ಶೆಟ್ಟಿ ಕೆಣಕಿ ಕೆಟ್ಟ ಮನೆಮಂದಿ.. ಸೌಂದರ್ಯ ಖದರ್.. ಫುಲ್ ಟ್ರೆಂಡ್! – ಸ್ಯಾಂಡಿನ ಕಾಪಿ ಮಾಡಿದ್ರೆ ಗೆಲ್ಬೋದಾ?

ಬಿಗ್ಬಾಸ್ ಕನ್ನಡ ಸೀಸನ್ 13.. ಈಗಾಗಲೇ 50 ದಿನಗಳನ್ನ ಪೂರೈಸಿದ್ದು, ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ಪೈಪೋಟಿ ಹೆಚ್ಚಾಗ್ತಿದೆ. ಟ್ರೋಫಿ ಗೆಲ್ಲಲು ಮನೆ ಮಂದಿ ನಾನಾ ಪ್ರಯತ್ನ ಮಾಡ್ತಿದ್ದಾರೆ. ಈ ಸೀಸನ್ ನಲ್ಲಿ ಸೌಂದರ್ಯ ಶೆಟ್ಟಿ ತಮ್ಮ ಆಟ, ತುಂಟಾಟ, ತಮ್ಮ ಮಾತಿನಿಂದ ಸಖತ್ ಹೈಲೈಟ್ ಆಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲೂ ಇವರದ್ದೇ ಹವಾ.. ದೊಡ್ಮನೆಯಲ್ಲಿ ತಮ್ಮನ್ನ ಕೆಣಕಿದವರಿಗೆ ಸರಿಯಾಗೇ ಟಕ್ಕರ್ ಕೊಡ್ತಾ ಬಂದಿದ್ದಾರೆ. ಅಷ್ಟೇ ಅಲ್ಲ ದೊಡ್ಮನೆಯಲ್ಲಿ ಕೆಲ ಸ್ಪರ್ಧಿಗಳು ಸೌಂದರ್ಯರನ್ನ ಕಾಪಿ ಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಕೂಡ ವೀಕ್ಷಕರದ್ದು.
ಇದನ್ನೂ ಓದಿ: ಶೆಟ್ಟಿ ಡಾನ್ ಮೆಚ್ಚಿನ ವರ ಯಾರು? – ಗಗನ್ ಮೇಲೆ ಸೌಂದರ್ಯಾಗೆ ಮನಸಾಗುತ್ತಾ?
ಬಿಗ್ಬಾಸ್ ಶೋ.. ಇದು ವ್ಯಕ್ತಿತ್ವದ ಆಟ.. ಟಾಸ್ಕ್ ಜೊತೆಗೆ ಮೈಂಡ್ ಗೇಮ್ ಕೂಡ ಆಡೋದು ತುಂಬಾನೇ ಮುಖ್ಯ. ಇದೀಗ ಸೌಂದರ್ಯ ಶೆಟ್ಟಿ ಕೂಡ ಇದೇ ಟ್ರಿಕ್ನ ಬಳಸಿಕೊಂಡು ಬಂದಿದ್ದಾರೆ. ಆರಂಭದಲ್ಲಿ ಕೊಂಚ ಸೈಲೆಂಟ್ ಆಗಿದ್ದ ಸೌಂದರ್ಯ ಸ್ಪರ್ಧಿಗಳನ್ನ ಚೆನ್ನಾಗೇ ಅರ್ಥ ಮಾಡಿಕೊಂಡಿದ್ದಾರೆ. ಯಾವ ಸ್ಪರ್ಧಿಯ ವೀಕ್ನೆಸ್ ಏನು? ಯಾವ ವಿಚಾರದಲ್ಲಿ ಸ್ಟ್ರಾಂಗ್ ಆಗಿದ್ದಾರೆ. ಯಾವ ವಿಚಾರ ಇಟ್ಕೊಂಡ್ರೆ ಸಹ ಸ್ಪರ್ಧಿಗಳು ಟ್ರಿಗರ್ ಆಗ್ತಾರೆ ಅನ್ನೋದು ಚೆನ್ನಾಗೇ ಗೊತ್ತು. ಈಗ ಸ್ಯಾಂಡಿ ಅಸಲಿ ಗೇಮ್ ಶುರುವಾಗಿದೆ. ತಮ್ಮನ್ನ ಕೆಣಕಿದವರನ್ನೇ ಸೋಲಿಸುತ್ತಾ ಮುಂದೆ ಸಾಗ್ತಿದ್ದಾರೆ. ಕಳೆದ ವಾರವಂತೂ ಸೌಂದರ್ಯ ಶೆಟ್ಟಿ ಆರ್ಭಟ ನೆಕ್ಟ್ಸ್ ಲೆವೆಲ್ನಲ್ಲಿತ್ತು. ಗಗನ್, ತಾಂಡವ್ ರಾಮ್ನ ನಾಮಿನೇಷನ್ನಿಂದ ಸೇವ್ ಮಾಡಿದ್ದಕ್ಕೆ ಸ್ಯಾಂಡಿ ಕೆರಳಿ ಕೆಂಡವಾಗಿದ್ರು. ಇಡೀ ಮನೆತುಂಬಾ ರಂಪಾಟ ಮಾಡಿದ್ರು. ಅವರ ಫನ್ನಿ ಮಾತುಗಳು, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಮಾಡಿದೆ.
