6 ಓವರ್.. 118 ರನ್ಸ್ – ಅಭಿಷೇಕ್ ಬೆಂಕಿಗೆ NZ ಭಸ್ಮ
ಸಿಡಿಲಮರಿ ಸೂರ್ಯವಂಶಿ ಚರಿತ್ರೆ

ಅಭಿಷೇಕ್ ಶರ್ಮಾ ಡಮಾಲ್ ಡಿಮೀಲ್ ಬ್ಯಾಟಿಂಗ್.. ವೈಭವ್ ಸೂರ್ಯವಂಶಿ ಎಕ್ಟ್ರಾರ್ಡಿನರಿ ಅಟ್ಯಾಕ್.. ಮ್ಯಾಚ್ ನೋಡ್ತಿದ್ದೀವಾ ಇಲ್ಲ ಹೈಲೇಟ್ಸ್ ನೋಡ್ತಿದ್ದೀವಾ ಅನ್ನೋ ರೇಂಜ್ಗೆ ಇವತ್ತು ಭಾರತದ ಓಪನರ್ಸ್ ನ್ಯೂಜಿಲೆಂಡ್ ಬೌಲರ್ಗಳನ್ನ ಅಟ್ಟಾಡಿಸಿದ್ರು. ಕಿವೀಸ್ ಪರ ಬೌಲರ್ಗಳನ್ನ ಬದಲಾಯಿಸಿದ್ರೂ ಬೌಲಿಂಗ್ ಸ್ಟೈಲ್ ಬದಲಾದ್ರೂ ಬೌಂಡರಿಗಳನ್ನ ತಡೆಯೋಕಂತೂ ಯಾರಿಂದಲೂ ಸಾಧ್ಯನೇ ಇರ್ಲಿಲ್ಲ. ಅದ್ರಲ್ಲೂ ಅಭಿಷೇಕ್ ಶರ್ಮಾ ಅಂತೂ ಜಸ್ಟ್ ಅಮೇಜಿಂಗ್.. ಆದ್ರೆ ಮ್ಯಾಚ್ ಫಿನಿಶ್ ಮಾಡೋ ಟೈಮಲ್ಲಂತೂ ಒದ್ದಾಡಿಬಿಟ್ರು.
ಇದನ್ನೂ ಓದಿ : ತಿಲಕ್ ಹೊಸ CHASE ಮಾಸ್ಟರ್ – NOT OUT ಆದ್ರೆ 100% ಗೆಲುವು
ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ-20ಐ ಸರಣಿಯಲ್ಲಿ ಮೊದಲ ಮೂರೂ ಪಂದ್ಯಗಳನ್ನೂ ಗೆದ್ದು ಭಾರತ ಸರಣಿ ಕೈವಶ ಮಾಡ್ಕೊಂಡಿದೆ. ಇಂಟ್ರೆಸ್ಟಿಂಗ್ ಅಂದ್ರೆ ಕ್ರೈಸ್ಟ್ಚರ್ಚ್ ಮೈದಾನದಲ್ಲಿ ನಡೆದಿದ್ದ ಮೊದಲ ಎರಡು ಪಂದ್ಯಗಳಲ್ಲಿ ಲಾಸ್ಟ್ ಓವರ್ ಥ್ರಿಲ್ಲರ್ ಗೆದ್ದಿದ್ದ ಭಾರತ ಮೂರನೇ ಪಂದ್ಯದಲ್ಲಿ ಕಿವೀಸ್ ಪಡೆಯನ್ನ ಧ್ವಂಸ ಮಾಡಿತ್ತು. ವೈಭವ್ ಮತ್ತು ಅಭಿಷೇಕ್ ವೆಲ್ಲಿಂಗ್ಟನ್ ಮೈದಾನದಲ್ಲೇ ಈಗ್ಲೇ ದೀಪಾವಳಿಯನ್ನ ಸೆಲೆಬ್ರೇಟ್ ಮಾಡಿಬಿಟ್ರು. ಸ್ಟೇಡಿಯಂನ ದಿಕ್ಕು ದಿಕ್ಕುಗಳಿಗೂ ರಾಕೆಟ್ ರೀತಿಯಲ್ಲಿ ಬಾಲ್ಗಳನ್ನ ಹಾರಿಸಿದ್ರು. ಭಾರತದ ಬ್ಯಾಟಿಂಗ್ ಮುಂದೆ ಕಿವೀಸ್ ಕಂಪ್ಲೀಟ್ ಆಗಿ ಸೈಡ್ಲೈನ್ ಆಗೋಯ್ತು.
