ವೈಭವ್ ಗೆ ಚಾನ್ಸ್.. ಕಿಶನ್ ಗೆ ಬೆಂಚ್? – ರುದ್ರತಾಂಡವಕ್ಕೆ ರೆಡಿಯಾದ ಅಭಿಷೇಕ್
ಕ್ಲೀನ್ ಸ್ವೀಪ್ ಪ್ಲೇಯಿಂಗ್ 11ನಲ್ಲಿ ಯಾರಿಲ್ಲ?

ವೈಭವ್ ಗೆ ಚಾನ್ಸ್.. ಕಿಶನ್ ಗೆ ಬೆಂಚ್? – ರುದ್ರತಾಂಡವಕ್ಕೆ ರೆಡಿಯಾದ ಅಭಿಷೇಕ್ಕ್ಲೀನ್ ಸ್ವೀಪ್ ಪ್ಲೇಯಿಂಗ್ 11ನಲ್ಲಿ ಯಾರಿಲ್ಲ?

ನ್ಯೂಜಿಲೆಂಡ್ ವಿರುದ್ಧ ಆಲ್ರೆಡಿ ಸರಣಿ ಗೆದ್ದಿರೋ ಭಾರತ ನೆಕ್ಸ್​ಟ್ ಕ್ಲೀನ್ ಸ್ವೀಪ್ ಟಾರ್ಗೆಟ್​ನಲ್ಲಿದೆ. ನಾಳೆ ಸರಣಿಯ ನಾಲ್ಕನೇ ಪಂದ್ಯ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯಲಿದ್ದು ಇಲ್ಲೂ ಕೂಡ ಡಾಮಿನೇಟ್ ಮಾಡೋಕೆ ರೆಡಿಯಾಗಿದ್ದಾರೆ. ಆದ್ರೆ ಪಂದ್ಯಕ್ಕೂ ಮುನ್ನ ಭಾರತದ ಪರ ಓಪನರ್ಸ್ ಯಾರು ಅನ್ನೋ ಪ್ರಶ್ನೆ ಮೂಡಿದೆ.. ವೈಭವ್ ಮತ್ತು ಕಿಶನ್ ನಡುವೆ ರೇಸ್ ನಡೀತಿದೆ.

ಇದನ್ನೂ ಓದಿ : 12 ಬಾಲ್.. 50 ರನ್ಸ್ ಚಾಲೆಂಜ್ – ಯುವಿ ಚರಿತ್ರೆ ಅಭಿಗೆ ಅಸಾಧ್ಯನಾ?

ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್‌ ತಂಡ ಆಲ್ರೆಡಿ 3-0 ಅಂತರದಲ್ಲಿ ಸರಣಿ ಕಳ್ಕೊಂಡಾಗಿದೆ. ಸೋ ಅವ್ರ ಮುಂದಿರೋ ಏಕೈಕ ದಾರಿ ವೈಟ್ ವಾಶ್ ಆಗೋದನ್ನ ತಪ್ಪಿಸಿಕೊಳ್ಬೇಕು ಅಂತಾ. ಹೀಗಾಗಿ ಶುಕ್ರವಾರದ ಪಂದ್ಯದಲ್ಲಿ ಶತಾಯ ಗತಾಯ ಗೆಲ್ಲಲೇಬೇಕು ಅನ್ನೋ ಪಣ ತೊಟ್ಟಿದ್ದಾರೆ. ಆದ್ರೆ ಮೂರನೇ ಪಂದ್ಯದಲ್ಲಿ ಭಾರತ ಕೊಟ್ಟಿರೋ ಕೌಂಟರ್​ನ ಭಯ ಅಂತೂ ಇದ್ದೇ ಇದೆ. ಆಕ್ಲೆಂಡ್ ಸ್ಟೇಡಿಯಂ ಸಣ್ಣ ಗ್ರೌಂಡ್ ಆಗಿದ್ದು ಬಿಗ್ ಸ್ಕೋರ್ ಬರೋ ಆತಂಕ ಇದೆ. ಇದೇ ಕಾರಣಕ್ಕೆ ಸ್ಯಾಂಟ್ನರ್ ನಾವು ಸ್ಪೆಷಲ್ ಪ್ಲ್ಯಾನ್​ನೊಂದಿಗೆ ಬರ್ತೀವಿ ಅಂದಿದ್ರು. ಌಂಡ್ ಕಿವೀಸ್ ಪಡೆಯ ಕಂಪ್ಲೀಟ್ ಫೋಕಸ್ ಭಾರತದ ಓಪನಿಂಗ್ ಬ್ಯಾಟ್ಸ್​ಮನ್ ಗಳ ಮೇಲೇ ಇರುತ್ತೆ. ಹಾಗೇ ಭಾರತಕ್ಕೂ ಕೂಡ ಓಪನಿಂಗ್ ಜೋಡಿಯನ್ನ ಫೈನಲ್ ಮಾಡೋದೇ ದೊಡ್ಡ ಸವಾಲಾಗಿದೆ.

