ಗಂಭೀರ್ ಡಿಕ್ಷನರಿಯಲ್ಲಿಲ್ಲ ಭಯ – ವೈಭವ್ ಕೈಬಿಟ್ಟಿದ್ದು ಇದಕ್ಕೇನಾ?
RO-KO ಪರ ನಿಂತಿದ್ದೇಕೆ?

ಗಂಭೀರ್ ಡಿಕ್ಷನರಿಯಲ್ಲಿಲ್ಲ ಭಯ – ವೈಭವ್ ಕೈಬಿಟ್ಟಿದ್ದು ಇದಕ್ಕೇನಾ?RO-KO ಪರ ನಿಂತಿದ್ದೇಕೆ?

ನ್ಯೂಜಿಲೆಂಡ್ ವಿರುದ್ಧದ ಟಿ-20ಐ ಸಿರೀಸ್​ನಲ್ಲಿ ಟೀಂ ಇಂಡಿಯಾಗೆ ಸ್ಟಾರ್ಟ್ ಚೆನ್ನಾಗಿ ಸಿಕ್ರೂ ಎಂಡಿಂಗ್ ಮಾತ್ರ ಖರಾಬಾಗಿತ್ತು. ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಸೋಲು. ಸ್ವಲ್ಪ ಮಿಸ್ ಆಗಿದ್ರೂ ಸರಣಿನೇ ಕಳ್ಕೊಳ್ತಿದ್ರೋ ಏನೋ. ಈ ಸೋಲುಗಳ ಬಳಿಕ ಆಟಗಾರರ ಪ್ರದರ್ಶನ ಹಾಗೇ ಟೀಂ ಸೆಲೆಕ್ಷನ್ ಬಗ್ಗೆಯೂ ಚರ್ಚೆಗಳಾಗ್ತಿವೆ. ಈ ಬಗ್ಗೆ ಹೆಡ್ ಕೋಚ್ ಗೌತಮ್ ಗಂಭೀರ್ ಖಾರವಾಗೇ ಮಾತನಾಡಿದ್ದಾರೆ. ಌಂಡ್ ನಾನು ಯಾರನ್ನೂ ಮೆಚ್ಚಿಸೋಕೆ ಬಂದಿಲ್ಲ. ನನಗೆ ಭಯನೇ ಗೊತ್ತಿಲ್ಲ ಅಂತಿದ್ದಾರೆ.

ಇದನ್ನೂ ಓದಿ : SIXERನಲ್ಲೂ ಭಾರತವೇ BOSS – 10 ಎಸೆತಗಳಲ್ಲೇ 1 ಬಿಗ್ ಹಿಟ್

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್​ಕೋಚ್ ಆದ್ಮೇಲೆ ಅವ್ರ ಪರವಿರೋಧದ ಟಾಕ್ ಇದ್ದೇ ಇದೆ. ಹಾಗೇ ಅವ್ರ ನಿರ್ಧಾರಗಳ ಬಗ್ಗೆಯೂ ಪ್ರಶ್ನೆಗಳು ಬರ್ತಾ ಇರುತ್ತೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮುಗಿದ ಬಳಿಕ ಗೌತಮ್ ಗಂಭೀರ್ ನೀಡಿರೋ ಸ್ಟೇಟ್​ಮೆಂಟ್ಸ್ ಹಲ್​ಚಲ್ ಎಬ್ಬಿಸಿದೆ. ವೈಭವ್ ಸೂರ್ಯವಂಶಿಯನ್ನ ಯಾಕೆ ಆಡಿಸಲಿಲ್ಲ ಅನ್ನೋ ಪ್ರಶ್ನೆಗೆ ಖಡಕ್ಕಾಗೇ ಆನ್ಸರ್ ಕೊಟ್ಟಿದ್ದಾರೆ.

ನನ್ನ ಡಿಕ್ಷನರಿಯಲ್ಲಿ ‘ಡರ್’ (ಭಯ) ಅನ್ನೋ ಪದವೇ ಇಲ್ಲ!

