3 ಪಂದ್ಯಗಳಿಗೇ ಬೇಡವಾದ ಭುವಿ – ಒತ್ತಡದಿಂದ ಚಾನ್ಸ್ ಕೊಟ್ರಾ ಗಂಭೀರ್?
ಭಾರತದ ಬಾಗಿಲು ಶಾಶ್ವತವಾಗಿ ಬಂದ್?

3 ಪಂದ್ಯಗಳಿಗೇ ಬೇಡವಾದ ಭುವಿ – ಒತ್ತಡದಿಂದ ಚಾನ್ಸ್ ಕೊಟ್ರಾ ಗಂಭೀರ್?ಭಾರತದ ಬಾಗಿಲು ಶಾಶ್ವತವಾಗಿ ಬಂದ್?

ಟೀಂ ಇಂಡಿಯಾದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಕೊಂಡು ನ್ಯೂಜಿಲೆಂಡ್ ಟೂರ್​ಗೆ ಸೆಲೆಕ್ಟ್ ಮಾಡಲಾಗಿತ್ತು. ಭಾರತದ ಪರ ಅವ್ರೇ ಗೇಮ್ ಚೇಂಜರ್ ಅನ್ನೋ ಪ್ರೆಡಿಕ್ಷನ್ಸ್ ಕೂಡ ಇತ್ತು. ಆದ್ರೆ ಮೊದಲ ಮೂರು ಪಂದ್ಯಗಳಲ್ಲಿ ಅತೀ ಹೆಚ್ಚು ರನ್ಸ್ ಬಿಟ್ಟುಕೊಟ್ಟ ಬೌಲರ್ ಆಗಿದ್ರು. ಬಹುಶಃ ತಂಡದ ಕೋಚ್ ಗೌತಮ್ ಗಂಭೀರ್​ಗೆ ಇದೊಂದೇ ರೀಸನ್ ಸಾಕಿತ್ತು ಅನ್ಸುತ್ತೆ. ನಾಲ್ಕನೇ ಪಂದ್ಯದಲ್ಲೇ ಭುವಿಗೆ ಬೆಂಚ್ ಕಾಯಿಸಿ ಮಯಾಂಕ್​ಗೆ ಅವಕಾಶ ಕೊಟ್ರು. ಆದ್ರೆ ಭಾರತ ಪಂದ್ಯವನ್ನ ಹೀನಾಯವಾಗಿ ಸೋತಿತ್ತು. ರಿಯಾಲಿಟಿ ಏನಂದ್ರೆ ಈ ನಿರ್ಧಾರದ ಬಳಿಕ ಭುವಿ ಭವಿಷ್ಯದ ಬಗ್ಗೆ ಪ್ರಶ್ನೆಗಳು ಮೂಡಿವೆ.

ಇದನ್ನೂ ಓದಿ : ಸ್ಮೃತಿ Vs ಕೌರ್.. ಶೇಕ್‌ಹ್ಯಾಂಡ್ WAR- IPLಗೆ ಗೌತಮ್‌ ಗಂಭೀರ್ ಎಂಟ್ರಿ?

2022ರ ನವೆಂಬರ್ ಬಳಿಕ ಬರೋಬ್ಬರಿ ನಾಲ್ಕು ವರ್ಷಗಳ ನಂತರ ಟಿ20ಐ ತಂಡಕ್ಕೆ ಮರಳಿದ್ದ ಭುವನೇಶ್ವರ್‌ಗೆ ಈ ಸರಣಿ ದೊಡ್ಡ ಕಮ್‌ಬ್ಯಾಕ್ ವೇದಿಕೆಯಾಗಿತ್ತು. ಆದರೆ ಮೊದಲ ಮೂರು ಪಂದ್ಯಗಳಲ್ಲಿ ಅಂದುಕೊಂಡಂತ ಯಶಸ್ಸು ಸಿಕ್ಕಿರಲಿಲ್ಲ. ಐಪಿಎಲ್​ನಲ್ಲಿ ಸ್ವಿಂಗ್ ಕಿಂಗ್ ಆಗಿ ಕಾಣ್ತಿದ್ದ ಭುವಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಬಳಿಕ ಅವರ ಬೌಲಿಂಗ್‌ನಲ್ಲಿ ಹಳೆಯ ಸ್ವಿಂಗ್ ಮತ್ತು ಕಂಟ್ರೋಲ್ ಇರ್ಲಿಲ್ಲ. ಮೊದಲ ಪಂದ್ಯದಲ್ಲಿ 49 ರನ್, ಎರಡನೇ ಪಂದ್ಯದಲ್ಲಿ 50 ರನ್, ಮೂರನೇ ಪಂದ್ಯದಲ್ಲಿ 40 ರನ್.. ಹಾಗೇ ಮೂರು ಪಂದ್ಯಗಳಲ್ಲಿ ಒಂದು ವಿಕೆಟ್. ಇದರ ಬೆನ್ನಲ್ಲೇ ನಾಲ್ಕನೇ ಟಿ20ಐಗೆ ಭುವನೇಶ್ವರ್ ಅವರನ್ನು ಕೈಬಿಟ್ಟು ಮಯಾಂಕ್ ಯಾದವ್‌ಗೆ ಅವಕಾಶ ನೀಡಲಾಗಿತ್ತು. ಇದೇ ನಿರ್ಧಾರ ಭುವನೇಶ್ವರ್ ಅವರ ಟಿ20ಐ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಫಾರ್ಮ್ ಕಂಡುಕೊಳ್ಳುವ ಸಾಮರ್ಥ್ಯ ಭುವಿಗಿದೆ..!

