ಮೊನ್ನೆ 118/0.. ಇಂದು 62/4 – NZ ಗೆಲ್ಲಿಸಿದ ಭಾರತದ ಬೌಲರ್ಸ್
ಭುವಿ & ವೈಭವ್ ಬಿಟ್ಟಿದ್ದೇ ತಪ್ಪಾ?

ಸರಣಿ ಗೆದ್ದಿದ್ದೇವೆ ಅನ್ನೋ ಅಹಂಕಾರವೋ.. ಅಥವಾ ನಾವೇ ಗೆಲ್ಲೋದು ಅನ್ನೋ ಓವರ್ ಕಾನ್ಫಿಡೆನ್ಸೋ ಗೊತ್ತಿಲ್ಲ. ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ-20ಐ ಮ್ಯಾಚಲ್ಲಿ ಭಾರತ ಪಲ್ಟಿ ಹೊಡೆದಿದೆ. ಸರಣಿ ಸೋತ್ರೂ ತವರಿನಲ್ಲಿ ಕ್ಲೀನ್ ಸ್ವೀಪ್ ಅಂತೂ ಆಗಲ್ಲ ಅಂತಾ ಹಠಕ್ಕೆ ಬಿದ್ದಿದ್ದ ನ್ಯೂಜಿಲೆಂಡ್ ಬ್ಯಾಟರ್ಸ್ ಅಕ್ಷರಶಃ ಬೆವರಿಳಿಸಿದ್ರು. ನೀವಷ್ಟೇ ಡೇಂಜರಸ್ ಅಲ್ಲ ನಮಗೂ ಬಿಗ್ ಹಿಟ್ ಬಾರಿಸೋಕೆ ಬರುತ್ತೆ ಅನ್ನೋದನ್ನ ತೋರಿಸಿದ್ರು. ಌಂಡ್ 260 ರನ್ಗಳ ಟಾರ್ಗೆಟ್ ಸೆಟ್ ಮಾಡಿ ಈಗ ಚೇಸ್ ಮಾಡಿ ನೋಡೋಣ ಅಂತಾ ಸವಾಲು ಹಾಕಿದ್ರು. ಆದ್ರೆ ಭಾರತ ಪವರ್ ಪ್ಲೇನಲ್ಲೇ ತನ್ನ ಪವರ್ ಕಳ್ಕೊಂಡು ಕೊನೆಗೂ ಮ್ಯಾಚ್ನೂ ಕೈಚೆಲ್ಲಿತ್ತು.
ಇದನ್ನೂ ಓದಿ : ಕೊಹ್ಲಿ Vs ಬಾಬರ್.. ಧೋನಿ Vs ಜಾವೇದ್ – ಭಾರತೀಯರೇ GREAT ಎಂದ ಯೂನಿಸ್
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20ಐ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡ್ಬೇಕು ಅನ್ಕೊಂಡಿದ್ದ ಭಾರತದ ಗುರಿ ಮಿಸ್ ಆಗಿದೆ. ಆಕ್ಲೆಂಡ್ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದೆ. ನಾಲ್ಕನೇ ಪಂದ್ಯಕ್ಕೆ ಭಾರತ ಪ್ಲೇಯಿಂಗ್ 11ನಲ್ಲಿ 2 ಬದಲಾವಣೆ ಮಾಡಿದ್ರು. ಇಶಾನ್ ಕಿಶನ್ ರಿಕವರ್ ಆಗಿ ತಂಡಕ್ಕೆ ಕಂ ಬ್ಯಾಕ್ ಮಾಡಿದ್ರಿಂದ ವೈಭವ್ ಸೂರ್ಯವಂಶಿಯನ್ನ ಹೊರಗಿಟ್ಟು ಇಶಾನ್ ಕಿಶನ್ಗೆ ಚಾನ್ಸ್ ನೀಡಲಾಗಿತ್ತು. ಹಾಗೇ ಬೌಲಿಂಗ್ನಲ್ಲಿ ದುಬಾರಿ ಅಂತಾ ಭುವನೇಶ್ವರ್ ಕುಮಾರ್ನ ಹೊರಗಿಟ್ಟು ಮಯಾಂಕ್ ಯಾದವ್ಗೆ ಅವಕಾಶ ನೀಡಿದ್ರು. ಆದ್ರೆ ಈ ಎರಡೂ ಬದಲಾವಣೆಗಳು ಭಾರತಕ್ಕೆ ರಿವರ್ಸ್ ಫೈಯರ್ ಆದಂತೆ ಕಾಣ್ತಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಫ್ಲ್ಯಾಪ್ ಶೋ. ಟಾಸ್ ಸೋತು ಈ ಸಲ ಫಸ್ಟ್ ಬ್ಯಾಟಿಂಗ್ಗೆ ಇಳಿದ ಕಿವೀಸ್ ಪಡೆ ದಾಖಲೆಯ ಟಾರ್ಗೆಟ್ ಸೆಟ್ ಮಾಡಿ ಭಾರತಕ್ಕೆ ಸರಣಿಯಲ್ಲಿ ಮೊದಲ ಸೋಲಿನ ರುಚಿ ತೋರಿಸಿದೆ.
