ಸೋನಿಕಾಗೆ 10, ಧನುಷ್‌ಗೆ 9ನೇ ಸ್ಥಾನ ಕೊಟ್ಟು ಕೆಟ್ರಾ ಜಗದೀಶ್ – ಸೌಂದರ್ಯ, ಪ್ರಶಾಂತ್ ಕಿಡಿಕಿಡಿ

ಸೋನಿಕಾಗೆ 10, ಧನುಷ್‌ಗೆ 9ನೇ ಸ್ಥಾನ ಕೊಟ್ಟು ಕೆಟ್ರಾ ಜಗದೀಶ್ – ಸೌಂದರ್ಯ, ಪ್ರಶಾಂತ್ ಕಿಡಿಕಿಡಿ

ಬಿಗ್‌ಬಾಸ್ ಮನೆಯಲ್ಲಿ ಸೇಫ್ ಆಗಿ ಆಡುತ್ತಿದ್ದ ಸೋನಿಕಾ ಈಗ ಜಗ್ಗಮಮ್ಮಿ ಕೈಯಿಂದ ನಾಮಿನೇಷನ್ ಆಗಿದ್ದಾರೆ. ಮತ್ತೊಂದೆಡೆ ವೀಕೆಂಡ್ ಮುಗಿದ ಬಳಿ ಧನುಷ್ ವಿರುದ್ಧ ಟಾರ್ಗೆಟ್ ಶುರುವಾಗಿದೆ. ಇದ ಮದ್ಯೆ ಆಟದಲ್ಲಿ ಏರಿಳಿತ. ಯಾರಿಗೆ ಯಾವ ಸ್ಥಾನ ಎಂಬ ವಿಚಾರದಲ್ಲಿ ಸ್ಪರ್ಧಿಗಳು ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ.

ಇದನ್ನೂ ಓದಿ:ಗಗನ್‌ಗೆ ಕೈ ಕೊಟ್ಟ ಶೆಟ್ಟಿ ಡಾನ್ – ಯಶಸ್ ಪ್ರೀತಿಯಲ್ಲಿ ಬಿದ್ದ ಸೌಂದರ್ಯ

ಬಿಗ್‌ಬಾಸ್ ಮನೆಯಲ್ಲಿ ಈ ವಾರ ಜಗದೀಶ್ ಕ್ಯಾಪ್ಟನ್ ಆಗಿ ಮಿಂಚಿದ್ದಾರೆ. ಜೊತೆಗೆ ಸೋನಿಕಾ ಮತ್ತು ಧನುಷ್ ಜಗ್ಗಮಮ್ಮಿ ಕೈಯಲ್ಲಿ ಸಿಕ್ಕಿ ಒದ್ದಾಡುವಂತಾಗಿದೆ. ಸೋಮವಾರದ ಎಪಿಸೋಡ್‌ನಲ್ಲಿ ಕ್ಯಾಪ್ಟನ್ ಜಗದೀಶ್ ಮನೆ ಮಂದಿಗೆ ಯಾವ ಸ್ಥಾನ ಯಾವ ನಂಬರ್ ಅನ್ನೋದನ್ನು ನೀಡಿದ್ದಾರೆ. ಸೋನಿಕಾಗೆ ಜಗದೀಶ್ 10ನೇ ಸ್ಥಾನ ಕೊಟ್ಟಿದ್ದಾರೆ. ಜೊತೆಗೆ ಧನುಷ್‌ಗೆ 9ನೇ ಸ್ಥಾನ ನೀಡಿದ್ದಾರೆ.8ನೇ ಸ್ಥಾನ ಆಸಿಯಾಗೆ ನೀಡಿದರೆ, ಯಶಸ್ ಗೆ 7 ನೇ ಸ್ಥಾನ ಕೊಟ್ಟಿದ್ದಾರೆ. 2ನೇ ಸ್ಥಾನ ಸೌಂದರ್ಯಗೆ ಸಿಕ್ಕಿದೆ. ಜಗದೀಶ್ ವಿರುದ್ಧ ಸೋನಿಕಾ ಸಿಟ್ಟಾಗಿದ್ದಾರೆ. ಧನುಷ್ ಗರಂ ಆಗಿದ್ದಾರೆ. ಯಶಸ್ ಉರಿದುಬಿದ್ದಿದ್ದಾರೆ. ಇದರ ಜೊತೆ ಸೌಂದರ್ಯ ಕೂಡಾ ಜಗದೀಶ್ ವಿರುದ್ಧ ಏರುದನಿಯಲ್ಲಿ ಕಿರುಚಾಡಿದ್ದಾರೆ.

ಮತ್ತೊಂದೆಡೆ 1ನೇ ಸ್ಥಾನವನ್ನು ಜಗದೀಶ್ ಗಾನವಿಗೆ ನೀಡಿದ್ದಾರೆ. ತಾಂಡವ್‌ಗೆ 3ನೇ ಮತ್ತು ಗಗನ್‌ಗೆ 5ನೇ ಸ್ಥಾನ ನೀಡಿದ್ದಾರೆ. ಜಗ್ಗಮಮ್ಮಿಯ ಈ ನಿರ್ಧಾರಕ್ಕೆ ತಾಂಡವ್ ಮತ್ತು ಪ್ರಶಾಂತ್ ಕೂಡಾ ಸಿಟ್ಟಾಗಿದ್ದಾರೆ. 10ನೇ ಸ್ಥಾನ ಪಡೆದ ಸೋನಿಕಾ ನೇರವಾಗಿ ನಾಮಿನೇಟ್ ಆಗಿದ್ದಾರೆ. ತಾಂಡವ್ ಮತ್ತು ಪ್ರಶಾಂತ್ ಕೂಡಾ ಏರಿಳಿತದ ಆಟದ ವಿಚಾರವಾಗಿ ಜಗದೀಶ್ ಕಾಲೆಳೆದಿದ್ದಾರೆ.

ಇನ್ನು ನಾಮಿನೇಶನ್ ವಿಚಾರದಲ್ಲಿ ಮನೆ ಮತ್ತೊಮ್ಮೆ ಗಲಾಟೆ ಗೂಡಾಗಿದೆ. ಗಾನವಿ ಮತ್ತೊಮ್ಮೆ ಆಸಿಯಾರನ್ನು ಟಾರ್ಗೆಟ್ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಆಸಿಯಾ ಕೂಗಾಡಿದ್ದಾರೆ.

Sulekha

Leave a Reply

Your email address will not be published. Required fields are marked *