ಸಿಂಪ್ಲಿಸಿಟಿ, ಧೂಳೆೆಬ್ಬಿಸಿದ ಸೂಪರ್‌ಸ್ಟಾರ್ – 1000 ಕೋಟಿ ಕ್ಲಬ್‌ಗೆ ಜೈಲರ್-2
75 ವರ್ಷದಲ್ಲೂ ತಲೈವಾ ಕ್ರೇಜ್

ಸೂಪರ್‌ಸ್ಟಾರ್ ರಜಿನಿಕಾಂತ್ ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ತಮ್ಮ ತಾಕತ್ತು ಸಾಬೀತುಪಡಿಸಿದ್ದಾರೆ. ಬಹು ನಿರೀಕ್ಷೆಯೊಂದಿಗೆ ತೆರೆಕಂಡಿರುವ ಜೈಲರ್ 2 ಸಿನಿಮಾ ಈಗ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, 1000 ಕೋಟಿ ರೂಪಾಯಿ ಕ್ಲಬ್‌ಗೆ ಎಂಟ್ರಿ ಕೊಡುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ.
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ – 2 ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. 75 ವರ್ಷದ ರಜನಿಕಾಂತ್ ಕ್ರೇಜ್ ಸಾಸಿವೆ ಕಾಳಷ್ಟು ಕಡಿಮೆಯಾಗಿಲ್ಲ ಅನ್ನೋದಕ್ಕೆ ಜೈಲರ್ – 2 ಒಂದು ಬೆಸ್ಟ್ ಎಕ್ಸಾಂಪಲ್. ಈ ಸಿನಿಮಾ ಬಗ್ಗೆ ಹೇಳ್ತಿನಿ ಅದ್ದಕ್ಕೂ ಮುಂಚೆ ನಾನು ರಜಿನಿಕಾಂತ್ ಸಿಂಪ್ಲಿಸಿಟಿ ಬಗ್ಗೆ ಹೇಳ್ತಿನಿ.
ಇದನ್ನೂ ಓದಿ: ಸೀತೆ ಸಾಯಿಪಲ್ಲವಿ ಇದೀಗ ಪೊಲೀಸ್ – ತಮಿಳುನಟ ಧನುಷ್ ಜೊತೆ ಡಿಂಪಲ್ ಸುಂದರಿ ಖಡಕ್ ಲುಕ್
ಅಷ್ಟಕ್ಕೂ ರಜನಿಕಾಂತ್ ಯಾಕಿಷ್ಟು ಜನಪ್ರಿಯತೆ ಗಳಿಸಿದ್ದಾರೆ ? ಯಾರಲ್ಲೂ ಇಲ್ಲದಂಥ ಅದೆಂತಹ ಪ್ರತಿಭೆ ಅವರಲ್ಲಿದೆ ? ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಆದರೆ, ಇಷ್ಟು ವರ್ಷ ಕಳೆದರೂ ರಜನಿಕಾಂತ್ ಅದೇ ಛಾರ್ಮ್ ಇದೆ. ಸ್ಕ್ರೀನ್ ಮೇಲೆ ಸೂಪರ್ ಸ್ಟೈಲ್, ಹೊರಗೆ ಸಿಂಪಲ್ ಸ್ಟೈಲ್.
ಅವರ ಲುಕ್. ಬೋಳಾದ ತಲೆ, ಬಿಳಿಕೂದಲು, ಸುಕ್ಕಾದ ಚರ್ಮ, ಮೇಕಪ್ ಇಲ್ಲದ ಫೇಸ್, ಜುಬ್ಬ, ಪ್ಯಾಂಟ್ ಧರಿಸಿ ತಮ್ಮ ಅಭಿಮಾನಿಗಳ ಎದುರು ಕಾಣಿಸಿಕೊಳ್ಳುತ್ತಾರೆ. ತಮ್ಮ ಲುಕ್ ಬಗ್ಗೆ ಎಂದಿಗೂ ತಲೆಕೆಡಿಸಿಕೊಳ್ಳದೇ, ನಾನಿರೋದೇ ಹೀಗೆ ಅಂತ ಬಿಂದಾಸ್ ಆಗಿ ಓಡಾಡ್ತಾರೆ. ಹವಾಯಿ ಚಪ್ಪಲಿ, ಪಂಚೆ ಧರಿಸಿ, ರಸ್ತೆ ಬದಿ ಟೀ ಕುಡಿತಾರೆ, ಹಿಮಾಲಯದತ್ತ ನಡೆದೇ ಹೋಗಿಬಿಡ್ತಾರೆ. ಹಿಂದೆ- ಮುಂದೆ ಬಾಡಿಗಾರ್ಡ್ ಗಳಿಲ್ಲ.