ಗ್ಲೆನ್ ಫಿಲಿಪ್ಸ್ ಸೆಂಚುರಿ.. ಭಾರತಕ್ಕೆ 260 ರನ್ ಗಳ ಟಾರ್ಗೆಟ್!
ಸತತ ನಾಲ್ಕನೇ ಪಂದ್ಯದಲ್ಲೂ ಟಾಸ್ ಸೋತ ಕಿವೀಸ್ ಪರ ಟಿಮ್ ಸೈಫರ್ಟ್ ಹಾಗೇ ಫಿನ್ ಅಲೆನ್ ಇನ್ನಿಂಗ್ಸ್ ಓಪನ್ ಮಾಡಿದ್ರು. ಮೊದಲ ಓವರ್ನಲ್ಲೇ ಮಯಾಂಕ್ ಯಾದವ್ ಬೌಲಿಂಗ್ನಲ್ಲಿ ಟಿಮ್ ಸೈಫರ್ಟ್ 5 ರನ್ಗಳಿಗೆ ಔಟ್ ಆದ್ರು. ಆ ನಂತ್ರ ಅಲೆನ್ 30 ರನ್ ಗಳಿಸಿದ್ರೆ ಡೇರಿಲ್ ಮಿಚೆಲ್ 24 ರನ್ಸ್ ಕಲೆ ಹಾಕಿದ್ರು. ಅದ್ರಲ್ಲೂ ಗ್ಲೆನ್ ಫಿಲಿಪ್ಸ್ ಮತ್ತು ಮೈಕೆಲ್ ಬ್ರೇಸ್ವೆಲ್ ನಡುವೆ 5ನೇ ವಿಕೆಟ್ಗೆ 115 ರನ್ಗಳ ಜೊತೆಯಾಟವಾಡಿದ್ರು. ಅದೂ ಕೂಡ ಕೇವಲ 40 ಎಸೆತಗಳಲ್ಲಿ. ಫಿಲಿಪ್ಸ್ 107 ರನ್ಸ್, ಬ್ರೇಸ್ವೆಲ್ 65 ರನ್ಸ್ ಕಲೆ ಹಾಕಿದ್ರು. ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 259 ರನ್ಸ್ ಕಲೆ ಹಾಕಿದ ಬ್ಲ್ಯಾಕ್ ಕ್ಯಾಪ್ಸ್ ಭಾರತಕ್ಕೆ 260 ರನ್ಗಳ ಟಾರ್ಗೆಟ್ ನೀಡಿದ್ರು. ಟಿ-20ಐನಲ್ಲಿ ನ್ಯೂಜಿಲೆಂಡ್ ತಂಡ ಗಳಿಸಿದ ಅತ್ಯಧಿಕ ರನ್ಸ್.. ಹಾಗೇ ಇದೇ ಮೊದಲ ಬಾರಿಗೆ ಭಾರತ ತಂಡ ಎದುರಾಳಿಗೆ 259 ರನ್ ಬಿಟ್ಟುಕೊಟ್ಟು ಬೇಡದ ದಾಖಲೆ ಕೂಡ ಬರೆಯಿತು. ಇಂಗ್ಲೆಂಡ್ ವಿರುದ್ಧ 257 ರನ್‌ಗಳನ್ನು ಬಿಟ್ಟುಕೊಟ್ಟಿದ್ದೇ ಹೈಯೆಸ್ಟ್ ಆಗಿತ್ತು. ಇನ್ನು ಭಾರತದ ಪರ ಅರ್ಶದೀಪ್ ಸಿಂಗ್ ಮಾತ್ರನೇ ಬಿಲೋ 10 ಎಕಾನಮಿಯಲ್ಲಿ ರನ್ಸ್ ಕೊಟ್ಟಿದ್ದು. ಮಯಾಂಕ್ 12ರ ಎಕಾನಮಿಯಲ್ಲಿ ರನ್ಸ್ ಕೊಟ್ಟು 3 ವಿಕೆಟ್ ತೆಗೆದ್ರೆ, ಪ್ರಿನ್ಸ್ ಯಾದವ್ 12.25, ಅಕ್ಷರ್ ಪಟೇಲ್ 14.33, ನಮನ್ ಧೀರ್ 16ರ ಎಕಾನಮಿಯಲ್ಲಿ ರನ್ಸ್ ಕೊಟ್ರು. ಅದ್ರಲ್ಲೂ ನಿತೀಶ್ ರೆಡ್ಡಿಯಂತೂ 4 ಓವರ್ಗಳಲ್ಲಿ 64 ರನ್ಸ್ ಹೊಡೆಸಿಕೊಂಡ್ರು. ಹೀಗೆ ಬೌಲಿಂಗ್ನಲ್ಲಿ ಬೌಲರ್ಸ್ ಬೇಕಾಬಿಟ್ಟಿ ರನ್ಸ್ ಕೊಟ್ರೆ ಬ್ಯಾಟರ್ಸ್ ಅಂತೂ ಬಂದಪುಟ್ಟ ಹೋದ ಪುಟ್ಟ ಎನ್ನುವಂತೆ ಪೆವಿಲಿಯನ್ ಪರೇಡ್ ನಡೆಸಿದ್ರು.