ಡೇರಿಲ್ ಮಿಚೆಲ್ ಅಬ್ಬರ.. 199 ರನ್ಸ್ ಟಾರ್ಗೆಟ್!
ಸತತ ಮೂರನೇ ಪಂದ್ಯದಲ್ಲೂ ಟಾಸ್ ಸೋತು ಬ್ಯಾಟಿಂಗ್ಗೆ ಬಂದ ನ್ಯೂಜಿಲೆಂಡ್ ಎರಡನೇ ಓವರ್ನಲ್ಲೇ ತನ್ನ ಮೊದಲ ವಿಕೆಟ್ ಕಳ್ಕೊಳ್ತಾರೆ. ಟಿಮ್ ಸೈಫರ್ಟ್ ಕೇವಲ 2 ರನ್ ಗಳಿಸಿ ಅರ್ಷದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸ್ತಾರೆ. ಫಿನ್ ಅಲೆನ್ ಮತ್ತು ಡೇರಿಲ್ ಮಿಚೆಲ್ ಪಾರ್ಟ್ನರ್ಶಿಪ್ ಚೆನ್ನಾಗಿ ವರ್ಕೌಟ್ ಆಯ್ತು. 2ನೇ ವಿಕೆಟ್ಗೆ 90 ರನ್ಸ್ ಕಲೆಹಾಕಿದ್ರು. ಗ್ಲೆನ್ ಫಿಲಿಪ್ಸ್ 17 ರನ್ಸ್, ಬೆವನ್ ಜೇಕಬ್ಸ್ 39 ರನ್ಸ್ ಕಲೆ ಹಾಕಿದ್ರೆ ಮಿಚೆಲ್ 89 ರನ್ಸ್ ಗಳಿಸಿ ಅಜೇಯರಾಗಿ ಉಳಿದ್ರು. ಹೀಗಾಗಿ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಳ್ಕೊಂಡು 198 ರನ್ಗಳನ್ನ ಕಲೆ ಹಾಕಿದ್ರು. ಌಂಡ್ ಭಾರತಕ್ಕೆ 199 ರನ್ಗಳ ಟಾರ್ಗೆಟ್ ನೀಡಲಾಗಿತ್ತು. ಭಾರತದ ಪರ ಅರ್ಷದೀಪ್, ಅಕ್ಷರ್, ನಿತೀಶ್ ತಲಾ ಒಂದು ವಿಕೆಟ್ ತಗೊಂಡ್ರೆ ಭುವಿ ಮತ್ತು ಪ್ರಿನ್ಸ್ 10, 11 ಪ್ಲಸ್ ಎಕಾನಮಿಯಲ್ಲಿ ರನ್ಸ್ ಕೊಟ್ಟು ಯಾವುದೇ ವಿಕೆಟ್ ತಗೊಳಿಲ್ಲ. ಸೋ 199 ರನ್ಸ್ ಟಾರ್ಗೆಟ್ ನೋಡ್ದಾಗ ಭಾರತಕ್ಕೆ ಕಷ್ಟ ಅಲ್ಲದೇ ಇದ್ರೂ ಈಸಿ ಅಂತೂ ಇರಲ್ಲ ಅನ್ನೋದೇ ಎಲ್ಲರ ಲೆಕ್ಕಾಚಾರ ಆಗಿತ್ತು. ಆದ್ರೆ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಸುನಾಮಿ ಮುಂದೆ ಈ ಮ್ಯಾಚ್ ಭಾರತಕ್ಕೆ ಡೆಡ್ ಈಸಿ ಆಗೋಯ್ತು. 200 ಅಲ್ಲ 300 ರನ್ಸ್ ಟಾರ್ಗೆಟ್ ಇದ್ದಿದ್ರೂ ಗೆದ್ದೇ ಬಿಡ್ತೀವಿ ಅನ್ನೋ ರೇಂಜ್ನಲ್ಲಿ ಭಾರತ ಧೂಳೆಬ್ಬಿಸಿತ್ತು.
ಅಭಿ ಅಬ್ಬರಕ್ಕೆ ಕಿವೀಸ್ ಧೂಳೀಪಟ!
