ಬಂದರೋ ಬಂದರೋ ರವಿ ಅಣ್ಣ – ಮತ್ತೊಂದು ಕಾಮಿಡಿ ಸಿನಿಮಾದಲ್ಲಿ ಸು ಫ್ರಮ್ ಸೋ ಟೀಮ್

ಬಂದರೋ ಬಂದರೋ ರವಿ ಅಣ್ಣ – ಮತ್ತೊಂದು ಕಾಮಿಡಿ ಸಿನಿಮಾದಲ್ಲಿ ಸು ಫ್ರಮ್ ಸೋ ಟೀಮ್

ಸು ಫ್ರಮ್ ಸೋ ಚಿತ್ರ ಸ್ಯಾಂಡಲ್‌ವುಡ್‌ನ ಸೂಪರ್ ಹಿಟ್ ಸಿನಿಮಾ. ಇದೀಗ ಇದೇ ಚಿತ್ರತಂಡದ ಕಲಾವಿದರು ಮತ್ತೊಂದು ಸಿನಿಮಾ ಮೂಲಕ ಮನ ಗೆಲ್ಲಲು ರೆಡಿಯಾಗಿದ್ದಾರೆ. ರವಿ ಅಣ್ಣ ಲೀಡ್ ರೋಲ್ ಮಾಡುತ್ತಿದ್ದು, ಈ ಸಿನಿಮಾ ರಿಲೀಸ್ ಗೆ ಸಿದ್ಧತೆ ನಡೆಯುತ್ತಿದೆ.

ಇದನ್ನೂ ಓದಿ:ಸೀತೆ ಸಾಯಿಪಲ್ಲವಿ ಇದೀಗ ಪೊಲೀಸ್ – ತಮಿಳುನಟ ಧನುಷ್ ಜೊತೆ ಡಿಂಪಲ್ ಸುಂದರಿ ಖಡಕ್ ಲುಕ್

ಸು ಫ್ರಮ್ ಸೋ ಸಿನಿಮಾದ ರವಿ ಅಣ್ಣ ಪಾತ್ರಧಾರಿ ಶನೀಲ್ ಗೌತಮ್  ಶ್ರೀರಾಮಚಂದ್ರನಾಗಿ ತೆರೆ ಮೇಲೆ ಬರಲಿದ್ದಾರೆ. ಹಾಸ್ಯಮಯ ಈ ಸಿನಿಮಾದಲ್ಲಿ ಅಣ್ಣ ಮತ್ತು ತಂಗಿಯ ಬಾಂಧವ್ಯ ಕೂಡಾ ಇದೆ. ಈ ಚಿತ್ರದ ಶೂಟಿಂಗ್ ಕೊನೆ ಹಂತದಲ್ಲಿಯೇ ಇದೆ. ಡೈರೆಕ್ಟರ್ ಚಂದ್ರಮೋಹನ್ ಹಾಗೂ ಸ್ವತಃ ನಾಯಕ ನಟ ಶನಿಲ್ ಗೌತಮ್ ಈ ಚಿತ್ರದ ಸ್ಕ್ರಿಪ್ಟ್ ಮೇಲೆ ವರ್ಕ್ ಮಾಡಿದ್ದಾರೆ.

ಸಿನಿಮಾದ ಹೆಸರು ಶ್ರೀ ರಾಮಚಂದ್ರ. ಆದರೆ, ಇಲ್ಲಿ ಹಾಸ್ಯದ ಜೊತೆ ಕೌಟುಂಬಿಕ ಕಥೆಯಿದೆ. ಈ ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಚಿತ್ರದಲ್ಲಿ ಐದು ಹಾಡುಗಳು ಇವೆ. ಈ ಸಿನಿಮಾವನ್ನು ಬಿ.ಕೆ.ಗಂಗಾಧರ್ ನಿರ್ಮಾಣ ಮಾಡುತ್ತಿದ್ದಾರೆ. ಶ್ರೀರಾಮಚಂದ್ರ ಚಿತ್ರದಲ್ಲಿ ಶನಿಲ್ ಗೌತಮ್, ಪರಿಪೂರ್ಣ ಚಂದ್ರಶೇಖರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖ್ಯಾತಿಯ ಪ್ರವೀಣ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ ಅಭಿನಯಿಸಿದ್ದಾರೆ. ಸು ಫ್ರಮ್ ಸೋ ಚಿತ್ರ ತಂಡದ ಕಲಾವಿದರು ಮತ್ತು ತಂತ್ರಜ್ಞರು ಈ ಚಿತ್ರಕ್ಕೂ ಕೆಲಸ ಮಾಡಿದ್ದಾರೆ.

Sulekha

Leave a Reply

Your email address will not be published. Required fields are marked *