ಬೆಳೆಗಾರರು ರೊಚ್ಚಿಗೆದ್ದಿದ್ದೇಕೆ? – MSP V/s FRP ಮೋಸ ಎಲ್ಲಾಗ್ತಿದೆ?

ಬೆಳೆಗಾರರು ರೊಚ್ಚಿಗೆದ್ದಿದ್ದೇಕೆ? –  MSP V/s FRP ಮೋಸ ಎಲ್ಲಾಗ್ತಿದೆ?

ಬಿಸಿಲಿಗೂ ಕುಗ್ಗುತ್ತಿಲ್ಲ, ಸಿಎಂ ಬಂದು ಹೇಳಿದ್ರೂ ಬಗ್ಗುತ್ತಿಲ್ಲ. ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಮತ್ತೆ ತೀವ್ರಗೊಂಡಿದೆ.    ಸಕ್ಕರೆ ಬೆಲೆ ಕನಿಷ್ಠ 60 ರೂಪಾಯಿ ಮಾಡಬೇಕು, ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಪ್ರತಿ ಟನ್ ಕಬ್ಬಿಗೆ 5500 ರೂ. ದರ, ಸಕ್ಕರೆ ಪ್ರತಿ ಕೆಜಿಗೆ 60 ರೂ. ಎಂಎಸ್​​ಪಿ ದರ ನಿಗದಿ, ಸ್ವಾಮಿನಾಥನ ವರದಿ ಜಾರಿ, ರಾಜ್ಯದ ಎಥೆನಾಲ್ ಸಂಪೂರ್ಣ ಖರೀದಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

FRP ಅಂದ್ರ ಏನು, ರೈತರಿಗೆ ಲಾಭವೇನು?

ನಾನು ನಿಮಗೆ ಮೊದಲು  FRP ಅಂದ್ರೆ ಏನು ಅನ್ನೋದ್ದನ್ನ ತಿಳಿಸಿಕೊಡುತ್ತೇನೆ. ಸರಳವಾಗಿ ಹೇಳುವುದಾದರೆ, ರೈತರು ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಮಾರಾಟ ಮಾಡಿದಾಗ, ಕೇಂದ್ರ ಸರ್ಕಾರ ನಿಗದಿಪಡಿಸಿದ ಕನಿಷ್ಠ ದರದ ಪ್ರಕಾರ ರೈತರಿಗೆ ಪಾವತಿಸಬೇಕಾದ ಬೆಲೆಯೇ FRP. ಇಲ್ಲಿ MSP ಮತ್ತು FRP ಒಂದೇ ಅಲ್ಲ.  MSP ಎಂದರೆ ಕನಿಷ್ಠ ಬೆಂಬಲ ಬೆಲೆ. ಇದು ಸರ್ಕಾರ ನಿರ್ದಿಷ್ಟ ಕೃಷಿ ಉತ್ಪನ್ನಗಳಿಗೆ ಘೋಷಿಸುವ ಬೆಲೆ. ಆದರೆ ಸಕ್ಕರೆ ಕಾರ್ಖಾನೆಗಳು ರೈತರಿಂದ ಕಬ್ಬು ಖರೀದಿಸುವಾಗ ಅನ್ವಯಿಸುವ ಪ್ರಮುಖ ಕೇಂದ್ರದ ದರ FRP .

 

ಪ್ರತಿ ಕ್ವಿಂಟಾಲ್‌ಗೆ ₹365

ಕೇಂದ್ರ ಸರ್ಕಾರ ನಿಗದಿಪಡಿಸಿರುವ FRP ಪ್ರತಿ ಕ್ವಿಂಟಾಲ್‌ಗೆ ₹365

ಶೇಕಡಾ 10.25ರ ಸಕ್ಕರೆ ಇಳುವರಿ ಆಧಾರದಲ್ಲಿ ಒಂದು ಟನ್ ಕಬ್ಬಿಗೆ ₹3,650

ಇಳುವರಿ ಹೆಚ್ಚಾದರೆ ಹೆಚ್ಚುವರಿ ದರವೂ ಅನ್ವಯಿಸುತ್ತದೆ

ಇಳುವರಿ ಶೇಕಡಾ 9.5ಕ್ಕಿಂತ ಕಡಿಮೆಯಿದ್ದರೂ ನಿಗದಿತ ಕನಿಷ್ಠ ರಕ್ಷಣೆ

ಕಬ್ಬು ಪೂರೈಸಿದ 14 ದಿನಗಳೊಳಗೆ ಪಾವತಿಸಬೇಕು FRP ನೀಡಬೇಕು

( 2026- 27ರ ಸಕ್ಕರೆ ಹಂಗಾಮಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ FRP ಪ್ರತಿ ಕ್ವಿಂಟಾಲ್‌ಗೆ ₹365. ಅಂದರೆ, ಶೇಕಡಾ 10.25ರ ಸಕ್ಕರೆ ಇಳುವರಿ ಆಧಾರದಲ್ಲಿ ಒಂದು ಟನ್ ಕಬ್ಬಿಗೆ ₹3,650. ಇಳುವರಿ ಹೆಚ್ಚಾದರೆ ಹೆಚ್ಚುವರಿ ದರವೂ ಅನ್ವಯಿಸುತ್ತದೆ. ಇಳುವರಿ ಶೇಕಡಾ 9.5ಕ್ಕಿಂತ ಕಡಿಮೆಯಿದ್ದರೂ ನಿಗದಿತ ಕನಿಷ್ಠ ರಕ್ಷಣೆ ಇದೆ.

