1 ಕೋಟಿಗೆ ಆಡಿಯೋ ರೈಟ್ಸ್ OTTಗೆ 50+ ರೂ. ಕೋಟಿಗೆ ಸೇಲ್?
ಪ್ರೇಮದ ಊರಲಿ ಹಣದ ಹೊಳೆ

1 ಕೋಟಿಗೆ ಆಡಿಯೋ ರೈಟ್ಸ್    OTTಗೆ 50+ ರೂ. ಕೋಟಿಗೆ ಸೇಲ್?ಪ್ರೇಮದ ಊರಲಿ ಹಣದ ಹೊಳೆ

ಕೇವಲ 2 ರಿಂದ 3 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಈಗ ಬರೋಬ್ಬರಿ 144 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ! ಸ್ಟಾರ್ ನಟರ ಸಿನಿಮಾಗಳ ದಾಖಲೆಗಳಿಗೆ ಸೆಡ್ಡು ಹೊಡೆದಿರುವ ಈ ಚಿತ್ರ, ಆಡಿಯೋ ಹಕ್ಕು ಮಾರಾಟದಲ್ಲೂ ಹೊಸ ಇತಿಹಾಸ ಸೃಷ್ಟಿಸಿದೆ.

ಕಡಿಮೆ ಬಜೆಟ್, ಹೊಸ ಕಲಾವಿದರು, ಮಧುರವಾದ ಹಾಡುಗಳು ಮತ್ತು ಪ್ರೇಕ್ಷಕರ ಮನಮುಟ್ಟುವ ಪ್ರೇಮಕಥೆ. ಇಷ್ಟನ್ನೇ ಬಂಡವಾಳವಾಗಿಟ್ಟುಕೊಂಡು ಚಿತ್ರಮಂದಿರಕ್ಕೆ ಬಂದ ಈ ಸಿನಿಮಾ ಇದೀಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಅಂಕಿಅಂಶಗಳ ಪ್ರಕಾರ, ಅಕ್ಪೋಬರ್ 31 ರ ಅಂತ್ಯಕ್ಕೆ ಸಿನಿಮಾ ಜಾಗತಿಕವಾಗಿ 150 ಕೋಟಿ ರೂಪಾಯಿ  ಗಡಿಗೆ ಬಂದು ತಲುಪಿದೆ. 200 ಕೋಟಿ ಗಡಿ  ದಾಟಿ ಸ್ಟಾರ್ ಸಿನಿಮಾಗಳ ದಾಖಲೆ ಉಡೀಸ್ ಮಾಡೋದು ಪಕ್ಕಾ ಅನ್ನೋ ಟಾಕ್ ಕೂಡ ಇದೆ. ಯಾಕಂದ್ರೆ ಈ ಸಿನಿಮಾವನ್ನ ನೋಡೋಕೆ ಇನ್ನೂ ಕೂಡ ಜನ ಮುಗಿಬಿದ್ದು ಧಿಯೇಟರ್‌ಗೆ ಹೋಗುತ್ತಿದ್ದಾರೆ. ಅಷ್ಟೇ ಅಲ್ಲ 4-5 ಸಲ ಸಿನಿಮಾವನ್ನ ನೋಡುತ್ತಿದ್ದಾರೆ.

ಆಡಿಯೋ ರೈಟ್ಸ್ 1 ಕೋಟಿಗೆ ಸೇಲ್‌ 

ಇನ್ನು ಈ ಚಿತ್ರದ ಮತ್ತೊಂದು ದೊಡ್ಡ ಸಾಧನೆ ಆಡಿಯೋ ಹಕ್ಕು ಮಾರಾಟ. ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾದ ಹಾಡುಗಳ ಹಕ್ಕು ಬರೋಬ್ಬರಿ 1 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಖ್ಯಾತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಈ ಹಕ್ಕುಗಳನ್ನು ಖರೀದಿಸಿದೆ. ಸುನಾದ್ ಗೌತಮ್ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ.  ಆಡಿಯೋ ಹಕ್ಕು ಹೆಚ್ಚಿನ ಹಣಕ್ಕೆ ಮಾರಾಟವಾದ ಸ್ಟಾರ್ ನಟರ ಟಾಪ್ 10 ಸಿನಿಮಾಗಳ ಸಾಲಿಗೆ ಸೇರಿದೆ.