36 ವರ್ಷದ ಭುವನೇಶ್ವರ್‌ ಕುಮಾರ್​ಗೆ ತಮ್ಮ ಸ್ಥಾನ ಉಳಿಸಿಕೊಳ್ಳೋದು ಸುಲಭದ ಹಾದಿಯಲ್ಲ. ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದ ಅವರು, ಕೇವಲ ಮೂರು ಪಂದ್ಯಗಳಲ್ಲೇ ಮತ್ತೆ ಬೆಂಚ್ ಕಾಯ್ಬೇಕಾಗಿದೆ. ಹೀಗಿದ್ರೂ ಭುವಿ ಬೆನ್ನಿಗೆ ಸಾಕಷ್ಟು ಕ್ರಿಕೆಟರ್ಸ್ ನಿಂತಿದ್ದಾರೆ. ಮಾಜಿ ಆಟಗಾರ ಅಂಬಾಟಿ ರಾಯುಡು ಭುವಿ ಪರವಾಗಿ ಮಾತನಾಡಿದ್ದಾರೆ. ಲಾಂಗ್ ಬ್ರೇಕ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದಾಗ ಇಂತಹ ಏರಿಳಿತಗಳು ಸಹಜ. ಭುವನೇಶ್ವರ್ ಒತ್ತಡಕ್ಕೆ ಒಳಗಾಗುವ ಆಟಗಾರನಲ್ಲ, ತಮ್ಮ ಲಯವನ್ನು ಮರಳಿ ಪಡೆಯುವ ಸಾಮರ್ಥ್ಯ ಅವರಿಗಿದೆ ಎಂದಿದ್ದಾರೆ. ಆದ್ರೆ ಗೌತಮ್ ಗಂಭೀರ್ ಲೆಕ್ಕಾಚಾರಗಳೇ ಬೇರೆ ಇವೆ.

ಒತ್ತಡದಿಂದಾಗಿ ಭುವಿಗೆ ಚಾನ್ಸ್ ಕೊಟ್ರಾ ಗಂಭೀರ್?

