NZಗೆ ನರಕ ತೋರಿಸಿದ ಭಾರತ – ಶಪಥ ಮಾಡಿದ್ದವರ SHAPE OUT
4ನೇ ಪಂದ್ಯಕ್ಕೆ ಸ್ಪೆಷಲ್ ರಣತಂತ್ರ

NZಗೆ ನರಕ ತೋರಿಸಿದ ಭಾರತ – ಶಪಥ ಮಾಡಿದ್ದವರ SHAPE OUT4ನೇ ಪಂದ್ಯಕ್ಕೆ ಸ್ಪೆಷಲ್ ರಣತಂತ್ರ

ಮೂರಕ್ಕೆ ಮೂರೂ ಪಂದ್ಯಗಳನ್ನ ಸೋತು ಟಿ-20ಐ ಸರಣಿ ಕಳ್ಕೊಂಡಿರೋ ನ್ಯೂಜಿಲೆಂಡ್​ ತಂಡಕ್ಕೆ ತವರಿನಲ್ಲೇ ದೊಡ್ಡ ಮುಖಭಂಗ.. ಈಗ ಕೊನೆಯ ಎರಡು ಪಂದ್ಯಗಳನ್ನಾದ್ರೂ ಗೆದ್ದು ಅಟ್​ಲೀಸ್ಟ್ ಮಾನ ಉಳಿಸಿಕೊಳ್ಳೋಣ ಅಂದ್ರೆ ಭಾರತದ ಬ್ಯಾಟರ್​ಗಳು ನಡುಕ ಹುಟ್ಟಿಸಿದ್ದಾರೆ. 3ನೇ ಟಿ-20ಐನಲ್ಲಿ ಅಭಿಷೇಕ್ ಮತ್ತು ವೈಭವ್ ಆಟಕ್ಕೆ ಶೇಕ್ ಆಗಿದ್ದು ಈಗ ನಾಲ್ಕು & ಐದನೇ ಪಂದ್ಯಗಳಿಗೂ ಭಯ ಹುಟ್ಟಿದೆ.

ಇದನ್ನೂ ಓದಿ : 3 ಮ್ಯಾಚ್.. 139 ರನ್ಸ್ – ದುಬಾರಿಯಾದ್ರೂ ಗೆಲ್ಲಿಸಿದ ಭುವಿ

ಐದು ಪಂದ್ಯಗಳ ಸರಣಿ ಆರಂಭಕ್ಕೂ ಮುನ್ನ ಕಿವೀಸ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ತವರಿನಲ್ಲಿ ನಮ್ಮದೇ ಪಾರುಪತ್ಯ ಅಂತಾ ಸ್ಟೇಟ್​ಮೆಂಟ್ಸ್ ಕೊಟ್ಟಿದ್ರು. ಹಾಗೇ ನಮ್ಮ ಪಿಚ್​ಗಳಲ್ಲಿ ಭಾರತದ ಆಟಗಾರರನ್ನ ಹೇಗೆ ಕಟ್ಟಿಹಾಕ್ಬೇಕು ಅನ್ನೋದು ಗೊತ್ತಿದೆ. ಅದ್ರಲ್ಲೂ 15 ವರ್ಷದ ವೈಭವ್ ಸೂರ್ಯವಂಶಿಗಾಗಿ ಸ್ಪೆಷಲ್ ಟೆಕ್ನಿಕ್​ಗಳನ್ನ ರೆಡಿ ಮಾಡಿದ್ದೇವೆ. ಸೋ ನ್ಯೂಜಿಲೆಂಡ್​ನಲ್ಲಿ ನಾವೇ ಬಾಸ್ ಅಂದಿದ್ರು. ಆದ್ರೆ ಸಿರೀಸ್ ಸ್ಟಾರ್ಟ್ ಆದ್ಮೇಲೆ ಕಿವೀಸ್ ಕಂಪ್ಲೀಟ್ ಸೈಲೆಂಟ್. ಅದ್ರಲ್ಲೂ 3ನೇ ಮ್ಯಾಚ್ ಆದ್ಮೇಲಂತೂ ಥಂಡಾ ಹೊಡೆದಿದ್ದಾರೆ.

