ತಿಲಕ್ ಹೊಸ CHASE ಮಾಸ್ಟರ್ – NOT OUT ಆದ್ರೆ 100% ಗೆಲುವು
T-20 ಪಂದ್ಯಗಳಲ್ಲಿ ಹೊಸ ಚರಿತ್ರೆ

ತಿಲಕ್ ಹೊಸ CHASE ಮಾಸ್ಟರ್ – NOT OUT ಆದ್ರೆ 100% ಗೆಲುವುT-20 ಪಂದ್ಯಗಳಲ್ಲಿ ಹೊಸ ಚರಿತ್ರೆ

ಟೀಂ ಇಂಡಿಯಾದಲ್ಲಿ ಕಿಂಗ್ ವಿರಾಟ್ ಕೊಹ್ಲಿಯನ್ನ ಚೇಸಿಂಗ್ ಮಾಸ್ಟರ್ ಅಂತಾನೇ ಕರೀತಾರೆ. ಯಾಕಂದ್ರೆ ಎದುರಾಳಿ ಟೀಂ ಒನ್ಸ್ ಟಾರ್ಗೆಟ್ ಸೆಟ್ ಮಾಡ್ತು ಅಂದ್ರೆ ಕಿಂಗ್ ಕೊಹ್ಲಿಯನ್ನ ತಡೆಯೋರೇ ಇರಲ್ಲ. ಭಾರತದ ಪರ ಫಸ್ಟ್ ಬ್ಯಾಟಿಂಗ್​ಗಿಂತ ಚೇಸಿಂಗ್​ನಲ್ಲಿ ಅವ್ರ ರೆಕಾರ್ಡ್ಸ್ ಎಕ್ಸ್​ಟ್ರಾರ್ಡಿನರಿಯಾಗಿದೆ. ಇದೇ ಕಾರಣಕ್ಕೆ ಅವ್ರನ್ನ ಚೇಸಿಂಗ್ ಕಿಂಗ್ ಅಂತಾನೇ ಕರೆಯೋದು. ಈಗ ಈ ಸಾಲಿಗೆ ತಿಲಕ್ ವರ್ಮಾ ಕೂಡ ಸೇರಿದ್ದಾರೆ. ಗುರಿ ಬೆನ್ನಟ್ಟುವಾಗ ತಿಲಕ್ ಕ್ರೀಸ್​ನಲ್ಲಿದ್ದಾರೆ ಅಂದ್ರೆ ಆ ಮ್ಯಾಚ್ ಪಕ್ಕಾ ಗೆಲ್ತಾರೆ ಅಂತಾನೇ ಅರ್ಥ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯದ ಬಳಿಕ ಈ ವಿಚಾರದಲ್ಲಿ ತಿಲಕ್ ಟ್ರೆಂಡಿಂಗ್​ನಲ್ಲಿದ್ದಾರೆ.