2025 ಹಾಗೂ 2026ರಲ್ಲಿ ಭುವನೇಶ್ವರ್ ಕುಮಾರ್ ಅದ್ಭುತ ಪ್ರದರ್ಶನದ ಬಳಿಕ ಅವ್ರಿಗೆ ಚಾನ್ಸ್ ಕೊಡ್ಬೇಕು ಅಂತಾ ಪ್ರೆಶರ್ ಜಾಸ್ತಿ ಆಗಿತ್ತು. ಅದ್ರಲ್ಲೂ ಲಾಸ್ಟ್ ಸೀಸನ್​ನಲ್ಲಿ ಬರೋಬ್ಬರಿ 28 ವಿಕೆಟ್ಸ್ ಬೇಟೆಯಾಡಿದ್ರು. ಮಾಜಿ ಕ್ರಿಕೆಟರ್ಸ್ ಕೂಡ ಭುವಿಗೆ ಅವಕಾಶ ಕೊಡ್ಬೋದು ಅಂತಾ ಧ್ವನಿ ಎತ್ತಿದ್ರು. ಐರ್ಲೆಂಡ್, ಇಂಗ್ಲೆಂಡ್ ಕ್ಲೀನ್ ಸ್ವೀಪ್ ಆದ್ಮೇಲಂತೂ ಪ್ರೆಶರ್ ಜಾಸ್ತಿ ಇತ್ತು. ಬಹುಶಃ ಇದೇ ಕಾರಣಕ್ಕೆ ಗಂಭೀರ್ ಭುವಿಗೆ ಒಂದು ಚಾನ್ಸ್ ಕೊಟ್ರು ಅನ್ಸುತ್ತೆ. ಮನಸ್ಸಿಲ್ಲದ ಮನಸ್ಸಲ್ಲಿ ಆಯ್ಕೆ ಮಾಡಿದ್ದವ್ರು ನ್ಯೂಜಿಲೆಂಡ್​ನಲ್ಲಿ ಯಾವಾಗ ಕಾಸ್ಟ್ಲಿಯಾದ್ರೂ ಮೂರೇ ಪಂದ್ಯಗಳಿಗೇ ಅವ್ರ ಬೌಲಿಂಗ್​ಗೆ ಬ್ರೇಕ್ ಹಾಕಿದ್ದಾರೆ. ತಮಗೇ ಬೇಕಾದ ಆಟಗಾರರಿಗೆ ಸಾಲು ಸಾಲು ಅವಕಾಶ ಕೊಡೋ ಗಂಭೀರ್ ಕೆಲವರ ವಿಚಾರದಲ್ಲಿ ಅವ್ರ ಫೇವರಿಸಂ ಎದ್ದು ಕಾಣ್ತಿದೆ. ಅಷ್ಟಕ್ಕೂ ಇಲ್ಲಿ ಭುವಿ ಕಾಸ್ಟ್ಲಿ ಆಗಿದ್ದ ಮೂರೂ ಪಂದ್ಯಗಳನ್ನ ಭಾರತ ಗೆದ್ದಿತ್ತು. ಇಂಥಾ ಟೈಮಲ್ಲಿ ಯಾರೇ ಆದ್ರೂ ವಿನ್ನಿಂಗ್ ಕಾಂಬಿನೇಷನ್ ಚೇಂಜ್ ಮಾಡೋ ಗೋಜಿಗೆ ಹೋಗಲ್ಲ. ಆದ್ರೆ ನಾಲ್ಕನೇ ಪಂದ್ಯದಲ್ಲಿ ಬದಲಾವಣೆ ಮಾಡಿ ಟಿ-20ಐ ಕ್ರಿಕೆಟ್​ನಲ್ಲಿ ಭಾರತ ತಂಡದಿಂದ ಮೊದಲ ಬಾರಿಗೆ ಅತೀಹೆಚ್ಚು ರನ್ಸ್ ಬಿಟ್ಟುಕೊಟ್ಟ ಬೇಡದ ದಾಖಲೆ  ಬರೆಯಿತು. ಹೀಗಾಗಿ ಮುಂದಿನ ಸರಣಿಗಳಿಗೆ ಭುವಿಗೆ ಮತ್ತೆ ಅವಕಾಶ ಕೊಡ್ತಾರೋ ಇಲ್ಲ ಶಾಶ್ವತವಾಗಿ ಬಾಗಿಲು ಬಂದ್ ಮಾಡ್ತಾರೋ ಅನ್ನೋ ಅನುಮಾನಗಳು ಮೂಡಿವೆ. ಅಟ್ ದಿ ಸೇಮ್ ಟೈಂ ಗೌತಮ್ ಗಂಭೀರ್ ಅವ್ರ ಏಕಚಕ್ರಾಧಿಪತ್ಯದ ಬಗ್ಗೆಯೂ ಯೋಚನೆ ಮಾಡ್ಬೇಕಾಗುತ್ತೆ.

ಗಂಭೀರ್ ಅಂಡರ್ ನಲ್ಲಿ ಕ್ಯಾಪ್ಟನ್ ಗಳ ಅಭಿಪ್ರಾಯಗಳಿಗಿಲ್ಲ ಬೆಲೆ!