ಸದಾ ವಿಗ್, ಮೇಕಪ್ ಮಧ್ಯೆ ಅಡಗಿಕೊಳ್ಳೊ ನಟರ ಮಧ್ಯೆ ರಜನಿಕಾಂತ್ ರದ್ದು ಸಿಂಪ್ಲಿಸಿಟಿ. ಅದೇ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದಿರುವುದು. ಕಳೆದ 51 ವರ್ಷದಿಂದ ಚಿತ್ರರಂಗದಲ್ಲಿರೋ ರಜನಿಕಾಂತ್ ಜೈಲಾರ್
ಇನ್ನು ಕಲೆಕ್ಷನ್ ವಿಚಾರಕ್ಕೆ ಬರೋಣ. ಅಕ್ಟೋಬರ್ 27ರ ವರದಿಗಳ ಪ್ರಕಾರ, ಸಿನಿಮಾ ಬಿಡುಗಡೆಯಾದ 12 ದಿನಗಳಲ್ಲಿ ವಿಶ್ವಾದ್ಯಂತ ಸುಮಾರು 733 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದರಲ್ಲಿ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ ಸುಮಾರು 478 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಭಾರತದಲ್ಲಿ ನೆಟ್ ಕಲೆಕ್ಷನ್ ಕೂಡ 410 ಕೋಟಿ ರೂಪಾಯಿ ಗಡಿ ದಾಟಿದೆ.
ರಜಿನಿಕಾಂತ್ ಅವರ ಅಭಿನಯವೇ ಸಿನಿಮಾದ ಪ್ರಮುಖ ಆಕರ್ಷಣೆ. ಅವರ ಸ್ಟೈಲ್, ಪಂಚ್ ಡೈಲಾಗ್‌ಗಳು, ಆಕ್ಷನ್ ದೃಶ್ಯಗಳು ಮತ್ತು ಪರದೆಯ ಮೇಲಿನ ಪ್ರಭಾವ ಅಭಿಮಾನಿಗಳಿಗೆ ಹಬ್ಬದ ಅನುಭವ ನೀಡುತ್ತಿವೆ. ಮೊದಲ ಭಾಗದಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರಕ್ಕೆ ಸಿಕ್ಕ ಜನಪ್ರಿಯತೆ ಎರಡನೇ ಭಾಗಕ್ಕೂ ದೊಡ್ಡ ಬಲವಾಗಿದೆ. ಶಿವಣ್ಣ ಕೂಡ ಸಖತ್ ಆಗಿಯೇ ಮಿಂಚಿದ್ದಾರೆ.
ಇನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನೋಡಿದರೆ, ತಮಿಳು ವರ್ಷನ್ ಪ್ರಮುಖ ಕೊಡುಗೆ ನೀಡುತ್ತಿದೆ. ತೆಲುಗು ಮತ್ತು ಹಿಂದಿ ವರ್ಷನ್‌ಗಳ ಗಳಿಕೆಯೂ ಒಟ್ಟು ಕಲೆಕ್ಷನ್‌ಗೆ ನೆರವಾಗಿವೆ. ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲೂ ರಜಿನಿಕಾಂತ್ ಅಭಿಮಾನಿಗಳ ನಿರೀಕ್ಷೆ ಸಿನಿಮಾಗೆ ಬಲ ನೀಡಿದೆ.
ಈಗಾಗಲೇ 733 ಕೋಟಿ ರೂಪಾಯಿ ದಾಟಿರುವ ಹಿನ್ನೆಲೆಯಲ್ಲಿ 800 ಕೋಟಿ ರೂಪಾಯಿ ಗಡಿ ತಲುಪುವ ಸಾಧ್ಯತೆ ಇದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಬೆಂಬಲ ಮುಂದುವರಿದರೆ ಇನ್ನಷ್ಟು ಗಳಿಕೆ ಮಾಡಬಹುದು. ಈ ವೀಕ್‌ಎಂಡ್‌ನಲ್ಲಿ 1000 ಕೋಟಿ ರೂಪಾಯಿ ತಲುಪುವುದು ಫಿಕ್ಸ್ ಆಗಿದೆ.

ನೋಡಿರಿ