ಅಭಿಷೇಕ್ ಶರ್ಮಾ ಜೊತೆ ವೈಭವ್ ಸೂರ್ಯವಂಶಿಯೇ ಓಪನರ್?

3ನೇ ಪಂದ್ಯದಲ್ಲಿ ಅಭಿಷೇಕ್ ಮತ್ತು ವೈಭವ್ ಭಾರತದ ಪರ ಓಪನರ್​ಗಳಾಗಿ ಇತಿಹಾಸವನ್ನೇ ಬರೆದಿದ್ರು.. 5 ಓವರ್​ಗಳಲ್ಲೇ 100 ರನ್ಸ್.. ಌಂಡ್ ಮೊದಲ ವಿಕೆಟ್​ಗೆ 118 ರನ್​ಗಳ ಜೊತೆಯಾಟ. ಅಷ್ಟ್ರಲ್ಲಾಗ್ಲೇ ಭಾರತದ ವಿಕ್ಟರಿ ಕನ್ಫರ್ಮ್ ಆಗಿತ್ತು. ಆದರೆ ನಾಲ್ಕನೇ ಪಂದ್ಯಕ್ಕೆ ಅಭಿಷೇಕ್ ಜೊತೆ ವೈಭವ್​​ನೇ ಓಪನಿಂಗ್ ಬರ್ತಾರಾ ಅನ್ನೋ ಡೌಟ್ ಶುರುವಾಗಿದೆ. ಇಶಾನ್ ಕಿಶನ್ ತಂಡಕ್ಕೆ ಕಂ ಬ್ಯಾಕ್ ಮಾಡಿದ್ರೆ ವೈಭವ್​ಗೆ ಸ್ಲಾಟ್ ಇರುತ್ತೆ ಅನ್ನೋದೇ ಇಲ್ಲಿರೋ ಕನ್ಫ್ಯೂಷನ್.. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ವೈಭವ್ ಸೂರ್ಯವಂಶಿ ಈ ನಾಲ್ವರೂ ಕೂಡ ಹೊಡಿಬಡಿ ಆಟಗಾರರೇ.. ಗೇಮ್ ಚೇಂಜರ್​ಗಳೇ.. 2024 ರ ಟಿ 20 ವಿಶ್ವಕಪ್ ನಂತರ ಈ ಎಲ್ಲರ ಪರ್ಫಾಮೆನ್ಸ್ ಕೂಡ ಚೆನ್ನಾಗಿದೆ. ಈ ನಾಲ್ವರೂ ಕೂಡ ಭಾರತದ ಪರ ಓಪನರ್​ಗಳಾಗಿಯೂ ಆಡಿದ್ದಾರೆ.

ಓಪನಿಂಗ್ ರೆಕಾರ್ಡ್ಸ್!

