ಕೊಹ್ಲಿ ಟ್ರೋಲ್ ಮಾಡಿದ CSK – ಅಭಿಗೆ ಪವರ್ ಪ್ಲೇ TARGET
210 RUN.. ಬದೋನಿ ರಣಜಿ ಘರ್ಜನೆ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಜೋಡಿಯ ಬ್ಯಾಟಿಂಗ್ ಸೀಕ್ರೆಟ್ ರಿವೀಲ್ ಆಗಿದೆ. ಫಿಯರ್ಲೆಸ್ ಕ್ರಿಕೆಟ್ವೇ ಪ್ರಮುಖ ಅಸ್ತ್ರ ಆಗಿದೆ. ಮೊದಲ ಎಸೆತದಿಂದಲೇ ಬೌಂಡರಿ, ಸಿಕ್ಸರ್ಗಳ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರುವುದು ನಮ್ಮ ತಂತ್ರ ಅನ್ನೋದ್ದನ್ನ ಅಭಿಷೇಕ್ ಶರ್ಮಾ ಒಪ್ಪಿಕೊಂಡಿದ್ದಾರೆ. ಪವರ್ಪ್ಲೇ ಓವರ್ಗಳ ಸಂಪೂರ್ಣ ಲಾಭ ಪಡೆದು ತಂಡಕ್ಕೆ ಲಾಭ ಕೊಡವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.
ಭಾರತದ ವಿರುದ್ಧ ಪಂದ್ಯದ ಹೀನಾಯ ಸೋಲಿನ ಬಗ್ಗೆ ಮಾತನಾಡಿರುವ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, ಭಾರತದ ಆರಂಭಿಕ ಆಟಗಾರರಾದ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಸೋಲಿಗೆ ಕಾರಣ. ಅಭಿಷೇಕ್ ಹಾಗೂ ವೈಭವ್ರನ್ನ ನಿಯಂತ್ರಿಸಲು ಮುಂದಿನ ಪಂದ್ಯಗಳಲ್ಲಿ ಸೂಕ್ತ ಯೋಜನೆ ರೂಪಿಸಬೇಕಿದೆ. ಇಲ್ಲದಿದ್ದರೆ ಪರಿಸ್ಥಿತಿ ಕಠಿಣವಾಗಿಯೇ ಉಳಿಯಲಿದೆ ಎಂದಿದ್ದಾರೆ.
ವೆಲ್ಲಿಂಗ್ಟನ್ನಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ ತಂಡ ದಾಖಲೆಯ ರನ್ ಚೇಸ್ ನಡೆಸಿ ಜಯಭೇರಿ ಬಾರಿಸಿದ ಬೆನ್ನಲ್ಲೇ, ವೆಸ್ಟ್ ಇಂಡೀಸ್ ತಂಡದ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ ತಮ್ಮ ತಂಡದ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತ ತಂಡ ಎಷ್ಟು ಅಪಾಯಕಾರಿ ಎಂಬುದನ್ನು ನ್ಯೂಝಿಲೆಂಡ್ ವಿರುದ್ಧದ ಪಂದ್ಯ ಸಾಬೀತುಪಡಿಸಿದೆ, ಹೀಗಾಗಿ ಭಾರತದ ನೆಲದಲ್ಲಿ ಕೆರಿಬಿಯನ್ ಪಡೆ ನೀಡಿದ ಪ್ರದರ್ಶನ ನಿಜಕ್ಕೂ ಅದ್ಭುತವಾದುದು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕಿಶನ್ ಬಂದ್ರೆ ವೈಭವ್ ಗಿಲ್ಲ ಜಾಗ – 4ನೇ ಪಂದ್ಯಕ್ಕೆ ಸೂರ್ಯವಂಶಿ ಔಟ್
ನಾಲ್ಕು ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿರುವ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ತಮ್ಮ ಮುಂದಿನ ಯೋಜನೆ ತಿಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮುಗಿದ ಬಳಿಕ ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಲು ಅವರು ಸಿದ್ಧರಾಗಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಮರಳುವುದನ್ನೇ ಗುರಿಯಾಗಿಸಿಕೊಳ್ಳದೆ, ಫಿಟ್ನೆಸ್ ಮತ್ತು ಆಟದ ಮೇಲೆ ಗಮನ ಹರಿಸಿದ್ದೇ ತಮ್ಮ ಕಮ್ಬ್ಯಾಕ್ಗೆ ನೆರವಾಯಿತು ಎಂದು ಭುವಿ ಹೇಳಿದ್ದಾರೆ.