ಟಾರ್ಗೆಟ್ ಬೆನ್ನಟ್ಟಿದ ಭಾರತದ ಪರ ಅಭಿಷೇಕ್ & ವೈಭವ್ ಓಪನರ್ಸ್
ಮೊದಲ ಓವರ್ ನಲ್ಲೇ ಜೇಕಬ್ ಡಫಿ ಬೌಲಿಂಗ್ ನಲ್ಲಿ 26 ರನ್ಸ್ ಕಲೆ
ನ್ಯೂಜಿಲೆಂಡ್ ಬೌಲರ್ಸ್ ನ ಲೆಫ್ಟ್, ರೈಟ್ ಅಂತಾ ಚೆಂಡಾಡಿದ ಓಪನರ್ಸ್
5 ಓವರ್ ಗಳಲ್ಲೇ 100 ರನ್ಸ್ ಕಂಪ್ಲೀಟ್ ಮಾಡಿದ್ದ ಟೀಂ ಇಂಡಿಯಾ
ಪವರ್ ಪ್ಲೇ ಮುಗಿಯೋ ಹೊತ್ತಿಗೆ ವಿಕೆಟ್ ಇಲ್ಲದೆ 118 ರನ್ಸ್ ಜೊತೆಯಾಟ
ಪವರ್ ಪ್ಲೇ ನಲ್ಲಿ 58/1 ರನ್ಸ್ ಕಲೆ ಹಾಕಿದ್ದ ನ್ಯೂಜಿಲೆಂಡ್, ಭಾರತ 118/0
7.1ನೇ ಓವರ್ ನಲ್ಲಿ 133ಕ್ಕೆ ಮೊದಲ ವಿಕೆಟ್.. ವೈಭವ್ 45(19)ಕ್ಕೆ ಔಟ್
92(27) ರನ್ಸ್ ಗಳಿಸಿದ್ದಾಗ ಅಭಿಷೇಕ್ ಶರ್ಮಾ ಕ್ಯಾಚ್ ಬಿಟ್ಟ ಸ್ಯಾಂಟ್ನರ್
8 ಓವರ್ ಗಳಲ್ಲೇ 156 ರನ್ಸ್.. 35 ಎಸೆತಗಳಲ್ಲಿ ಅಭಿಷೇಕ್ ಸೆಂಚುರಿ
ಸೆಂಚುರಿ ಬೆನ್ನಲ್ಲೇ ಶಿವನ ಧ್ಯಾನಸ್ಥ ಸ್ಥಿತಿಯಂತೆ ಕುಳಿತು ಓಂ ನಮಃ ಶಿವಾಯ
38 ಎಸೆತ.. 9 ಬೌಂಡರಿ.. 11 ಸಿಕ್ಸರ್.. 113 ರನ್ ಗಳಿಸಿ ಅಭಿ ಔಟ್
ಅಭಿಷೇಕ್ ಔಟ್ ಆದಾಗ ಭಾರತಕ್ಕೆ 60 ಬಾಲಲ್ಲಿ 21 ರನ್ಸ್ ಅಷ್ಟೇ ಬೇಕಿತ್ತು
ಅಭಿಷೇಕ್ ಔಟ್ ಆದ್ಮೇಲೆ 21 ರನ್ಸ್ ಕಲೆ ಹಾಕೋಕೆ ಒದ್ದಾಡಿದ ಭಾರತ
ಶ್ರೇಯಸ್ ಅಯ್ಯರ್ 5(10) ಔಟ್.. 4 ರನ್ಸ್ ಬೇಕಿದ್ದಾಗ ಸಂಜು 18(13) ಔಟ್
ನಮನ್ ಧೀರ್ ಫಸ್ಟ್ ಬಾಲಲ್ಲೇ ಬೌಂಡರಿ ಸಿಡಿಸಿ ಮ್ಯಾಚ್ ಫಿನಿಶ್
13.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ರೀಚ್ ಆದ ಭಾರತ
ಕೊನೆಯ 21 ರನ್ಸ್ ಗಳಿಸೋಕೆ 20 ಬಾಲ್ ಗಳನ್ನ ಫೇಸ್ ಮಾಡಿದ ಭಾರತ
ಹೀಗೆ ಬ್ಯಾಟಿಂಗ್ನಲ್ಲಿ ಭಾರತ ಹೊಡಿ ಬಡಿ ಅಂಥಾ ಬೆಂಡೆತ್ತುತ್ತಾ ಇದ್ರೆ ನ್ಯೂಜಿಲೆಂಡ್ ಬೌಲರ್ಗಳಿಗೆ ಅಕ್ಷರಶಃ ಥಂಡಾ ಹೊಡೆದಿದ್ರು. ಆದ್ರೂ ನಾಯಕ ಮಿಚೆಲ್ ಸ್ಯಾಂಟ್ನರ್ 3 ಓವರ್ಗಳಲ್ಲಿ 17 ರನ್ಸ್ ಅಷ್ಟೇ ಕೊಟ್ರು. ಉಳಿದೆಲ್ಲಾ ಬೌಲರ್ಸ್ ತುಂಬಾನೇ ಕಾಸ್ಟ್ಲಿ ಆಗೋದ್ರು. ಜೇಕಬ್ ಡಫಿ 22ರ ಎಕಾನಮಿ, ಆಡಮ್ ಮಿಲ್ನೆ 16.50, ಬ್ರೇಸ್ವೆಲ್ 18, ಮ್ಯಾಥ್ಯೂ ಫಿಶರ್ 23ರ ಎಕಾನಮಿಯಲ್ಲಿ ರನ್ಸ್ ಕೊಟ್ಟು ಹೊಡೆತ ತಿಂದ್ರು. ಹೀಗೆ ಭಾರತದ ಓಪನರ್ಸ್ ಇತಿಹಾಸವನ್ನೇ ಸೃಷ್ಟಿಸಿದ್ರು.
