ಶೆಟ್ಟಿ ಡಾನ್ ಮೆಚ್ಚಿನ ವರ ಯಾರು? – ಗಗನ್ ಮೇಲೆ ಸೌಂದರ್ಯಾಗೆ ಮನಸಾಗುತ್ತಾ?

ಬಿಗ್ಬಾಸ್ ಕನ್ನಡದಲ್ಲಿ ಶೆಟ್ಟಿ ಡಾನ್ ಹವಾ ಜೋರಾಗಿದೆ. ವೀಕೆಂಡ್ನಲ್ಲಿ ಕಿಚ್ಚನ ಚಪ್ಪಾಳೆ ಸಿಕ್ಕ ಖುಷಿ ಒಂದು ಕಡೆಯಾದರೆ, ಕ್ಯಾಪ್ಟನ್ ಆಗಿ ಸೌಂದರ್ಯ ಶೆಟ್ಟಿ ಚೆನ್ನಾಗಿಯೇ ಆಟವಾಡುತ್ತಿದ್ದಾರೆ. ಇದರ ಮಧ್ಯೆ ಬಿಗ್ಬಾಸ್ ಶೆಟ್ಟಿ ಡಾನ್ ಮದುವೆ ಎಂಬ ಟಾಸ್ಕ್ ನೀಡಿದ್ದು, ವೀಕ್ಷಕರಿಗೆ ಮನರಂಜನೆ ಗ್ಯಾರಂಟಿ.
ಇದನ್ನೂ ಓದಿ:ಗೌತಮ್ ಕೈಯಲ್ಲಿ ಶಕುಂತಲಾ ಲಾಕ್? – JD ಸುಳ್ಳಿನ ಕೋಟೆಗೆ ಭೂಮಿ ಬ್ರೇಕ್.. ಅಮೃತಧಾರೆ ಸೀರಿಯಲ್ END?
ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ ಸಂಭ್ರಮ ನಡೆಯುತ್ತಿದೆ. ಈ ಟಾಸ್ಕ್ನಲ್ಲಿ ಶೆಟ್ಟಿ ಡಾನ್ ಆಗಿ ಸ್ಪರ್ಧಿ ಸೌಂದರ್ಯಾ ಶೆಟ್ಟಿ ಅವರು ಮಿಂಚಿದ್ದಾರೆ. ಕಣ್ಣಿಗೆ ಗಾಗಲ್ಸ್ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ಶೆಟ್ಟಿ ಡಾನ್ ವಿಭಿನ್ನ ಲುಕ್ನಲ್ಲಿ ಅಬ್ಬರಿಸಿದ್ದಾರೆ. ಡಾನ್ ಮದುವೆಯ ಸಂಭ್ರಮದಲ್ಲಿ ಸೌಂದರ್ಯಾ ಶೆಟ್ಟಿಗೆ ತಕ್ಕ ವರನನ್ನು ಹುಡುಕುವ ಎಪಿಸೋಡ್ ಪ್ರಸಾರವಾಗುತ್ತಿದೆ. ಅದರಲ್ಲೂ ಶೆಟ್ಟಿ ಡಾನ್ಗೆ ವರ ಪರೀಕ್ಷೆ ನಡೆಯಲಿದೆ. ಮದುವೆ ಗಂಡುಗಳಾಗಿ ಗಗನ್ ಚಿನ್ನಪ್ಪ ಮತ್ತು ಯಶಸ್ ಕೃಷ್ಣ ರೆಡಿಯಾಗಿದ್ದಾರೆ. ಇವರಿಬ್ಬರಲ್ಲಿ ಸೌಂದರ್ಯ ಶೆ್ಟ್ಟಿ ವರ ಯಾರು ಅನ್ನೋ ಕುತೂಹಲ ಗರಿಗೆದರಿದೆ.
ಇಲ್ಲಿ ವಧು ಸೌಂದರ್ಯ ಶೆಟ್ಟಿ ತಂದೆಯಾಗಿ ತಾಂಡವ್, ತಾಯಿಯಾಗಿ ಪ್ರಶಾಂತ್ ಪಾತ್ರಧಾರಿಗಳಾಗಿದ್ದಾರೆ. ಇನ್ನು ಗಗನ್ ವಧುವಿನ ಬಳಿ ತನ್ನನ್ನು ವರಿಸುವಂತೆ ಕೇಳುವ ಸೀನ್ ಮಜಾ ಆಗಿದೆ. ಜೊತೆಗೆ ಯಶಸ್ ಕೂಡಾ ಸೌಂದರ್ಯ ತನ್ನನ್ನೇ ಆಯ್ಕೆ ಮಾಡುವಂತೆ ಕೇಳಿಕೊಳ್ಳುತ್ತಾರೆ. ಇದೆಲ್ಲಾ ನಡೆದ ಮೇಲೆ ಸೌಂದರ್ಯನ ಮೆಚ್ಚಿಸಲು ಬಂದ ಮದುವೆ ಗಂಡು ಯಶಸ್ ಕೃಷ್ಣ ಇದೀಗ ಮತ್ತೊಬ್ಬ ವರ ಗಗನ್ ಚಿನ್ನಪ್ಪ ವಿರುದ್ಧ ಜಗಳಕ್ಕಿಳಿದಿದ್ದಾರೆ. ಇಬ್ಬರ ನಡುವೆ ನಡೆದ ಜಗಳ ಕೊನೆಗೆ ವಿಪರೀತಕ್ಕೆ ಹೋಗಿದೆ. ಮಾತಿನ ಮೇಲೆ ನಿಗಾ ಇಲ್ಲದಂತೆ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ.

ನೋಡಿರಿ