ಐದನೇ ಪಂದ್ಯದಲ್ಲಿ ಭಾರತದ ಸೋಲಿನ ಬಳಿಕ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬಹುದಿತ್ತು ಅನ್ನೋದು ಕೆಲವರ ಅಭಿಪ್ರಾಯ. ಈ ಬಗ್ಗೆ ಮಾತನಾಡಿದ ಗಂಭೀರ್ ನಾನು ಯಾರನ್ನೋ ಮೆಚ್ಚಿಸಲು ಅಥವಾ ಖುಷಿ ಪಡಿಸಲು ನನ್ನ ಕೆಲಸ ಮಾಡ್ತಿಲ್ಲ ಅಂದಿದ್ದಾರೆ. ಹಾಗೇ ನನ್ನ ಡಿಕ್ಷನರಿ ಮತ್ತು ಡೈರೆಕ್ಟರಿಯಲ್ಲಿ ಡರ್ (ಭಯ) ಎಂಬ ಪದವೇ ಇಲ್ಲ ಎಂದಿದ್ದಾರೆ. ಇದೇ ವೇಳೆ ಆಟಗಾರರ ಪ್ರದರ್ಶನವನ್ನೂ ಮೆಚ್ಚಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸಿರೀಸ್ ಬಳಿಕ 15ಗಂಟೆಗಳ ಸುದೀರ್ಘ ವಿಮಾನ ಪ್ರಯಾಣದ ಬಳಿಕ ಒಂದು ದಿನವಷ್ಟೇ ಅಭ್ಯಾಸ ಮಾಡಿ ಮೊದಲ ಪಂದ್ಯವನ್ನು ಗೆದ್ದ ರೀತಿ ನಿಜಕ್ಕೂ ಅದ್ಭುತ ಎಂದಿದ್ದಾರೆ. ಇದೇ ವೇಳೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಗ್ಗೆಯೂ ನೀಡಿದ ಹೇಳಿಕೆಗಳು ಸದ್ದು ಮಾಡ್ತಿದೆ.

ನಾಯಕ ಗಿಲ್ ಗೆ ರೋಹಿತ್-ಕೊಹ್ಲಿ ಬೆಂಬಲವೇ ಅದೃಷ್ಟ!

ಗೌತಮ್ ಗಂಭೀರ್ ಹೆಡ್ ಕೋಚ್ ಆದ ಆರಂಭದ ದಿನಗಳಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಚಾರದಲ್ಲಿ ಸ್ವಲ್ಪ ಅಗ್ರೆಸ್ಸಿವ್ ಆಗಿದ್ರು. ಸೀನಿಯರ್ಸ್ ಯಾರೂ ಬೇಡ ಅನ್ನೋ ಲೆಕ್ಕಕ್ಕೆ ಮಾತನಾಡ್ತಿದ್ರು. ಆದ್ರೀಗ ರೋಕೋ ವಿಚಾರದಲ್ಲಿ ಗಂಭೀರ್ ಸಾಫ್ಟ್ ಆಗಿದ್ದಾರೆ. ಶುಭ್‌ಮನ್ ಗಿಲ್​ಗೆ ರೋಹಿತ್ ಮತ್ತು ಕೊಹ್ಲಿ ಬೆಂಬಲವಿರುವುದು ದೊಡ್ಡ ಆಸ್ತಿ ಎಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜರು ಮೈದಾನದ ಒಳಗೆ ಮತ್ತು ಹೊರಗೆ ಗಿಲ್‌ಗೆ ಮಾರ್ಗದರ್ಶನ ನೀಡುತ್ತಿರುವುದು ಆತನ ಅದೃಷ್ಟ. ರೋಹಿತ್ ಮತ್ತು ವಿರಾಟ್ ತಂಡದ ಪಿಲ್ಲರ್ಸ್. ಇಬ್ಬರಲ್ಲೂ ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿ ಇದೆ. ಅವರು ಫಿಟ್‌ನೆಸ್ ಕಾಯ್ದುಕೊಂಡರೆ 2027ರ ಏಕದಿನ ವಿಶ್ವಕಪ್‌ನಲ್ಲೂ ಆಡಬಹುದು ಎಂದಿದ್ದಾರೆ.  ಸೋ ಅಲ್ಲಿಗೆ ರೋಕೋ ವಿಚಾರದಲ್ಲಿ ಗಂಭೀರ್ ಸ್ವಲ್ಪ ಸಾಫ್ಟ್ ಆಗಿದ್ದಾರೆ. ಗಂಭಿರ್​ರ ಈ ಬದಲಾವಣೆಗೆ ಕಾರಣಗಳೂ ಇವೆ.