ಐಪಿಎಲ್ ನಲ್ಲಿ ಅಬ್ಬರ ನೋಡಿದ್ವು.. ನಮ್ಮಲ್ಲೂ ಆರ್ಭಟಿಸಿದ್ದಾರೆ!

ಅಭಿಷೇಕ್ ಮತ್ತು ವೈಭವ್ ಆಟ ನೋಡಿದ್ಮೇಲಂತೂ ಮಿಚೆಲ್ ಸ್ಯಾಂಟ್ನರ್ ಢರ್ ಆಗೋಗಿದ್ದಾರೆ. ಈ ಹುಡುಗರನ್ನು ತಡೆಯುವುದು ತುಂಬಾ ಕಷ್ಟ. ಐಪಿಎಲ್‌ನಲ್ಲಿ ಇವರ ಅಬ್ಬರವನ್ನು ನೋಡಿದ್ದೆವು, ಈಗ ಇಲ್ಲೂ ಕಣ್ಣಾರೆ ಕಂಡಿದ್ದೇವೆ. ನಾವು ಕೊನೆಯ ಓವರ್‌ಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿ ಭಾರತವನ್ನು 200 ರನ್ ಒಳಗಡೆ ನಿಯಂತ್ರಿಸಿದೆವು ಮತ್ತು ನಮಗೂ ಇದು ಸ್ಪರ್ಧಾತ್ಮಕ ಸ್ಕೋರ್ ಎಂದೇ ಅನಿಸಿತ್ತು. ಆದರೆ ಪವರ್‌ಪ್ಲೇನಲ್ಲಿ ಅವರು ನಮಗೆ ಬ್ಯಾಟಿಂಗ್ ಹೇಗೆ ಮಾಡಬೇಕೆಂದು ತೋರಿಸಿಕೊಟ್ಟರು. ಮುಂದಿನ ಪಂದ್ಯ ಇಡೀ ಮೈದಾನ ಚಿಕ್ಕದಾಗಿರುವ ಈಡನ್ ಪಾರ್ಕ್‌ನಲ್ಲಿ ನಡೆಯಲಿದೆ, ಇವರನ್ನು ತಡೆಯಲು ನಾವು ಬೇರೆ ದಾರಿ ಹುಡುಕಬೇಕಿದೆ ಎಂದು ಅವ್ರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಾಗೇ ಫಿನ್ ಅಲೆನ್ ಕೂಡ ನಾವು ಬ್ಯಾಟಿಂಗ್ ಮಾಡುವಾಗ 198 ರನ್ಸ್ ಗೆಲ್ಲಲು ಸಾಕಾಗಬಹುದು ಅನ್ಕೊಂಡಿದ್ವು. ಆದ್ರೆ ಇಷ್ಟ್ ಬೇಗ ಮ್ಯಾಚ್ ಮುಗಿಸ್ತಾರೆ ಅಂತಾ ಇಮ್ಯಾಜಿಕ್ ಕೂಡ ಮಾಡಿರಲಿಲ್ಲ ಎಂದಿದ್ದಾರೆ. ಹಾಗೇ ಬೌಲಿಂಗ್​ನಲ್ಲಿ ಹೇಗೆ ಅಟ್ಯಾಕ್ ಮಾಡ್ಬೇಕು ಅನ್ನೋದೇ ತಿಳಿಯದಾಗಿತ್ತು ಅಂತಾ ಬೌಲರ್ಸ್ ಕೂಡ ಒಪ್ಪಿಕೊಂಡಿದ್ದಾರೆ. ಸೋ ಅಲ್ಲಿಗೆ ಕಿವೀಸ್ ಪ್ಲೇಯರ್ಸ್ ಭಾರತದ ಅಬ್ಬರಕ್ಕೆ ನಿರುತ್ತರರಾಗಿದ್ದಾರೆ. ಮೂರು ಪಂದ್ಯಗಳನ್ನ ಸೋತಿರೋದ್ರಿಂದ ನೆಕ್ಸ್​ಟ್ ಪಂದ್ಯಕ್ಕೆ ಸ್ಪೆಷಲ್ ವರ್ಕೌಟ್​ಗಳನ್ನ ಮಾಡಿಕೊಂಡು ಕಣಕ್ಕಿಳಿಯೋದಾಗಿಯೂ ಹೇಳಿದ್ದಾರೆ.

