ಗಿಲ್.. KL ಔಟ್.. ತಿಲಕ್ ಇನ್ – 5 ಏಕದಿನ ಪಂದ್ಯಗಳಿಗೆ 2 ಟೀಂ
NZನಲ್ಲಿ ಜೋರಾಯ್ತು ಕೊಹ್ಲಿ ಕ್ರೇಜ್

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ-20ಐ ಸರಣಿ ಮುಗಿದಿದ್ದು ಈಗ ಏಕದಿನ ಸರಣಿ ಚಾಲೆಂಜ್ ಶುರುವಾಗಲಿದೆ.. ಌಂಡ್ ಈ ಸರಣಿ ಕೂಡ ಐದು ಪಂದ್ಯಗಳ ಬಿಗ್ ಸಿರೀಸ್ ಆಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಸರಣಿಗೆ ಭಾರತ ಎರಡು ಪ್ರತ್ಯೇಕ ತಂಡಗಳನ್ನ ಅನೌನ್ಸ್ ಮಾಡಿರುವಂಥದ್ದು. ಌಂಡ್ ಲಾಸ್ಟ್ ಮೂಮೆಂಟ್ನಲ್ಲೂ ಬದಲಾವಣೆಗಳನ್ನ ಮಾಡಲಾಗ್ತಿದೆ. ಈಗಾಗ್ಲೇ ಕಿವೀಸ್ ನಾಡಿನಲ್ಲಿ ಕಿಂಗ್ ಕೊಹ್ಲಿ ಹವಾ ಕೂಡ ಜೋರಾಗಿದೆ.
ಇದನ್ನೂ ಓದಿ : 1 ಕೋಟಿಗೆ ಆಡಿಯೋ ರೈಟ್ಸ್ OTTಗೆ 50+ ರೂ. ಕೋಟಿಗೆ ಸೇಲ್?
ಐದು ಪಂದ್ಯಗಳ ಏಕದಿನ ಸರಣಿ ನವೆಂಬರ್ 4 ಅಂದ್ರೆ ಇದೇ ಬುಧವಾರದಿಂದ ಸ್ಟಾರ್ಟ್ ಆಗಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಆಡ್ತಾ ಇರೋದ್ರಿಂದ ಈ ಸರಣಿ ಕೇವಲ ಭಾರತೀಯರಿಗಷ್ಟೇ ಅಲ್ಲ ನ್ಯೂಜಿಲೆಂಡ್ ಅಭಿಮಾನಿಗಳ ಪಾಲಿಗೂ ತುಂಬಾನೇ ಸ್ಪೆಷಲ್ ಆಗಿದೆ. ಕಳೆದ ಬಾರಿ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದಿದ್ದ ಭಾರತ ಈಗ ನ್ಯೂಜಿಲೆಂಡ್ನಲ್ಲಿ ಪೈಪೋಟಿಗೆ ಸಿದ್ಧವಾಗಿದೆ. 2027 ಏಕದಿನ ವಿಶ್ವಕಪ್ ಹಿನ್ನೆಲೆ ಈ ಸಿರೀಸ್ ಭಾರತಕ್ಕೆ ತುಂಬಾನೇ ಮಹತ್ವದ್ದಾಗಲಿದೆ. ಹಾಗೇ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಇಂಪಾರ್ಟೆನ್ಸ್ ನಿಂದಾಗಿ ಟೀಂ ಅನೌನ್ಸ್ನಲ್ಲೂ ಸಪರೇಟ್ ಮಾಡಿದ್ದಾರೆ. ಮೊದಲು 3 ಪಂದ್ಯಗಳಿಗೆ ಒಂದು ತಂಡ ಹಾಗೇ ನಂತರದ 2 ಪಂದ್ಯಗಳಿಗೆ ಒಂದು ತಂಡವನ್ನ ಅನೌನ್ಸ್ ಮಾಡಿದ್ದಾರೆ.
ಮೊದಲ 3ಕ್ಕೆ ಗಿಲ್.. ನಂತ್ರ 2 ಪಂದ್ಯಗಳಿಗೆ ಶ್ರೇಯಸ್ ಕ್ಯಾಪ್ಟನ್!
ಆಕ್ಲೆಂಡ್, ವೆಲ್ಲಿಂಗ್ಟನ್, ಹ್ಯಾಮಿಲ್ಟನ್ ಮತ್ತು ಟೌರಂಗದಲ್ಲಿ ಐದು ಪಂದ್ಯಗಳು ನಡೆಯಲಿದ್ದು, ಕೊನೆಯ ಪಂದ್ಯ ನವೆಂಬರ್ 15 ರಂದು ನಡೆಯಲಿದೆ. ನಂತ್ರ ಎರಡು ಟೆಸ್ಟ್ ಪಂದ್ಯಗಳಿದ್ದು ಮೊದಲ ಪಂದ್ಯ ನವೆಂಬರ್ 19 ರಂದು ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದೆ. ಸೋ ಇಲ್ಲಿ ಏಕದಿನ ಮತ್ತು ಟೆಸ್ಟ್ ನಡುವೆ ಕೇವಲ 4 ದಿನಗಳ ಗ್ಯಾಪ್ ಮಾತ್ರ ಇರೋದ್ರಿಂದ ಕೊನೆಯ ಎರಡು ಪಂದ್ಯಗಳಿಗೆ ಟೆಸ್ಟ್ ತಂಡದಲ್ಲಿ ಆಡುವ ಪ್ರಮುಖ ಆಟಗಾರರನ್ನ ಕೈಬಿಡಲಾಗಿದೆ. ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ನಿತೀಶ್ ರೆಡ್ಡಿ, ಔಕಿಬ್ ನಬಿ ಇನ್ ಌಂಡ್ ಔಟ್ ಆಗಿದ್ದಾರೆ
ಮೊದಲ 3 ಪಂದ್ಯಗಳಿಗೆ ತಂಡ!
ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ನಮನ್ ಧೀರ್, ಅನ್ಶುಲ್ ಕಾಂಬೋಜ್, ಗುರ್ನೂರ್ ಬ್ರಾರ್, ರುತುರಾಜ್ ಗಾಯಕ್ವಾಡ್ , ಅರ್ಶ್ದೀಪ್ ಸಿಂಗ್, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಔಕಿಬ್ ನಬಿ
ಕೊನೆಯ 2 ಪಂದ್ಯಗಳಿಗೆ ತಂಡ!
ಶ್ರೇಯಸ್ ಅಯ್ಯರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಇಶಾನ್ ಕಿಶನ್, ಅಕ್ಷರ್ ಪಟೇಲ್, ನಮನ್ ಧೀರ್, ಔಕಿಬ್ ನಬಿ, ಗುರ್ನೂರ್ ಬ್ರಾರ್, ರುತುರಾಜ್ ಗಾಯಕ್ವಾಡ್, ಅರ್ಶ್ದೀಪ್ ಸಿಂಗ್, ಕುಮಾರ್ ಕುಶಾಗ್ರ, ಮೊಹಮ್ಮದ್ ಸಿರಾಜ್, ಯಶ್ ಠಾಕೂರ್, ಕುಲದೀಪ್ ಯಾದವ್

ನೋಡಿರಿ