ಇದನ್ನೂ ಓದಿ : RCB ಕೆಣಕಿದ ಪೊಲಾರ್ಡ್ – ವಾಂಖೆಡೆಯಲ್ಲಿ ಕಾಣಲ್ಲ ರೆಡ್ ಜೆರ್ಸಿ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3ನೇ ಪಂದ್ಯಕ್ಕೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಕಳೆದ ಎರಡೂ ಪಂದ್ಯಗಳಲ್ಲೂ ಲಾಸ್ಟ್ ಓವರ್ ಥ್ರಿಲ್ಲರ್ ಗೆದ್ದಿರೋದ್ರಿಂದ ಈ ಪಂದ್ಯವೂ ರೋಚಕತೆ ಸೃಷ್ಟಿಸಿದೆ. ಅದ್ರಲ್ಲೂ ಈಗ   ಭಾರತದ ಪರ ಮಿಡಲ್ ಆರ್ಡರ್​ನಲ್ಲಿ ತಿಲಕ್ ವರ್ಮಾ ಅವರನ್ನು ಭಾರತದ ಹೊಸ ಚೇಸಿಂಗ್ ಸ್ಪೆಷಲಿಸ್ಟ್ ಎಂದೇ ಕರೆಯಲಾಗ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ, ಕೊನೆಯ ಓವರ್‌ಗಳಲ್ಲಿ ವೇಗವಾಗಿ ರನ್ ಗಳಿಸುವ ಟೆಕ್ನಿಕ್ ಮತ್ತು ಒತ್ತಡದಲ್ಲೂ ಬ್ಯಾಟ್ ಬಿಚ್ಚುವ ಅವ್ರ ಸ್ಮಾರ್ಟ್​ನೆಸ್​​ ಎದ್ದು ಕಾಣ್ತಿದೆ. 2026 ಅಂದ್ರೆ ಇದೇ ವರ್ಷ ಟಿ20 ಕ್ರಿಕೆಟ್‌ನ 16ರಿಂದ 20ನೇ ಓವರ್‌ಗಳ ನಡುವೆ ತಿಲಕ್ 203 ಎಸೆತಗಳಲ್ಲಿ 470 ರನ್ ಗಳಿಸಿದ್ದಾರೆ. ಈ ವೇಳೆ ಅವರ ಸ್ಟ್ರೈಕ್ ರೇಟ್ 231.52 ಆಗಿದೆ. ಅಂದ್ರೆ ಡೆತ್ ಓವರ್​ಗಳಲ್ಲಿ ತಿಲಕ್ ಡೇಂಜರಸ್ ಬ್ಯಾಟರ್ ಆಗಿರೋದು ಇಲ್ಲೇ ಗೊತ್ತಾಗ್ತಿದೆ.

ಚೇಸಿಂಗ್ ನಲ್ಲಿ ತಿಲಕ್ ಔಟ್ ಆಗದೇ ಇದ್ರೆ 100% ರಿಸಲ್ಟ್!