ಚರಿತ್ರೆ ಬರೆದ ಮ್ಯಾಚ್!
ವಿಶ್ವದ ಅತ್ಯಧಿಕ ಪವರ್ಪ್ಲೇ ಸ್ಕೋರ್.. ವಿಕೆಟ್ ನಷ್ಟವಿಲ್ಲದೆ 118 ರನ್ಸ್
ಕೇವಲ 2.2 ಓವರ್ ಗಳಲ್ಲಿ ತಂಡದ 50 ರನ್ ಪೂರೈಸಿದ ಭಾರತ
30 ಎಸೆತಗಳಲ್ಲಿ 100 ರನ್ಸ್.. ವಿಶ್ವದ 2ನೇ ಅತ್ಯಂತ ವೇಗದ ತಂಡದ ಶತಕ
ಜೇಕಬ್ ಡಫಿ ಫಸ್ಟ್ ಓವರ್ 26 ರನ್ಸ್.. ಜಂಟಿ ಅತ್ಯಂತ ದುಬಾರಿ ಮೊದಲ ಓವರ್
199 ರನ್ ಗಳ ಗುರಿಯನ್ನ 13.2 ಓವರ್ ಗಳಲ್ಲಿ ಬೆನ್ನಟ್ಟಿದ್ದು ಕೂಡ ಇತಿಹಾಸ
ಹೀಗೆ ಭಾರತ ಕಂಪ್ಲೀಟ್ ಆಗಿ ಒನ್ ಸೈಡೆಡ್ ಆಗಿ ಪಂದ್ಯವನ್ನ ವಿನ್ ಆಗಿದೆ. ಅಭಿಷೇಕ್ ಶರ್ಮಾ ಟಿ-20ಐ ಮಾದರಿಯಲ್ಲಿ ತಮ್ಮ ನಾಲ್ಕನೇ ಶತಕ ಬಾರಿಸಿದ್ರು. ಌಂಡ್ ಇದು ಅವ್ರಿಗೆ ಎರಡನೇ ವೇಗದ ಶತಕ ಕೂಡ ಆಯ್ತು. ಅಫ್ಘಾನಿಸ್ತಾನ ವಿರುದ್ಧ ಕಳೆದ ಸೆಪ್ಟೆಂಬರ್ ನಲ್ಲಿ 30 ಬಾಲ್ಗಳಲ್ಲಿ ಸೆಂಚುರಿ ಬಂದಿತ್ತು. ಈಗ 35 ಬಾಲ್ಗಳಲ್ಲೇ ಶತಕ ಬಾರಿಸದ್ರು. ಜಿಂಬಾಬ್ವೆ ವಿರುದ್ಧ 47 ಎಸೆತಗಳಲ್ಲಿ ಇಂಗ್ಲೆಂಡ್ ವಿರುದ್ಧ 37 ಬಾಲ್ಗಳಲ್ಲಿ ಸೆಂಚುರಿ ಬಾರಿಸಿದ್ರು. ಒಟ್ನಲ್ಲಿ ಭಾರತ ಭರ್ಜರಿಯಾಗೇ ಮ್ಯಾಚ್ ವಿನ್ ಆಗಿದೆ. ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗ್ಲೇ ಸರಣಿ ಕೈವಶ ಮಾಡಿಕೊಂಡಿದ್ದಾರೆ. ಟಿ-20ಐನಲ್ಲಿ ತಾವೇಕೆ ಚಾಂಪಿಯನ್ಸ್ ಅನ್ನೋದನ್ನೂ ಪ್ರೂವ್ ಮಾಡಿದ್ದಾರೆ.

ನೋಡಿರಿ