ಸಿಎಸ್ಕೆ ವಿರಾಟ್ ಕೊಹ್ಲಿ ಅವರ ವೃತ್ತಿಜೀವನದ ಮರೆಯಲಾಗದ ‘ಓವರ್’ ಅನ್ನು ನೆನಪಿಸಿ ಆರ್ಸಿಬಿ ತಂಡದ ಹಳೆಯ ಗಾಯಕ್ಕೆ ಸಿಎಸ್ಕೆ ಉಪ್ಪು ಸವರಿದೆ. ಸಿಎಸ್ಕೆ ಸಹಾಯಕ ಕೋಚ್ ಆಗಿ ಆಲ್ಬಿ ಮಾರ್ಕೆಲ್ ಆಗಮನವನ್ನು ಘೋಷಿಸುವಾಗ 464.626 ಎಂಬ ಐಪಿ ಅಡ್ರೆಸ್ ಕೋಡ್ ಬಳಸಿತ್ತು. ಇದು ಬೇರೇನೂ ಅಲ್ಲ, 2012ರ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೌಲಿಂಗ್ನಲ್ಲಿ ಮಾರ್ಕೆಲ್ ಬಾರಿಸಿದ ಬೌಂಡರಿ ಮತ್ತು ಸಿಕ್ಸರ್ಗಳ ರನ್ಗಳಾಗಿವೆ. 4, 6, 4, 6, 2, 6 ಅಂತ ಹಾಕಿ ವಿರಾಟ್ ಕೊಹ್ಲಿ ಜೊತೆ ಆರ್ಸಿಬಿ ಕಾಳೆಯುವ ಕೆಲಸವನ್ನ ಸಿಎಸ್ಕೆ ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ಗೆ ಕೀರನ್ ಪೊಲಾರ್ಡ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಅನ್ನೋ ಚರ್ಚೆ ಜೋರಾಗಿದೆ. 2012ರಲ್ಲಿ ಬ್ರಾವೋ ಮಾಡಿದ ವಿಮಾನದ ಸನ್ನೆಗೆ, 2023ರಲ್ಲಿ ಅದೇ ರೀತಿ ತಿರುಗೇಟು ನೀಡಿದ್ದ ವಿಡಿಯೋವನ್ನು ಇದೀಗ ಪೊಲಾರ್ಡ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಿಎಸ್ಕೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ‘ನಿಮ್ಮ ಪರ ನಾನಿಲ್ಲ’ ಆಡಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ ಅಂತ ಚರ್ಚೆ ಆಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೊಲಾರ್ಡ್ ಬಗ್ಗೆ CSK ಫ್ಯಾನ್ಸ್ ಆಕ್ರೋಶ ಹೊರ ಹಾಕುತ್ತಿದ್ದಾರೆ.