ವಿರಾಟ್ ಕೊಹ್ಲಿ ಟಿ-20ಐ ನಿವೃತ್ತಿ ಬಳಿಕ ತಿಲಕ್ ವರ್ಮಾ ನಂಬರ್ 3ನಲ್ಲಿ ಬ್ಯಾಟಿಂಗ್ ಮಾಡ್ತಿದ್ರು. ಆದ್ರೆ ಯಾವಾಗ ಇಶಾನ್ ಕಿಶನ್ ತಂಡಕ್ಕೆ ಕಂ ಬ್ಯಾಕ್ ಮಾಡಿದ್ರೋ ಆಗಿನಿಂದ ನಂಬರ್ 5ನಲ್ಲಿ ಬ್ಯಾಟಿಂಗ್ ಮಾಡ್ತಿದ್ದಾರೆ. ಮಿಡಲ್ ಆರ್ಡರ್​ನಲ್ಲಿ ಫಸ್ಟ್ ಬ್ಯಾಟಿಂಗ್ ಮಾಡುವಾಗ ತಿಲಕ್ ಅಷ್ಟೇನು ಕ್ಲಿಕ್ ಆಗದೇ ಇದ್ರೂ ರನ್ ಚೇಸಿಂಗ್ ವೇಳೆ ಔಟಾಗದೆ ಕ್ರೀಸ್‌ನಲ್ಲಿ ಉಳಿದರೆ ತಂಡಕ್ಕೆ ಪಕ್ಕಾ ಗೆಲುವು ಎನ್ನುವಂತಾಗಿದೆ. ಌಂಡ್ 100 ಪರ್ಸೆಂಟ್ ಗೆಲುವಿನ ರಿಸಲ್ಟ್ ಬಂದಿದೆ.  ಟಿ20 ಕ್ರಿಕೆಟ್ ಕೆರಿಯರ್‌ನಲ್ಲಿ ರನ್ ಬೆನ್ನಟ್ಟುವಾಗ ತಿಲಕ್ ವರ್ಮಾ ಒಟ್ಟು 26 ಬಾರಿ ಅಜೇಯರಾಗಿ (Not Out) ಉಳಿದಿದ್ದು, ಈ ಎಲ್ಲಾ 26 ಪಂದ್ಯಗಳಲ್ಲೂ ಅವರ ತಂಡ ವಿನ್ ಆಗಿದೆ. ಅಂದ್ರೆ ಭಾರತದ ಪರ ಆಡುವಾಗ ಭಾರತ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೊಮೆಸ್ಟಿಕ್​ನಲ್ಲಿ ಹೈದರಾಬಾದ್ ಜಯಭೇರಿ ಬಾರಿಸಿದೆ. ರನ್ ಚೇಸ್‌ನಲ್ಲಿ ಅತಿ ಹೆಚ್ಚು ಬಾರಿ ನಾಟೌಟ್ ಆಗಿ ಉಳಿದು 100% ಗೆಲುವಿನ ದಾಖಲೆ ಬರೆದಿರುವ ವಿಶ್ವದ ಏಕೈಕ ಬ್ಯಾಟರ್ ಆಗಿದ್ದಾರೆ. ಈ ಹಿಂದೆ ತಲಾ 22 ಅಜೇಯ ಇನ್ನಿಂಗ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದ ನ್ಯೂಜಿಲೆಂಡ್‌ನ ಮಾಜಿ ಆಟಗಾರರಾದ ಬ್ರೆಂಡನ್ ಮೆಕಲಮ್ ಮತ್ತು ಮಾರ್ಟಿನ್ ಗಪ್ಟಿಲ್ ಅವರನ್ನು ತಿಲಕ್ ಹಿಂದಿಕ್ಕಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಭಾರತ 112 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ತಿಲಕ್ ಕೇವಲ 26 ಎಸೆತಗಳಲ್ಲಿ ಅಜೇಯ 51 ರನ್ ಚಚ್ಚಿ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು. ನಿತೀಶ್ ಕುಮಾರ್ ರೆಡ್ಡಿ (26*) ಜೊತೆಗೂಡಿ ಅವರು ಅಂತಿಮ 5 ಓವರ್‌ಗಳಲ್ಲಿ 68 ರನ್ ಸಿಡಿಸಿ ಭಾರತದ ಅತ್ಯುತ್ತಮ ಡೆತ್ ಓವರ್ ಚೇಸಿಂಗ್ ರೆಕಾರ್ಡ್ ನಿರ್ಮಿಸಿದರು. ಹೊಸ ತಲೆಮಾರಿನ ಚೇಸಿಂಗ್ ಮಾಸ್ಟರ್ ಹಾಗೂ ಅತ್ಯುತ್ತಮ ಫಿನಿಶರ್ ಆಗಿ ತಿಲಕ್ ಸದ್ದು ಮಾಡ್ತಿದ್ದಾರೆ. ಆರಂಭದಲ್ಲಿ ಬಾಲ್ ಎ ರನ್ ಅನ್ನೋ ಥರ ಆಡಿದ್ರೂ ಕೊನೆಯ ಓವರ್​ಗಳಲ್ಲಿ ಸ್ಪೋಟಕ ಇನ್ನಿಂಗ್ಸ್ ಮೂಲಕ ಪಂದ್ಯವನ್ನ ಫಿನಿಶ್ ಮಾಡ್ತಿದ್ದಾರೆ. ಌಂಡ್ ತಿಲಕ್ ಕ್ರೀಸ್​ನಲ್ಲಿ ಇದ್ದಾರೆ ಅಂದ್ರೆ ಎಂಥದ್ದೇ ಪ್ರೆಶರ್ ಟೈಮಲ್ಲಿ ತಂಡ ವಿನ್ ಅನ್ನೋ ಟ್ರೇಡ್ ಮಾರ್ಕ್ ಸೆಟ್ ಮಾಡಿದ್ದಾರೆ.

Shantha Kumari

Leave a Reply

Your email address will not be published. Required fields are marked *