ಅಹಂಕಾರಕ್ಕೆ ಬೆಲೆ ತೆತ್ತ ಭಾರತ!
ಬಿಗ್ ಟಾರ್ಗೆಟ್ ಬೆನ್ನಟ್ಟಿದ ಭಾರತದ ಪರ ಮೊದಲ ಓವರ್ ನಲ್ಲೇ 2 ವಿಕೆಟ್
ಫಸ್ಟ್ ಬಾಲ್ ಫೋರ್.. 2ನೇ ಬಾಲ್ ನಲ್ಲಿ ವಿಕೆಟ್ ಒಪ್ಪಿಸಿದ ಸಂಜು ಸ್ಯಾಮ್ಸನ್
5ನೇ ಎಸೆತದಲ್ಲಿ ಇಶಾನ್ ಕಿಶನ್ ಡಕ್ ಔಟ್.. ಫಸ್ಟ್ ಓವರ್ ಡಫಿಗೆ 2 ವಿಕೆಟ್
ಕ್ರೂಶಿಯಲ್ ಟೈಮಲ್ಲೂ ಕೈಕೊಟ್ಟ ಶ್ರೇಯಸ್ ಅಯ್ಯರ್ 22(11)ಕ್ಕೆ ಔಟ್
ಪವರ್ ಪ್ಲೇ ಮುಗಿಯೋ ಹೊತ್ತಿಗೆ 62/4 ರನ್ಸ್ ಕಲೆ ಹಾಕಿದ್ದ ಭಾರತ
9ನೇ ಓವರ್ ನಲ್ಲಿ ನಿತೀಶ್ ರೆಡ್ಡಿ 21(10), ಅಕ್ಷರ್ 7(9)ಕ್ಕೆ ವಿಕೆಟ್
ಒಂದೇ ಓವರ್ ನಲ್ಲಿ ಎರಡು ವಿಕೆಟ್ ತೆಗೆದ ನಾಯಕ ಮಿಚೆಲ್ ಸ್ಯಾಂಟ್ನರ್
10 ಓವರ್ ಆದ್ಮೇಲೆ ಭಾರತದ ಗೆಲುವಿಗೆ 60 ಎಸೆತಗಳಲ್ಲಿ 153 ರನ್ಸ್ ಅಗತ್ಯ
ತಿಲಕ್ 35, ನಮನ್ ಧೀರ್ 28, ಪ್ರಿನ್ಸ್ ಯಾದವ್ 18 ರನ್ಸ್ ಕಲೆ
20 ಓವರ್ ಗಳಲ್ಲಿ 172/9.. 87 ರನ್ಸ್ ಗಳಿಂದ ಸೋತ ಟೀಂ ಇಂಡಿಯಾ
ಭಾರತದ ಬ್ಯಾಟರ್ಗಳ ಪೈಕಿ ತಿಲಕ್ ವರ್ಮಾ 35 ರನ್ಸ್ ಕಲೆ ಹಾಕಿದ್ದೇ ಹೈಯೆಸ್ಟ್ ಸ್ಕೋರ್ ಆಗಿತ್ತು. ಪವರ್ ಪ್ಲೇ ನ ರನ್ಸ್ ಕಂಪೇರ್ ಮಾಡಿದ್ರೆ ಆಲ್ಮೋಸ್ಟ್ ಎರಡೂ ತಂಡಗಳು ಸೇಂ ಇದ್ವು. ಕಿವೀಸ್ ಪಡೆ ಮೊದಲ 6 ಓವರ್ಗಳಲ್ಲಿ 67ಕ್ಕೆ 2 ವಿಕೆಟ್ ಕಳ್ಕೊಂಡ್ರೆ ಭಾರತ 62ಕ್ಕೆ ನಾಲ್ಕು ವಿಕೆಟ್ ಕಳ್ಕೊಂಡಿತ್ತು. ಸೋ ಇಲ್ಲಿ ವಿಕೆಟ್ಸ್ ಎಕ್ಸ್ಟ್ರಾ ಬಿದ್ದಿದ್ದೇ ಹೊರೆಯಾಗಿದ್ದು. ಹಾಗೇ ಯಾವೊಬ್ಬ ಬ್ಯಾಟರ್ ಕೂಡ ಇನಿಶಿಯೇಟ್ ತಗೊಳ್ಳಿಲ್ಲ
ಬದಲಾವಣೆ ಮಾಡಿ ಕೆಟ್ಟ ಭಾರತ!
