12 ಬಾಲ್.. 50 ರನ್ಸ್ ಚಾಲೆಂಜ್ – ಯುವಿ ಚರಿತ್ರೆ ಅಭಿಗೆ ಅಸಾಧ್ಯನಾ?
ಪವರ್ ಪ್ಲೇನಲ್ಲಿ ಫ್ಲವರ್ ಅಲ್ಲ ಫೈಯರ್

ಅಭಿಷೇಕ್ ಶರ್ಮಾ ಅಂದ್ರೇನೇ ಹಾಗೇ.. ಒಂದ್ ಸಲ ಹೊಡಿಬಡಿ ಅಂತಾ ಆಡೋಕೆ ನಿಂತ್ರೆ ಅವ್ರನ್ನ ತಡೆಯೋರೇ ಇರಲ್ಲ. ನ್ಯೂಜಿಲೆಂಡ್ ವಿರುದ್ಧ ಮೊದಲ ಎರಡು ಪಂದ್ಯಗಳಲ್ಲಿ ಸ್ಟಾರ್ಟ್ ಚೆನ್ನಾಗಿ ಸಿಕ್ರೂ ಬಿಗ್ ಇನ್ನಿಂಗ್ಸ್ ಬಂದಿರಲಿಲ್ಲ. ಆದ್ರೆ ಮೂರನೇ ಪಂದ್ಯದಲ್ಲಿ ಫಸ್ಟ್ ಬಾಲ್ನಿಂದಲೇ ಚಾರ್ಜ್ ತಗೊಂಡಿದ್ರು. ಔಟ್ ಆಗೋ ಮೂಮೆಂಟ್ವರೆಗೂ ಎವೆರಿ ಬಾಲ್ನಲ್ಲೂ ಬೌಂಡರಿ ನೋಡ್ತಿದ್ರು.
ಇದನ್ನೂ ಓದಿ : 6 ಓವರ್.. 118 ರನ್ಸ್ – ಅಭಿಷೇಕ್ ಬೆಂಕಿಗೆ NZ ಭಸ್ಮ
ಮಾರ್ಡ್ರೆನ್ ಕ್ರಿಕೆಟ್ನಲ್ಲಿ ಒಬ್ಬ ಬ್ಯಾಟರ್ ಹೇಗೆ ಆಡ್ಬೇಕು ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಅಭಿಷೇಕ್ ಶರ್ಮಾ. ವೆರಿ ಫಸ್ಟ್ ಬಾಲ್ನಿಂದಲೇ ಬಿಗ್ ಹಿಟ್ ಬಾರಿಸೋ ಮೈಂಡ್ಸೆಟ್ ನಲ್ಲಿ ಇರ್ತಾರೆ. ಌಂಡ್ ಅವ್ರು ಆಡೋದೇ ಹಾಗೇ. ವೆಲ್ಲಿಂಗ್ಟನ್ನ ಹೆನ್ರಿ ಸ್ಟೇಡಿಯಮ್ನಲ್ಲಿ ನಡೆದ ಮೂರನೇ ಟಿ20ಯಲ್ಲಿ ಕೇವಲ 38 ಎಸೆತಗಳಲ್ಲಿ 113 ರನ್ ಗಳಿಸಿ ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಬೆಸ್ಟ್ ಇನ್ನಿಂಗ್ಸ್ ಆಡಿದರು. ಅಭಿಷೇಕ್ರ ಇದೇ ಆರ್ಭಟದಿಂದ ಭಾರತ ಇನ್ನೂ 40 ಎಸೆತಗಳು ಬಾಕಿ ಇರುವಾಗಲೇ 199 ರನ್ಗಳ ಟಾರ್ಗೆಟ್ ಬೆನ್ನಟ್ಟಿ ಗೆದ್ದು ಬೀಗಿತು. ಹಾಗೇ ಅಭಿಷೇಕ್ ಹಲವು ದಾಖಲೆಗಳ ಸರದಾರನೂ ಆದ್ರು.
40ಕ್ಕಿಂತ ಕಡಿಮೆ ಎಸೆತಗಳಲ್ಲಿ ಅಭಿಷೇಕ್ ಸೆಂಚುರಿಗಳ ದಾಖಲೆ!