ಇನ್ನೊಂದ್ಕಡೆ ಸೌಂದರ್ಯ ಶೆಟ್ಟಿ ಟಾಸ್ಕ್ ಅಂತಾ ಬಂದ್ರೆ 100 ಪರ್ಸೆಂಟ್ ಎಫರ್ಟ್ ಹಾಕ್ತಾರೆ. ಕಳೆದ ವಾರ ತಾಂಡವ್ ಮೇಲೆ ಸಿಟ್ಟಿದ್ರೂ ಅದನ್ನ ಮರೆತು ಒಟ್ಟಿಗೆ ಆಡಿದ್ರು. ಇಬ್ಬರು ಸೇರಿ ಕಿರೀಟ ಕದ್ದಿದ್ರು. ಇದಕ್ಕಾಗೇ ಇಡೀ ಮನೆಯವರು ಸೌಂದರ್ಯಗೆ ಉತ್ತಮ ನೀಡಿದ್ರು. ಕಿಚ್ಚ ಸುದೀಪ್ ಕೂಡ ಕಿಚ್ಚನ ಚಪ್ಪಾಳೆ ನೀಡಿದ್ರು. ಅಷ್ಟೇ ಅಲ್ಲ ಟಾಸ್ಕ್ ಆಡಿ ಈ ವಾರ ಕ್ಯಾಪ್ಟನ್ ಕೂಡ ಆಗಿದ್ದಾರೆ. ಈ ವಾರ ಬಿಗ್ಬಾಸ್ ವಿಭಿನ್ನ ಟಾಸ್ಕ್ ಕೊಟ್ಟಿದ್ದಾರೆ. ಶೆಟ್ಟಿ ಡಾನ್ ಮದುವೆ ಎಂಬ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ಪ್ರಕಾರ ಸೌಂದರ್ಯ ಶೆಟ್ಟಿ ಡಾನ್ ಅಗಿದ್ದಾರೆ. ಶೆಟ್ಟಿ ಡಾನ್ ಸ್ವಯಂವರ ನಡೆಯುತ್ತಿದೆ. ಶೆಟ್ಟಿ ಡಾನ್ ಗೆ ಮದುವೆಯಾಗಲು ಇಷ್ಟವಿರಲ್ಲ. ಮನೆಗೆ ಬರುವ ವರರು ಅವರನ್ನ ಇಂಪ್ರೆಸ್ ಮಾಡಬೇಕು. ಯಾರು ಶೆಟ್ಟಿ ಡಾನ್ನ ಇಂಪ್ರೆಸ್ ಮಾಡ್ತಾರೋ ಆ ಟೀಮ್ ಟಾಸ್ಕ್ ಗೆದ್ದಂತೆ. ಈ ಟಾಸ್ಕ್ನಲ್ಲಿ ಗಗನ್ ಹಾಗೂ ಯಶಸ್ ವರರಾಗಿದ್ದಾರೆ. ಇನ್ನು ಈ ಟಾಸ್ಕ್ಗಾಗಿ ಬಿಗ್ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ರಕ್ಷಿತಾ ಶೆಟ್ಟಿ ಕೂಡ ಗೆಸ್ಟ್ ಆಗಿ ಬಂದಿದ್ದಾರೆ. ಇದ್ರ ಪ್ರೋಮೋ ಕೂಡ ರಿಲೀಸ್ ಆಗಿದೆ. ಇದೀಗ ಸೌಂದರ್ಯ ಶೆಟ್ಟಿಯನ್ನ ಯಾರು ಇಂಪ್ರೆಸ್ ಮಾಡ್ತಾರೆ? ಯಾರನ್ನ ಶೆಟ್ಟಿ ಡಾನ್ ಸೆಲೆಕ್ಟ್ ಮಾಡ್ತಾರೆ. ಈ ಟಾಸ್ಕ್ನಲ್ಲಿ ಎಂಬ ಕ್ಯೂರಿಯಾಸಿಟಿ ಮೂಡಿದೆ.
