗೋಪಾಲಯ್ಯ ಬೆಂಬಲಿಗರು ಗೋ ಬ್ಯಾಕ್ ಆರ್. ಅಶೋಕ್ ಅಂತಾ ಬಿತ್ತಿಪತ್ರಗಳನ್ನ ಅಂಟಿಸಿ ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಉಸ್ತುವಾರಿಯಿಂದ ಮುಕ್ತ ಮಾಡಿ ಎಂದು ಸಚಿವ ಆರ್.ಅಶೋಕ್ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದರು.

ಉಸ್ತುವಾರಿ ಬದಲಾವಣೆ ವಿಚಾರವಾಗಿ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಉಸ್ತುವಾರಿ ಸಚಿವ ಸ್ಥಾನದಿಂದ ಅಶೋಕ್​ರನ್ನು ಮುಕ್ತ ಮಾಡಲಾಗಿದೆ. ಗ್ರಾಮ ವಾಸ್ತವ್ಯ ಮಾಡಲು ಆರ್​.ಅಶೋಕ್​ಗೆ ಸೂಚನೆ ನೀಡಿದ್ದೇನೆ. ಹಲವು ಕಾರ್ಯಕ್ರಮ ವಹಿಸಿದ್ದೇವೆ. ಹಾಗಾಗಿ ಅಶೋಕ್​ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಮುಕ್ತಿ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

suddiyaana