ಅಭಿಷೇಕ್ 67 ಇನ್ನಿಂಗ್ಸ್‌.. 198.21 ರ ಸ್ಟ್ರೈಕ್ ರೇಟ್‌.. 2,216 ರನ್ಸ್

ಸಂಜು ಸ್ಯಾಮ್ಸನ್ 39 ಇನ್ನಿಂಗ್ಸ್‌.. 181ರ ಸ್ಟ್ರೈಕ್ ರೇಟ್.. 1,229 ರನ್ಸ್

ಇಶಾನ್ ಕಿಶನ್ 5 ಇನ್ನಿಂಗ್ಸ್‌.. 193.40ರ ಸ್ಟ್ರೈಕ್ ರೇಟ್.. 176 ರನ್ಸ್

ವೈಭವ್ ಸೂರ್ಯವಂಶಿ 9 ಇನ್ನಿಂಗ್ಸ್‌.. 192.71ರ ಸ್ಟ್ರೈಕ್ ರೇಟ್.. 291 ರನ್ಸ್

ಸೋ ಇಲ್ಲಿ ನಾಲ್ವರೂ ಕೂಡ ಓಪನಿಂಗ್ ಸ್ಲಾಟ್​ನಲ್ಲಿ ಡೇಂಜರಸ್ ಬ್ಯಾಟರ್​ಗಳೇ.. ಈ ಪೈಕಿ ಅಭಿಷೇಕ್ ಶರ್ಮಾ ಓಪನಿಂಗ್ ಸ್ಲಾಟ್​ ಬಿಟ್ಟು ಬೇರೆಲ್ಲೂ ಆಡಿಲ್ಲ.  ಌಂಡ್ ಎಕ್ಸ್​ಟ್ರಾರ್ಡಿನರಿ ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಉಳಿದ ಮೂವರೂ ಕೂಡ ಬೇರೆ ಬೇರೆ ಸ್ಲಾಟ್​ಗಳಲ್ಲೂ ಆಡಿದ್ದಾರೆ. ಇಶಾನ್ ಕಿಶನ್, ಸೂರ್ಯವಂಶಿ 190+ ಇದ್ರೆ ಸಂಜು 181 ಸ್ಟ್ರೈಕ್​ರೇಟ್​ನಲ್ಲಿದ್ದಾರೆ. ಈ ನಾಲ್ವರ ಪೈಕಿ ಯಾರೇ ಓಪನಿಂಗ್ ಪೇರ್ ಆದ್ರೂ ಎದುರಾಳಿಗಳನ್ನ ಚಾರ್ಜ್ ಮಾಡ್ತಾರೆ. ಅದ್ರಲ್ಲಿ ಡೌಟೇ ಇಲ್ಲ. ಬಟ್ ಅಭಿಷೇಕ್ ಮತ್ತು ವೈಭವ್ ಇದ್ರೆ ಅದ್ರ ಲೆವೆಲ್ ಬೇರೆನೇ ಇರುತ್ತೆ. ಇಬ್ಬರೂ ಲೆಫ್ಟ್ ಹ್ಯಾಂಡ್ ಬ್ಯಾಟರ್​ಗಳು ಎದುರಾಳಿಗಳಿಗೆ ನರಕ ತೋರಿಸಿಬಿಡ್ತಾರೆ. ಪವರ್ ಪ್ಲೇನಲ್ಲೇ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಬಂದಿರುತ್ತೆ. ಹೀಗಾಗಿ ನಾಲ್ಕನೇ ಪಂದ್ಯಕ್ಕೆ ಕಳೆದ ಪಂದ್ಯದ ಕಾಂಬಿನೇಷನ್​ಗೇ ಪ್ರಿಯಾರಿಟಿ ಕೊಡ್ಬೋದು.

ಅಭಿ & ವೈಭವ್ ಓಪನರ್ಸ್?