ಕಬ್ಬು ಪೂರೈಸಿದ 14 ದಿನಗಳೊಳಗೆ ಪಾವತಿಸಬೇಕು FRP ನೀಡಬೇಕು. ) ಸಕ್ಕರೆ MSP ಬಗ್ಗೆ ತಿಳಿದುಕೊಳ್ಳೋಣ.

ಸಕ್ಕರೆ MSP, ಟನ್‌ಗೆ 3100

ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪ್ರತಿ ಕೆ.ಜಿ.ಗೆ ₹31. ರೂ

2019ರಿಂದ ಇದರಲ್ಲಿ ಯಾವುದೇ ಬದಲಾಣೆ ಆಗಿಲ್ಲ

( ರೈತರಿಂದ ಕಬ್ಬು ಖರೀದಿ ಮಾಡಿ ಸಕ್ಕರೆ ಮಾಡಿದ್ರೆ ಆ ಸಕ್ಕರೆ ಕಾರ್ಖಾನೆಗೆ ಸಿಗುವ ಹಣ ಕೆಜಿಗೆ 31 ರೂಪಾಯಿ. ಆದ್ರೆ 2019ರಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.) ನಾವು ಈಗ    ಒಂದು ಟನ್ ಕಬ್ಬಿನಿಂದ ಎಷ್ಟು ಸಕ್ಕರೆ ಸಿಗುತ್ತೆ ಅನ್ನೋದ್ದನ್ನ ನೋಡೋಣ.

ಸಕ್ಕರೆ ರಿಕವರಿ ಎಂದರೆ ಸಂಸ್ಕರಿಸಿದ ಕಬ್ಬಿನಿಂದ ಎಷ್ಟು ಪ್ರಮಾಣದ ಸಕ್ಕರೆ ದೊರೆಯುತ್ತದೆ ಎಂಬ ಲೆಕ್ಕ. ಬೆಳಗಾವಿಯ ಪ್ರತಿಯೊಂದು ಕಾರ್ಖಾನೆಯ ರಿಕವರಿ ಒಂದೇ ಆಗಿರುವುದಿಲ್ಲ. ಉದಾಹರಣೆಗೆ:

ಸಕ್ಕರೆ ರಿಕವರಿಒಂದು ಟನ್ ಕಬ್ಬಿನಿಂದ ಸಕ್ಕರೆ
9.5%95 ಕೆ.ಜಿ.
10.25%102.5 ಕೆ.ಜಿ.
10.5%105 ಕೆ.ಜಿ.
11.25%112.5 ಕೆ.ಜಿ.
12%120 ಕೆ.ಜಿ.

120X31= 3720

ಬೆಳಗಾವಿಯ ಕಾರ್ಖಾನೆಗಳ ಕುರಿತು ಪ್ರಕಟವಾದ ವರದಿಗಳಲ್ಲೂ 10.25% ಮತ್ತು 11.25% ರಿಕವರಿ ದರಗಳ ಆಧಾರದಲ್ಲಿ ಕಬ್ಬಿನ ಬೆಲೆ ನಿಗದಿಪಡಿಸುವ ಚರ್ಚೆ ನಡೆದಿದೆ. ಅಂದ್ರೆ ಬೆಳಗಾವಿ ರೈತರಿಂದ ಸಕ್ಕರೆ ಕಾರ್ಖಾನೆ 1 ಟನ್ ಸಕ್ಕರೆ ಖರೀದಿ ಮಾಡಿದ್ರೆ. ರಿಕವರಿ ರೇಟ್ 12 % ಇಂದ್ರೆ 120 ಕೆಜಿ ಸಿಗುತ್ತೆ. ನೋಡಿ ಇಲ್ಲಿ 120 ಕೆಜಿಗೆ 31 MSP ಹಾಕಿದ್ರೆ 3720 ರೂಪಾಯಿ ಆಗುತ್ತೆ.

ನಾವು ಇಲ್ಲಿ ಪ್ಯಾಕ್ಟರಿಗಳಿಗೆ ಸಕ್ಕರೆ ಮಾಡೋಕೆ ಎಷ್ಟು ಖರ್ಚಾಗುತ್ತೆ ಅನ್ನೋದ್ದನ್ನ ನೋಡೋಣ ಬನ್ನಿ.. ಉದಾಹರಣೆಗೆ, ಒಂದು ಟನ್ ಕಬ್ಬಿನ ಒಟ್ಟು ಲೆಕ್ಕವನ್ನು ಅರ್ಥಮಾಡಿಕೊಳ್ಳಲು ಈ ಮಾದರಿಯನ್ನು ನೋಡಬಹುದು.