ಇನ್ನು ಬಾಕ್ಸ್ ಆಫೀಸ್ ಸಾಧನೆಯನ್ನು ಗಮನಿಸಿದರೆ, ಪುನೀತ್ ರಾಜ್‌ಕುಮಾರ್ ಅಭಿನಯದ ‘ಜೇಮ್ಸ್’, ದರ್ಶನ್ ಅವರ ‘ಕುರುಕ್ಷೇತ್ರ’ ಹಾಗೂ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’, ಸು ಫ್ರಂ ಸೋ, ಚಾರ್ಲಿ ಸಿನಿಮಾಗಳ ಗಳಿಕೆಯ ದಾಖಲೆಗಳನ್ನು ಹಿಂದಿಕ್ಕಿದೆ ಎಂಬ ವರದಿಗಳಿವೆ. ಈ ಮೂಲಕ ಕನ್ನಡದ ಯಶಸ್ವಿ ಸಿನಿಮಾಗಳ ಪಟ್ಟಿಯಲ್ಲಿ ತನ್ನದೇ ಸ್ಥಾನ ಪಡೆದುಕೊಂಡಿದೆ. ಇನ್ನೊಂದು ವಿಷ್ಯ ಅಂದ್ರೆ ಶಿವಣ್ಣ ಥಿಯೇಟರ್‌ಗೆ ಹೋಗಿ ಈ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ.

ಆದರೆ ಈಗ ನಿಜವಾದ ಕುತೂಹಲ ಇರುವುದು OTT ಹಕ್ಕುಗಳ ಬಗ್ಗೆ. ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ಸೇರಿದಂತೆ ಯಾವ ಸಂಸ್ಥೆ ಈ ಸಿನಿಮಾವನ್ನು ಖರೀದಿಸಲಿದೆ ಅನ್ನೋದು. 50 ಕೋಟಿ ರೂಪಾಯಿಗೂ ಅಧಿಕ ಮೊತ್ತಕ್ಕೆ ಡಿಜಿಟಲ್ ಹಕ್ಕು ಮಾರಾಟವಾಗಬಹುದು ಎಂಬ ನಿರೀಕ್ಷೆಗಳೂ ಕೇಳಿಬರುತ್ತಿವೆ. ಇದು ಟಾಕ್ಸಿಕ್ ಸಿನಿಮಾಕ್ಕಿಂತ ಹೆಚ್ಚಿನ ಹಣಕ್ಕೆ ಮಾರಾಟ ಆಗುತ್ತೆ ಅನ್ನೋ ಟಾಕ್ ಇದೆ. ಟಾಕ್ಸಿಕ್ ಸಿನಿಮಾದ OTT ಡಿಜಿಟಲ್ ಹಕ್ಕು ಮಾರಾಟಕ್ಕೆ 200 ಕೋಟಿ ರೂ.ಗೆ ಅಧಿಕ ಬೇಡಿಕೆ ಇಟ್ಟಿತ್ತು. ಸಿನಿಮಾ ಬಿಡುಗಡೆ ಮುನ್ನ 150 ಕೋಟಿ ರೂಪಾಯಿ ಕೆಲವು ಸಂಸ್ಥೆಗಳು ಕೇಳಿದ್ದವು. ಬಳಿಕ ಸಿನಿಮಾ ಸೋಲಿನಿಂದಾಗಿ ಟಾಕ್ಸಿಕ್ ಡಿಜಿಟಲ್ ಹಕ್ಕು 30ಕೋಟಿ ರೂಪಾಯಿಗೆ ಇಳಿಕೆ ಆಗಿದೆ. ಅಂದರೆ ಎಲ್ಲ ಭಾಷೆಗಳಲ್ಲಿ ಟಾಕ್ಸಿಕ್ ಸಿನಿಮಾ 30 ಕೋಟಿ ರೂ.ಗೆ ನೀಡಲು ಮುಂದಾಗಿದೆ. ಆದ್ರೆ ಇದ್ದಕ್ಕಿಂತ ಹೆಚ್ಚಿಗೆ ಹಣಕ್ಕೆ ಪ್ರೇಮದ ಊರಲಿ OTTಗೆ ಸೇಲ್ ಆಗುತ್ತೆ ಅನ್ನೋ ಟಾಕ್ ಇದೆ.

ಅಕ್ಟೋಬರ್ 12ರಂದು ಚಿತ್ರತಂಡ ಅಧಿಕೃತ ಮಾಹಿತಿ ನೀಡಿತ್ತು. ಸಿನಿಮಾದ OTT ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ಯಾವುದೇ ಸಂಸ್ಥೆಗೆ ಮಾರಾಟ ಮಾಡಿಲ್ಲ. ನಾವೇ ಅಧಿಕೃತವಾಗಿ ಹೇಳುತ್ತೇವೆ ಅಂತ ಹೇಳಿದ್ರು. ಹೀಗಾಗಿ 50 ಕೋಟಿ ರೂಪಾಯಿ ಎನ್ನುವುದು ಸದ್ಯದ ನಿರೀಕ್ಷೆಯಷ್ಟೇ ಹೊರತು, ಅಧಿಕೃತ ಒಪ್ಪಂದದ ಮೊತ್ತವಲ್ಲ.

Kishor KV

Leave a Reply

Your email address will not be published. Required fields are marked *