NZ ವಿರುದ್ಧ 4ನೇ ಪಂದ್ಯಕ್ಕಿಲ್ಲ ಭುವಿ – ಭಾರತದ ಎದುರು ZIM ಕ್ಲೀನ್ ಸ್ವೀಪ್
ಸಂಜು ತ್ಯಾಗದಿಂದ ಇಂಡಿಯಾಕ್ಕೆ ಗೆಲುವು

2027ರ ವುಮೆನ್ಸ್ ಪ್ರೀಮಿಯರ್ ಲೀಗ್ ಗಾಗಿ ಐದೂ ತಂಡಗಳು ಆಟಗಾರ್ತಿಯರನ್ನು ಖರೀದಿ ಮಾಡಿದ್ದಾರೆ. ಆರ್ ಸಿಬಿಗೆ ಹೊಸ ಆಟಗಾರ್ತಿಯರು ಸೇರ್ಪಡೆಯಾಗಿದ್ದಾರೆ. 4ನೇ ಪಂದ್ಯದಿಂದ ಭುವನೇಶ್ವರ್ ಕುಮಾರ್ ರನ್ನ ಕೈಬಿಡುವಂತೆ ಒತ್ತಾಯ ಜಾಸ್ತಿಯಾಗಿದೆ. ಹೀಗೆ ಕ್ರಿಕೆಟ್ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : ಕೊಹ್ಲಿ ಟ್ರೋಲ್ ಮಾಡಿದ CSK – ಅಭಿಗೆ ಪವರ್ ಪ್ಲೇ TARGET
- ಜಿಂಬಾಬ್ವೆ ಮಹಿಳಾ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಭಾರತ ಮಹಿಳಾ ತಂಡ ಜಯ ಸಾಧಿಸಿದೆ. ಬೌಲಿಂಗ್ನಲ್ಲಿ ಎದುರಾಳಿ ತಂಡವನ್ನು ಕಟ್ಟಿಹಾಕಿದ ಟೀಂ ಇಂಡಿಯಾ, ನಂತರ ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಿ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಟಿ20 ಸರಣಿ ಬಳಿಕ ಏಕದಿನ ಸರಣಿಯನ್ನೂ ಕ್ಲೀನ್ ಸ್ವೀಪ್ ಮಾಡಿದೆ.
- ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ವೈಷ್ಣವಿ ಶರ್ಮಾ 5 ವಿಕೆಟ್ಗಳ ಗೊಂಚಲು ಪಡೆದರು. ವೈಷ್ಣವಿ ತಮ್ಮ ಸ್ಪಿನ್ ಜಾದೂ ಮೂಲಕ ಜಿಂಬಾಬ್ವೆ ತಂಡದ ಬ್ಯಾಟರ್ಗಳನ್ನು ಕಾಡಿದ್ದಲ್ಲದೇ, ಕೇವಲ 39 ರನ್ ನೀಡಿ ಎದುರಾಳಿ ತಂಡದ ಅರ್ಧದಷ್ಟು ಆಟಗಾರ್ತಿಯರನ್ನು ಪೆವಿಲಿಯನ್ಗೆ ಕಳುಹಿಸಿದರು ಇನ್ನು ಬ್ಯಾಟಿಂಗ್ನಲ್ಲಿ ಶಫಾಲಿ ವರ್ಮಾ 51 ರನ್ ಮತ್ತು ಪ್ರತೀಕಾ ರಾವಲ್ 59 ರನ್ ಗಳಿಸಿ ಭಾರತಕ್ಕೆ ಸುಲಭ ಗೆಲುವು ತಂದುಕೊಟ್ಟರು.
- ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೂ ಮೊದಲೇ ಭಾರತ ತಂಡಕ್ಕೆ ಇಂಜುರಿ ಶಾಕ್ ಸಿಕ್ಕಿದೆ. ತಂಡದ ಪ್ರಮುಖ ವೇಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಗಾಯದ ಸಮಸ್ಯೆಯಿಂದ ಸರಣಿಯಿಂದಲೇ ಹೊರಗುಳಿಯುವಂತಾಗಿದೆ. ಹ್ಯಾಮ್ಸ್ಟ್ರಿಂಗ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದೇ ಇರೋ ಕಾರಣಕ್ಕೆ ಪ್ರಸಿದ್ಧ್ ಕೃಷ್ಣ ಅವರು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.
- ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮುಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಕಣಕ್ಕಿಳಿಯುವುದು ಡೌಟ್. ಇವರ ಬದಲು ಮಯಾಂಕ್ ಯಾದವ್ ಕಣಕ್ಕಿಳಿಯಬಹುದು ಎಂದು ಭಾರತದ ಮಾಜಿ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ. ಮೂರೂ ಟಿ20 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದರೂ, ಭುವನೇಶ್ವರ್ ಕೇವಲ ಒಂದು ವಿಕೆಟ್ ಪಡೆದಿದ್ದಾರೆ. 11.58ರ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಭುವಿ ಆಡಲ್ಲ ಎಂದು ಆರ್. ಅಶ್ವಿನ್ ಭವಿಷ್ಯ ನುಡಿದಿದ್ದಾರೆ.
- ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ ಅಭಿಷೇಕ್ ಶರ್ಮಾ, ಓಪನರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಕೊಂಡಾಡಿದ್ದಾರೆ. ಪಂದ್ಯ ಮುಗಿದ ನಂತರ ಅಭಿಶೇಕ್, ತಮ್ಮ ಶತಕದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಸಂಜು ಸ್ಯಾಮ್ಸನ್ ಅವರ ನಿಸ್ವಾರ್ಥ ಗುಣವನ್ನು ಕೊಂಡಾಡಿದರು. ಓಪನರ್ ಆಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕಕ್ಕೆ ಇಳಿದು, ಸೂರ್ಯವಂಶಿಗೆ ತಮ್ಮ ಸ್ಥಾನ ಬಿಟ್ಟುಕೊಟ್ಟರು. ಸಂಜು ಭಾಯ್ ನಿಸ್ವಾರ್ಥಿ ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.
- ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಬಳಿಯಲ್ಲಿದ್ದ ಐಸಿಸಿ ಟೆಸ್ಟ್ ಆಲ್ರೌಂಡರ್ಗಳ ವಿಶ್ವದ ನಂ.1 ಪಟ್ಟವನ್ನು ಕಳೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಯುವ ಆಲ್ರೌಂಡರ್ ಮಾರ್ಕೊ ಯಾನ್ಸನ್ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಾನ್ಸನ್ ಈಗ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ.
- ಇಂಗ್ಲೆಂಡ್ ವಿರುದ್ಧದ ತ್ರಿಕೋನ ಸರಣಿಯ ಪಂದ್ಯದಲ್ಲಿ ಆಟದ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪಾಕ್ ಸ್ಟಾರ್ ವೇಗಿ ಹ್ಯಾರಿಸ್ ರೌಫ್ಗೆ, ಐಸಿಸಿ ದಂಡ ವಿಧಿಸಿದೆ. ಪಂದ್ಯದ ಸಂಭಾವನೆಯ ಶೇ.20ರಷ್ಟು ದಂಡ ಮತ್ತು ಅಮಾನತು ಎಚ್ಚರಿಕೆ ಕೂಡಾ ನೀಡಲಾಗಿದೆ. ರೌಫ್ ಅವರ ವರ್ತನೆಯು ಆಟದ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಐಸಿಸಿ ತಿಳಿಸಿದೆ. ರೌಫ್ ಗೆ ದಂಡದ ಜೊತೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
- ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ನಡೆದ ಕಾಂಗರೂ ಜಂಪ್ ಸೆಲೆಬ್ರೇಷನ್ ಈಗ ವೈರಲ್ ಆಗಿದೆ. ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಮಾರ್ನಸ್ ಲಾಬುಶೇನ್ ಝೀರ್ ರನ್ ಗೆ ಔಟ್ ಆಗಿದ್ದಾರೆ. ಮಾರ್ನಸ್ ವಿಕೆಟ್ ಸಿಗುತ್ತಿದ್ದಂತೆ ಸೌತ್ ಆಫ್ರಿಕಾದ ಫೀಲ್ಡರ್ ಮ್ಯಾಥ್ಯೂ ಕಾಂಗರೂ ಜಂಪ್ ಮಾಡುವ ಮೂಲಕ ಸ್ಲೆಡ್ಜಿಂಗ್ ಮಾಡಿದ್ದು, ಈ ವಿಚಿತ್ರ ಸೆಲೆಬ್ರೇಷನ್ ಬಗ್ಗೆ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ.
- WPL-2026 ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ನಮ್ಮ ಆರ್ಸಿಬಿ ನಾಲ್ವರು ಆಟಗಾರರನ್ನು ಖರೀದಿಸಿದೆ. ವಿಶೇಷ ಅಂದ್ರೆ ಕರ್ನಾಟಕದ ಪ್ರತಿಭೆ ವೃಂದಾ ದಿನೇಶ್ ಅವರನ್ನು ಆರ್ಸಿಬಿ ಸೇರಿಸಿಕೊಡಿದೆ. 10 ಲಕ್ಷ ರೂಪಾಯಿಗೆ ಆರ್ಸಿಬಿ ವೃಂದಾ ದಿನೇಶ್ ಅವರನ್ನು ಖರೀದಿಸುತ್ತಿದ್ದಂತೆಯೇ ಶ್ರೇಯಾಂಕಾ ಪಾಟೀಲ್ ಕುಣಿದು ಕುಪ್ಪಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶ್ರೇಯಾಂಕಾ ಪಾಟೀಲ್ ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದೆ.
- CSK ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಸ್ಥಾನಕ್ಕೆ ಜಹೀರ್ ಖಾನ್ ಅವರನ್ನ ನೇಮಕ ಮಾಡಲಾಗಿದೆ. ಆದ್ರೆ, ಸಿಎಸ್ಕೆನಲ್ಲಿ ಬ್ಯಾಟಿಂಗ್ ಕೋಚ್ ಹುದ್ದೆ ಇನ್ನೂ ಖಾಲಿ ಇದೆ. ಇದೀಗ ಸಿಇಒ ಕಾಶಿ ವಿಶ್ವನಾಥನ್ ಮುಂದಿನ ಸೀಸನ್ನಲ್ಲಿ CSK ತಂಡ ಯಾರನ್ನೂ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ನೋಡಿರಿ

