ಭಾರತಕ್ಕೆ ಫಸ್ಟ್ ಬ್ಯಾಟಿಂಗ್ ಭಯ – 250 ರನ್ಸ್ ಇದ್ರೂ ಡಿಫೆನ್ಸ್ ಕಷ್ಟ
ಬೌಲರ್ಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ?

ನ್ಯೂಜಿಲೆಂಡ್ ವಿರುದ್ಧ ಮೊದಲ 3 ಮ್ಯಾಚ್ಗಳಲ್ಲೇ ಸರಣಿ ಗೆದ್ದಿದ್ದ ಭಾರತ 4ನೇ ಪಂದ್ಯವನ್ನ ಸೋತಿದೆ. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡೂ ಕೂಡ ಚೆನ್ನಾಗಿರಲಿಲ್ಲ. ಬಟ್ ಇಲ್ಲಿ ಭಾರತದ ಸೋಲಿಗಿಂತ ಇನ್ನೊಂದು ವಿಚಾರದ ಬಗ್ಗೆ ಸೀರಿಯಸ್ ಆಗಿ ಥಿಂಕ್ ಮಾಡ್ಬೇಕಾಗಿದೆ.
ಇದನ್ನೂ ಓದಿ : ಸ್ಮೃತಿ Vs ಕೌರ್.. ಶೇಕ್ಹ್ಯಾಂಡ್ WAR- IPLಗೆ ಗೌತಮ್ ಗಂಭೀರ್ ಎಂಟ್ರಿ?
ಭಾರತ ಆಲ್ರೆಡಿ ಸರಣಿ ಗೆದ್ದಾಗಿತ್ತು. ಅಭಿಷೇಕ್ ಶರ್ಮಾ ರೆಡ್ ಹಾಟ್ ಫಾರ್ಮ್ನಲ್ಲಿದ್ರು. ಬ್ಯಾಟಿಂಗ್ ಕೋರ್ ಕೂಡ ಚೆನ್ನಾಗಿತ್ತು. ಸೋ ತಂಡದ ಮೇಲೆ ಯಾವುದೇ ಪ್ರೆಶರ್ ಇರ್ಲಿಲ್ಲ. ಇಂಥಾ ಟೈಮಲ್ಲಿ ಭಾರತ ರಿಸ್ಕ್ ತಗೊಳ್ಳೋಕೂ ರೆಡಿ ಇರ್ಬೇಕಿತ್ತು. ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20ಐ ಸರಣಿಯಲ್ಲಿ ಸತತ ನಾಲ್ಕು ಪಂದ್ಯಗಳಲ್ಲೂ ಭಾರತದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದಿದ್ದಾರೆ. ಌಂಡ್ ನಾಲ್ಕೂ ಸಲವೂ ಬೌಲಿಂಗ್ ಚೂಸ್ ಮಾಡಿಕೊಂಡು ಚೇಸಿಂಗ್ ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ 226 ರನ್ಗಳ ಟಾರ್ಗೆಟ್ ರೀಚ್ ಆಗಿದ್ದ ಭಾರತ ಎರಡನೇ ಪಂದ್ಯದಲ್ಲಿ 181 ರನ್ಗಳ ಟಾರ್ಗೆಟ್ ರೀಚ್ ಆಗಿತ್ತು. ಈ ಎರಡೂ ಪಂದ್ಯಗಳೂ ಲಾಸ್ಟ್ ಓವರ್ ಥ್ರಿಲ್ಲರ್ಗಳೇ. ಆದ್ರೆ ಮೂರನೇ ಪಂದ್ಯದಲ್ಲಿ ಭಾರತದ ಬ್ಯಾಟರ್ಸ್ ಧೂಳೆಬ್ಬಿಸಿದ್ರು. 199 ರನ್ಗಳ ಗುರಿ ಬೆನ್ನಟ್ಟಿದ ಭಾರತ 13.2 ಓವರ್ಗಳಲ್ಲೇ ಗೆದ್ದು ಇತಿಹಾಸ ಬರೆದಿತ್ತು. ಸೋ ನಾಲ್ಕನೇ ಮ್ಯಾಚಲ್ಲೂ ನಾವೇ ವಿನ್ ಆಗೋದು ಅನ್ನೋ ಓವರ್ ಕಾನ್ಫಿಡೆನ್ಸ್ನಲ್ಲಿದ್ರು ಅನ್ಸುತ್ತೆ. ಅದಕ್ಕೇ ಆಕ್ಲೆಂಡ್ನಲ್ಲೂ ಟಾಸ್ ಗೆದ್ರೂ ಚೇಸಿಂಗ್ ಆಯ್ಕೆ ಮಾಡಿಕೊಂಡ್ರು. ಆದ್ರೆ ನಾಲ್ಕನೇ ಬಾರಿ ಅದೃಷ್ಟ ಕೈಕೊಟ್ಟು ಸೋಲಬೇಕಾಯ್ತು. ಆದ್ರಿಲ್ಲಿ ಸೋಲು ಗೆಲುವಿಗಿಂತ ಜಾಸ್ತಿ ಭಾರತ ಈ ಮ್ಯಾಚ್ನಲ್ಲಿ ರಿಸ್ಕ್ ತಗೊಳ್ಬೇಕಿತ್ತು.
ಭಾರತಕ್ಕೆ ಬೌಲರ್ಸ್ ಭಯ!