ಮೂರೂ ಪಂದ್ಯಗಳಲ್ಲೂ ಟಾಸ್ ಸೋಲು.. ಪಂದ್ಯ ಗೆಲ್ಲಿಸಿದ ಬ್ಯಾಟರ್ಸ್!

ಅಷ್ಟಕ್ಕೂ ನ್ಯೂಜಿಲೆಂಡ್​ಗೆ ಹೊಡೆತ ಬಿದ್ದಿದ್ದೇನಂದ್ರೆ ಮೂರೂ ಪಂದ್ಯಗಳಲ್ಲೂ ಟಾಸ್ ಸೋತಿದ್ದಾರೆ. ಹಾಗೇ ಚೇಸಿಂಗ್​ಗೆ ಇಳಿದ ಭಾರತದ ಪರ ಬ್ಯಾಟರ್​ಗಳೇ ಇನಿಶಿಯೇಟ್ ತಗೊಂಡು ಮ್ಯಾಚ್ ವಿನ್ ಮಾಡ್ಸಿದ್ದಾರೆ. ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ನಮನ್ ಧೀರ್ ಅದ್ಭುತ ಪ್ರದರ್ಶನ ನೀಡಿದ್ರೆ ಎರಡನೇ ಪಂದ್ಯದಲ್ಲಿ ತಿಲಕ್ ವರ್ಮಾ ಮತ್ತು ನಿತೀಶ್ ರೆಡ್ಡಿ ಲಾಸ್ಟ್ ಓವರ್​ನಲ್ಲಿ ಭರ್ಜರಿಯಾಗಿ ಗೆಲ್ಲಿಸಿದ್ರು. ಇನ್ನು ಮೂರನೇ ಪಂದ್ಯದಲ್ಲಂತೂ ಅಭಿಷೇಕ್ ಮತ್ತು ವೈಭವ್ ಈಸಿಯಾಗಿ ಮ್ಯಾಚ್ ಫಿನಿಶ್ ಮಾಡಿದ್ರು. ಅಷ್ಟೇ ಅಲ್ಲದೆ ಡೆತ್ ಓವರ್​ಗಳಲ್ಲಿ ನ್ಯೂಜಿಲೆಂಡ್ ಬೌಲರ್ಸ್​ ಕಂಟ್ರೋಲ್ ತಪ್ಪಿದ್ದು ಕೂಡ ಅವ್ರಿಗೆ ಹೊಡೆತ ನೀಡಿತ್ತು. ಸೋ ಅಲ್ಲಿಗೆ ಸರಣಿಯನ್ನೇನೋ ಸೋತಾಗಿದೆ. ಆದ್ರೆ ಮುಂದಿನ ಎರಡು ಪಂದ್ಯಗಳನ್ನಾದ್ರೂ ಗೆದ್ದು ತವರಿನಲ್ಲಿ ಅಲ್ಪಸ್ವಲ್ಪ ಮಾನ ಉಳಿಸಿಕೊಳ್ಳೋಣ ಅಂತಾ ನೋಡ್ತಿದ್ದಾರೆ. ಆದ್ರೆ ಟೀಂ ಇಂಡಿಯಾ ಇರೋ ಫಾರ್ಮ್​ಗೆ ಕ್ಲೀನ್ ಸ್ವೀಪ್ ಮಾಡಿದ್ರೂ ಅಚ್ಚರಿ ಏನಿಲ್ಲ.

Shantha Kumari

Leave a Reply

Your email address will not be published. Required fields are marked *