ಸ್ಮೃತಿ Vs ಕೌರ್.. ಶೇಕ್ಹ್ಯಾಂಡ್ WAR- IPLಗೆ ಗೌತಮ್ ಗಂಭೀರ್ ಎಂಟ್ರಿ?

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಭಾರತ ಮಹಿಳಾ ತಂಡದ ಸಂಭ್ರಮದ ನಡುವೆ, ನಾಯಕಿ ಸ್ಮೃತಿ ಮಂದಾನ ಮತ್ತು ಮಾಜಿ ನಾಯಕಿ ಹರ್ಮನ್ಪ್ರೀತ್ ಕೌರ್ ಹ್ಯಾಂಡ್ಶೇಕ್ ನೀಡುದೇ ಪಕ್ಕಕ್ಕೆ ಸರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರ ನಡುವೆ ಮನಸ್ತಾಪ ಇದೆ ಎಂಬ ಬಗ್ಗೆ ಗಾಸಿಪ್ ಹೆಚ್ಚುತ್ತಿದ್ದು, ಇಬ್ಬರಿಂದಲೂ ಈವರೆಗೂ ಯಾವುದೇ ರೀತಿಯ ಸ್ಪಷ್ಟನೆಯಿಲ್ಲ.
ಗೌತಮ್ ಗಂಭೀರ್ ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನದಿಂದ ನಿರ್ಗಮಿಸಿದ ನಂತರ, ಹಲವು ಐಪಿಎಲ್ ಫ್ರಾಂಚೈಸಿಗಳು ಅವರನ್ನು ತಮ್ಮ ತಂಡಕ್ಕೆ ಮೆಂಟರ್ ಅಥವಾ ಕೋಚ್ ಆಗಿ ಸೇರಿಸಿಕೊಳ್ಳಲು ಆಸಕ್ತಿ ತೋರಿವೆ. ಕೆಕೆಆರ್ ಸೇರಿದಂತೆ ಕನಿಷ್ಠ ನಾಲ್ಕು ತಂಡಗಳು ಗಂಭೀರ್ ಅವರನ್ನು ಪಡೆಯಲು ಸಿದ್ಧವಾಗಿವೆ. ಗಂಭೀರ್ ಅವರ ಐಪಿಎಲ್ ಯಶಸ್ಸು ಇದಕ್ಕೆ ಕಾರಣ. ಅವರ ಮುಂದಿನ ನಡೆ, ಟೀಂ ಇಂಡಿಯಾ ಒಪ್ಪಂದಮುಂದುವರಿಯುತ್ತಾ ಅಥವಾ ಐಪಿಎಲ್ಗೆ ಮರಳುತ್ತಾರಾ ಅನ್ನೋ ಕುತೂಹ ಹೆಚ್ಚಾಗಿದೆ.
ಐಪಿಎಲ್ 2027ಕ್ಕೆ ಮುಂಬೈ ಇಂಡಿಯನ್ಸ್ ಭರ್ಜರಿ ಸಿದ್ಧತೆ ಆರಂಭಿಸಿದೆ. ತಂಡದ ಬ್ಯಾಟಿಂಗ್ ಕೋಚ್ ಆಗಿ ರಾಬಿನ್ ಉತ್ತಪ್ಪ ನೇಮಕವಾಗಿದ್ದಾರೆ. ಮಿಚೆಲ್ ಮೆಕ್ಕ್ಲೆನಗನ್ ಬೌಲಿಂಗ್ ಕೋಚ್, ಟಿ. ದಿಲೀಪ್ ಫೀಲ್ಡಿಂಗ್ ಕೋಚ್ ಆಗಿದ್ದಾರೆ. ಧವಳ್ ಕುಲಕರ್ಣಿ ಡೆವಲಪ್ಮೆಂಟ್ ಬೌಲಿಂಗ್ ಕೋಚ್ ಆಗಿ ಮರಳಿದ್ದಾರೆ. ಕೀರನ್ ಪೊಲಾರ್ಡ್ ನೇತೃತ್ವದಲ್ಲಿ ಮುಂಬೈ ಹೊಸ ರೂಪ ಪಡೆಯುತ್ತಿದೆ. ಮುಂಬೈ ಹಳೇ ಆಟಗಾರನ್ನೇ ಹೊಸ ಕೋಚ್ಗಳನ್ನಾಗಿ ನೇಮಕ ಮಾಡಿದೆ.
ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳ ಮೌಲ್ಯ ಈಗ ಗಗನಕ್ಕೇರಿದೆ. ಪ್ರಸಿದ್ಧ ‘ಸ್ಪೋರ್ಟಿಕೋ’ ವರದಿಯ ಪ್ರಕಾರ, ಮುಂಬೈ ಇಂಡಿಯನ್ಸ್ 2.1 ಬಿಲಿಯನ್ ಡಾಲರ್ ಅಂದರೆ ಬರೋಬ್ಬರಿ ₹19,980 ಕೋಟಿ ರೂಪಾಯಿ ಮೌಲ್ಯದೊಂದಿಗೆ ಐಪಿಎಲ್ನ ಅತ್ಯಂತ ದುಬಾರಿ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ. RCB ತಂಡವು ಸುಮಾರು ₹17,612 ಕೋಟಿ ಮೌಲ್ಯದೊಂದಿಗೆ ಎರಡನೇ ಸ್ಥಾನಕ್ಕೇರಿದೆ.
ಇದನ್ನೂ ಓದಿ: ಮಲಿಂಗಾ ಔಟ್.. ಉತ್ತಪ್ಪ ಕೋಚ್ – KKRಗೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್?
ಮಹಿಳಾ ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಸಿಹಿಸುದ್ದಿ ನೀಡುವ ಸಾಧ್ಯತೆಯಿದೆ. ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಈಗಿರುವ ಐದು ತಂಡಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಮುಂದಿನ ವರ್ಷದಿಂದ ಹೊಸ ತಂಡಗಳು ಸೇರ್ಪಡೆಯಾಗುವ ಸಾಧ್ಯತೆ ಕುರಿತು ಚರ್ಚೆ ನಡೆಯಲಿದೆ. ಇದು ಮಹಿಳಾ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬಹುದು. ಆದರೆ ತಂಡಗಳ ಹೆಚ್ಚಳದ ಬಗ್ಗೆ ಇನ್ನೂ ಅಧಿಕೃತ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ.
ಮಹಿಳಾ ಟಿ20 ಕ್ರಿಕೆಟ್ನಲ್ಲಿ ದೆಹಲಿ ತಂಡ ಹೊಸ ಇತಿಹಾಸ ಬರೆದಿದೆ. ಸೀನಿಯರ್ ಮಹಿಳಾ ಟಿ20 ಟ್ರೋಫಿಯಲ್ಲಿ ಹೈದರಾಬಾದ್ ವಿರುದ್ಧ ಬರೋಬ್ಬರಿ 262 ರನ್ ಗಳಿಸಿದೆ. ತನಿಷಾ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ತಂಡದ ಬೃಹತ್ ಮೊತ್ತಕ್ಕೆ ಪ್ರಮುಖ ಕಾರಣವಾಗಿದೆ. ದೇಶೀಯ ಮಹಿಳಾ ಟಿ20 ಕ್ರಿಕೆಟ್ನಲ್ಲಿ ತಂಡವೊಂದು ಗಳಿಸಿದ ಅತ್ಯಧಿಕ ಮೊತ್ತ ಎಂಬ ದಾಖಲೆಯನ್ನು ದೆಹಲಿ ನಿರ್ಮಿಸಿದೆ.
ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಸ್ಮೃತಿ ಮಂಧನಾ ಅವರಿಗೆ ವಾಟ್ಸಾಪ್ ಸಂದೇಶವೊಂದನ್ನು ಕಳುಹಿಸಿ ಅಭಿನಂದನೆ ತಿಳಿಸಿದ್ದರು ಎಂಬ ವಿಚಾರವನ್ನು ವರ್ಷಗಳ ಬಳಿಕ ಮಂಧನಾ ಬಹಿರಂಗಪಡಿಸಿದ್ದಾರೆ. “ವಿಶ್ವಕಪ್ ಗೆಲುವಿನ ನಂತರ ಅವರು ನಿಜವಾಗಿಯೂ ನನಗೆ ಸಂದೇಶ ಕಳುಹಿಸಿದ್ದರು. ಅವರಿಗೆ ಫೋನ್ ಬಳಸುವ ಅಭ್ಯಾಸ ಅಷ್ಟಾಗಿ ಇಲ್ಲ ಎಂಬುದು ನನಗೆ ಗೊತ್ತು. ಹೀಗಿದ್ದರೂ, ನಮ್ಮೆಲ್ಲರಿಗೂ ಅಭಿನಂದನೆ ತಿಳಿಸಲು ಅವರು ವಾಟ್ಸಾಪ್ ಬಳಸಿದ್ದು ನನಗೆ ತುಂಬಾ ಸಂತೋಷ ತಂದಿತು,” ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮಂಧನಾ ಹೇಳಿದರು.
ರಣಜಿ ತಂಡ ಇನ್ನಿಂಗ್ಸ್ ಹಾಗೂ 116 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿ 7 ಅಂಕಗಳನ್ನು ಗಳಿಸಿದೆ. ಶ್ರೇಯಸ್ ಗೋಪಾಲ್ 5 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಜ್ಯ ತಂಡ 4ನೇ ಪಂದ್ಯದಲ್ಲಿ ನ.2ರಿಂದ ಅಸ್ಸಾಂ ವಿರುದ್ಧ ಸೆಣಸಾಡಲಿದೆ. ಆ ಪಂದ್ಯದಲ್ಲೂ ಕರ್ನಾಟಕ ಬೋನಸ್ ಅಂಕ ಪಡೆಯುವ ವಿಶ್ವಾಸದಲ್ಲಿದೆ.
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ತಂಡವು ಆಕ್ಲೆಂಡ್ಗೆ ಆಗಮಿಸಿದಾಗ, ಅಲ್ಲಿ ವಿರಾಟ್ ಕೊಹ್ಲಿ ಅವರನ್ನು ನೋಡಲು ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ರು. ಬಿಗುವಿನ ಭದ್ರತೆಯ ನಡುವೆಯೂ, ವಿಮಾನ ನಿಲ್ದಾಣದ ಟರ್ಮಿನಲ್ ಮೂಲಕ ಸಾಗುತ್ತಿದ್ದ ಕಿಂಗ್ ಕೊಹ್ಲಿಯನ್ನ ಫ್ಯಾನ್ಸ್ ಸುತ್ತುವರಿದು, ಸೆಲ್ಫಿ ತೆಗೆದುಕೊಳ್ಳಲು ಮತ್ತು ಆಟೋಗ್ರಾಫ್ ಪಡೆಯಲು ಮುಗಿಬಿದ್ದರು. ಎಲ್ಲದ್ದಕ್ಕಿಂದ ಹೆಚ್ಚಾಗಿ ನವೆಂಬರ್ 5ರಂದು ಬರಲಿರುವ ಕೊಹ್ಲಿ ಅವರ ಜನ್ಮದಿನಕ್ಕೆ ಮುಂಚಿತವಾಗಿಯೇ ಶುಭಾಶಯ ಕೋರುವ ಪೋಸ್ಟರ್ಗಳನ್ನು ಹಿಡಿದುಕೊಂಡಿದ್ದರು.
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ರೋಚಕ ಹೋರಾಟ ನಡೆಯುತ್ತಿದೆ. ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ 329 ರನ್ ಗಳಿಸಿದೆ. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಬ್ಯಾಟಿಂಗ್ ಮುಂದುವರಿಸಿದೆ. ಎರಡೂ ತಂಡಗಳ ನಡುವೆ ಗೆಲುವಿನ ಲೆಕ್ಕಾಚಾರ ಜೋರಾಗಿದ್ದು, ಪಂದ್ಯದ ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿದೆ.

ನೋಡಿರಿ