ವೈಭವ್ ಸೂರ್ಯವಂಶಿ

ಅಭಿಷೇಕ್ ಶರ್ಮಾ

ಸಂಜು ಸ್ಯಾಮ್ಸನ್

ಶ್ರೇಯಸ್ ಅಯ್ಯರ್

ತಿಲಕ್ ವರ್ಮಾ

ನಿತೀಶ್ ಕುಮಾರ್ ರೆಡ್ಡಿ

ನಮನ್ ಧೀರ್

ಅಕ್ಷರ್ ಪಟೇಲ್

ಭುವನೇಶ್ವರ್ ಕುಮಾರ್

ಅರ್ಷದೀಪ್ ಸಿಂಗ್

ಪ್ರಿನ್ಸ್ ಯಾದವ್

ಹೀಗೆ ಕಳೆದ ಪಂದ್ಯಕ್ಕೆ ಕಂಪೇರ್ ಮಾಡಿದ್ರೆ ಯಾವುದೇ ಬದಲಾವಣೆಗಳನ್ನ ಮಾಡೋದು ಡೌಟ್ ಇದೆ. ಬೌಲಿಂಗ್​ನಲ್ಲಿ ಭುವಿ ಸ್ವಲ್ಪ ಎಕ್ಸ್​ಪೆನ್ಸಿವ್ ಆಗ್ತಿದ್ರೂ ಸಾಕಷ್ಟು ಅನುಭವ ಇರೋದ್ರಿಂದ ಜೊತೆಗೆ ಈ ಸರಣಿ ಪೂರ್ತಿ ಚಾನ್ಸ್ ಕೊಟ್ಟು ನೋಡೋಣ ಅಂತಾ ನಿರ್ಧಾರ ಮಾಡ್ಬೋದು. ಹೀಗಾಗಿ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಇಲ್ಲದೇ ಇರಬಹುದು. ಹಾಗೇ ಆಲ್ರೆಡಿ ಭಾರತ ಸರಣಿ ಗೆದ್ದಿರೋದ್ರಿಮದ ಸತತ ನಾಲ್ಕನೇ ಪಂದ್ಯದಲ್ಲೂ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳೋದು ಗ್ಯಾರಂಟಿ. ಕಳೆದ ಮೂರೂ ಪಂದ್ಯಗಳಲ್ಲೂ ಟಾಸ್ ಗೆದ್ದು ಚೇಸಿಂಗ್ ಮಾಡಿ ಗೆದ್ದಿದ್ದಾರೆ. ಬಟ್ ಈ ಮ್ಯಾಚ್​ಗೆ ತಂಡದ ಡಿಫೆನ್ಸ್ ಪರೀಕ್ಷೆ ಕೂಡ ಮಾಡ್ಬೇಕಾಗುತ್ತೆ. ಹೀಗಾಗಿ ಫಸ್ಟ್ ಬ್ಯಾಟಿಂಗ್ ಮಾಡಬಹುದು. ಅಥವಾ  ಸ್ಯಾಂಟ್ನರ್‌ ಏನಾದ್ರೂ ಟಾಸ್ ಗೆದ್ರೆ ಭಾರತವನ್ನು ಪಕ್ಕಾ ಫಸ್ಟ್ ಬ್ಯಾಟಿಂಗ್​ಗೆ ಪ್ರಿಫರ್ ಮಾಡ್ತಾರೆ. ಆದ್ರೆ ಕೊನೇ ಎರಡು ಪಂದ್ಯಗಳಿಗೂ ಮುನ್ನ ಕಿವೀಸ್ ತಂಡಕ್ಕೆ ದೊಡ್ಡ ಸೆಟ್​ಬ್ಯಾಕ್ ಆಗಿದೆ. ಪೇಸ್ ಬೌಲರ್​ಗಳಾದ ಲಾಕಿ ಫರ್ಗ್ಯುಸನ್ ಹಾಗೇ ಮ್ಯಾಟ್ ಹೆನ್ರಿ ಕೊನೆಯ ಎರಡು ಪಂದ್ಯಗಳಿಂದ ರೂಲ್ಡ್ ಔಟ್ ಆಗಿದ್ದಾರೆ. ಸೋ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಮಾಡಲೇಬೇಕಾದ ಅನಿವಾರ್ಯತೆ ಕಿವೀಸ್ ಪಡೆಗಂತೂ ಇದ್ದೇ ಇದೆ. ಸದ್ಯದ ಟೀಂ ಫಾರ್ಮೇಷನ್, ಸಿಚುಯೇಷನ್ ನೋಡ್ತಿದ್ರೆ ನಾಲ್ಕನೇ ಪಂದ್ಯದಲ್ಲೂ ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ ಆಗಿ ಕಾಣ್ತಿದೆ.

Shantha Kumari

Leave a Reply

Your email address will not be published. Required fields are marked *