ಕಬ್ಬಿನ ಕಾರ್ಖಾನೆಗೆ 1 ಟನ್ ಕಬ್ಬಿಗೆ ತಗಲುವ ವೆಚ್ಚ( ಅಂದಾಜು)

ಕಬ್ಬಿನ ಖರೀದಿ ಬೆಲೆ     ₹3,650

ಕಟಾವು ಮತ್ತು ಸಾಗಣೆ   ₹500

ಕಾರ್ಖಾನೆ ಸಂಸ್ಕರಣೆ, ಕಾರ್ಮಿಕರು, ವಿದ್ಯುತ್ ಮತ್ತು ನಿರ್ವಹಣೆ- 400

ಒಟ್ಟು ಅಂದಾಜು ವೆಚ್ಚ   4550

ನೋಡಿ ಇಲ್ಲಿ ನಿಮ್ಗೆ ಇಲ್ಲಿ ಡೌಟ್ ಬರುತ್ತೆ 1050 ರೂ ಲಾಸ್ ಮಾಡ್ಕೊಂಡು ಸರ್ಕಾರ ಖರ್ತಾನೆಗೆ ಏನ್ ಉಳಿಯುತ್ತೆ ಅನ್ನೋದು. ಒಂದು ಟನ್ ಕಬ್ಬಿನಿಂದ ಬಂದ ಸಕ್ಕರೆಯಷ್ಟೇ ಲೆಕ್ಕ ಹಾಕಿದರೆ ಸಂಪೂರ್ಣ ಚಿತ್ರ ಸಿಗುವುದಿಲ್ಲ. ಬಗಾಸ್‌ನಿಂದ ವಿದ್ಯುತ್ ಉತ್ಪಾದನೆ, ಮೊಲಾಸಿಸ್‌ನಿಂದ ಎಥನಾಲ್ ಉತ್ಪಾದನೆ ಮತ್ತು ಪ್ರೆಸ್ ಮಡ್ ಮಾರಾಟದಿಂದಲೂ ಆದಾಯ ಬರಬಹುದು.  ಇದೆಲ್ಲಾ ನೋಡಿದ್ರೆ ರೈತರಿಗೆ 5500 ರೂಪಾಯಿ ಬೆಂಬಲ ಬೆಲೆ ನೀಡೋಕೆ ಆಗುತ್ತಾ ಅನ್ನೋ ಸಾಮಾನ್ಯ..

ಸಕ್ಕರೆ MSP 60 ರೂಪಾಯಿ ಮಾಡಿ

ಇಲ್ಲಿ ರೈತರು ಕೇಳ್ತಾ ಇರುವುದು ಏನಪ್ಪ ಅಂದ್ರೆ ಸಕ್ಕರೆ MSP  ಈಗ 31 ಇದೆ ಅದು 2019ರಿಂದ ಹಾಗೇ ಇದೆ ಅದ್ದನ್ನ 60 ರೂಪಾಯಿ ಮಾಡಿ. ನಮ್ಗೆ 5500 FRP ನೀಡಿ ಅಂತಿದ್ದಾರೆ. ಅಷ್ಟೇಅಲ್ಲ ರೈತರದ್ದು ಇನ್ನೊಂದು ಮಾತಿದೆ. ನೀವು ಸಾಮಾನ್ಯ ಜನರಿಗೆ ಒಂದು ದರದಲ್ಲಿ ಮಾರಾಟ ಮಾಡಿ. ಅಂದ್ರೆ ಸಾಮಾನ್ಯ ಜನರಿಗೆ 1 ಕೆಜಿ ಸಕ್ಕರೆಯನ್ನ 75 ರೂಪಾಯಿಗೆ ಮಾರಾಟಮಾಡಿದ್ರೆ, ಕಮರ್ಷಿಯಲ್ ಯ್ಯೂಸ್‌ಗೆ ಜಾಸ್ತಿಗೆ ಮಾರಾಟ ಮಾಡಿ, 100 ರೂಪಾಯಿಗೆ ಮಾರಾಟ ಮಾಡಿ ಅಂತಿದ್ದಾರೆ. ಆದ್ರೆ ಇದು ಹೇಳಿದ್ದಷ್ಟು ಸಲಭ ಕೂಡ ಅಲ್ಲ. MSP ಏರಿಕೆಯಿಂದ ಸರ್ಕಾರದ ಮೇಲೆ ₹8,000–10,000 ಕೋಟಿ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.  ಹೀಗಾಗಿ ಸರ್ಕಾರ ಇದ್ದನ್ನ ಹೇಗೆ ಬಗೆಹರಿಸುತ್ತಾರೆ ಅನ್ನೋದು ಈಗ ಯಕ್ಷ ಪ್ರಶ್ನೆ ಆಗಿದೆ.

Kishor KV

Leave a Reply

Your email address will not be published. Required fields are marked *