ಭಾರತದ ಟಿ-20ಐ ಮಾದರಿಯಲ್ಲಿ ಬೌಲರ್ಸ್ ಪದೇಪದೆ ದುಬಾರಿ
ಸರಣಿ ಗೆದ್ದಿದ್ರಿಂದ ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಆಯ್ಕೆ ಮಾಡಬೇಕಿತ್ತು
ಫಸ್ಟ್ ಟಾರ್ಗೆಟ್ ಸೆಟ್ ಮಾಡಿ ಡಿಫೆನ್ಸ್ ಮಾಡಿಕೊಳ್ಳೋದ್ರ ಬಗ್ಗೆ ಪರೀಕ್ಷೆ
ಭಾರತದ ಬೌಲಿಂಗ್ ದುಬಾರಿ ನಡುವೆ ಬೌಲರ್ಸ್ ಗೂ ಗೆಲುವಿನ ಜವಾಬ್ದಾರಿ
ಮೊದಲ ಮೂರೂ ಪಂದ್ಯಗಳಲ್ಲೂ ಬ್ಯಾಟರ್ ಗಳೇ ಮ್ಯಾಚ್ ವಿನ್ನರ್ಸ್
ವೆಸ್ಟ್ ಇಂಡೀಸ್ ವಿರುದ್ಧವೂ 250 ರನ್ಸ್ ಟಾರ್ಗೆಟ್ ಇದ್ದೂ ಸೋಲು
ಹಾಗೇ ಫಸ್ಟ್ ಬ್ಯಾಟಿಂಗ್ ನಲ್ಲಿ ಭಾರತದ ಬ್ಯಾಟರ್ ಗಳ ಅಪ್ರೋಚ್ ಟೆಸ್ಟ್
ಟಾರ್ಗೆಟ್ ಸೆಟ್ ಆದ ಮೇಲೆ ಬ್ಯಾಟಿಂಗ್-ಫಸ್ಟ್ ಬ್ಯಾಟಿಂಗ್ ಕಂಪೇರಿಸನ್
ಹೀಗೆ ಭಾರತ ಫಸ್ಟ್ ಬ್ಯಾಟಿಂಗ್ ಮಾಡೋದು ಕೂಡ ಸಾಕಷ್ಟು ವಿಚಾರಗಳಲ್ಲಿ ನಿರ್ಣಾಯಕವಾಗಿರುತ್ತೆ. ಅಲ್ದೇ ನ್ಯೂಜಿಲೆಂಡ್ನಲ್ಲೂ ಭಾರತದ ಬೌಲಿಂಗ್ ಬಗ್ಗೆ ಪ್ರಶ್ನೆಗಳು ಮೂಡಿವೆ. ಚೇಸಿಂಗ್ನಲ್ಲಿ ನಮ್ಮವ್ರು ಹೀರೋಗಳು ಅನ್ನೋದು ಎಲ್ರಿಗೂ ಗೊತ್ತಿರೋದೇ. ಬಟ್ ಡಿಫೆನ್ಸ್ ಅಂತಾ ಬಂದಾಗ್ಲೂ ವೀ ಆರ್ ಸ್ಟ್ರಾಂಗ್ ಅನ್ನೋದನ್ನ ಪ್ರೂವ್ ಮಾಡ್ಬೇಕು. ಇಲ್ಲೇನೋ ಟಾಸ್ ಗೆದ್ರು ಸೋ ಫಸ್ಟ್ ಬೌಲಿಂಗ್ ಅಂತಾ ಪಿಕ್ ಮಾಡಿದ್ರು. ಆದ್ರೆ ಚೇಸಿಂಗ್ನಲ್ಲಿ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿರುವ ಟೀಮ್ ಇಂಡಿಯಾ, ಮೊದಲು ಬ್ಯಾಟಿಂಗ್ ಮಾಡುವಾಗಲೂ ಇದೇ ಅಬ್ಬರ ಮುಂದುವರಿಸಬಲ್ಲದೇ ಎಂಬುದೇ ಈಗಿನ ಪ್ರಶ್ನೆ. ಟಿ20 ವಿಶ್ವಕಪ್ನಂತಹ ಮಹತ್ವದ ಟೂರ್ನಿಗಳಲ್ಲಿ ಪ್ರತಿಬಾರಿಯೂ ಚೇಸಿಂಗ್ ಮಾಡುವ ಅವಕಾಶ ಸಿಗುವುದಿಲ್ಲ. ಮೊದಲು ಬ್ಯಾಟಿಂಗ್ ಮಾಡುವ ಸವಾಲು ಎದುರಾದಾಗಲೂ ದೊಡ್ಡ ಮೊತ್ತ ಕಲೆಹಾಕುವ ಸಾಮರ್ಥ್ಯ ಭಾರತಕ್ಕಿರಬೇಕು. ಹೀಗಾಗಿ ಚೇಸಿಂಗ್ನ ಯಶಸ್ಸಿಗೆ ಮರುಳಾಗದೆ, ಬ್ಯಾಟಿಂಗ್ ಫಸ್ಟ್ನಲ್ಲೂ ತನ್ನ ಆಕ್ರಮಣಕಾರಿ ಆಟವನ್ನ ತೋರಿಸಬೇಕಾಗುತ್ತೆ. ಇಲ್ಲದೇ ಇದ್ರೆ ನಿರ್ಣಾಯಕ ಪಂದ್ಯಗಳಲ್ಲಿ ಹೊಡೆತ ಬೀಳುತ್ತೆ.

ನೋಡಿರಿ