ಬ್ಯಾಟ್ ನಲ್ಲೇ ಉತ್ತರ ನೀಡುತ್ತಿರುವ ರೋಹಿತ್ & ಕೊಹ್ಲಿ!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡ್ತಿದ್ದಾರೆ. ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಬರ್ತಿದೆ. ಇದೇ ಕಾರಣಕ್ಕೆ ಗಂಭೀರ್ ಕೂಡ ಗಪ್ ಚುಪ್ ಆಗಿದ್ದಾರೆ. ರೋಹಿತ್ ಶರ್ಮಾ ತಮ್ಮ ಕೊನೆಯ 10 ಇನಿಂಗ್ಸ್‌ಗಳಿಂದ ಒಟ್ಟು 554 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 2 ಅರ್ಧಶತಕಗಳು ಸೇರಿವೆ.   ವೆಸ್ಟ್ ಇಂಡೀಸ್ ವಿರುದ್ಧ 101 ರನ್ ಮತ್ತು ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಬಾರಿಸಿದ 138 ರನ್‌ಗಳ ಅಬ್ಬರವೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಇನ್ನು ವಿರಾಟ್ ಕೊಹ್ಲಿ ಪ್ರದರ್ಶನ ಕೂಡ ಎಕ್ಸ್​ಟ್ರಾರ್ಡಿನರಿಯಾಗಿದೆ. ವಿರಾಟ್ ಕೊಹ್ಲಿ ತಮ್ಮ ಕೊನೆಯ 10 ಇನಿಂಗ್ಸ್‌ಗಳಲ್ಲಿ ಕನ್ಸಿಸ್ಟೆನ್ಸಿ ಮೇಂಟೇನ್ ಮಾಡಿದ್ದಾರೆ. ಕಳೆದ 10 ಇನ್ನಿಂಗ್ಸ್​ಗಳಲ್ಲಿ  617 ರನ್ಸ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕೇವಲ 88 ಎಸೆತಗಳಲ್ಲಿ ಅಜೇಯ 139* ರನ್ (10 ಬೌಂಡರಿ, 9 ಸಿಕ್ಸರ್) ಚಚ್ಚಿದ್ದು ದಿ ಬೆಸ್ಟ್ ಇನ್ನಿಂಗ್ಸ್ ಆಗಿತ್ತು. ಸೋ ಅಲ್ಲಿಗೆ ಟೀಂ ಇಂಡಿಯಾದ ಏಕದಿನ ಮಾದರಿ ಬ್ಯಾಟಿಂಗ್ ನಲ್ಲಿ ರೋಹಿತ್, ಕೊಹ್ಲಿ, ಶುಭ್​ಮನ್ ಗಿಲ್ ಹಾಗೇ ಕೆಎಲ್ ರಾಹುಲ್ ಲೈನಪ್ ಬೆಂಕಿಯಂತಿದೆ. ಈ ಕೋರ್ ಟೀಮ್​ನ ಟಚ್ ಮಾಡೋದು ಕಷ್ಟ ಅನ್ನೋದು ಗಂಭೀರ್​ಗೂ ಗೊತ್ತಾಗಿದೆ. ಇದೇ ಕಾರಣಕ್ಕೆ ಗಂಭೀರ್ ತಮ್ಮ ಪ್ರತಿಷ್ಠೆಯನ್ನೆಲ್ಲಾ ಪಕ್ಕಕ್ಕಿಟ್ಟು ಗೆಲುವೇ ಗುರಿ ಆಗಿರೋದ್ರಿಂದ ರೋಹಿತ್ & ಕೊಹ್ಲಿ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ.

Shantha Kumari

Leave a Reply

Your email address will not be published. Required fields are marked *