ರಣಜಿ ಟ್ರೋಫಿಯಲ್ಲಿ ದೆಹಲಿ ತಂಡದ ನಾಯಕ ಆಯುಷ್ ಬದೋನಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಸತತ ಎರಡನೇ ಪ್ರಥಮ ದರ್ಜೆ ದ್ವಿಶತಕ ದಾಖಲಿಸಿ ಗಮನ ಸೆಳೆದಿದ್ದಾರೆ. ಕೇವಲ 216 ಎಸೆತಗಳಲ್ಲಿ 200 ರನ್ಗಳ ಗಡಿ ದಾಟಿದ ಬಡೋನಿ, 28 ಬೌಂಡರಿ ಮತ್ತು ಮೂರು ಸಿಕ್ಸರ್ಗಳನ್ನು ಬಾರಿಸಿದರು. ಈ ಮೂಲಕ ಸತತ ಎರಡು ಪ್ರಥಮ ದರ್ಜೆ ಇನ್ನಿಂಗ್ಸ್ಗಳಲ್ಲಿ ದ್ವಿಶತಕ ಗಳಿಸಿದ ಭಾರತೀಯ ಆಟಗಾರರ ವಿಶೇಷ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ 2025-26 ಹಣಕಾಸು ವರ್ಷದಲ್ಲಿ 81.8 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಹೆಚ್ಚುವರಿ ಆದಾಯ ದಾಖಲಿಸಿದೆ. ಆಶಸ್ ಸರಣಿ ಮತ್ತು ಭಾರತದ ವಿರುದ್ಧದ ಸರಣಿಗಳು ಈ ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ. ಹಿಂದಿನ ಹಣಕಾಸು ವರ್ಷದಲ್ಲಿ ನಷ್ಟ ಅನುಭವಿಸಿದ್ದ ಸಂಸ್ಥೆಗೆ ಇದು ದೊಡ್ಡ ಚೇತರಿಕೆಯಾಗಿದೆ.
ಲಾಹೋರ್ನ ಐತಿಹಾಸಿಕ ಗಡಾಫಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ತ್ರಿಕೋನ ಏಕದಿನ ಸರಣಿಯ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ತಂಡ ಆತಿಥೇಯ ಪಾಕಿಸ್ತಾನವನ್ನು 8 ವಿಕೆಟ್ಗಳ ಭಾರಿ ಅಂತರದಿಂದ ಮಣಿಸಿದೆ. ಈ ಏಕಪಕ್ಷೀಯ ಗೆಲುವಿನೊಂದಿಗೆ ಶ್ರೀಲಂಕಾ ತ್ರಿಕೋನ ಸರಣಿಯಲ್ಲಿ ಫೈನಲ್ ತಲುಪಿದ್ದು, ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 31 ರಂದು ಪ್ರಶಸ್ತಿಗಾಗಿ ಸೆಣಸಾಡಲಿದೆ. ಲಂಕಾದ ಈ ಗೆಲುವಿನಿಂದಾಗಿ ಇಂಗ್ಲೆಂಡ್ ತಂಡ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ.
ಪಾಕ್ ಮಂಡಳಿಯ ಮೇಲೆ ಅತಿದೊಡ್ಡ ಆರೋಪವೊಂದು ಕೇಳಿಬಂದಿದೆ. ವಾಸ್ತವವಾಗಿ ವಿದೇಶಿ ಟಿ20 ಲೀಗ್ಗಳಲ್ಲಿ ಆಡಲು ಬಯಸಿರುವ ಪಾಕಿಸ್ತಾನದ ಕ್ರಿಕೆಟಿಗರಿಗೆ ಈಗ ಹೊಸ ಸಮಸ್ಯೆ ಎದುರಾಗಿದೆ. ನೇಪಾಳ ಪ್ರೀಮಿಯರ್ ಲೀಗ್ನಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಅಗತ್ಯ ಅನುಮತಿ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರತಿ ಆಟಗಾರನಿಗೆ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲು 25 ಸಾವಿರ ಅಮೆರಿಕನ್ ಡಾಲರ್, ಅಂದರೆ ಸುಮಾರು 22 ಲಕ್ಷಕ್ಕೂ ಹೆಚ್ಚು ಹಣ ಕೇಳಲಾಗುತ್ತಿದೆ ಎಂದು ಲೀಗ್ ಆಯೋಜಕರಿಗೆ ಸಂಬಂಧಿಸಿದ ಮೂಲಗಳು ಆರೋಪಿಸಿವೆ.

ನೋಡಿರಿ