ಮೊದ್ಲೆಲ್ಲಾ ತಂಡದ ಹೆಡ್ ಕೋಚ್ ಮತ್ತು ಕ್ಯಾಪ್ಟನ್ಸ್ ಅಂದ್ರೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಬ್ರಿಗೂ ಈಕ್ವಲ್ ರೈಟ್ಸ್,  ವ್ಯಾಲ್ಯೂಸ್ ಇರ್ತಿತ್ತು. ತಂಡದ ಸೆಲೆಕ್ಷನ್​ನಲ್ಲೂ ಇಬ್ಬರೂ ಡಿಸ್ಕಸ್ ಮಾಡೇ ನಿರ್ಧಾರಗಳನ್ನ ಕೈಗೊಳ್ತಿದ್ರು. ರಾಹುಲ್ ದ್ರಾವಿಡ್ ಪಿರಿಯಡ್ ನಲ್ಲೂ ಕೂಡ ರೋಹಿತ್ ಶರ್ಮಾ ತಮ್ಮ ತಂಡಕ್ಕೆ ಬೇಕಾದ ಆಟಗಾರರನ್ನ ಇಂಥದ್ದು ಬೇಕು ಅಂತಾ ಕೇಳಿಯೇ ತಗೊಳ್ತಿದ್ರು. ಅದಕ್ಕೂ ಮುನ್ನ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ನಡುವೆಯೂ ಎಕ್ಸ್​ಟ್ರಾರ್ಡಿನರಿ ಕಮ್ಯುನಿಕೇಷನ್ಸ್ ಇತ್ತು. ಅನಿಲ್ ಕುಂಬ್ಳೆ, ಧೋನಿ ನಡುವೆ ಹೀಗೆ ಹಿಂದಿನ ಕೋಚ್, ಕ್ಯಾಪ್ಟನ್​​ಗಳೆಲ್ಲಾ ಒಟ್ಟಿಗೇ ನಿರ್ಧಾರಗಳನ್ನ ತಗೊಳ್ತಿದ್ರು. ಆದ್ರೆ ಗೌತಮ್ ಗಂಭೀರ್ ಕೋಚ್ ಆದ್ಮೇಲೆ ಅವ್ರ ಮಾತೇ ಶಾಸನವಾಗಿದೆ. ಸೂರ್ಯಕುಮಾರ್ ಕ್ಯಾಪ್ಟನ್ ಆಗಿದ್ದಾಗ್ಲೂ ಎಲ್ಲವೂ ಗಂಭೀರ್ ಭಾಯ್ ನಿರ್ಧಾರ ಅಂತಿದ್ರು. ಇನ್ನು ಗಿಲ್ ಕೂಡ ಯಾವ ಪ್ರೆಶರ್ ಹಾಕಲ್ಲ. ಈಗ ಶ್ರೇಯಸ್ ಕೂಡ ಹಂಗೇ ಆಗಿದ್ದಾರೆ. ಇಂಥಾ ಆಟಗಾರ ಇದ್ರೆ ಗೆಲ್ತೀವಿ ಅನ್ನೋ ಗತ್ತು ಅವ್ರಲ್ಲೂ ಕಾಣ್ತಿಲ್ಲ. ಗಂಭೀರ್ ಫೈನಲ್ ಮಾಡಿದ ಪ್ಲೇಯಿಂಗ್ 11 ಹಾಗೇ ಬ್ಯಾಟಿಂಗ್ ಆರ್ಡರ್ ನಲ್ಲೇ ಭಾರತ ಆಡ್ಬೇಕಿದೆ. ಸೋ ಅಲ್ಲಿಗೆ ಈಗ ಕೋಚ್​ ಅಂದುಕೊಂಡಂತೆ ಪಂದ್ಯಗಳು ನಡೀತಿರೋದು. ಗಂಭೀರ್ ನಿರ್ಧಾರದಂತೆಯೇ ಭುವಿಯನ್ನೂ ಹೊರಗಿಟ್ಟಿರೋದು. ಹಾಗಂತ ಭುವಿ ಆರ್​ಸಿಬಿ ಟೀಂ. ಅದಕ್ಕೆ ಈ ಮಟ್ಟಿಗೆ ಸಪೋರ್ಟ್ ಮಾಡ್ತೀವಿ ಅಂತಲ್ಲ. ಭುವಿ ಟ್ಯಾಲೆಂಟ್ ಇರೋ ಆಟಗಾರ. ಮತ್ತಷ್ಟು ಚಾನ್ಸ್ ಸಿಗ್ಬೇಕಿತ್ತು ಅನ್ನೋದಷ್ಟೇ ನಮ್ಮ ಕನ್ಸರ್ನ್. ಬಟ್ ಒಂದಂತೂ ಸತ್ಯ.. ಭಾರತದ ಪರ ಸಾಕಷ್ಟು ಕೋಚ್​ಗಳು ಬಂದು ಹೋಗಿದ್ದಾರೆ. ಈ ಪೈಕಿ ಗ್ರೆಗ್ ಚಾಪೆಲ್ ಬಿಟ್ರೆ ಗಂಭೀರ್​ಗೆ ಮಾತ್ರನೇ ಈ ಮಟ್ಟಿಗಿನ ವಿರೋಧ ವ್ಯಕ್ತವಾಗ್ತಿರೋದು.

Shantha Kumari

Leave a Reply

Your email address will not be published. Required fields are marked *