ಅಭಿಷೇಕ್ ಶರ್ಮಾ ಅರ್ಧಶತಕ ಬಾರಿಸಿದ್ರೂ ದಾಖಲೆ ಸೆಂಚುರಿ ಹೊಡೆದ್ರೂ ಇತಿಹಾಸವೇ. ಕಳೆದ ತಿಂಗಳು ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ 30 ಎಸೆತಗಳಲ್ಲಿ ಶತಕ ಮತ್ತು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ 37 ಎಸೆತಗಳಲ್ಲಿ ಶತಕ ಸಿಡಿಸಿದ್ದ ಅಭಿಷೇಕ್ 40 ಎಸೆತಗಳಲ್ಲಿ ಅಥವಾ ಅದಕ್ಕಿಂತ ಕಡಿಮೆ ಬಾಲ್ಗಳಲ್ಲಿ ಶತಕ ಗಳಿಸಿದ್ದು ಇತಿಹಾಸದಲ್ಲಿ ಇದು ಮೂರನೇ ಬಾರಿಯಾಗಿದೆ. 40 ಕ್ಕಿಂತ ಕಡಿಮೆ ಬಾಲ್ಗಳಲ್ಲಿ ಟಿ-20ಐನಲ್ಲಿ ಮೂರು ಶತಕ ಗಳಿಸಿದ ಮೊದಲ ಆಟಗಾರನಾಗಿದ್ದಾರೆ. ಬೇರೆ ಯಾವುದೇ ಆಟಗಾರ ಕೂಡ ಈ ಸಾಧನೆ ಮಾಡಿಲ್ಲ. ಅಭಿಷೇಕ್ ಈಗ 15 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಮೂರು ಬಾರಿ ಟಿ20ಐ ಅರ್ಧಶತಕಗಳನ್ನ ಸಿಡಿಸಿದ್ದಾರೆ. ಬೇರೆ ಯಾವುದೇ ಆಟಗಾರನಿಗೂ ಕೂಡ ಒಂದಕ್ಕಿಂತ ಹೆಚ್ಚು ಬಾರಿ ಇಂಥ ಸಾಧನೆ ಮಾಡೋಕೆ ಸಾಧ್ಯವಾಗಿಲ್ಲ. ಹೀಗೆ ಅಭಿಷೇಕ್ ಫಿಫ್ಟಿಯಲ್ಲೂ ದಾಖಲೆ, ಹಂಡ್ರೆಡ್ನಲ್ಲೂ ಇತಿಹಾಸ ಬರೆದ್ರೂ ಅವ್ರ ಗುರು ಯುವರಾಜ್ಸಿಂಗ್ಗೆ ಮಾತ್ರ ಸಮಾಧಾನ ಆಗಿಲ್ಲ. ಅಭಿ ಮುಂದೆ ಹೊಸ ಚಾಲೆಂಜ್ ಇಟ್ಟಿದ್ದಾರೆ.
12 ಎಸೆತಗಳಲ್ಲಿ ಫಿಫ್ಟಿ.. ಗುರುವಿನ ದಾಖಲೆ ಮುರಿಯುತ್ತಾರಾ ಶಿಷ್ಯ?
ಅಭಿಷೇಕ್ ಶರ್ಮಾರ ಈ ಅದ್ಭುತ ಇನ್ನಿಂಗ್ಸ್ ಬಳಿಕ ಅವ್ರ ಗುರು ಯುವರಾಜ್ ಸಿಂಗ್ ರಿಯಾಕ್ಟ್ ಮಾಡಿದ್ದಾರೆ. ಸಿಂಗ್ ತಮ್ಮ ಎಕ್ಸ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ, ತಮ್ಮದೇ ಆದ 12 ಎಸೆತಗಳ ವೇಗದ ಅರ್ಧಶತಕದ ದಾಖಲೆ ಅಂದ್ರೆ 2007 ರ ಟಿ20 ವಿಶ್ವಕಪ್ ದಾಖಲೆಯನ್ನ ನೆನಪು ಮಾಡಿ ತಮಾಷೆ ಮಾಡಿದ್ದಾರೆ. ನೀನು ಇನ್ನೂ 12 ಎಸೆತಗಳಲ್ಲಿ 50 ರನ್ ಹೊಡೆಯಲು ಸಾಧ್ಯವಾಗಿಲ್ಲ, ಹೌದಾ ಎಂದು ಅವ್ರ ಅಫಿಶಿಯಲ್ ಅಕೌಂಟ್ಗೆ ಟ್ಯಾಗ್ ಮಾಡಿದ್ದಾರೆ. ಹಾಗೇ ಇಬ್ಬರು ಎಡಗೈ ಬ್ಯಾಟರ್ಗಳು ಆಡುವುದನ್ನು ನೋಡಿದರೆ ತಮ್ಮ ಮನೆಯ ಹಿತ್ತಲಿನಲ್ಲಿ ಆಡುತ್ತಿರುವಂತೆ ಕಾಣುತ್ತಿತ್ತು. ಅದ್ಭುತ ಇನ್ನಿಂಗ್ಸ್, ಕೊನೆಗೂ ಸಿಂಗಲ್ಸ್ ಕೂಡ ತಗೊಂಡ್ರಿ ಟೀಮ್ ಇಂಡಿಯಾಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಯುವರಾಜ್ಸಿಂಗ್ರ ಈ ತಮಾಷೆಗೆ ಅಭಿಷೇಕ್ ಕೂಡ ರೆಸ್ಪಾನ್ಸ್ ಮಾಡಿದ್ದಾರೆ.