ಅಂದ್ಹಾಗೆ ಸೌಂದರ್ಯ ಶೆಟ್ಟಿ ಯಶಸ್ನ ವರನಾಗಿ ಸೆಲೆಕ್ಟ್ ಮಾಡೋ ಸಾಧ್ಯತೆ ಹೆಚ್ಚಾಗಿದೆ. ಯಾಕಂದ್ರೆ ಕಳೆದ ವಾರ ಗಗನ್, ತಾಂಡವ್ ರಾಮ್ನ ನಾಮಿನೇಷನ್ನಿಂದ ಸೇವ್ ಮಾಡಲು ಸೌಂದರ್ಯ ಶೆಟ್ಟಿಯನ್ನ ನಾಮಿನೇಟ್ ಮಾಡಿದ್ರು. ಇದೀಗ ಗಗನ್ ಮೇಲೆ ಸ್ಯಾಂಡಿ ರಿವೇಂಜ್ ತೆಗೆದುಕೊಳ್ಳುವುದು ಪಕ್ಕಾ ಆಗಿದೆ.
ಇನ್ನೊಂದ್ಕಡೆ ಸೌಂದರ್ಯ ಶೆಟ್ಟಿಯನ್ನ ಉಳಿದ ಸ್ಪರ್ಧಿಗಳು ಕಾಪಿ ಮಾಡ್ತಿದ್ದಾರಾ ಅನ್ನೋ ಪ್ರಶ್ನೆ ವೀಕ್ಷಕರದ್ದು. ಕಳೆದ ವಾರ ಸೌಂದರ್ಯ ಶೆಟ್ಟಿ ರಂಪಾಟ ವಿಟಿಯನ್ನ ವೀಕೆಂಡ್ನಲ್ಲಿ ದೊಡ್ಮನೆಯಲ್ಲಿ ಪ್ಲೇ ಮಾಡಲಾಗಿತ್ತು. ಅದಾದ ನಂತ್ರ ಹ್ಯಾಶ್ ಟ್ಯಾಗ್ ಕೊಡುವ ವಿಚಾರಕ್ಕೆ ಸೌಂದರ್ಯ ಶೆಟ್ಟಿ & ಕುಮಾರಿ ಮಧ್ಯೆ ಜಗಳ ಆಗಿತ್ತು. ಕುಮಾರಿ ವೇಸ್ಟ್ ಪೀಸ್ ಅಂದಿದ್ದಕ್ಕೆ ಸೌಂದರ್ಯಗೆ ಅವರದ್ದೇ ಸ್ಟೈಲ್ನಲ್ಲೇ ಕುಮಾರಿ ತಿರುಗೇಟು ನೀಡಿದ್ರು. ಅವರಂತೆ ಆಕ್ಟ್ ಮಾಡಿದ್ರು. ಅದಾದ ಬಳಿಕ ಯಶಸ್ ಹಾಗೂ ಗಗನ್ ಮಧ್ಯೆ ಜಗಳ ನಡೆದಿದೆ. ಈ ವೇಳೆ ಯಶಸ್ ಕೂಡ ಫುಲ್ ಆಕ್ಟ್ ಮಾಡಿಕೊಂಡೇ ಗಗನ್ಗೆ ಕೌಂಟರ್ ನೀಡಿದ್ರು. ಇದನ್ನ ಕೆಲವರು ಟ್ರೋಲ್ ಮಾಡ್ತಿದ್ದಾರೆ. ಸೌಂದರ್ಯ ಶೆಟ್ಟಿ ಕಾಪಿ ಅಂತಿದ್ದಾರೆ.

ನೋಡಿರಿ