ಪ್ಲೇಯಿಂಗ್ 11ನಲ್ಲಿ ಬದಲಾವಣೆ ಬೇಕಿರಲಿಲ್ಲ.. ವಿನ್ನಿಂಗ್ ಕಾಂಬಿನೇಷನ್
ಭುವಿಗೆ ಸರಣಿಯ ಪೂರ್ತಿ ಪಂದ್ಯಗಳಲ್ಲಿ ಬೌಲಿಂಗ್ಸ್ ಚಾನ್ಸ್ ನೀಡಬೇಕಿತ್ತು
ಮೊದಲ 3 ಪಂದ್ಯಗಳಲ್ಲಿ ದುಬಾರಿ ಆದ್ರೂ ಡಫಿಗೆ ಚಾನ್ಸ್.. ಫಸ್ಟ್ ಓವರ್ 2 ವಿಕೆಟ್
12ನೇ ಓವರ್ ನಲ್ಲಿ ಡಫಿಗೆ ನಮನ್ & ಅರ್ಶದೀಪ್ ಬ್ಯಾಕ್ ಟು ಬ್ಯಾಕ್ ವಿಕೆಟ್ಸ್
ಭುವಿಯನ್ನ ಹೊರಗೆ ಇಟ್ರೂ ಸ್ಪಿನ್ನರ್ ಬಿಟ್ಟು ಮತ್ತೆ ಫಾಸ್ಟ್ ಬೌಲರ್ ಗೆ ಮಣೆ
ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿದ್ದು ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್
ಸರಣಿಯಲ್ಲಿ ಸ್ಪಿನ್ನರ್ ಗಳಾದ ವರುಣ್ & ಕುಲ್ದೀಪ್ ಗೆ ಚಾನ್ಸ್ ನೀಡದ ಭಾರತ
260 ರನ್ಸ್ ಟಾರ್ಗೆಟ್.. ಪ್ರತೀ ಓವರ್ ಗೆ 13 ರನ್ ಗಳ ರಿಕ್ವೈರ್ಡ್ ರನ್ ರೇಟ್
ಹೀಗೆ ಭಾರತ ಫಸ್ಟ್ ಇನ್ನಿಂಗ್ಸ್ನಲ್ಲಿ 260 ರನ್ಸ್ ಕೊಟ್ಟಾಗ್ಲೇ ಅರ್ಧ ಸೋತಾಗಿತ್ತು. ಒಟ್ನಲ್ಲಿ ನಾಲ್ಕನೇ ಪಂದ್ಯಕ್ಕೆ ಆಕ್ಲೆಂಡ್ ಸ್ಟೇಡಿಯಂ ಹೌಸ್ಫುಲ್ ಆಗಿತ್ತು. 3ನೇ ಪಂದ್ಯದಂತೆಯೇ ಭಾರತದ ಪ್ಲೇಯರ್ಸ್ ದೀಪಾವಳಿ ಧಮಾಕ ತೋರಿಸ್ತಾರೆ ಅಂತಾ ಕ್ರೌಡ್ ಕೂಡ ಕಾಯ್ತಾ ಇದ್ರು. ಆದ್ರೆ ಪಟಾಕಿ ಯಾರ್ದೇ ಆಗಿದ್ರೂ ಅಂಟಿಸೋರು ನಾವೇ ಆಗಿರ್ಬೇಕು ಅನ್ನೋ ಹಾಗೇ ನ್ಯೂಜಿಲೆಂಡ್ ಪ್ಲೇಯರ್ಸ್ ನಾಲ್ಕನೇ ಪಂದ್ಯದಲ್ಲಿ ಭಾರತಕ್ಕೆ ಸೋಲಿನ ಪಾಠ ಕಲಿಸಿದ್ದಾರೆ. ಈ ಸೋಲಿನ ಬಳಿಕ ಭಾರತ ಹಲವು ವಿಚಾರಗಳಲ್ಲಿ ಅಲರ್ಟ್ ಆಗ್ಬೇಕಿದೆ.

ನೋಡಿರಿ