12 ಎಸೆತಗಳಲ್ಲಿ ಅರ್ಧಶತಕ ಬಾರಿಸುವುದು ಸುಲಭವಲ್ಲ!
ಯುವಿ ಮಾಡಿದ್ದ ಈ ಪೋಸ್ಟ್ ಬಗ್ಗೆ ಪಂದ್ಯ ಮುಗಿದ ಬಳಿಕ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಸ್ವೀಕರಿಸುವಾಗ ಪ್ರೆಸೆಂಟೇಷನ್ ಸೆರೆಮನಿಯಲ್ಲಿ ಉತ್ತರ ನೀಡಿದ್ದಾರೆ. “ನಾನು ಇದನ್ನು ಮೊದಲೂ ಹೇಳಿದ್ದೇನೆ. ಆ ಸಮಯದಲ್ಲಿ ಯುವಿ ಪಾಜಿ (ಯುವರಾಜ್) ಯಾವ ತರಹದ ಕ್ರಿಕೆಟ್ ಆಡುತ್ತಿದ್ದರು ಎಂಬುದು ನನಗೆ ಗೊತ್ತಿಲ್ಲ. ಮೈದಾನಕ್ಕೆ ಹೋಗಿ ಆ ರೀತಿ ಬ್ಯಾಟ್ ಮಾಡುವುದು ಯಾರಿಗೇ ಆದರೂ ಅಷ್ಟು ಸುಲಭವಲ್ಲ. 12 ಎಸೆತಗಳಲ್ಲಿ 50 ರನ್ ಗಳಿಸುವುದು ಅಸಾಧ್ಯದ ಮಾತು. ಆದರೆ ನಾವು ಅಂತಹ ಮೈಲಿಗಲ್ಲುಗಳ ಬಗ್ಗೆ ಯೋಚಿಸುವುದಿಲ್ಲ; ನಮ್ಮ ತಂಡವನ್ನು ಗೆಲ್ಲಿಸುವುದಷ್ಟೇ ನಮ್ಮ ಗುರಿಯಾಗಿರುತ್ತದೆ ಎಂದಿದ್ದಾರೆ. ಒಟ್ನಲ್ಲಿ ಅಭಿಷೇಕ್ ಶರ್ಮಾ ಪವರ್ ಪ್ಲೇ ಪೂರ್ತಿ ಬ್ಯಾಟಿಂಗ್ ಮಾಡಿದ್ರೂ ಭಾರತದ ರೇಂಜೇ ಬೇರೆಯಾಗುತ್ತೆ. ಆದ್ರೆ ಅದೇ ಪವರ್ ಹಿಟ್ಟಿಂಗ್ ಕೆಲವೊಮ್ಮೆ ಮಿಸ್ ಜಡ್ಜ್ ಆಗಿ ವಿಕೆಟ್ ಒಪ್ಪಿಸೋ ಸಾಧ್ಯತೆಗಳೂ ಇರುತ್ತೆ. ಅಭಿಷೇಕ್ ಕ್ರಿಸ್ನಲ್ಲಿ ಇರೋವರೆಗೂ ರನ್ಸ್ ವೇಗ ಜಾಸ್ತಿಯಾಗ್ತಾ ಇರುತ್ತೆ. ಒನ್ಸ್ ಅವ್ರು ಔಟ್ ಆದ್ರೆ ಅಷ್ಟೇ ಬೇಗ ಡೌನ್ ಆಗುತ್ತೆ. ಇದೆಲ್ಲಾ ಏನೇ ಇದ್ರೂ ಅಭಿಷೇಕ್ ಬ್ಯಾಟಿಂಗ್ನಲ್ಲಿ ಒಂದು ಫೈಯರ್ ಇದೆ.

ನೋಡಿರಿ

